ರಾಜಕಾರಣಿಗಳ ಮೇಲೆ ಚಪ್ಪಲಿ ಎಸೆತ ಈಗ ಸಾಮಾನ್ಯ ಎನಿಸಿದೆ. ಜನಸಾಮಾನ್ಯರ ೀ ನಡವಳಿಕೆಯ ಹಿಂದೆ ರಾಜಕಾರಣಿಗಳ ಬಗೆಗಿನ ಅಸಹನೆ ಚಪ್ಪಲಿ ಮತ್ತು ಶೂ ಗಳ ಮೂಲಕ ವ್ಯಕ್ತವಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ದೇಶದ ಹಲವೆಡೆ ಪತ್ರಕತಱರು, ನಿವ್ಋತ್ತ ಶಿಕ್ಷಕರು, ಗ್ರಾ.ಪಂ. ಸದಸ್ಯ ಮತ್ತು ಸಾಮಾನ್ಯ ನಾಗರೀಕರು ಇಂತಹ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ ಆ ಮೂಲಕ ರಾಜಕಾರಣಿಗಳ ಬಗ್ಗೆ ಸಮುದಾಯದ ಅಸಹನೆಯನ್ನು ಚಪ್ಪಲಿ ಎಸೆಯುವ ಮೂಲಕ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಪ್ರಕರಣಗಳನ್ನು ಪ್ರತ್ಯೇಕವಾಗಿ ಗಮನಿಸಿದರೆ ಅಂತಹ ಕ್ರಿಯೆಯ ಹಿಂದಿನ ವಾಸ್ತವಿಕತೆ ತೆರೆದುಕೊಳ್ಳುತ್ತಿದೆ. ಇದುವರೆಗಿನ ಎಲ್ಲ ಪ್ರಕರಣಗಳಲ್ಲೂ ಇಂತಹದ್ದೊಂದು ಕ್ರಿಯೆಯ ಹಿಂದಿನ ವಾಸ್ತವಿಕತೆಯನ್ನು ಅರಿತ ರಾಜಕೀಯ ಮುಖಂಡರು ಸಂಯಮ ಮತ್ತು ಸಹನೆಯಿಂದ ವರ್ತಿಸಿದ್ದಾರೆ. ಆದರೆ ಸಿಎಂ ಯಡ್ಡಿ ವಿಚಾರದಲ್ಲಿ ಮಾತ್ರ ಹಾಗಾಗಿಲ್ಲ. ಸಾರ್ವಜನಿಕವಾಗಿ ಇಂತಹದ್ದೊಂದು ಅಗೌರವ ಮುಖ್ಯಮಂತ್ರಿಯವರಿಗೆ ಆಗಿದ್ದು ಒಳ್ಳೆಯ ಬೆಳವಣಿಗೆಯಂತು ಅಲ್ಲ. ಈ ಘಟನೆಯನ್ನು ಮಾಜಿ ಪ್ರದಾನಿ ಹೆಚ್ ಡಿ ದೇವೇಗೌಡರ ವಿರುದ್ದದ ದಾಳವಾಗಿ ಮತಬ್ಯಾಂಕ್ ಗಾಗಿ ಬಳಸಿಕೊಂಡದ್ದು ಎಷ್ಟು ಸರಿ? ರಾಷ್ಟ್ರದ ಒಬ್ಬ ಹಿರಿಯ, ಮುತ್ಸದ್ದಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮತ್ತು ಅವರ ಕಾರ್ಯ ವೈಖರಿಯ ಬಗ್ಗೆ ಹಾಸನದ ಜನರನ್ನು ಕೆರಳಿಸುವ ಪ್ರಚೋದನಾಕಾರಿ ಭಾಷಣವನ್ನು ಮುಖ್ಯಮಂತ್ರಿ ಮಾಡಿದ್ದು ತಪ್ಪಲ್ಲವೇ? ಇಂತಹ ಮಾತುಗಳೇ ಚಪ್ಪಲಿ ಎಸೆತಕ್ಕೆ ಕಾರಣವಲ್ಲವೇ? ಸಿಎಂ ಪದವಿ ಒಂದು ಜವಾಬ್ದಾರಿ ಹುದ್ದೆ ಅದನ್ನರಿತು ಹೊಣೆಗಾರಿಕೆಯಿಂದ ವರ್ತಿಸಬೇಕಾದ ಅಗತ್ಯವೂ ಇದೆ. ಆದರೆ ಯಡ್ಡಿಯೂರಪ್ಪ ಮಾಡಿದ್ದೇನು? ಚಪ್ಪಲಿ ಎಸೆತದ ಮರುಕ್ಷಣವೇ ಇದನ್ನು ದೇವೇಗೌಡ ಮತ್ತವರ ಮಕ್ಕಳು ಮಾಡಿಸಿದ್ದಾರೆ. ನಾನು ಮಂಡ್ಯದ ಗಂಡು ಪೋಲೀಸರೇ ನೀವು ಗಂಡಸರಾದರೆ ಆತನನ್ನು 6ತಿಂಗಳು ಜೈಲಿಗಟ್ಟಿ ಇದು ಅವರ ವಾಗ್ಜರಿಯ ತುಣುಕು.
ಇನ್ನು ಹಾಸನದ ಮಟ್ಟಿಗೆ ಹೇಳುವುದಾದರೆ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಮಾಡಿದ್ದೇನು? ಜಿಲ್ಲೆಯ 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಆಲೂಗಡ್ಡೆ ನಷ್ಟವಾದಾಗ ಜಿಲ್ಲೆಯ ರೈತರ ಕಣ್ಣೀರು ಒರೆಸಲು ಬರಲಿಲ್ಲ, ಗೊಬ್ಬರದ ಅಭಾವವಿದ್ದಾಗ ದಾಸ್ತಾನು ನೀಡಲಿಲ್ಲ, ಜಿಲ್ಲೆಯ ಅಭಿವೃದ್ದಿ ಕಾಮಗಾರಿ ಸ್ಥಗಿತವಾಗಿದೆ, ಹೆದ್ದಾರೆ ಪ್ರಾಧಿಕಾರ ಸೇರಿದಂತೆ ಇತರೆ ಮುಖ್ಯ ಕಛೇರಿಗಳ ಸ್ಥಳಾಂತರವಾಗಿದೆ. ಪದವಿ ಪೂರ್ವ ಕಾಲೇಜುಗಳ ರದ್ದತಿಯಾಗಿದೆ.ರಾಜ್ಯದ ಆಯ-ವ್ಯಯದಲ್ಲಿ ಜಿಲ್ಲೆಯ ಅಭಿವೃದ್ದಿಗೆ ಚಿಕ್ಕಾಸು ಇಲ್ಲ, ಹೊಸ ಯೋಜನೆಗಳೂ ಇಲ್ಲ. ಇರುವ ಯೋಜನೆಗಳ ಸಮರ್ಪಕ ಅನುಷ್ಠಾನವೂ ಆಗಿಲ್ಲ, ಜಿಲ್ಲೆಯ ುಸ್ತುವಾರಿ ಸಚಿವರ ತಲೆಯೇ ಇಲ್ಲ, ೊಬ್ಬ ಗನ್ ಮ್ಯಾನ್ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ವೆಚ್ಚದಲ್ಲಿ ಬಂದು ಹೋಗುವ ಸಿ.ಎಂ. ಯಡಿಯೂರಪ್ಪ ರೈತರ ಕಷ್ಟ ಕೇಳಲು ಬರಲಿಲ್ಲ. ಇವರ ರಾಜಕೀಯ ದ್ವೇಷದಿಂದ ಜಿಲ್ಲೆಯ ಜನಸಾಮಾನ್ಯರಿಗೆ ಭಾರಿ ಅನ್ಯಾಯವೇ ಆಗಿದೆ. ಇಂತಹವರು ಚುನಾವಣೆ ಸಂಧರ್ಭದಲ್ಲಿ ಬಂದು ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸುವ ಶಕ್ತಿ ಯಾರಿಗಿದೆ ಸ್ವಾಮಿ? ಅಷ್ಟಕ್ಕೂ ಪ್ರಚೋದನಾಕಾರಿ ಭಾಷಣ ಮಾಡಿ ಘಟನೆಗೆ ಕಾರಣವಾಗಿರುವ ಯಡಿಯೂರಪ್ಪನ ಮೇಲೆ ಚುನಾವಣ ಆಯೋಗ ಕ್ರಮ ಜರುಗಿಸ ಬೇಕಲ್ಲವೇ?? ಬೇಸತ್ತು ಚಪ್ಪಲಿ ಎಸೆದ ಅಮಾಯಕನನ್ನು ಜೈಲಿಗಟ್ಟುವುದಾದರೆ, ಪ್ರಚೋದನೆಗೆ ಕಾರಣರಾದ ಸಿಎಂ ಯಡ್ಡಯನ್ನು ಕ್ರಮ ಜರುಗಿಸಿ ಜೈಲಿಗಟ್ಟ ಬೇಕಲ್ಲವೇ???? ಇದು ಚುನಾವಣ ಆಯೋಗದ ತಾರತಮ್ಯ ನೀತಿಯಲ್ಲವೇ????