ಶ್ರದ್ಧೆ, ಆಸಕ್ತಿ ಮತ್ತು ಕಾಯಕದಲ್ಲಿ ಅಪಿಱಸಿಕೊಳ್ಳುವಿಕೆ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಇಂತಹದ್ದೊಂದು ಸಾಧನೆಗೆ ಮುನ್ನುಡಿ ಬರೆದಿರುವುದೇ ಹಾಸನ ಜಿಲ್ಲೆಯ 'ಪುಣ್ಯಭೂಮಿ' ಎಂಬ ಕೃಷಿ ಕೇಂದ್ರ. ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕೃಷಿ ವಿಭಾಗದ ಮುಖ್ಯಸ್ಥರಾಗಿರುವ ವಿಜಯ್ ಅಂಗಡಿ ಮತ್ತು ಅವರ ಸಮಾನ ಆಸಕ್ತಿಯ ಹಲವಾರು ಮಿತ್ರರೊಡಗೂಡಿ ಹುಟ್ಟು ಹಾಕಿರುವ ಸಂಸ್ಥೆಯೇ ಪುಣ್ಯಭೂಮಿ. ಕೆಲವಷ ಗಳ ಹಿಂದೆ ಖಾಲಿ ಮೈದಾನವಾಗಿದ್ದ ಈ ಪ್ರದೇಶವೀಗ ಹಸಿರಿನಿಂದ ನಳನಳಿಸುತ್ತಿದೆ. ಇಲ್ಲಿ ವಿವಿಧ ಜಾತಿಯ ಗಿಡಗಳು, ವೈವಿಧ್ಯಮಯ ತರಕಾರಿ ಬೆಳೆ ಮಾಡುವುದರ ಜೊತೆಗೆ ಅಪರೂಪವೆನಿಸುವಂತಹ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆಯಲ್ಲದೇ ಬೀಜಗಳನ್ನು ಸಂರಕ್ಷಿಸಿ ಸಂಸ್ಥೆಯ ಸದಸ್ಯರಿಗೆ ಕೊಟ್ಟು ಕೊಳ್ಳುವ ವಿನಿಮಯ ಪದ್ಧತಿ ಇದೆ. ಅಪರೂಪದ ಭತ್ತದ ತಳಿಗಳು, ಮೆಣಸಿನಕಾಯಿ, ಮಾವು, ಬದನೇ, ಮೆಣಸು ಹೀಗೆ ಒಂದೇ ಎರಡೇ ನೋಡಲು ಮತ್ತು ಅನುಭವಿಸಲು ಸಾಲದು. ಅತಿ ಕಡಿಮೆ ಪ್ರದೇಶದಲ್ಲಿ ಸೃಷ್ಠಿಸಲಾಗಿರುವ ೀ ತೋಟದಲ್ಲಿ ಆಸ್ಟ್ರಲಿಯ ನಿಂಬೆ, ಇದೆ ವಿವಿಧ ಜಾತಿಯ ಔಷಧ ಸಸ್ಯಗಳು ಇವೆ. ಈಗ್ಯೆ 2ವಷಱಗಳ ಹಿಂದೆ ನನ್ನ ಸಂಬಂದಿ ಮಧುಸೂಧನ ಅವರು ನನ್ನನು ಅಲ್ಲಿಗೆ ಭೇಟಿ ನೀಡಿದ್ದ ನಾನು ಇವೆಲ್ಲ ಜಾಗತೀಕರಣದ ಬಿರುಗಾಳಿಯ ನಡುವೆ ವ್ಯಥ ಪ್ರಯತ್ನವೆಂದೆ ಭಾವಿಸಿದ್ದೆ, ಆದರೆ ಈ ಭಾರಿ ಮಧು ಜೊತೆ ಅಲ್ಲಿಗೆ ಭೇಟಿ ನೀಡಿದಾಗ ಕಂಡ ದೃಶ್ಯ ನನ್ನನ್ನು ದಂಗುಬಡಿಸಿತ್ತು, ಏಕೆಂದರೆ ನಂಬಿಕೆ ಮತ್ತು ಶ್ರದ್ಧೆ ನಮ್ಮನ್ನು ಗುರಿ ತಲುಪಿಸುತ್ತುದೆ ಎಂಬುದಕ್ಕೆ ವಿಜಯ್ ಅಂಗಡಿ ಸಾಕ್ಷಿಯಾಗಿದ್ದರು, ಇಡೀ ತೋಟವೇ ನನ್ನನ್ನು ಅಣಕಿಸುತ್ತಿದೆ ಏನೋ ಎಂದು ನನಗೆ ಅನಿಸುತ್ತಿತ್ತು. ಕಳೆದ ಭಾರಿ ನಾನು ಬಂದಾಗ ಪುಣ್ಯಭೂಮಿ ಯಲ್ಲಿದ್ದ ಚಿಕ್ಕ ಹುಡುಗರು ಇರಲಿಲ್ಲ, ಅವರು ಸುಳ್ಳು ಹೇಳಿದ್ದು , ಕಳ್ಳತನ ಕಲಿತದ್ದು ಅಂಗಡಿಯವರನ್ನು ಬೇಸರಕ್ಕೀಡು ಮಾಡಿ ಹೊರಹಾಕಿದ್ದರಂತೆ. ಆದರೇನು ತಾವೋಬ್ಬರೆ ತಮ್ಮ ಕೈಲಾದ ಕೆಲಸವನ್ನು ಬಿಡುವಿನ ವೇಳೆ ಮಾಡುತ್ತೇನೆ ಎಂದು ನಗುನಗುತ್ತಲೆ ನಮ್ಮನ್ನು ಬರಮಾಡಿಕೊಂಡ ವಿಜಯ್ ಅಂಗಡಿ ಒಂದು ಬನೀನು ಮತ್ತು ನಿಕ್ಕರ್ ಧರಿಸಿ ಹುಲ್ಲು ಕತ್ತರಿಸುತ್ತಿದ್ದರು. ನಂತರ ಬಿಡುವು ಮಾಡಿಕೊಂಡ ಅವರು ತಾವೇ ಶ್ರಮವಹಿಸಿ ಬೆಳೆದ ಬೆಳೆಗಳ ಬಗ್ಗೆ ನಮಗೆ ಪರಿಚಯ ಮಾಡಿ ಕೊಡುತ್ತಾ ಹೋದರು, ಜೀ ಕನ್ನಡ ವಾಹಿನಿಗೆ ಸುದ್ದಿ ಮಾಡಲು ಬಂದಿದ್ದ ಮಧು ಅದನ್ನು ಚಿತ್ರೀಕರಿಸಿಕೊಳ್ಳುವಂತೆ ಕ್ಯಾಮೆರಾಮನ್ ರಾಮ್ಕಿ ಗೆ ಸೂಚಿಸುತ್ತಿದ್ದಂತೆ ನಮಗೆ ಅರಿವಿಗೆ ಬಾರದಂತೆ ಅವರು ಚಿತ್ರಿಸುತ್ತಿದ್ದರು. ತಮ್ಮ ಬೆಳೆಗಳ ಬಗ್ಗೆ ಮಾತನಾಡುತ್ತಿದ್ದ ವಿಜಯ್ ಅಂಗಡಿ ಇದ್ದಕಿದ್ದಂತೆ ಕಾಯಿಯ ಕಂಠದಂತಿದ್ದವನ್ನು ಬಿಚ್ಚಿ ನೋಡಿ ಇಲ್ಲಿ ಕಡಜ ಗೂಡು ಕಟ್ಟಿದೆ, ಇಲ್ಲೊಂದು ಪಕ್ಷಿ ಗೂಡು ಮಾಡಿದೆ, ಜೇನು ಸಾಕಿದ್ದೇನೆ, ಎಂದು ತೋರಿಸಲಾರಂಭಿಸಿದಾಗ ಇನ್ನೂ ಏನೇನು ಕೌತುಕಗಳಿವೆಯೋ ಎಂದು ಕಾಯುವಂತೆ ಮಾಡಿತು, ಒಂದು ತೊಟ್ಟಿಯೊಂದರ ಬಳಿಗೆ ಕರೆದೊಯ್ದ ಅವರು ಕಸದಂತಿದ್ದದನ್ನು ಕೆದಕುತ್ತಾ ನೋಡಿ ಇದು ಇರುವೆ ಎಂದರು, ಅಲ್ಲಿ ಲಕ್ಷಗಟ್ಟಲೇ ಇರುವೆಗಳ ಸಾಮ್ರಾಜ್ಯವೇ ನಮಗೆ ಕಾಣಸಿಕ್ಕಿತು, ಅವುಗಳನ್ನು ಬರಿ ಕೈಯಿಂದ ಹಿಡಿದ ಅಂಗಡಿ ಅವು ಏನೂ ಮಾಡುವುದಿಲ್ಲ ಬದಲಾಗಿ ಕಚ್ಚುವ ಕೆಂಪಿರುವೆಗಳನ್ನು ಓಡಿಸುತ್ತವೇ ಮತ್ತು ನನಗೆ ಗೊಬ್ಬರವನ್ನು ತಯಾರು ಮಾಡುತ್ತಿವೆ ಎಂದರು. ನಿಮಗೆ ಚಕ್ರಮುನ್ನಿ ಸೊಪ್ಪು ಗೊತ್ತಾ? ಎಂದು ಪ್ರಶ್ನಿಸಿದ ಅಂಗಡಿ ನಾನು ಅದರಲ್ಲಿ ಹೊಸಬಗೆಯ ಕೋಸಂಬರಿ ಮಾಡುವುದನ್ನು ಕಲಿತ್ತೇದ್ದೇನೆ ನೀವು ಅದನ್ನು ತಿನ್ನಬೇಕು ಎನ್ನುತ್ತಲೇ ಅದರ ಸಿದ್ಧತೆಗೆ ತೊಡಗಿದರು, ಈ ನಡುವೆ ತಾವು ಸಾಕಿದ ಕಂಬಳಿ ಹುಳು ವಿವಿಧ ಬಗೆಯ ತರಕಾರಿ ಸೊಪ್ಪು ತೋರಿಸಿದ ಅವರು ಕೆಲವೇ ನಿಮಿಷಗಳಲ್ಲಿ ಚಕ್ರಮುನ್ನಿ ಸೊಪ್ಪು, ವೀಳ್ಯದ ಎಲೆ ಕಾಯಿತುರಿ ಸೌತೆ ಹಾಕಿ ಸೊಪ್ಪಿನ ಕೊತ್ತಂಬುರಿ ಸೊಪ್ಪು ತಯಾರಿಸಿ ಬಿಟ್ಟರು ಅದರ ಜೊತೆ ನೆಂಜಿಕೊಳ್ಲಲು ಮಂಡ್ಯದಿಂದ ತರಿಸಿದ್ದ ಆಗಾನಿಕ್ ಬೆಲ್ಲ ಕೊಟ್ಟರೆ ನನಗೋ ಸವಿಯುವ ಹಂಬಲ ಆದರೆ ನನ್ನ ಜೊತೆ ಬಂದಿದ್ದವರಿಗೆ ಅದನ್ನು ತಿಂದರೆ ಏನಾಗುವುದೋ ಎಂಬ ತಳಮಳ, ಅಂತೂ ಎಲ್ಲ ಮುಗಿಯುವ ಹೊತ್ತಿಗೆ ಊಟಕ್ಕೆ ಒತ್ತಾಯಿಸಿದ ಅಂಗಡಿ ಅಡುಗೆ ತಯಾರಿಗೆ ಮುಂದಾದಾಗ ಇನ್ನು ಏನೇನು ಕಾದಿದೆಯೋ ಎಂದು ಅನಿಸಿತ್ತು ನನಗೆ . ಆಗಲೆ ತಯಾರಿ ಮುಂದುವರಿಸಿದ ಅಂಗಡಿ ರೆಷ್ಮೇ ಸೊಪ್ಪು, ದಂಟಿನ ಸೊಪ್ಪು, ವೀಳ್ಯದ ಎಲೆ, ಚಕ್ರಮುನ್ನಿ ಸೊಪ್ಪು ಸದೆ ಇನ್ನು ಏನೇನೋ ಹಾಕಿ ರಸಾಯನ ತಯಾರು ಮಾಡಿದ್ದರು, ಬಿಸಿ ಬಿಸಿ ಹಬೆಯಾಡುವ ಅನ್ನ ತಟ್ಟೆಯಲ್ಲಿ ಹಾಕುತ್ತಲೇ ಇದು ಸೋನಾ ಮಸ್ಸೂರಿ ಅಕ್ಕಿ ಪಾಲಿಷ್ ಮಾಡಿಲ್ಲ ಅರಕಲಗೂಡು ಬಳಿಯ ಮಲ್ಲಿನಾಥಪುರದ್ದು ಎಂದರು. ನಿಜವಾಗಿಯೂ ಊಟ ಅದ್ಭುತವಾಗಿಯೇ ಇತ್ತು. ನಂತರ ತಮ್ಮ ಪುಸ್ತಕಗಳು ಕೃಷಿ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅಂಗಡಿಯವರು ಬಿಡುವು ದೊರೆತರೆ ಸಾಕು ನಾನು ಇಲ್ಲಿಯೇ ಇರುತ್ತೇನೆ. ಕೃಷಿಯನ್ನು ನಂಬಿ ಯಾರು ಹಾಳಾಗಿಲ್ಲ, ದುಡಿಯದೇ ಹಾಳಾಗುತ್ತಿದ್ದಾರೆ ಕೃಷಿ ಬದುಕು ಕಟ್ಟಿ ಕೊಡುತ್ತದೆ ಎಂದರು. ಅಂಗಡಿಯವರ ಕಾರ್ಯ ವೈಖರಿ ಮತ್ತು ವ್ಯಕ್ತಿತ್ವನ್ನು ನೋಡಿದ ನಿಜಕ್ಕೂ ಇಂತಹವರು ಸಮಾಜಕ್ಕೆ ಮಾದರಿ ಎನಿಸಿತು. ಮತ್ತೊಮ್ಮೆ ಅಲ್ಲಿಗೆ ಭೇಟಿನೀಡುವ ವಿಶ್ವಾಸ ಇಟ್ಟುಕೊಂಡು ಹಾಸನಕ್ಕೆ ವಾಪಾಸಾದೆವು.