Saturday, June 7, 2008

ಆರ್ ಪಿ ವಿ ಗೆ ಮಾಧ್ಯಮ ಶ್ರೇಷ್ಠ ಪ್ರಶಸ್ತಿ




ಜೀ ಕನ್ನಡ ವಾಹಿನಿ ಹಾಗೂ ಎಸ್ಸೆಲ್ ಅವಾರ್ಡ್ ಸಹಯೋಗದಲ್ಲಿ ನೀಡುವ ಮಾದ್ಯಮ ಶ್ರೇಷ್ಠ ಪ್ರಶಸ್ತಿ ಹಾಸನ ಜಿಲ್ಲೆಯ ಆರ್ ಪಿ ವೆಂಕಟೇಶಮೂರ್ತಿಯವರಿಗೆ ಲಭಿಸಿದೆ. ಜೀ ಕನ್ನಡ ವಾಹಿನಿಯು ವಿವಿಧ ಕ್ಷೆತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕೆಲಸವನ್ನು ಕಳೆದ ಒಂದು ವರ್ಷ ದಿಂದ ಮಾಡಿಕೊಂಡು ಬಂದಿದೆ. ಇಡೀ ದೇಶದಲ್ಲಿಯೇ ಟಿವಿ ವಾಹಿನಿಯೊಂದ ಇಂತಹದ್ದೊಂದು ಅಪರೂಪದ ಕಾರ್ಯದಲ್ಲಿ ತೊಡಗಿಕೊಂಡಿರುವುದು ಪ್ರಶಂಸನಾರ್ಹ ಸಂಗತಿಯಾಗಿದೆ. ಕರ್ನಾಟಕ ವಿಭಾಗದ ವಾಹಿನಿಯ ಮುಖ್ಯಸ್ಥರಾಗಿರುವ ಗೌತಮ್ ಮಾಚಯ್ಯ ನವರ ನೇತೃತ್ವದಲ್ಲಿ ಇಂತಹದ್ದೊಂದು ಸಾಧನೆಗೆ ಎಸ್ಸೆಲ್ ವಿಭಾಗದ ನಿರ್ವಾಹಕರಾಗಿರುವ ಮಧುಸೂಧನ್ ಕೂಡ ಜೊತೆಯಾಗಿದ್ದಾರೆ. ಮಾದ್ಯಮ ಶ್ರೇಷ್ಠ ಪ್ರಶಸ್ತಿಗೆ ಹಾಸನದ ಜನತಾ ಮಾದ್ಯಮ ಪತ್ರಿಕೆ ಸಂಪಾದಕರಾಗಿರುವ ಆರ್ ಪಿ ವೆಂಕಟೇಶ ಮೂರ್ತಿ ಯವರಿಗೆ ಲಭಿಸಿದೆ. ಜನತಾ ಮಾಧ್ಯಮ ಪತ್ರಿಕೆಯ ಮೂಲಕ ಭ್ರಷ್ಠ ವ್ಯವಸ್ಥೆಗೆ ಚುರುಕುಮುಟ್ಟಿಸಿ ಹತ್ತು ಹಲವು ಚಳುವಳಿಗೆ ಧ್ವನಿಯಾದವರು. ಅದು 70ರ ದಶಕ ತುರ್ತುಪರಿಸ್ಥಿತಿಯ ಕರಾಳ ದಿನಗಳು, ಬರದ ಬೇಗೆ, ಸಾಮಾಜಿಕ ಅಸಮಾನತೆ, ಭ್ರಷ್ಠಾಚಾರ, ಶೋಷಣೆ ಇದ್ದ ದಿನಗಳು. ಹಾಸನ , ಶಿವಮೊಗ್ಗ, ಚಿಕ್ಕಮಗಳೂರು, ಭಾಗದಲ್ಲಿ ಜೆಪಿ ಚಳುವಳಿ ಹಾಗೂ ಲೋಹಿಯಾ ವಾದದ ದಟ್ಟ ಅಲೆಯಿತ್ತು. ಇದರ ಪರಿಣಾಮ ನವ ನಿರ್ಮಾಣ ವೇದಿಕೆಯ ಅಡಿಯಲ್ಲಿ ಹೊಸ ಹುಮಸ್ಸಿನ ಯುವಕರ ಪಡೆಯೊಂದು ಜಾಗ್ರತ ಅರಿವಿನ ಬಗ್ಗೆ ಸಾರಲು ರಾಜ್ಯಾಧ್ಯಂತ ಪ್ರವಾಸ ಮಾಡಿತು. ಚಳುವಳಿಯನ್ನು ದಿಕ್ಕು ದಿಕ್ಕಿಗೆ ಕೊಂಡೊಯ್ದಿತು. ದೀನದಲಿತರ, ಶೋಷಿತರ ಹಕ್ಕುಗಳು, ರೈತರ ಸಂಕಷ್ಠಗಳ ಅರಿವು, ಸಮಾನತೆಯ ಅಂಶಗಳಿಗೆ ಬೆಂಬಲಿಸುವುದೇ ಈ ಚಳುವಳಿಯ ಉದ್ದೇಶವಾಗಿತ್ತು. ಇಂತಹ ಚಳುವಳಿಯ ಮುಖ್ಯ ವಾಹಿನಿಯಲ್ಲಿ ಒಬ್ಬರಾಗಿ ಬಂದವರು ಆರ್ ಪಿ ವೆಂಕಟೇಶಮೂರ್ತಿ. ಆಗಿನ್ನೂ ಹಾಸನದ ಲಾ ಕಾಲೇಜಿನಲ್ಲಿ ಕಲಿಯುತ್ತಿದ್ದ ಅವರಿಗೆ ಸಾಮಾಜಿಕ ತುಡಿತದ, ಸ್ಪಂದನೆಯ ಹಪಹಪಿಯಿತ್ತು, ಸುಂದರ ಸಮಾಜದ ಕನಸಿತ್ತು ಇವೆಲ್ಲ ಒಟ್ಟಾಗಿ ಅವರನ್ನು ಚಳುವಳಿಗೆ ಸೆಳೆದಿತ್ತು. ಈ ಸಂಧರ್ಭ ಹಲವಾರು ಭಾರಿ ಅವರು ಜೈಲು ಕಾಣಬೇಕಾಯಿತು. ಇಂತಹ ಸಂಧಿಗ್ದ ಸಂಧರ್ಬದಲ್ಲಿ ದಿಕ್ಕೆಟ್ಟ ವ್ಯವಸ್ಥೆಗೆ ಆಸರೆ ನೀಡಲು ಯೋಚಿಸಿದ ಆರ್ ಪಿ ವಿ ಮತ್ತು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿರುವ ಮಂಜುನಾಥ ದತ್ತ ,ಸಮಾನ ಮನಸ್ಕ ಸ್ನೇಹಿತರು ಜಿಲ್ಲೆಯಲ್ಲಿ ಜನತಾ ಮಾದ್ಯಮ ಪತ್ರಿಕೆಯನ್ನು 6ನೇ ನವೆಂಬರ್ 1977ರಂದು ಹುಟ್ಟು ಹಾಕಿದರು. ಅಲ್ಲಿಯವರೆಗೂ ಜಿಡ್ಡು ಗಟ್ಟಿದ್ದ ಜಿಲ್ಲೆಯ ಪತ್ರಿಕೆಗಳು ಒಂದು ಸಾಂಪ್ರದಾಯಿಕ ಕಟ್ಟಳಯೊಳಗೆ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಆರ್ ಪಿ ವಿ ನೇತೃತ್ವದಲ್ಲಿ ಜನತಾ ಮಾದ್ಯಮ ಪತ್ರಿಕೆ ಪ್ರಮುಖವಾಗಿ ಶೋಷಿತರ ದುರ್ಬಲರ ಧ್ವನಿಯಾಯಿತು. ಆರ್ ಪಿ ವಿ ಯವರ ದಿಟ್ಟತನದ ಬರಹಗಳು ಆಡಳಿತಷಾಹಿ ವ್ಯವಸ್ಥೆಗೆ ಚುರುಕು ಮುಟ್ಟಿಸಿದವು. ರಾಜ್ಯದಲ್ಲಿ ಗಮನಸೆಳೆದಿದ್ದ 90ರ ದಶಕದ ಬಾಗೂರು ನವಿಲೆ ರೈತಚಳುವಳಿಗೆ ಒಂದು ತೀವ್ರತೆ ತಂದುಕೊಟ್ಟದ್ದೇ ಆರ್ ಪಿ ವಿ ಯವರ ಬರವಣಿಗೆ, ಅಷ್ಟೇ ಅಲ್ಲ ಸ್ವತಹ ರೈತ ಚಳುವಳಿಯ ಹಿನ್ನೆಲೆಯಲ್ಲಿ ಬಂದ ಅವರು ಚಳುವಳಿಗೆ ಧುಮುಕಿ ದೊಡ್ಡ ಹೋರಾಟಕ್ಕೆ ಕಾರಣರಾದರು. ಹಾಸನದ ಚನ್ನಪಟ್ಟಣ ಕೆರೆ ಉಳಿಸುವ ಹೋರಾಟ, ಗಂಧದ ಕೋಠಿಯ ಮರಗಳ ಹನನ ತಡೆಯಲು ಹೋರಾಟ, ಬಿಸಲೆ ರಕ್ಷಿತಾರಣ್ಯ ಉಳಿಸುವ ಹೋರಾಟ ಹೀಗೆ ಲೆಕ್ಕವಿಲ್ಲದಷ್ಟು ಜನಪರ ಹೋರಾಟ ಹುಟ್ಟುಹಾಕಿದ ಪತ್ರಿಕೆ, ಚಳುವಳಿಗಳ ಮುಖವಾಣಿಯಾಯಿತು ಆ ಮೂಲಕ ವ್ಯಸಸ್ಥೆಯ ಸುಧಾರಣೆಗೆ ನಾಂದಿ ಹಾಡಿತು. ಅಧಿಕಾರಿಗಳು , ರಾಜಕಾರಣಿಗಳು ಎಷ್ಟೆ ದೊಡ್ಡವರಿರಲಿ ಟೀಕಿಸಲು ಹಿಂದೆ ಮುಂದೆ ನೋಡದ ಆರ್ ಪಿ ವಿ ವಿಶೇಷ ಸಂಧರ್ಭಗಳಲ್ಲಿ ನೇರ ಹಾಗು ದಿಟ್ಟನುಡಿಯ ಬರಹಗಳು ಹಲವಾರು ಭಾರಿ ಜನಮೆಚ್ಚುಗೆಗೂ ಪಾತ್ರವಾಗಿವೆ. ಜಿಲ್ಲೆ ಪತ್ರಕರ್ತ ಸಂಘದ ಅಧ್ಯಕ್ಷರಾಗಿದ್ದ ಸಂಧರ್ಭ ಹತ್ತು ಹಲವು ಬದಲಾವಣೆಗಳು ಹಾಗೂ ಹೊಸತನವನ್ನು ತಂದಿದ್ದಾರೆ. ಈ ಪೈಕಿ ಸಂಘದ ಕಛೇರಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಸುವಂತೆ ಮಾಡಿದ್ದು ಹಾಗು ಇತ್ತಿಚಗೆ ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕೊಡಿಸುವ ಕಾರ್ಯಕ್ಕೆ ಕೈ ಹಚ್ಚಿರುವುದು. ಜಿಲ್ಲೆಯಲ್ಲಿ ಜಿಲ್ಲಾಪಂಚಾಯತ್ ವತಿಯಿಂದ ಕಂಪ್ಯೂಟರ್ ಖರೀದಿಗೆ ಸಂಭಂಧಿಸಿದಂತೆ ನಡೆದ ಕೋಟ್ಯಾಂತರ ರೂ ಹಗರಣ ಬಯಲಿಗೆ, ಭ್ರಷ್ಠಚಾರದಲ್ಲಿ ತೊಡಗಿದ್ದ ಲೋಕಾಯುಕ್ತ ಎಸ್ ಪಿ ವಂಚನೆ ಬಯಲು, ಅರ್ಧ ಕೋಟಿಗೂ ಮಿಕ್ಕಿದ ಅರಕಲಗೂಡಿನ ಪಿಂಚಣಿ ವಂಚನೆ ಹಗರಣ, ಹಾಸನ ಮೆಡಿಕಲ್ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಹೀಗೆ ಒಂದೇ ಎರಡೇ ಪತ್ರಿಕೆಯ ಮೂಲಕ ಆರ್ ಪಿ ವಿ ಹೊರಜಗತ್ತಿಗೆ ತೆರೆದಿರಿಸಿದ್ದು ಬೇಕಾದಷ್ಠಿವೆ. ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿದ್ದಾರೆ, ಸಾರ್ವಜನಿಕರಿಗೆ ಅರಿವು ಮೂಡಿಸುವ 'ನಮ್ಮೂರ ಸೇವೆ' ಯಂತಹ ಸ್ವಯಂ ಸೇವಾ ಸಂಘಟನೆಯನ್ನು ಹುಟ್ಟುಹಾಕಿದ್ದಾರೆಅದನ್ನುಇಂದಿಗೂ ಕಾಣಬಹುದು, ಪತ್ರಿಕೆ ಆರಂಭವಾಗಿ ಇಂದಿಗೆ 31ವರ್ಷ ಕಳೆದಿವೆ, ಈ ಹಾದಿಯಲ್ಲಿ ಪತ್ರಿಕೆ ಯ ಮೂಲಕ ಸಾವಿರಾರು ಬರಹಗಾರರು,ಚಿಂತಕರು, ಹೋರಾಟಗಾರರಿಗೆ ಪತ್ರಿಕೆ ವೇದಿಕೆಯಾಗಿದೆ ಅವರನ್ನು ಬೆನ್ನು ತಟ್ಟಿ ಬೆಳೆಸಿದೆ, ಮೂಢನಂಬಿಕೆ ತೊರೆಯುವ ಸಾಮಾನತೆ ಬೆಸೆಯುವ, ನ್ಯಾಯದ ಪರ ಧ್ವನಿಯೆತ್ತುವ ಗುಣವನ್ನು ಪತ್ರಿಕೆ ಬೆಳೆಸಿದೆ. ಇಂತಹ ಸಾಧನೆಗೈದಿರುವ ಆರ್ ಪಿ ವಿ ಜೀ ಮಾಧ್ಯಮ ಶ್ರೇಷ್ಠ ಪ್ರಶಸ್ತಿಗೆ ನಿಜಕ್ಕೂ ಅರ್ಹರು. ಅವರನ್ನು ಆಯ್ಕೆ ಮಾಡಲು ಸಹೃದಯರು ೫೭೫೭೫ ಗೆ ಮೂರ್ತಿ ಎಂದು ಬರೆದು ಎಸ್ಸೆಂಎಸ್ ಮಾಡಬಹುದು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...