Sunday, December 27, 2009

'ಮುಸ್ಲಿಂ' ಮನೋಧರ್ಮ ಬದಲಾಗ ಬೇಕಲ್ಲವೇ?

ಜಾಗತಿಕವಾಗಿ ಮುಸ್ಲಿಂರ ಸ್ಥಿತಿ-ಗತಿ ಹೇಗಿದೆ ಎಂಬುದನ್ನು ತಿಳಿಯಲು ಇದೊಂದು ಕಾರ್ಟೂನು ಸಾಕು. ಯಾಕೆ ಹೀಗೆ? ಜಗತ್ತಿನ ಜನಸಂಖ್ಯೆಯ ಒಂದನೇ 5ಭಾಗದಷ್ಟಿರುವ ಮುಸ್ಲಿಂರು ಸಾಮಾಜಿಕವಾಗಿ, ರಾಜಕೀಯವಾಗಿ,ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವೇನು? ಅವರದೇ ಅಧಿಪಥ್ಯವಿರುವ ರಾಷ್ಟ್ರಗಳಲ್ಲಿ, ರಾಜ್ಯಗಳಲ್ಲಿಯೂ ಅವರ ಮನಸ್ಥಿತಿ, ಸ್ಥಾನಮಾನಗಳಲ್ಲಿ ಕೊಂಚವೂ ಬದಲಾವಣೆ ಬಂದಿಲ್ಲವೆಂಬುದು ದುರಂತದ ಸಂಗತಿ. ಮುಸ್ಲಿಂ ಎಂದರೆ 'ಅಪಾಯದ ಗಂಟೆ' ಎಂದು ಭಾವಿಸಲಾಗಿರುವುದರಿಂದ ಜಾಗೃತಾವಸ್ಥೆ ಜಗತ್ತಿನೆಲ್ಲಡೆಯೂ ಇದೆ. ಹೀಗೇಕಾಗುತ್ತಿದೆ? ಅವರು ಯಾಕೆ ಜಗತ್ತಿನ ಇತರೆ ಧರ್ಮೀಯರಿಗಿಂತ ಭಿನ್ನವಾಗಿ ಕಾಣಲಾರಂಭಿಸಿದ್ದಾರೆ ಎಂಬ ಪ್ರಶ್ನೆ ಸದಾ ಇದ್ದೇ ಇರುತ್ತೆ. ಅದಕ್ಕೆ ಪೂರಕವಾಗಿ ಇತರೆ ಧರ್ಮೀಯರು ಅವರವರ ಭಾವಕ್ಕನುಗುಣವಾಗಿ ಮುಸ್ಲಿಂರನ್ನು ಅರ್ಥೈಸಲಾರಂಬಿಸಿದ್ದಾರೆ, ಇಂತಹ ಬೆಳವಣಿಗೆ ಪರಿಸ್ಥಿತಿಯನ್ನು ಮತ್ತಷ್ಟು ಆತಂಕದೆಡೆಗೆ ಜಗತ್ತಿನಾಧ್ಯಂತ ಸೆಳೆಯುತ್ತಲೇ ಇದೆ, ಮತ್ತು ಅದರ ಪರಿಣಾಮಗಳು ಗೋಚರವಾಗುತ್ತಲೇ ಇವೆ. ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಆರೋಗ್ಯಕರ ಉತ್ತರ ಹುಡುಕುವ ಗೋಜಿಗೆ ಯಾರೂ ಹೋಗಿಲ್ಲ. ಆದ್ದರಿಂದ ಮೊಹರಂ ಕಡೆದಿನ ದ ಸಂಧರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಚರ್ಚೆಯನ್ನು ತಂದಿದ್ದೇನೆ.
ಮುಸ್ಲಿಂ ಎಂದರೆ 'ದೇವರಿಗೆ ಅರ್ಪಿತವಾದವರು' ಎಂದು ಅರ್ಥೈಸಲಾಗಿದೆ. ಮುಸ್ಲಿಂ ಪದದ ಜೊತೆಯಲ್ಲೇ ಥಳುಕು ಹಾಕಿಕೊಂಡಿರುವುದು 'ಜಿಹಾದ್' ಪದ . ಜಿಹಾದ್ ಎಂದರೆ ಹೋರಾಟ. ಧರ್ಮರಕ್ಷಣೆಗೆ ಹೋರಾಟದಲ್ಲಿ ನಿರತನಾದವನು ಮುಜಾಹಿದ್ದೀನ್ ಎಂಬ ಅರ್ಥವಿದೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ.೨೩ ರಷ್ಟು ಅಂದರೆ ೧.5ಬಿಲಿಯನ್ ಮುಸ್ಲಿಂರಿದ್ದಾರೆ, ಕ್ರೈಸ್ತರ ನಂತರದ ಸ್ಥಾನ ಮುಸ್ಲಿಂ ಜನಸಂಖ್ಯೆಗಿದೆ. ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮುಸ್ಲಿಂ ಪಾರುಪತ್ಯವಿದೆ, ಇಂಡೋನೇಷಿಯಾದಲ್ಲಿ ಪ್ರಪಂಚದೆಲ್ಲೆಡೆಗಿಂತ ಹೆಚ್ಚು ಮುಸಲ್ಮಾನರಿದ್ದಾರೆ, ಏಷ್ಯಾ ಖಂಡದಲ್ಲೇ ಶೇ.೬೩ ರಷ್ಟು ಮುಸ್ಲಿಂ ರಿದ್ದು 50ಕ್ಕೂ ಹೆಚ್ಚು ವಿಧದ ಭಾಷೆ ಬಳಸುತ್ತಾರೆ. ಹಿಂದೂಗಳಲ್ಲಿರುವಂತೆ ಇಲ್ಲಿಯೂ 2000ಕ್ಕೂ ಹೆಚ್ಚು ಪ್ರಮುಖ ಜಾತಿ, ಉಪಜಾತಿ ಧಾರ್ಮಿಕ ಪದ್ದತಿಗಳಿವೆ. 7ನೇ ಶತಮಾನದ ಸುಮಾರಿಗೆ ಅರೇಬಿಯಾದಿಂದ ವ್ಯಾಪಾರದ ಸಲುವಾಗಿ ಬಂದು ಬೀಡುಬಿಟ್ಟ ಮುಸಲ್ಮಾನರು ಮೊದಲ ಪ್ರಾರ್ಥನಾ ಮಂದಿರ ಕಟ್ಟಿದ್ದು ಕೇರಳದ ಕೂಡುಂಗಲೂರು ಎಂಬ ಸ್ಥಳದಲ್ಲಿ. ಸಧ್ಯ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೧/೬ ರಷ್ಟಿರುವ ಇವರು ಕಳೆದ ಜುಲೈ 2009ರ ಅಂಕಿ-ಅಂಶಗಳ ಪ್ರಕಾರ ೧೬೦.9ಮಿಲಿಯನ್ ಇದ್ದಾರೆ, ಇದೇ ಜನಸಂಖ್ಯೆ 2001ರಅಂತ್ಯಕ್ಕೆ 138ಮಿಲಿಯನ್ ಇತ್ತು. ಈ ಕಾರಣಗಳಿಂದಾಗಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ್ದು 3ನೇ ಸ್ಥಾನ. ಮೊದಲ ಹಾಗು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇಂಡೋನೇಷಿಯಾ ಮತ್ತು ಪಾಕೀಸ್ಥಾನಗಳಿವೆ. ದೇಶದ 2ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಲಕ್ಷ್ಯದ್ವೀಪಗಳಲ್ಲಿ ಇವರ ಸಂಖ್ಯೆ ಹೆಚ್ಚಿದೆ, ಸಾಕ್ಷರತೆ ಪ್ರಮಾಣ ಶೇ.೭೫.೫ ರಷ್ಟಿದೆ.
ಇಂತಹ ಮುಸಲ್ಮಾನರು ಪ್ರಸಕ್ತ ಸಂಧರ್ಭದಲ್ಲಿ ಹೇಗೆ ಗುರುತಿಸಲ್ಪಡುತ್ತಿದ್ದಾರೆ, ಗೊತ್ತಾ? ಉಗ್ರಗಾಮಿ, ಭಯೋತ್ಪಾದಕ, ಮುಜಾಹಿದ್ದೀನ್ ಎಂದೇ ಗುರುತಿಸಲಾಗುತ್ತಿದೆ. ಅಖಂಡ ಭಾರತದ ಭಾಗವಾಗಿರುವ ಭಾರತೀಯ ಮುಸಲ್ಮಾನರೂ ಅದರಲ್ಲೂ ಜನಪ್ರಿಯತೆ ಪಡೆದ ವ್ಯಕ್ತಿಗಳನ್ನೆ ಮುಸ್ಲಿಂ ಎಂಬ ಕಾರಣಕ್ಕಾಗಿ ಅನುಮಾನದಿಂದ ನೋಡಲಾಗುತ್ತಿದೆ. ಬಾಲಿವುಡ್ ಬಾದಷಹ ಶಾರೂಖ್ ಖಾನ್ ನನ್ನು ಅಮೇರಿಕಾದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಿದರೆ, ತನ್ನ ಚಿತ್ರವೊಂದರ ಪ್ರಚಾರದ ಸಲುವಾಗಿ ವೇಷ ಮರೆಸಿಕೊಂಡು ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಎಂಬ ಕಾರಣಕ್ಕಾಗಿ ನಟ ಅಮೀರ್ ಖಾನ್ ನ ಮೇಲೆ ದೂರು ದಾಖಲಿಸಲಾಗುತ್ತದೆ. ದೇಶದ ಗುಪ್ತಚರ ಸಂಸ್ಥೆ 'ರಾ' ನಲ್ಲಿ ಮುಸ್ಲಿಂರೇ ಇಲ್ಲ!, ಒಟ್ಟಾರೆ ಸರ್ಕಾರಿ ನೌಕರರು ಕೇವಲ ಶೇ.೬.೪ ಮಾತ್ರ. ಮುಸಲ್ಮಾನರ ಸ್ಥಿತಿಗತಿ ಕುರಿತ ಕೇಂದ್ರಕ್ಕೆ ವರದಿ ನೀಡಿರುವ ರಾಜೀಂದರ್ ಸಾಚಾರ್ ವರದಿಯನುಸಾರ ಮುಸ್ಲಿಂರು ತಮ್ಮ ಜನಸಂಖ್ಯೆ ಪ್ರಮಾಣವನ್ನು ಮೀರಿ 'ಪ್ರಾತಿನಿದ್ಯ' ಪಡೆದ ಜಾಗವೆಂದರೆ ಅದು ಜೈಲುಗಳು! 8ರಾಜ್ಯಗಳಲ್ಲಿ ಸರಾಸರಿ ಶೇ.೧೪.೮೨ ರಷ್ಟಿರುವ ಮುಸ್ಲಿಂರಲ್ಲಿ ಶೇ.೨೩.4ರಷ್ಟು ಜನ ಜೈಲುಬಂಧಿಗಳು!
ಈಗ ವಿಚಾರಕ್ಕೆ ಬರೋಣ ದೇಶದ ಮುಸಲ್ಮಾನರ ಪರಿಸ್ಥಿತಿ ಯಾಕೆ ಹೀಗೆ? ಇವರಲ್ಲಿ ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುವವರು ವಿರಳ, ಕಲಿತವರು ಕೊಲ್ಲಿ ರಾಷ್ಟ್ರಗಳ ಕಡೆ ಮುಖ ಮಾಡುತ್ತಾರೆ. ಅತಿಯಾದ ಧಾರ್ಮಿಕ ಆಚಾರಗಳನ್ನು ಪಾಲಿಸುತ್ತಾರೆ. ಧರ್ಮದ ಬಗೆಗಿನ ಕುರುಡು ಪ್ರೀತಿ ವ್ಯವಸ್ಥೆಯಿಂದ ಇವರನ್ನು ವಿಮುಖರನ್ನಾಗಿ ಮಾಡುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ಕೆಳ-ಮದ್ಯಮ-ಮೇಲ್ವರ್ಗ ಎಂದು ವಿಂಗಡಿಸಲು ಸಾಧ್ಯವಿದ್ದರೆ, ಮುಸಲ್ಮಾನರಲ್ಲಿ ಇದಕ್ಕೆ ತದ್ವಿರುದ್ದ ಬಹುತೇಕವಾಗಿ ಕೆಳ-ಮೇಲ್ವರ್ಗಗಳನ್ನಷ್ಟೇ ಕಾಣಲು ಸಾಧ್ಯ. ಶ್ರೀಮಂತ ಮುಸಲ್ಮಾನರಿಗೆ ಬಡ ಮುಸಲ್ಮಾನರ ಕಾಳಜಿ ಬೇಕಿಲ್ಲ, ರಾಜಕೀಯ ಅಧಿಕಾರ ಹಿಡಿದವನು ಅಧಿಕಾರ ದಕ್ಕಿಸಿಕೊಳ್ಳುವವರೆಗೆ ಮಾತ್ರ ಮುಸ್ಲಿಮರ ಹೆಸರು ಹೇಳುತ್ತಾನೆಯೇ ವಿನಹ ನಂತರ ಕಾಳಜಿ ಮರೆತು ಬಿಡುತ್ತಾನೆ. ಬದುಕಿಗೆ ನಿರ್ದಿಷ್ಟ ಹಾದಿ ಗೋಚರಿಸದಿದ್ದಾಗ ಬಹುತೇಕ ಮಂದಿ ದಗಾ-ವಂಚನೆಯನ್ನೆ ಮುಖ್ಯ ಕಸುಬಾಗಿಸಿ ಕೊಳ್ಳುತ್ತಾರೆ ಉಗ್ರವಾದದೆಡೆಗೆ ವಾಲುತ್ತಾರೆ ಹೊಟ್ಟೆ ಪಾಡಿಗಾಗಿ! ಅದರಲ್ಲೂ ಧಾರ್ಮಿಕ ಹೋರಾಟದ ಹೆಸರಿನಡೆ ನಡೆಯುವ ಕೃತ್ಯವಂತೂ ಘನಘೋರವಾದುದು. ಇವತ್ತು ದೇಶದ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಡಿ ರಕ್ಷಣೆ ನೀಡಲಾಗಿದೆ, ಅವರ ಅಭಿವೃದ್ದಿಗಾಗಿ ಹತ್ತು ಹಲವು ನಿಗಮ/ಮಂಡಳಿಗಳಿವೆ, ಉದ್ಯೋಗ ಮೀಸಲಾತಿ ನೀಡಲಾಗಿದೆ. ಆದರೆ ಯಾವುದು ಸದ್ಭಳಕೆಯಾದಂತಿಲ್ಲ. ಏಕೆಂದರೆ ಮುಸಲ್ಮಾನರ ಹೆಸರು ಹೇಳಿ ಬರುವ ಅದೇ ಜನಾಂಗದ ಮುಖಂಡರು ಸ್ವಾರ್ಥ ಹಿತಾಸಕ್ತಿಗಾಗಿ ಅಲ್ಲಿ ಪ್ರತಿಷ್ಠಾಪಿತರಾಗುತ್ತಿದ್ದಾರೆ. ವಕ್ಫ್ ಮಂಡಳಿಗಳು ಶ್ರೀಮಂತ ಮುಸಲ್ಮಾನರ ಆಶ್ರಯ ತಾಣಗಳಾಗಿವೆ. ವಿಧಾನ ಪರಿಷತ್-ರಾಜ್ಯಸಭೆಗೆ ಆಯ್ಕೆಯಾಗುವ ಮುಸ್ಲಿಂ ಮುಖಂಡರು ಮುಸ್ಲಿಮರ ಸ್ಥಿತಿಗತಿ ಕುರಿತು ಬಾಯಿ ಬಿಡಲು ತಯಾರಿಲ್ಲ. ಇನ್ನು ದೇಶದ ವಿವಿಧ ರಾಜಕೀಯ ಪಕ್ಷಗಳಿಂದ ನೇರವಾಗಿ ಸಂಸತ್/ವಿಧಾನ ಸಭೆಗಳಿಗೆ ಆಯ್ಕೆಯಾಗುವ ಮುಸ್ಲಿಂ ಮುಖಂಡರು ಕೂತು ಉಣ್ಣಲಷ್ಟೇ ಲಾಯಕ್ಕು! ಇವರಿಗೆ ಸಮಾಜದ ಹಿತಾಸಕ್ತಿ ಬೇಕಿಲ್ಲ ಎಂಬ ಆರೋಪ ದೇಶ ಸ್ವತಂತ್ರವಾದಂದಿನಿಂದಲೂ ಇದೆ. ಇನ್ನು ನಮ್ಮ ರಾಜಕೀಯ ಪಕ್ಷಗಳೋ ಮುಸಲ್ಮಾನರನ್ನು ಓಲೈಸಲು ನಿಲ್ಲುತ್ತವೆ, ದೇಶದ ಕಾನೂನು ಎಲ್ಲರಿಗೂ ಒಂದೇ ಆದರೂ ಇವರಿಗೆ ಕೆಲವು ವಿಚಾರಗಳಲ್ಲಿ ರಿಯಾಯ್ತಿ ಇದೆ. ಷರಿಯತ್ ಕಾನೂನು ಆಂತರಿಕವಾಗಿ ಜಾಗೃತವಾಗಿದೆ. ಮದರಸಗಳು ಧಾರ್ಮಿಕ ಚಟುವಟಿಕೆಯ ಕೇಂದ್ರಗಳಾಗಿವೆ. ಅವರಿಗಾಗಿಯೇ ಪ್ರತ್ಯೇಕ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಇಂತಹ ಕ್ರಿಯೆಗಳಿಂದ ಸಂವಿಧಾನದ ಸೆಕ್ಯುಲರಿಸಂ ಪದಕ್ಕೆ ಸೂಕ್ತ ಅರ್ಥ ಸಿಗದಂತಾಗಿದೆ.
ಸೂಕ್ತ ಶಿಕ್ಷಣ ಸಿಗದ ಯಾವುದೇ ವ್ಯಕ್ತಿ ಅನಾರೋಗ್ಯಕರ ವಾತಾವರಣಕ್ಕೆ ಕಾರಣನಾಗುತ್ತಾನೆಂಬ ಮಾತಿದ್ದರು, ಬಾರತೀಯ ಮುಸಲ್ಮಾನರಲ್ಲಿ ಓದಿದವರೇ(ಎಲ್ಲರೂ ಅಲ್ಲ ಶೇ.೬ ರಷ್ಟು ಮಂದಿ ಮಾತ್ರ) ಹೆಚ್ಚಿನ ಸಂಖ್ಯೆಯಲ್ಲಿ ಉಗ್ರಗಾಮಿ ಧೋರಣೆ ತಾಳುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವಂತಿದೆ. ದೇಶದಲ್ಲಿ ನೆಲೆಸಿರುವ ಮುಸಲ್ಮಾನರೆಲ್ಲರೂ ಅರಬ್ಬಿ ಮೂಲದವರಲ್ಲ, ಇಲ್ಲಿನವರೇ ಆಗಿದ್ದರೂ ಸಹಾ ಭಾಹ್ಯ ಶಕ್ತಿಗಳ ಕುತಂತ್ರದಿಂದಾಗಿ ಅವರ ಮನಸ್ಸು ವಿಚಲಿತವಾಗುವಂತೆ ಮತ್ತು ದೇಶದಲ್ಲಿ ಅವರಿಗೆ ಅಭದ್ರತೆಯ ಭಯವನ್ನು ಉಂಟು ಮಾಡಿದೆ. ಇದಕ್ಕೆ ಪೂರ್ಣವಾಗಿ ಮುಸಲ್ಮಾನರೇ ಕಾರಣರಲ್ಲ ಮುಸ್ಲಿಂಮೇತರ ಸಂಘಟನೆಗಳ ಕೋಮುಭಾವನೆಯೂ ಕಾರಣವಾಗಿದೆ.
ದೇಶದ ಮುಸಲ್ಮಾನರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಪರಿಣಾಮಕಾರಿಯಾದ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ರಾಜಕೀಯವಾಗಿ ದಲಿತರಿಗೆ ನೀಡಿದಂತೆ ಮುಸ್ಲಿಂರಿಗೆ ಮೀಸಲಾತಿ ನೀಡಬೇಕಾಗಿದೆ. ಸಾಚಾರ್ ವರದಿಯನ್ವಯ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂರನ್ನು ಪೂರ್ವಾಗ್ರಹದಿಂದ ನೋಡುವುದನ್ನು ಇನ್ನಾದರೂ ಬಿಡಬೇಕಾಗಿದೆ. ಹಾಗೆಯೇ ಶಿಕ್ಷಣ,ಆರೋಗ್ಯ, ನೌಕರಿ ಎಲ್ಲದರಲ್ಲೂ ಮುಸ್ಲಿಮರಿಗೆ ಪಾಲು ಸಿಗುವಂತೆ ನೋಡಿಕೊಳ್ಳಬೇಕು ಅದು ರಾಜಕೀಯ ಇಚ್ಚಾಶಕ್ತಿಯುಳ್ಳ ಸರ್ಕಾರದಿಂದ ಮಾತ್ರ ಸಾಧ್ಯ. ಅಂತೆಯೇ ಮುಸ್ಲಿಂ (ಕೆಲವು ಮಂದಿ) ರ ಮನಸ್ಥಿತಿ ಬದಲಾಗ ಬೇಕಿದೆ. ವ್ಯವಸ್ಥೆಯ ಆರೋಗ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ, ಸಮಾಜದ ಒಟ್ಟು ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲಿ, ಹೊಂದಾಣಿಕೆ ಮನೋಧರ್ಮ ಬೆಳೆಯಬೇಕು ಅದಕ್ಕೆ ಮುಸ್ಲಿಂಮೇತರ ಸಂಘಟನೆಗಳು ಕೈಜೋಡಿಸಬೇಕು. ಹಾಗಾದಲ್ಲಿ ಮಾತ್ರ ಸಮುಷ್ಠಿ ಭಾರತದ ಪ್ರಜ್ಞೆ ಮೂಡಿತಲ್ಲವೇ?

Sunday, December 20, 2009

ಎಟಿಆರ್ ವರದಿ ಜಾರಿಗೂ ಬದ್ದತೆ ಇರಬೇಕಲ್ಲವೇ?



ಅದು ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ದಿನಗಳು, ಒಮ್ಮೆ ವಿಧಾನಸಭೆಯಲ್ಲಿ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ನ್ಯಾಯಾಂಗ ಇಲಾಖೆಯಲ್ಲಿ ನಡೆದಿದ್ದ ಕಂಪ್ಯೂಟರ್ ಖರೀದಿ ಹಗರಣ ಹಾಗೂ ನ್ಯಾಯಾಧೀಶರುಗಳು ನಿವೇಶನಗಳನ್ನು ಹೊಂದುವ ಕುರಿತು ನೇರಾನೇರವಾಗಿ ಆರೋಪಿಸಿ ಚರ್ಚೆಗೆ ಮತ್ತು ಕ್ರಮಕ್ಕೆ ಪಟ್ಟು ಹಿಡಿದು ಕುಳಿತು ಬಿಟ್ಟಿದ್ದರು. ಕಾನೂನು ಎಲ್ಲರಿಗೂ ಒಂದೇ ಹಾಗಿರುವಾಗ ನ್ಯಾಯಾಂಗ ಇಲಾಖೆಯ ಲೋಪದೋಷಗಳು ಮತ್ತು ನ್ಯಾಯಾಧೀಶರು ಮಾಡುವ ಲೆಕ್ಕಪತ್ರಗಳು ಪರಿಶೀಲನೆಗೊಳಪಡಬೇಕು ಎಂಬುದು ಅವರ ಸ್ಪಷ್ಠ ನಿಲುವಾಗಿತ್ತು. ಹಾಗೆಯೆ ಮುಂದೆ ಅವರು ಅಕ್ರಮ ಭೂ ಒತ್ತುವರಿ ಪತ್ತೆ ಜಂಟಿ ಸದನ ಸಮಿತಿಯ ಅಧ್ಯಕ್ಷರಾದಾಗ ಸದನಕ್ಕ ಸಲ್ಲಿಸಿದ ಎರಡನೇ ವರದಿಯಲ್ಲಿ ಸುಪ್ರೀಂ ಕೋರ್ಟ್ ಮತ್ತ ಉಚ್ಚನ್ಯಾಯಾಲಯದ ನ್ಯಾಯಾಧೀಶರುಗಳು ಅಕ್ರಮವಾಗಿ ಹೇಗೆ ನಿವೇಶನಗಳನ್ನು ಪಡೆದಿದ್ದಾರೆ, ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದರಾದರು ಅದನ್ನು ಚರ್ಚೆಗೆ ತರುವ ಇಲ್ಲವೇ ಕ್ರಮ ಜರುಗಿಸುವ ಇಚ್ಚಾಶಕ್ತಿ ಸರ್ಕಾರಕ್ಕಾಗಲೀ, ವಿಧಾನ ಪರಿಷತ್ ಸದಸ್ಯರು,ವಿಧಾನ ಸಭಾ ಸದಸ್ಯರಿಗಿರಲಿಲ್ಲದಿದ್ದುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಈ ವಿಚಾರವನ್ನು ಇಲ್ಲಿ ಪ್ರಸ್ಥಾಪಿಸುತ್ತಿರುವುದಕ್ಕ ಕಾರಣವಿದೆ. ಸಧ್ಯ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತಮಿಳು ನಾಡು ಮೂಲದ ಪಿ ಡಿ ದಿನಕರನ್ ಸರ್ಕಾರಿ ಜಮೀನನ್ನ ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಎರಡೂ ರಾಜ್ಯಗಳ ಬಾರ್ ಕೌನ್ಸಿಲ್ ಸದಸ್ಯರು, ಕೆಲವು ನ್ಯಾಯಾಧೀಶರುಗಳು, ಸಂಸದರು, ಮಾಜಿ ಕೇಂದ್ರ ಸಚಿವರುಗಳು ಒಮ್ಮತದ ಉಗ್ರ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನ್ಯಾಯಾಂಗ ಕಲಾಪಕ್ಕೂ ಅಡ್ಡಿ ಪಡಿಸುತ್ತಿದ್ದಾರೆ, ಪ್ರತಿಭಟನೆಯ ಸಂಧರ್ಭದಲ್ಲಿ ಕಾನೂನಿಗೆ ಅಪಚಾರವಾಗುವಂತೆ ವಕೀಲರುಗಳು ನಡೆದುಕೊಳ್ಳುತ್ತಿದ್ದಾರೆ. ಕೋರ್ಟು ಕಲಾಪಗಳನ್ನು ಬಹಿಷ್ಕರಿಸುತ್ತಿದ್ದಾರೆ, ಇದರಿಂ ದ ಕಕ್ಷಿದಾರರುಗಳು ಸಹಾ ತೊಂದರೆ ಅನುಭವಿಸುವಂತಾಗಿದೆ. ಇದೆಲ್ಲಾ ನಡೆದಿರುವುದು ರಾಜ್ಯದ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ರ ಮೇಲಿರುವ ಆಪಾದನೆಗಳ ಹಿನ್ನೆಲೆಯಲ್ಲಿ ಅವರನ್ನು ಸುಪ್ರಿಂಕೋರ್ಟು ನ್ಯಾಯಾಧೀಶರಾಗಿ ಆಯ್ಕೆ ಸಮಿತಿಯು ಪರಿಗಣಿಸಬಾರದ ಎಂಬ ಕಾರಣಕ್ಕಾಗಿ!
ವಿಚಾರಕ್ಕೆ ಬರುವ ಮುನ್ನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ಬಗ್ಗೆ ಒಂದು ಸಣ್ಣ ಅವಲೋಕನ ಮಾಡೋಣ. 59ರ ವಯೋಮಾನದ ಪೌಲ್ ಡೇನಿಯಲ್ ದಿನಕರನ್ ತಮಿಳು ನಾಡಿನ ಅಗರಿಯಾನ್ ವರ್ಗಕ್ಕೆ ಸೇರಿದ ದಲಿತ ಕ್ರೈಸ್ತರು. ನಾರ್ಥ ಅರ್ಕೋಟ್ ಜಿಲ್ಲೆಯ ಅರಕ್ಕೋಣಮ್ ನಲ್ಲಿ ಬಾಲ್ಯದ ಓದು, ಮಡ್ರಾಸ್ ಕ್ರೈಸ್ತ ಕಾಲೇಜಿನಲ್ಲಿ ಕೆಮಿಸ್ಟ್ರಿ, ನಂತರ ರಾಜಕೀಯ ಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕ ಪದವಿ ಪಡೆದರು. ಮುಂದೆ ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲೇ ವಕೀಲ ವೃತ್ತಿ ಆರಂಭಿಸಿದರು. ರಾಜ್ಯ ಮತ್ತು ಕೇಂದ್ರಾಢಳಿತ ಟ್ರಿಬ್ಯೂನಲ್ ಸಮಿತಿಗಳಿಗೆ ಸಲಹೆಗಾರರಾದರು, ಪಾಂಡಿಚೆರಿ ವಿವಿಗೆ ಕಾನೂನು ಸೇವೆ ನೀಡಿದ್ದರು, ಹೀಗ ಆರಂಭಗೊಂಡ ವೃತ್ತಿ ಜೀವನದ ಉತ್ತುಂಗಕ್ಕೇರಿ ಹಲವು ಉನ್ನತ ಹುದ್ದೇಗಳನ್ನು ಅಲಂಕರಿಸಿದರು. ಸುಪ್ರಿಂ ಕೋರ್ಟು ೨೮ ಆಗಸ್ಟ್ ೨೦೦೯ ರಂದು ಇವರನ್ನು ಸುಪ್ರೀಂ ಕೋರ್ಟು ನ್ಯಾಯಾಧೀಶರನ್ನಾಗಿ ಘೋಷಿಸಿತು.
ಆಗ ಸ್ಪೋಟಗೊಂಡದ್ದೇ ದಿನಕರನ್ ಬಗೆಗಿನ ಅಸಹನೆ ಅರಕ್ಕೋಣಂ ನಲ್ಲಿ ಅವರು ಸರ್ಕಾರಿ ಭೂ ಒತ್ತುವರಿ ಮಾಡಿದ್ದಾರೆ ಹಾಗಾಗಿ ಅವರ ಹೆಸರನ್ನು ಸುಪ್ರಿಂ ಕೋರ್ಟು ನ್ಯಾಯಾಧೀಶರ ಹುದ್ದೆಗ ಅಂತಿಮಗೊಳಿಸಬಾರದು ಎಂದು ಸೆಪ್ಟಂಬರ್ 20ರಂದು ತಮಿಳುನಾಡು ಬಾರ್ ಕೌನ್ಸಿಲ್ ುಪರಾಷ್ಟ್ರಪತಿಗಳ ಬಳಿ ದೂರು ದಾಖಲಿಸಿತು. ಹಿರಿಯ ವಕೀಲ ಮಾಜಿ ಕೇಂದ್ರ ಸಚಿವ ರಾಂ ಜೇಠ್ ಮಲಾನಿ ಕೂಡ ಇದಕ್ಕೆ ಧ್ವನಿ ಗೂಡಿಸಿದರು. ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಯಿತು, ಅದು ರಾಜ್ಯಕ್ಕೂ ವ್ಯಾಪಿಸುತ್ತಿದ್ದಂತೆ ತನಿಖೆಗಾಗಿ ಪ್ರತ್ಯೇಕ ಸಮಿತಿ ರಚನೆಯಾಯ್ತು, ಮತ್ತು ವೇಲ್ಲೋರ್ ಜಿಲ್ಲೆ ಯ ಡಿಸಿ ಯವರಿಗೆ ವರದಿ ನೀಡುವಂತೆ ಕೋರಲಾಯಿತು. ಆ ವರದಿಯಲ್ಲೇನಿದೆ ಎಂಬ ವಿಚಾರ ಇನ್ನೂ ಬಾಹ್ಯ ಜಗತ್ತಿಗೆ ತಿಳಿಯುವ ಮುನ್ನವೇ ಅಕ್ರಮವಾಗಿ ಒತ್ತುವರಿ ಮಾಡಿದೆಯೆನ್ನಲಾದ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಅಲ್ಲಿ ನಸ್ಥಳೀಯರು ತೆರವು ಗೊಳಿಸಿದರು. ಆಯ್ಕೆ ಸಮಿತಿ ದಿನಕರನ್ ಹೆಸರನ್ನು ಕೈಬಿಟ್ಟಿದೆ, ಆದರೆ ದಿನಕರನ್ ಮೌನ ಮುರಿದು ನಾನು ಏನೂ ತಪ್ಪು ಮಾಡಿಲ್ಲನ ನನ್ನನ್ನು ಈ ಬಗ್ಗೆ ಯಾರೂ ಏನೂ ಕೇಳಿಲ್ಲ, ಆಧಾರ ರಹಿತ ಆರೋಪಗಳನ್ನು ನಿಜವೆಂದು ಏಕೆ ಭಾವಿಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಉಚ್ಚ ನ್ಯಾಯಾಲಯ ದನ್ಯಾಯಾಧೀಸ ಶೈಲೆಂದ್ರಕುಮಾರ್, ಮು.ನ್ಯಾ. ದಿನಕರನ್ ಕಲಾಪಗಳಲ್ಲಿ ಪಾಲ್ಗೊಳ್ಳದಿದ್ದರು ಆಡಳಿತಾತ್ಮಕ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಸಧ್ಯ ನ್ಯಾಯಮೂರ್ತಿ ದಿನಕರನ್ ಬಗ್ಗೆ ಎಲ್ಲರು ಸೆಟೆದು ಕೊಂಡು ನಿಂತಿರುವಾಗಲೇ ಕಾಂಗ್ರೆಸ್ ಸಂಸದರಾದ ಪ್ರವೀಣ್ ರಾಷ್ಟ್ರಪಾಲ್ , ಜೆ ಡಿ ಸೀಲಂ ಮತ್ತಿತರು 'ದಲಿತ' ಎಂಬ ಹಿನ್ನೆಲೆ ಇಟ್ಟುಕೊಂಡು ದಿನಕರನ್ ಬೆಂಬಲಕ್ಕೆ ನಿಂತಿದ್ದಾರೆ. ಸದರಿ ವಿಚಾರ ರಾಜ್ಯ ಸಭೆಯಲ್ಲಿ ಪ್ರಸ್ತಾಪವಾದರೆ ಅದನ್ನು ವಿರೋಧಿಸಲು ಸಜ್ಜಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನ್ಯಾಯಾಂಗ ವ್ಯವಸ್ಥೆಯ ಬಗೆ ಸಾರ್ವಜನಿಕವಾಗಿ ಎಂತಹ ಅಭಿಪ್ರಾಯವನ್ನು ಮೂಡಿಸುತ್ತವೆ. ದಲಿತ ಎನ್ನುವ ಕಾರಣಕ್ಕೆ ಒಂದು ವಿಚಾರವನ್ನು ಬೆಂಬಲಿಸುವುದು ತಪ್ಪು ಹಾಗೇಯೇ ಮು.ನ್ಯಾ.ಮೂರ್ತಿ ಒಬ್ಬರ ಬಗ್ಗೆ ಸ್ಪಷ್ಟ ವರದಿ ಕೈ ಸೇರುವ ಮುನ್ನವೇ ಅವರ ವಿರುದ್ದ ಕಾನೂನು ವಿರೋಧಿ ಚಟುವಟಿಕೆಗಳು ನಡೆಯುವುದು ಘೋರ ತಪ್ಪಾಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ನ್ಯಾಯಾಧೀಶರುಗಳ ಆಸ್ತಿ ಘೋಷಣೆಯಾಗಬೇಕು ಯಾರೂ ಕಾನೂನಿಗೆ ಅತೀತರಲ್ಲ ಎನ್ನುವ ನ್ಯಾಯಮೂರ್ತಿ ಶೈಲೆಂದ್ರ ಕುಮಾರ್ ಪ್ರಶಂಸನಾರ್ಹರು. ತಪ್ಪು ಮಾಡಿದವರು ಯಾರೇ ಆಗಲಿ ಅದು ಚರ್ಚೆಗ ೆಬರಬೇಕು ಮತ್ತು ಕಳಂಕರಹಿತವಾಗಿ ನ್ಯಾಯಾಂಗ ವ್ಯವಸ್ಥೆ ಮುನ್ನೆಡೆಯಬೇಕು ಎಂಬುದರಲ್ಲ ಿಎರಡೂ ಮಾತಿಲ್ಲ.
ಈಗ ವಿಚಾರಕ್ಕೆ ಬರುತ್ತೇನೆ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಧಿನ ನ್ಯಾಯಾಲಯಗಳಿಗೆ ಸುಮಾರು ೧೬.50ಕೋಟ ಿವೆಚ್ಚದಲ್ಲಿ ಕಂಪ್ಯೂಟರುಗಳನ್ನು ಖರಿದಿಸಿದಾಗ ಅದನ್ನು ವಿರೋದಿಸಿದ್ದು ಶಾಸಕ ಎ ಟ ರಾಮಸ್ವಾಮಿ, ನ್ಯಾಯಾಧೀಶರುಗಳಿಗೆ ಹಣಕಾಸು ಸ್ವಾಯತ್ತತೆ ಕೊಡಬಾರದು, ಹಾಗೇನಾದರೂ ಕೊಟ್ಟಿದ್ದೇ ಆದಲ್ಲಿ ಅದು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು ಎಂದು ಅವರು ಚರ್ಚೆ ಮಂಡಿಸಿದಾಗ ಎಲ್ಲರ ಕ್ರೂರ ದೃಷ್ಟಿ ಅವರೆಡೆಗೆ ಬಿತ್ತೆ ವಿನಹ ಸರ್ಕಾರ ಹೋಗಲಿ ಸಹ ಸದಸ್ಯರೂ ಸಹ ಅವರನ್ನು ಬೆಂಬಲಿಸಲಿಲ್ಲ. ಅದೇ ರಾಮಸ್ವಾಮಿ ಮುಂದೆ ಜಂಟಿ ಸದನ ಸಮಿತಿ ಸದಸ್ಯರಾದಾಗ 76ಮಂದಿ ಉ ಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಮತ್ತು 8ಮಂದಿ ಸುಪ್ರಿಂ ಕೋರ್ಟು ನ್ಯಾಯಾಧೀಶರುಗಳು ಅಕ್ರಮವಾಗಿ ಸರ್ಕಾರಿ ನಿವೇಶನಗಳನ್ನು ಕರ್ನಾಟಕ ನ್ಯಾಯಾಂಗ ಇಲಾಖ ೆನೌಕರರ ಗೃಹ ನಿರ್ಮಾಣ ಸಹಕಾ ರಸಂಘ ದ ಮೂಲಕ ಪಡೆದಿದ್ದನ್ನು ಪತ್ತೆ ಹಚ್ಚಿ ಕ್ರಮಕ್ಕೆ ವರದಿ ಶಿಫಾರಸ್ಸು ಮಾಡಿದರು. ಅದು ಸದನದಲ್ಲಿ ಮಂಡನೆಯೂ ಆಗಿದೆ. ರಾಜ್ಯದಲ್ಲಿ ಹೆಸರು ಮಾಡಿದ ಅನೇಕ ನ್ಯಾಯಾಧೀಶರುಗಳ ಹೆಸರು ಸಹಾ ಆ ಪಟ್ಟಿಯಲ್ಲಿದೆ. ಆದರೆ ಕ್ರಮ ಜರುಗಿಸುವ ಎದೆಗಾರಿಕೆಯನ್ನು ಯಾರೂ ಈವರೆಗೆ ಮಾಡಿಲ್ಲ. ಎ ಟಿ ಆರ್ ಈ ಬಗ್ಗೆ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರಾದರೂ ಆಢಳಿತಶಾಹಿ ವ್ಯವಸ್ಥೆ ಇರಲಿ ಕೆಲವು ಪತ್ರಕರ್ತರು ಸದರಿ ವಿಷಯವನ್ನು ಬರೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆಂಬುದು ಏಕೋ ತಿಳಿಯುತ್ತಿಲ್ಲ. ಪ್ರಜಾಪ್ರಭುತ್ವದ 3ಅಂಗಗಳ ಪೈಕಿ ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರ ಸಾರ್ವಜನಿಕ ವಾಗಿ ಪರಿಶೀಲನೆಗೆ ಒಳಪಡುವುದಾದರೆ ನ್ಯಾಯಾಂಗ ವ್ಯವಸ್ಥೆಯು ಸಹಾ ಸಾರ್ವಜನಿ ಕವಾಗಿ ಪರಿಶೀಲನೆಗೆ ದಕ್ಕಬೇಕು. ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ನೀಡಲಾಗಿದೆ ಹಾಗಾಗಿ ಅವರು ಸಾರ್ವಜನಿಕ ಸೇವಕರಲ್ಲ. ಆದ್ದರಿಂದಲೇ ಅವರು ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗುವಂತಿಲ್ಲ ಎಂದು ಕೆ ಎಸ್ ಭಕ್ತವತ್ಸಲಂ ಮತ್ತು ಎಂ ಎಫ್ ಸಾಲ್ಡಾನಾ ನೇತೃತ್ವದ ವಿಭಾಗೀಯ ಪೀಠ ಐಎಲ್ಆರ್ ೧೯೯೫(೧)ಕ.ರಾ.೩೧,39ರಲ್ಲಿ ಸ್ಪಷ್ಟ ತೀರ್ಪು ನೀಡಿದೆ. ಈ ತೀರ್ಪಿನನ್ವಯ ಎಟಿ ರಾಮಸ್ವಾಮಿ ವರದಿಯಲ್ಲಿ ಉಲ್ಲೇಖಿಸಲಾಗಿರು ವ 76ಮಂದಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, 8ಮಂದಿ ಸುಪ್ರಿಂ ಕೋರ್ಟ ನ್ಯಾಯಾಧೀಶರುಗಳ ವಿರುದ್ದ ಕ್ರಮವಾಗಬೇಕಿದೆ. ದಿನಕರನ್ ರ ವಿರುದ್ದ ಧ್ವನಿ ಎತ್ತುತ್ತಿರು ವ ಬಾರ್ ಕೌನ್ಸಿಲ್ ಸದಸ್ಯರು ಮತ್ತು ಇತರೆ ನ್ಯಾಯಾಧೀಶರು ಎ ಟಿ ರಾಮಸ್ವಾಮಿ ವರದಿಯಲ್ಲಿ ತಿಳಿಸಿರುವ 84ಮಂದಿ ನ್ಯಾಯಾಧೀಶರ ವಿರುದ್ದ ಕ್ರಮ ಜರುಗಿಸಲು ಬದ್ದತೆಯ ಹೋರಾಟ ಪ್ರದರ್ಶಿಸ ಬೇಕಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಬೇಡಾ ಅಲ್ಲವೇ?? ಯಾಕೆಂದರೆ ಪ್ರಜಾಪ್ರಭುತ್ವದಲ್ಲ ಎಲ್ಲರಿಗೂ ನಿರ್ಭಿತವಾದ ನ್ಯಾಯ ವಿತರಣೆಯಾಗ ಬೇಕಲ್ಲವೇ? ನ್ಯಾಯಾಧೀಶರು,ವಕೀಲರು,ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ರೋಲ್ ಮಾಡೆಲ್ ಆಗಬೇಕಲ್ಲವೇ?

Sunday, December 13, 2009

ನೂರು ಜನ್ಮಕೂ ಮರೆಯಲಾದಿತೆ?

ನಮ್ಮಲ್ಲೊಂದು ಗಾದೆ ಮಾತಿದೆ 'ಅಡಿಕೆಗೆ ಹೋದ ಮಾನ,ಆನೆ ಕೊಟ್ಟರೆ ಬಂದೀತೆ'? ಹೌದು ಇಂತಹದ್ದೊಂದು ಪ್ರಶ್ನೆ ಉದ್ಭವವಾಗಿದ್ದು ಮೊನ್ನೆ ಮೊನ್ನೆಯಷ್ಟೆ ಸುದ್ದಿಗೆ ಗ್ರಾಸವಾಗಿದ್ದ ಅಂದ್ರಿತಾ ರೇ-ನಾಗತ್ತಿಹಳ್ಳಿ ಪ್ರಕರಣ. ಇದನ್ನು ಬರೆಯಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ನಡುವೆ ಇದನ್ನು ಚರ್ಚೆಗೆ ತಂದಿದ್ದೇನೆ. ಇದು ಯಾಕೆ ಚರ್ಚೆಗೆ ಬರಬೇಕು? ಹಾನಿ ಯಾರಿಗೆ? ಸಮಾಜದ ಮೇಲೆ ಇದು ಎಂತಹ ಪರಿಣಾಮ ಬಿರುತ್ತದೆ? ಅಷ್ಟಕ್ಕೂ ಇಂತಹ ಪ್ರಕರಣಗಳು ಯಾಕಾದರೂ ಜರುಗುತ್ತವೆ ಎಂಬುದು ಮೂಲ ಪ್ರಶ್ನೆ.

ಹೇಳಿ ಕೇಳಿ ನಾಗತ್ತಿಹಳ್ಳಿ ಚಂದ್ರಶೇಖರ್ ಸೂಕ್ಷ್ಮ ಗ್ರಹಿಕೆಯ ಸಂವೇದನಾಶೀಲ ಮನಸ್ಥಿತಿಯ ಪ್ರಬುದ್ದ ಸಾಹಿತಿ ಮತ್ತು ನಿರ್ದೇಶಕರು. ಭಾವನಾತ್ಮಕವಾದ ಸಂಬಂಧಗಳನ್ನು ಅತ್ಯುತ್ತಮವಾಗಿ ಸೆಲ್ಯೂಲಾಯ್ಡ್ ಮಾಧ್ಯಮದಲ್ಲಿ ಬಿಂಬಿಸಬಲ್ಲ ಛಾತಿಯ ಮನುಷ್ಯ. ಇವರು ನಿರ್ದೇಶಿಸಿದ ಸಾಧಾರಣ ಕಥೆಯ 'ಉಂಡೂ ಹೋದ ಕೊಂಡು ಹೋದ' ಸಿನಿಮಾದ ಯಶಸ್ಸು ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ, ಭಾ ನಲ್ಲೆ ಮಧುಚಂದ್ರಕೆ, ಹೂಮಳೆ ಇತ್ತೀಚೆಗಿನ ಒಲವೇಜೀವನ ಲೆಕ್ಕಾಚಾರದಂತಹ ಸೂಪರ್ ಚಿತ್ರಗಳನ್ನು ತೆರೆಗೆ ನೀಡಿದ್ದಾರೆ. ಕಾಡಿನ ಬೆಂಕಿ ಚತ್ರದ ಮೂಲಕ ಸಿನಿ ಬದುಕು ಆರಂಬಿಸಿದರು. ಸಂಗೀತವೇ ಪ್ರಧಾನವಾಗಿದ್ದ ಹೊಸ ಮುಖಗಳನ್ನ ಹೊಂದಿದ 'ಪ್ಯಾರಿಸ್ ಪ್ರಣಯ" ವಿದೇಶದಲ್ಲಿ ಚಿತ್ರೀಕರಣ ಗೊಂಡ ಚಿತ್ರವಾಗಿದ್ದು ವಿಭಿನ್ನ ಅನುಭವ ನೀಡಿತ್ತು. 100ಕ್ಕ ಹೆಚ್ಚು ಹಾಡುಗಳನ್ನು ರಚಿಸಿರು ವ ನಾಗತ್ತಿಹಳ್ಳಿ ಉತ್ತಮ ಗೀತ ರಚನೆಕಾರರು ಹೌದು. ಇದುವರೆಗೂ 15ಕನ್ನ ಡಸಿನಿಮಾಗಳನ್ನ ನಿರ್ದೇಶಿಸಿರು ವನಾಗತ್ತಿಹಳ್ಳಿ 10ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ಯಾನೆ ಸಿನಿಮಾ ಫೆಸ್ಟಿವಲ್ ನಲ್ಲಿಯೂ ಪ್ರಂಶಶೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿ ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಮುಗಿಸಿದ ನಾಗತ್ತಿಹಳ್ಳಿ 8ಚಿನ್ನದ ಪದಕ ಮತ್ತು 2ನಗದು ಬಹುಮಾನ ಪಡೆ ದ ಪ್ರತಿಭಾವಂತ. ಬೆಂಗಳೂರು ವಿವಿ ಯಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದ ನಾಗತ್ತಿಹಳ್ಳಿ, ಸಾಪ್ಟ್ ವೇರ್ ಇಂಜಿನಯರ್ ಶೋಭಾರನ್ನು ಅಂತರ್ ಜಾತೀಯ ವಿವಾಹವಾಗಿದ್ದಾರೆ. ಸಿಹಿ ಮತ್ತು ಕನಸು ಎಂಬ ಇಬ್ಬರು ಮಕ್ಕಳು ಇವರಿಗುಂಟು. ಸಧ್ಯ ಅವರು ಅಮೇರಿಕಾದಲ್ಲ ನೆಲೆಸಿದ್ದಾರೆ! ಸಿನಿಮಾವನ್ನು ವೃತ್ತಿ ಬದುಕಾಗಿಸಿಕೊಂಡ ನಾಗತ್ತಿಹಳ್ಳಿ ಮಾತ್ರ ಇಲ್ಲಿಯೇ ಇದ್ದಾರೆ.
ಇನ್ನು ಅಂದ್ರಿತಾ ರೇ ವಿಷಯಕ್ಕೆ ಬರೋಣ. ಈಕ ಮೂಲತಹ ಬಂಗಾಳಿ, ಹುಟ್ಟಿದ್ದು ರಾಜಸ್ಥಾನದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕಳೆ ದ18ವರ್ಷಗಳಿಂ ದ ಅವರ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ತಂದೆ ಎ ಕೆ ರೇ ಭಾರತೀ ಯ ವಾಯುಪಡೆಯಲ್ಲಿ ಡೆಂಟಿಸ್ಟ್ ಆಗಿ ನಿವೃತ್ತರಾಗಿದ್ದಾರೆ, ಆದರೂ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿ ಇವತ್ತಿಗೂ ಸ್ವಂತ ಕ್ಲಿನಿಕ್ ನಲ್ಲಿ ಪ್ರಾಕ್ಟೀಸ್ ನಡೆಸುತ್ತಾರೆ. ತಾಯಿ ಸುನೀತಾ ರೇ ಮಕ್ಕಳ ಸೈಕಾಲಜಿಸ್ಟ್ ಆಗಿದ್ದಾರೆ. ಐಂದ್ರಿತಾ ಬಾಲ್ಯ ಮತ್ತು ಪ್ರಾಥಮಿಕ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಾಲ್ಡ್ ವಿನ್ ಪ್ರೌಢಶಾಲೆಯಲ್ಲಿ. ಈಗ ತಂದೆಯಂತಯೇ ಡೆಂಟಿಸ್ಟ್ ಆಗುವ ಕನಸು ಕಾಣುತ್ತಿರುವ ಅಂದ್ರಿ ತ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಈ ನಡುವ ಮುಂಬೈಗೆ ತೆರಳ ಸಣ್ಣಪುಟ್ಟ ಜಾಹಿರಾತು ಮತ್ತು ಮಾಡೆಲಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಅಂದ್ರಿತಾ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು ಮಹೇಶಬಾಬು ನಿರ್ದೆಶನ ದ ಮೆರವಣಿಗೆ ಚಿತ್ರದ ಮೂಲ ಕ. ಇಲ್ಲಿಯವರೆಗೆ ಆಕೆ ಕನ್ನಡದಲ್ಲಿ ಅಭಿನಯಿಸಿದ್ದು 7ಚಿತ್ರಗಳು, ತೆಲುಗಿನಲ್ಲಿ ಒಂದು ಮತ್ತು ಹಿಂದಿಯಲ್ಲ ಒಂದು. ಇಂತಹ ಅಂದ್ರಿತಾ ನಾಗತ್ತಿಹಳ್ಳಿ ನಿರ್ದೇಶನದ "ನೂರು ಜನ್ಮಕೂ " ಚಿತ್ರದಲ್ಲಿ ಅಭಿನಯಿಸಲು ಹಾಕಾಂಗ್ ಗೆ ತೆರಳಿದ್ದರು.
ಡಿಸೆಂಬರ್ 10ರಂದು ತಂಡ ಭಾರತಕ್ಕೆ ವಾಪಾಸ್ ಆದಾಗ ಆದ ರಂಪ ರಾಮಾಯ ಣ ನಿಮಗೆಲ್ಲರಿಗೂ ತಿಳಿದದ್ದೇ. ಇಡೀ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿರ್ದೇಶ ಕನಾಗತ್ತಿಹಳ್ಳಿ ಚಂದ್ರಶೇಖರ್ ತಪ್ಪಿತಸ್ಥರಂತೆ ಕಾಣಿಸುತ್ತಿದ್ದರಾದರೂ, ಅವರ ಪರ ವಕಾಲತ್ತು ವಹಿಸಿದವರೇ ಹೆಚ್ಚು. ಮೇಷ್ಟ್ರು ನಮ್ಮವರು ಎಂಬ ಕಾರಣಕ್ಕೋ ಏನೋ. ಇಡೀ ಘಟನೆಗೆ ಸಂಬಂಧಿಸಿದಂತೆ ಐಂದ್ರಿತಾ ರೇ ಮಾಹಿತಿ ನೀಡಿ ಮೇಷ್ಟ್ರು ವುಮನೈಸರ್ ಎಂದು ಸ್ಪಷ್ಟ ಮಾತುಗಳಲ್ಲಿ ಆರೋಪಿಸಿದರು. ಆದರೆ ನಾಗತ್ತಿಹಳ್ಳಿ ಮತ್ತು ಮಾಧ್ಯಮಗಳು ಕಪಾಳ ಮೋಕ್ಷ ಪ್ರಕರಣವನ್ನೇ ಮುಖ್ಯ ವಾಹಿನಿಗೆ ತಂದರಲ್ಲದೇ ಅಸಲಿ ಆರೋಪವನ್ನು ಮರೆಮಾಚಿದರು. ಇಲ್ಲಿ ನಾಗತ್ತಿಹಳ್ಳಿ ತಪ್ಪಿತಸ್ಥರು ಎಂದು ಹೇಳುತ್ತಿಲ್ಲವಾದರೂ ಆರೋಪದ ವಾಸ್ತವ ನೆಲೆಗಟ್ಟಿನ್ಲಲಿ ಸಮರ್ಪಕ ಚರ್ಚೆ ಯಾಗಿದ್ದರೆ. ಸಿನಿಮಾ ಮಂದಿಗೆ ಸರಿಯಾದ ಸಂದೇಶ ರವಾನೆಯಾಗುತ್ತಿತ್ತು, ಆದರೆ ಆದದ್ದೇ ಬೇರೆ.
ಅಷ್ಟಕ್ಕೂ ಸದರಿ ವಿಚಾರದ ಚರ್ಚೆ ಏಕೆಂದರೆ ನಾಗತ್ತಿಹಳ್ಳಿ ಮತ್ತು ಐಂದ್ರಿತಾ ಇಬ್ಬರೂ ಸಾರ್ವಜನಿಕ ವ್ಯಕ್ತಿಗಳು. ಅವರ ನಡವಳಿಕೆಗಳು ಮತ್ತು ನಿಲುವುಗಳು ಸಾರ್ವಜನಿಕವಾಗಿ ಸಭ್ಯವಾಗಿರಬೇಕಾಗುತ್ತದೆ. ಅದರಲ್ಲೂ ಸಿನಿಮಾ ಮಾಧ್ಯಮ ಇತರ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಅವರ ಕ್ರಿಯೆಗಳನ್ನು ಜನ ಗಮನಿಸುತ್ತಾರೆ ಮತ್ತು ಅವಿವೇಕಿಗಳೂ ಅದನ್ನು ಅನುಕರಿಸುತ್ತಾರೆ. ಈಪೈಕಿ ಎರಡನೇ ಕೆಟಗರಿಯ ಜನರೇ ಹೆಚ್ಚು! ಹಾಗಾಗಿ ವಾಸ್ತವಾಂಶಗಳು ಚರ್ಚಾರ್ಹ ಹಾಗೂ ತಪ್ಪ-ಒಪ್ಪುಗಳು ತಿಳಿಯುತ್ತವೆ. ಸಿನಿಮಾ ಮಂದಿಯೆಂದರೆ ಮೊದಲೇ ಜನರಿಗೆ ಅಸಡ್ಡೆ 'ಶೀಲ' ಕಳೆದುಕೊಂಡವರು, ಮಜಾ ಮಾಡುವವರು ಎಂಬಿತ್ಯಾದಿ ಕಲ್ಪನೆಗಳು ಇವೆ. ಇವುಗಳಲ್ಲಿ ಕೆಲವು ನಿಜವಾದರೂ ಕೆಲವಕ್ಕೆ ರೆಕ್ಕೆ ಪುಕ್ಕ ಎರಡೂ ಇರುವುದಿಲ್ಲ. ಅಷ್ಟಕ್ಕೂ ಸಿನಿಮಾ ಲೋಕದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ, ಹಿಂದೆ ಪುಟ್ಟಣ್ಣ ಕಣಗಾಲ್ ರಂತ ಹ ನಿರ್ಧೇಶಕರು ಅಂದು ಕೊಂಡ ನಟನೆ ಬಾರದಿದ್ದಾಗ ಕಪಾಳ ಮೋಕ್ಷ ಮಾಡಿದ ಉದಾಹರಣೆಯಿದೆ. ರವಿಚಂದ್ರನ್ ಹಳ್ಳಿಮೇಷ್ಟ್ರು ಚಿತ್ರಕ್ಕೆ ಕರೆತಂದ ನಾಯಕಿ ರವಿಚಂದ್ರನ್ ಮೇಲೆ ರೇಪ್ ಕೇಸು ದಾಖಲಿಸಿದ ಘಟನೆಯಿದೆ.ಮೊನ್ನೆ ಮೊನ್ನೆಯಷ್ಟೇ ಮೈಸೂರು ಲೋಕೇಶ್ ಮಗ ಆದಿಲೋಕೇಶನ ಅವಾಂತರ ಬಯಲಿಗೆ ಬಂದಿದೆ. ಶೃತಿಯ ಸಹೋದರ ಶರಣ್ ಪ್ರೀತಿಸಿ ವಂಚಿಸಿ ಮದುವೆಯಾದ ನಿದರ್ಶನವಿದೆ, ಸಾಯಿ ಪ್ರಕಾಶ್ ಸೆಟ್ ನಲ್ಲಿ ನಟಿಯರೊಂದಿಗೆ ಅಸಹ್ಯವಾಗಿ ನಡೆದುಕೊಂಡ ಪ್ರಕರಣ, ನಟಿ ಮಹಾಲಕ್ಷ್ಮಿಯೊಂದಿಗೆ ನಟ ಜೈಜಗದೀಶ್ ಅಸಭ್ಯವಾಗಿ ವರ್ತಿಸಿ ತಪರಾಕಿ ಪಡೆದ ಘಟನೆ, ಪ್ರಭಾಕರ್ ಬಗೆಗೆ ಅಸಹ್ಯದ ಕಥೆಗಳಿವೆ ಹೀಗೆ ಹಲವು. ಇವು ವಾಸ್ತವ ಜಗತ್ತಿನಲ್ಲಿ ಸಿನಿಮಾ ಮಂದಿಯ ಬಗ್ಗೆ ಅಸಹ್ಯವನ್ನು ಹುಟ್ಟುಹಾಕುತ್ತವೆ. ಸಿನಿಮಾ ಜಗತ್ತಿನ ಕೆಲವು ಮಂದಿ ನಿರ್ಧೇಶಕರು,.ನಿರ್ಮಾಪಕರು, ಸಹ ನಿರ್ಧೇಶಕರು , ನಟರು ತೆರೆಯ ಹಿಂದೆ ಎಷ್ಟೋ ಮಂದಿ ಹೆಣ್ಣು ಮಕ್ಕಳ ಬದುಕು ಹಾಳುಮಾಡಿದ ನಿದರ್ಶನವಿದೆ. ಇಂದಿಗೂ ಅದು ಜಾರಿಯಲ್ಲಿದೆ ತೆರೆ ಯಮರೆಯಲ್ಲಿ! ಆದರೆ ವೃತ್ತಿ ಬದುಕು ಕಂಡು ಕೊಳ್ಳುವ ಮಂದಿ ಇದನ್ನೆಲ್ಲಾ ಸಹಿಸಿಕೊಂಡು ಸಿಕ್ಕ ಅವಕಾಶಗಳನ್ನು ಪಡೆದುಕೊಂಡು ಇಂದಿಗೂ ಅತಂತ್ರ ಬದುಕು ಸವೆಸುತ್ತಿದ್ದಾರೆ. ಸಿನಿಮಾ-ನಾಟಕ ನಮ್ಮ ಸಂಸ್ಕೃತಿಯ ಭಾಗ ಅವು ಸಧಭಿರುಚಿಯ ವಿಚಾರಗಳನ್ನು ನಮ್ಮ ನಡುವೆ ಉಳಿಸಬೇಕು, ತರಬೇಕು ಆದರೆ ಇದಕ್ಕೆಲ್ಲಾ ವ್ಯತಿರಿಕ್ತವಾದ ಕ್ರಿಯೆಗಳು ಜಾರಿಯಲ್ಲಿವೆ. ಸಹ್ಯವೆನಿಸುವಂತಹ ವಾತಾವರಣ ಕಣ್ಮರೆಯಾಗಿದೆ ಇದು ಆರೋಗ್ಯವಂತ ಸಮಾಜ ದಲಕ್ಷಣಗಳಲ್ಲ. ಹೇಳೋದು ವೇದಾಂತ ಮಾಡೋದು ಅನಾಚಾರ, ಸಮಾಜಕ್ಕೊಂದು ಮುಖ ಅಂತರಂಗಕ್ಕೆ ಮತ್ತೊಂದು ಮುಖ ಎಂಬಂತಿದೆ ಸಧ್ಯದ ಸ್ಥಿತಿ. ಇಂತಹವೆಲ್ಲಾ ಸಮಾಜದ ಸ್ವಾಸ್ಥ್ಯ ಕೆಡಿಸದೇ ಇರಬಲ್ಲವೇ. ಒಳ್ಳೆಯ ಸಂಗತಿಗಳನ್ನು ಕಾಮಾಲೆ ಕಣ್ಣಿನಿಂದ ನೋಡುವಂತೆ ಇಂತಹ ಸಂಗತಿಗಳು ಮಾಡಬಲ್ಲವಲ್ಲವೇ? ನೀವೇನು ಹೇಳ್ತೀರಿ?

ಈ ಲೇಖನವನ್ನು ಯಥಾವತ್ತಾಗಿ ದಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮ್ ಸುಂದರ್ ಅವರಿಗೆ ಧನ್ಯವಾದಗಳು. ಸದರಿ ಲೇಖನದ ಲಿಂಕ್ ಹೀಗಿದೆ

http://thatskannada.oneindia.in/movies/controversy/2009/12/14-nagathi-aindrita-contro-in-different-light.html

Sunday, December 6, 2009

ಹಿಂಬಾಗಿಲು ಪ್ರವೇಶದ ಗಂಜಿ ಕೇಂದ್ರಗಳು ಬೇಕಾ??

ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಆಗಾಗ್ಯೆ ಕೇಳಿಬರುತ್ತಿದೆ. ಸರಿಸುಮಾರು 500ಕೋಟಿಗು ಹೆಚ್ಚು ವಾರ್ಷಿಕ ನಿರ್ವಹಣಾ ವೆಚ್ಚ ಹೊಂದಿರುವ 'ಮೇಲ್ಮನೆ' ಎಂಬ ರಾಜಕಾರಣಿಗಳ ಗಂಜಿಕೇಂದ್ರದಿಂದ ಏನು ಪ್ರಯೋಜನವಾಗಿದೆ? ಅವರು ಮೇಲ್ಮನೆಯಲ್ಲಿ ನೀಡುವ ಸಲಹೆ,ಸೂಚನೆಗಳಿಗೆ ಯಾವ ಕಿಮ್ಮತ್ತು ಲಭಿಸಿದೆ, ವಿಶೇಷ ಸಂಧರ್ಭದಲ್ಲಿ ನೀಡುವ ವರದಿಗಳ ಕಥೆ ಏನಾಗಿದೆ? ರಾಜಕೀಯದ ಲವಲೇಶವೂ ಇಲ್ಲದೇ ವ್ಯವಸ್ಥೆಯ ವಿವಿಧ ಸ್ಥರಗಳಿಂದ ಆಯ್ಕೆಯಾಗುವ 'ಮಹಾಮಹಿಮ'ರು ಮೇಲ್ಮನೆಗೆ ಬಂದು ಸಾಧಿಸಿರುವುದಾದರೂ ಏನು? ಈ ಮೇಲ್ಮನೆಯಿಂದ ಯಾರಿಗೆ ಪ್ರಯೋಜನವಾಗಿದೆ? ಎಂಬುದು ಚರ್ಚಾರ್ಹ ವಿಚಾರ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈ ಸಂಧರ್ಭ ಇಂತಹದ್ದೊಂದು ಚರ್ಚೆ ಹೆಚ್ಚು ಪ್ರಸ್ತುತವೆನಿಸಿಸುತ್ತದೆ.
ಮೊದಲಿಗೆ 'ವಿಧಾನ ಪರಿಷತ್' ಎಂದರೇನು? ಎಂದರೇನು? ಎಂಬುದನ್ನು ನೋಡೋಣ. ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ರಾಜ್ಯಸಭೆ ಇರುವಂತೆ ರಾಜ್ಯಗಳಲ್ಲಿ ವಿಧಾನಸಭೆಗೆ ಗಳಿಗೆ ದೇಶದ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಸಭೆ ಅಸ್ತಿತ್ವದಲ್ಲಿದೆ. ರಾಜ್ಯದ ವಿಧಾನ ಸಭೆಗಳಲ್ಲಿ ಹೆಚ್ಚು ಅಂದರೆ ೫೦೦ ಮತ್ತು ಕಡಿಮೆ ಎಂದರೆ ೬೦ ಶಾಸಕ ಸ್ಥಾನಗಳಿರಬಹುದು. ಅತೀ ಕಡಿಮೆ ಶಾಸಕ ಸ್ಥಾನಗಳನ್ನು ಹೊಂದಿರುವ ರಾಜ್ಯಗಳು ಮೂರು ಪಾಂಡಿಚೆರಿ, ಮಿಜೋರಾಂ, ಅರುಣಾಚಲ ಪ್ರದೇಶ. ಈ ರಾಜ್ಯಗಳ ಶಾಸಕ ಸ್ಥಾನಗಳು ಕೇವಲ ೩೦ ಆಗಿದೆ!. ಸಧ್ಯ ದೇಶದ 28ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದಂತೆ ಆಂದ್ರಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಮಾತ್ರ ವಿದಾನ ಪರಿಷತ್ ಗಳು ಅಸ್ತಿತ್ವದಲ್ಲಿವೆ. ಇಂತಹ ವ್ಯವಸ್ಥೆಯನ್ನು ಇರಿಸಿಕೊಳ್ಳುವುದು ಇಲ್ಲವೇ ತೆಗೆಯುವುದು ಆಯಾ ರಾಜ್ಯಗಳ ಶಾಸಕಾಂಗದ ನಿರ್ದಾರಕ್ಕೆ ಒಳಪಟ್ಟಿರುತ್ತದೆ.
ವಿಧಾನ ಸಭೆಯ ಒಟ್ಟು ಸದಸ್ಯರ ೧/೩ ರಷ್ಟು ಸಂಖ್ಯೆಯಲ್ಲಿ ಮೇಲ್ಮನೆಗೆ ಸದಸ್ಯರು ಇರುತ್ತಾರೆ. ಆ ಲೆಕ್ಕಾಚಾರಕ್ಕೆ ಬಂದರೆ ರಾಜ್ಯದಲ್ಲಿರುವ ೨೨೪ ಶಾಸಕರಿಗೆ ಮೇಲ್ಮನೆಯಲ್ಲಿ 75ಮಂದಿ ಸದಸ್ಯರಿರಬೇಕು. ಆದರೆ ಕೇವಲ 72ಮಂದಿ ಸದಸ್ಯರಿದ್ದಾರೆ. ಈ ಪೈಕಿ 23ಮಂದಿ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾದರೆ, 7ಮಂದಿ ಪಧವಿಧರ ಕ್ಷೇತ್ರ, 7ಮಂದಿ ಶಿಕ್ಷಕರ ಕ್ಷೇತ್ರದಿಂದ, 24ಮಂದಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ. ಉಳಿದಂತೆ 11ಮಂದಿಯನ್ನು ಸಾರ್ವಜನಿಕ ವಲಯದ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ ಗಣ್ಯರನ್ನು ನಾಮಕರಣ ಮಾಡಲಾಗುತ್ತದೆ. ಇವರ ಅಧಿಕಾರಾವಧಿ ನಿರಂತರ 6ವರ್ಷ. ಅದೇ ವಿಧಾನ ಸಭಾ ಸದಸ್ಯರಿಗೆ ಕೇವಲ 5ವರ್ಷ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮುಖ್ಯ ಮಂತ್ರಿ , ರಾಜ್ಯಪಾಲರಿಗೆ ಮನವಿ ಮಾಡಿದರೆ 6ತಿಂಗಳು ಮುಂದುವರೆಯಬಹುದು. ಹಾಗೂ 5ವರ್ಷಗಳಿಗೆ ಮುನ್ನವೇ ರಾಜಕೀಯ ಅತಂತ್ರ ಸ್ಥಿತಿ ಉಂಟಾದರೆ ವಿಧಾನ ಸಭೆ ವಿಸರ್ಜಿಸಲ್ಪಡುತ್ತದೆ. ಆದರೆ ಇಂತಹ ಯಾವುದೇ ಗೋಜಲುಗಳು ವಿಧಾನ ಪರಿಷತ್ ಸದಸ್ಯರಿಗಿಲ್ಲ. ಅವರ ಅವಧಿ 6ವರ್ಷ ಅಭಾದಿತ. ಇಂತಹ ಸದಸ್ಯರುಗಳು ಸರ್ಕಾರದ ಹಣಕಾಸು ಮಂಡನೆ ವಿಚಾರ ಚರ್ಚಿಸಬಹುದು, ತಿದ್ದುಪಡಿ ಸೂಚಿಸಬಹುದು, ಅನುಮೋದಿಸಬಹುದು.ಅದೂ ಕೇವಲ 14ದಿನಗಳ ಅವಧಿಯೊಳಗೆ ವಿನಹ ಯಾವುದೇ ಶಾಸನಾತ್ಮಕ ನಿರ್ಣಯವನ್ನು ಕೈಗೊಳ್ಳುವಂತಿಲ್ಲ. ಇಲ್ಲಿಗೆ ಆಯ್ಕೆಯಾಗುವ ಪ್ರತೀ ಸದಸ್ಯನಿಗೂ ತಲಾ 50ಲಕ್ಷರೂಪಾಯಿಗಳ ಅಭಿವೃದ್ದಿ ಅನುದಾನವನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಅಂದರೆ 6ವರ್ಷಕ್ಕೆ 3ಕೋಟಿ ಅಭಿವೃದ್ದಿ ಅನುದಾನವನ್ನು ವಿವೇಚನಾ ಕೋಟದಲ್ಲಿ ಬಳಸಬಹುದು. ಆಡಳಿತ ನಡೆಸುವ ಸರ್ಕಾರಗಳು ಮಾತ್ರ ಇದಕ್ಕೆ ತದ್ವಿರುದ್ದ. ಈ ಸದಸ್ಯರ ಸಧ್ಯದ ಗೌರವ ಧನ 22500ರೂ.ಗಳಿದ್ದರೆ ಮುಂದಿನ ಜನವರಿವೇಳೆಗೆ ಇದು 44ಸಾವಿರ ರೂಪಾಯಿಗಳಾಗಲಿದೆ. ಮತ್ತು ಓಡಾಟದ ಖರ್ಚಿಗೆ ತಿಂಗಳಿಗೆ 25ಸಾವಿರ, ಸಭಾ ಭತ್ಯೆ ಇತ್ಯಾದಿ ಇದ್ದೇ ಇರುತ್ತೆ. ಇಂತಹದ್ದೊಂದು ವ್ಯವಸ್ಥೆಗೆ ಆಂದ್ರಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ರದ್ದಾಗಿತ್ತು. ಆದರೆ 2007ರಲ್ಲಿ ಇದು ಅಲ್ಲಿ ಮತ್ತೆ ಅಸ್ಥಿತ್ವಕ್ಕೆ ಬಂದಿದೆ.
ಈಗ ಅಸಲು ವಿಷಯಕ್ಕೆ ಬರೋಣ,ಇಂತಹ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವವರು ಎಂತಹವರು ? ಯಾರ ಹಿತಾಸಕ್ತಿಗಾಗಿ ಇವರೆಲ್ಲ ಮೇಲ್ಮನೆಗೆ ಬರುತ್ತಾರೆ? ಅಲ್ಲಿ ಅವರು ಕಡಿಯೋದೇನು? ಜನ ಸಾಮಾನ್ಯರಿಗೆ ಇವರಿಂದ ಏನು ಉಪಯೋಗ? ಎಂಬ ಪ್ರಶ್ನಯಿದೆ. ವಿಧಾನ ಪರಿಷತ್ ಅನ್ನೊದು ವಿಧಾನ ಸಭೆಗೆ ಒಂದು ಸಲಹಾ ಸಮಿತಿ ಇದ್ದಂತೆ, ಇನ್ನೊಂದು ಅರ್ಥದಲ್ಲಿ ಜನಮಾನಸದಲ್ಲಿ ಸ್ಥಾನ ಕಳೆದುಕೊಂಡ ರಾಜಕಾರಣಿಗಳನ್ನು ಓಲೈಸುವ ಇಲ್ಲವೇ ರಾಜಕಾರಣಿಗಳು ತಮ್ಮ ಹಿಂಬಾಲಕನಿಗೆ ಅಧಿಕಾರಾವಕಾಶ ಮಾಡಿಕೊಡುವ ಹಿಂಬಾಗಿಲು ಪ್ರವೇಶದ ಒಂದು 'ಗಂಜಿಕೇಂದ್ರ'. ಇಂತಹ ಗಂಜಿಕೇಂದ್ರಗಳಿಗೆ ವಿಧಾನಸಭೆ-ಲೋಕಸಬೆ ಚುನಾವಣೆಗಳಲ್ಲಿ ಪಕ್ಷದ ಏಜೆಂಟನಾಗಿ ಜೀತ ಮಾಡಿಕೊಂಡು ಬದುಕುವ ಇಲ್ಲವೇ ಪಾರ್ಟಿಗೆ ದಂಡಿಯಾಗಿ ದುಡ್ಡು ಸುರಿಯುವ ವ್ಯಕ್ತಿಗಳನ್ನು ಚುನಾವಣೆಗೆ ತರಲಾಗುತ್ತದೆ. ಮತ್ತು ನೇರ ಚುನಾವಣೆಯಲ್ಲಿ ಸೋತು ಸುಣ್ಣವಾದವನನ್ನು ಜಾತಿಯ ದೃಷ್ಟಿಯಿಂದ ಓಲೈಸಿ ಮೇಲ್ಮನೆ ಚುನಾವಣೆಗೆ ತರಲಾಗುತ್ತದೆ. ಇಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವಿವಿಧ ರಾಜಕೀಯ ಪಕ್ಷಗಳ ಒಳ ಒಪ್ಪಂದಗಳ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತವೆ. ದುಡ್ಡು ಸುರಿದು ಸದಸ್ಯನಾದವನು ತನ್ನ ಬಂಡವಾಳ ಶಾಹಿ ಸಾಮ್ರಾಜ್ಯದ ರಕ್ಷಣೆಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೆ ಮುಖಂಡರುಗಳ ಹಿತಾಸಕ್ತಿಯಿಂದ ಆಯ್ಕೆಯಾದವನು ಸ್ವತಂತ್ರ ವಿವೇಚನೆ ಇಲ್ಲದೇ ಆಯಾ ಪಕ್ಷದ ಮುಖಂಡರ ಇಲ್ಲವೇ ಪಕ್ಷದ ನೆರಳಿನಲ್ಲಿ ಜೀತದಾಳಿನಂತೆ ಆದೇಶ ಪಾಲಿಸುತ್ತಾನೆ. ಇಂತಹ ಸದಸ್ಯರುಗಳಿಂದ ಯಾವ ಜನೋಪಯೋಗಿ ಕೆಲಸಗಳು ನಡೆಯುಲು ಸಾಧ್ಯ ?ಅಷ್ಟಕ್ಕೂ ತಮಗೆ ಕೊಟ್ಟ ಅಭಿವೃದ್ದಿ ಅನುದಾನ, ಅವಕಾಶಗಳನ್ನು ರಾಜ್ಯದ ಎಷ್ಟು ಮಂದಿ ವಿಧಾನ ಪರಿಷತ್ ಸದಸ್ಯರು ಸಮರ್ಪಕವಾಗಿ ಜನಸೇವೆ ಗೆ ಬಳಸುತ್ತಾರೆ. ವಿಧಾನ ಪರಿಷತ್ ಸದಸ್ಯರುಗಳೆಂದರೆ ಕೊಟ್ಟಿಗೆಯಲ್ಲಿ ಕಟ್ಟಿದ ಗೊಡ್ಡು ಹಸುಗಳು!. ಇಂತಹ ಗೊಡ್ಡು ದನಗಳಿಂದ ಯಾವ ಪ್ರಯೋಜನವೂ ಆಗಲಾರದು. ಈಗ ನಡೆಯುತ್ತಿರುವ ಮೇಲ್ಮನೆ ಚುನಾವಣೆಗಳಲ್ಲಿ ನೇರ ಹಣಾಹಣಿ ಇರುವೆಡೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ೧೦೦೦ ದಿಂದ ೫೦೦೦ ರೂಗಳವರೆಗೆ ನೀಡಿ ಪ್ರತೀ ಪ್ರತೀ ಮತಗಳನ್ನು ಖರಿದಿಸಲಾಗುತ್ತಿದೆಯೆಂಬ ಸುದ್ದಿ ಇದೆ. ಹೀಗೆ ದುಡ್ಡು ಚೆಲ್ಲಿ ಆಯ್ಕೆಯಾಗುವವರಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ನೀವೇ ಹೇಳಿ? ಇಂತಹದ್ದೊಂದು ವ್ಯವಸ್ಥೆಗೆ ಕೋಟಿರೂ. ಗಳ ವೆಚ್ಚವನ್ನು ಯಾಕಾದರೂ ಮಾಡಬೇಕು? ಅದಕ್ಕೆ ಹೇಳಿದ್ದು ಹಿಂಬಾಗಿಲು ಪ್ರವೇಶದ ಗಂಜಿಕೇಂದ್ರ ಬೇಕಾ??

Sunday, November 29, 2009

ಜಾಗತೀಕರಣದ ಬಿಸಿಯಲ್ಲಿ ಬದುಕುಗಳಅವಸಾನ!

ಜಾಗತೀಕರಣದ ಬಿಸಿ ನಿದಾನವಾಗಿ ಸುಡಲಾರಂಭಿಸಿದೆ, ಕಳೆದ ವರ್ಷ ಅಮೇರಿಕಾದ ಆರ್ಥಿಕ ಕುಸಿತ, ಈಗ ದುಬೈನ ಆರ್ಥಿಕ ಹಿಂಜರಿತ ದೇಶದ ಆರ್ಥಿಕತೆಯ ಮೇಲೆ ಉದ್ಯೋಗಗಳ ಮೇಲೆ ಪರಿಣಾಮ ಬೀರಲಾರಂಬಿಸಿದೆ. ದಶಕಗಳ ಹಿಂದೆ ಇದೇ ಮನಮೋಹನ ಸಿಂಗ್,ಪ್ರಧಾನಿಯಾಗಿದ್ದ ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಮುಕ್ತ ಆರ್ಥಿಕ ಉದಾರೀಕರಣದ ಮೂಲಕ ಬಹುರಾಷ್ಟ್ರೀಯ ಉದ್ಯಮಗಳಿಗೆ ದೇಶದ ಹೆಬ್ಬಾಗಿಲನ್ನು ತೆರೆದಿಟ್ಟರು. ಆಗ ಅದನ್ನು ಸಮರ್ಥವಾಗಿ ವಿರೋಧಿಸುವ ಯಾವ ಕ್ರಿಯೆಗಳು ಬಲವಾಗಿ ನಡೆಯಲಿಲ್ಲ, ಅನೇಕ ಸಾರ್ವಜನಿಕ ಚಳುವಳಿಗಳು ಅದನ್ನ ವಿರೋದಿಸಿದವಾದರೂ ಎಂಎನ್ ಸಿಗಳ ಭಿಕ್ಷೆ ಮತ್ತು ಎಂಜಲನ್ನು ಪಡೆದು ಬಾಯಿ ಭದ್ರ ಪಡಿಸಿಕೊಂಡವು. ಅಲ್ಲಿಗೆ ವ್ಯವಸ್ಥಿತವಾಗಿ ನಮ್ಮ ಬದುಕಿನೊಳಗೆ ಜಾಗತೀಕರಣದ ಕಬಂಧ ಬಾಹು ಆಕ್ಟೋಪಸ್ ನಂತೆ ವಿಸ್ತರಿಸಲಾರಂಭಿಸಿತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆಧುನೀಕರಣದ ಭ್ರಮೆಗೆ ಬಿದ್ದ ನಮ್ಮ ಜನ ಕೂಡ ಅದನ್ನು ಅನಿವಾರ್ಯವೆಂದು ಭಾವಿಸಲಾರಂಭಿಸಿದರು. ನಮ್ಮ ಜನರಿಗೆ ಸಿನಿಕತನ ಬೆಳೆಯಿತು, ತಮ್ಮ ತಲೆಮಾರುಗಳಿಂದ ಪಾಲನೆಯಾಗುತ್ತಿದ್ದ ಜೀವ ನಕ್ರಮವನ್ನು ಮರೆತರು, ಪದ್ದತಿಗಳನ್ನು ಸಿದ್ದಾಂತಗಳನ್ನು ಗಾಳಿಗೆ ತೂರಿದರು. ಆಧುನೀಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮರ್ಥಿಸಿಕೊಳ್ಳಲಾರಂಬಿಸಿದರು, ಬದುಕನ್ನುಬದಲಿಸಿಕೊಳ್ಳಲಾರಂಭಿಸಿದರು. ಆದರೆ ಅವತ್ತಿಗೆ ಜಾಗತೀಕರಣದ ಬಿಸಿ ತಕ್ಷಣವೇ ನಮ್ಮನ್ನು ನಡುಬೀದಿಯ ಭಿಕ್ಷುಕರನ್ನಾಗಿ ಮಾಡುತ್ತದೆ, ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ಸ್ಪಷ್ಟ ಸುಳಿವನ್ನು ನಿರ್ಲಕ್ಷಿಸಿದರು. ಅವತ್ತಿಗೆ ಅವತ್ತಿನ ಬದುಕು ಖುಷಿಯಾಗಿದ್ದರೆ ಸಾಕು ಎಂಬ ಮನಸ್ಥಿತಿ ನಮ್ಮ ಜನರಲ್ಲಿದ್ದುದೇ ಈಗ ಆರಂಭವಾಗಿರುವ ತಳಮಳ, ತಲ್ಲಣಗಳಿಗೆ ಕಾರಣವಾಗಿದೆ.
ನಿಮಗೆ ತಿಳಿದಿರಲಿ ಮುಕ್ತ ಆರ್ಥಿಕ ಉದಾರೀಕರಣ ನೀತಿ ಎಂದರೆ ಜಗತ್ತಿನ ಬಲಾಡ್ಯ ರಾಷ್ಟ್ರಗಳು ಅಭಿವೃದ್ದಿ ಯನೆಪದಲ್ಲಿ ಇತರೆ ರಾಷ್ಟ್ರಗಳ ಮೇಲೆ ಬಲವಂತವಾಗಿ ಹೇರಲ್ಪಡುವ ನೀತಿ. ಇದರನುಸಾರ ಸದರಿ ಗುಂಪಿನಲ್ಲಿರುವ ಯಾವುದೇ ರಾಷ್ಟ್ರ ನಮ್ಮ ದೇಶದಲ್ಲಿ ಬಂಡವಾಳ ಹೂಡಬಹುದು. ಅದೂ ಶಾಶ್ವತವಾಗ ಉಳಿಯುವಂತಹ ವ್ಯವಹಾರಗಳ ಮೇಲಲ್ಲ ತಾತ್ಕಾಲಿಕ ಗುತ್ತಿಗೆ ಅವಧಿಯವರೆಗೆ ಮಾತ್ರ. ಹೀಗೆ ಬಂಡವಾ ಳಹೂಡುವವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ , ರಕ್ಷಣೆ ಹಾಗೂ ತೆರಿಗೆ ರಹಿತ ವಾದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕು. ಅಲ್ಲಿ ಉತ್ಪಾದನೆಯಾಗುವ ಉತ್ತಮಗುಣಮಟ್ಟದ ಪದಾರ್ಥಗಳು ನಮ್ಮವರಿಗೆ ಸಿಗಲಾರದು, ದೇಶೀಯ ಉದ್ಯೋಗ ನೀತಿ ಅವರಿಗೆ ಅನ್ವಯಿಸಲಾರದು, ನಮ್ಮ ದೇಶದ ಕಾನೂನು ಕಟ್ಟಳೆಯಲ್ಲೂ ಅವರಿಗೆ ಸಡಿಲತ ಇರುತ್ತದೆ ಸರ್ಕಾರವೇ ಅವ ರರಕ್ಷಣೆಗೆ ಮುಂದಾಗಿ ನಿಲ್ಲುತ್ತವೆ. ದೇಶದ ಪ್ರಜಾಸತ್ತೆ ವ್ಯವಸ್ಥೆಗೆ ಇದು ಸಂಪೂರ್ಣ ವಿರುದ್ದ.
ಹೀಗೆ ಜಾಗತೀಕರಣದ ನೆರಳಿನಲ್ಲಿ ನಮ್ಮ ದೇಶಕ್ಕೆ ಕಾಲಿರಿಸಿದ್ದು ಟೆಕ್ಸ್ ಟೈಲ್ಸ್ ಅಂಡ್ ಗಾರ್ಮೆಂಟ್ ಇಂಡಸ್ಟ್ರಿ, ಮೆಟಲ್ ಅಂಡ್ ಮೆಟಲ್ ಉತ್ಪಾದನೆಗಳು, ಮಾಹಿತಿ ತಂತ್ರಜ್ಞಾನ ಪಾರ್ಕುಗಳು, ಹೊರಗುತ್ತಿಗೆ ಉದ್ದಿಮೆಗಳು, ಜೆಮ್ಸ್ ಅಂಡ್ ಜ್ಯೂಯಲರಿ, ಕಟ್ಟಡ ನಿರ್ಮಾಣ, ಸಾರಿಗೆ, ಅದಿರು, ಕಲಿದ್ದಲು, ತೈಲ ಉದ್ದಿಮೆಗಳು ಪ್ರಮುಖವಾದವುಗಳು . ಕಳೆದ ವರ್ಷಅಮೇರಿಕಾ ಆರಂಭಿಸಿದ ಬಂಡವಾಳ ಹಿಂತೆಗೆತದ ಪರಿಣಾಮ ದೇಶದ ೧.5ಮಿಲಿಯನ್ ನಷ್ಟು ಜನರು ಉದ್ಯೋಗ ಕಳೆದುಕೊಂಡರು. ದೇಶದ ಕಾರ್ಮಿಕ ಇಲಾಖೆಯ ಸರ್ವೆ ಅನುಸಾರ ದೇಶದ 11ರಾಜ್ಯಗಳಲ್ಲಿರುವ ೨೦ ಪ್ರಮು ಖವಾಣಿಜ್ಯ ಕೇಂದ್ರಗಳಲ್ಲಿ 2581ಘಟಕಗಳು ಕಣ್ಮುಚ್ಚಿದವು. ಈಗ ಉದ್ಯೋಗ ವಂಚಿತ ಭಾರತೀಯರ ಸಂಖ್ಯೆ ಏರುಗತಿಯಲ್ಲಿದ್ದು ಅದು ೧೬.2ಮಿಲಿಯನ ್ಆಗಿದೆ. ಈಗ ದುಬೈನಲ್ಲಿ ಸಂಭವಿಸಿರುವ ಆರ್ಥಿಕ ಕುಸಿತ ನಮ್ಮ ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿದೆ. ದುಬೈನಲ್ಲಿರು ವಭಾರತೀಯರು ಅಲ್ಲಿ ನಜನಸಂಖ್ಯೆಯ ಶೇ.43ರಷ್ಟಿದ್ದಾರೆ. ಅಲ್ಲಿ ಉದ್ದಿಮೆ ನಡೆಸುವವರು, ನೌಕರರಾಗಿ, ಕಾರ್ಮಿಕರಾಗಿ ಕೆಲಸ ಮಾಡುವವರು ಬಹುತೇಕ ನಮ್ಮವರೇ ಆಗಿದ್ದಾರೆ. ನಮ್ಮ ದೇಶದ ಹಲವ ಉತ್ಪನ್ನಗಳ ಗ್ರಾಹಕರು ಆಗಿರುವುದರಿಂ ದ ದೇಶದ ಆರ್ಥಿಕತೆಗೂ ಬಾರೀ ಪೆಟ್ಟು ಬೀಳಲಿದೆ.
ಜಾಗತೀಕರಣ ಕಾಲಿರಿಸುತ್ತಿದ್ದಂತೆ ನಮ್ಮ ಕೃಷಿ ಭೂಮಿಗಳು ಆರ್ಥಿಕವಲಯದ ಪಾಲಾಗುತ್ತಿವೆ, ದೇಶೀಯ ಉತ್ಪನ್ನಗಳು ಮೂಲೆಗುಂಪಾಗಿವೆ, ಆಧುನೀಕರಣದ ಪ್ರಭಾವದಿಂದಾಗಿ ಇರುವ ಕೃಷಿ ಭೂಮಿಗಳು ಬರಡಾಗುತ್ತಿವೆ, ಶಿಕ್ಷಣದ ಆದ್ಯತೆಗಳು ಬದಲಾಗಿವೆ, ಸಂಬಂಧಗಳು ಯಾತ್ರಿಕವಾಗಿವೆ, ಅಭಿರುಚಿ-ಸಂಸ್ಕೃತಿ ಬದಲಾಗಿದೆ, ಭಾಷಾ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ, ಪ್ರಗತಿ ಪರ ಚಳುವಳಿಗಳನ್ನು ವ್ಯವಸ್ಥಿತವಾಗಿ ಕೆಡವಲಾಗಿದೆ, ಅಪರಾಧಗಳು ಹೆಚ್ಚಿವೆ, ಸಾಮಾಜಿಕ ನ್ಯಾಯ ದಿಕ್ಕಾಪಾಲಾಗಿದೆ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಎಂಎನ್ ಸಿಗಳಲ್ಲಿ ಕೆಲಸ ಕಳೆದುಕೊಂಡು ಬದುಕಿನ ಭರವಸೆಯನ್ನು ಕಳೆದುಕೊಂಡವರೆಷ್ಟ ಜನರೋ. ಇವತ್ತು ನಾವು ದೈನಂದಿ ನಜೀವನದಲ್ಲಿ ಬಳಸುವ ಪ್ರತೀ ವಸ್ತುವೂ ಚಡ್ಡಿ-ಬನೀನು ಸೇರಿದಂತೆ ಎಲ್ಲ ಪದಾರ್ಥಗಳು ವಿದೇಶಿ ಸಹಯೋಗದ ಕಂಪನೆಗಳ ಬಳುವಳಿಯೇ. ಅದ ನಮ್ಮನ್ನು ಎಷ್ಟು ಆವರಿಸಿಕೊಂಡಿದೆಯಂದರೆ ನೀರಿನ ಮಡುವಿನಿಂ ದಹೊರಬರಲಾರದಷ್ಟು. ನಮಗೆ ಅಧುನೀಕರಣ ಬೇಕು, ಉದ್ಯೋಗ ಬೇಕು, ಅಭಿವೃದ್ದಿ ಬೇಕು ಆದರೆ ನಮ್ಮ ತನವನ್ನು ಹರಾಜಿಗಿಟ್ಟುಕೊಳ್ಳುವ ವ್ಯವಸ್ಥೆಯಲ್ಲ.ಎಲ್ಲಿ ದೇಸೀ ಜೀವನ ಪ್ರೀತಿ ಇಲ್ಲವೋ , ಬದ್ದತೆ, ಸಿದ್ದಾಂತಗಳಿರುವುದಿಲ್ಲವೋ ಅಲ್ಲಿಯವರೆಗೂ ಜಾಗತೀಕರಣದ ಭೂತ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.

Friday, November 20, 2009

ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ??

ಕಳೆದ ಕೆಲವು ತಿಂಗಳಿಂದ 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ, ವೃತ್ತಿಯಲ್ಲಿ ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ. ಬೆಂಗಳೂರು ಆವೃತ್ತಿಯ(ದಿ:17/11/2009 ರ ವಿ.ಕ) ಪುಟಗಳಲ್ಲಿ "ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು ಹೇಳಿ ಬಿದರಿಯವರೇ? ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ಗಮನಿಸಿದ್ದೇನೆ. ನೀವು ದಿ.30/06/2009 ರಂದು ತಮ್ಮ ಅಂಗರಕ್ಷಕರನ್ನಾಗಿ ಪೊಲೀಸರನ್ನು ನಿಯೋಜಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಟೇ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ , ವರದಿಯ ಆಧಾರದ ಮೇಲೆ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯೋಜಿಸುವುದು ಸರಿಯಲ್ಲ ಎಂಬ ನಿರ್ದಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ. ಈ ಬಗ್ಗೆ ತಮ್ಮ ಪತ್ರಿಕಾ ವರದಿಗಾರರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಈ ಕಾರಣದಿಂದಲೇ ಕೆಲವು ತಿಂಗಳಿನಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯ ನಿರ್ವಹಣೆಯ ಕುರಿತು ಹಲವಾರು ಪ್ರತಿಕೂಲ ವರದಿಗಳು 'ವಿಕ'ದಲ್ಲಿ ಪ್ರಕಟವಾಗಿರುತ್ತವೆ. ಮತ್ತು ಈ ಲೇಖನವೂ ಸಹಾ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ. ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.
ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಅರಿವು ನನಗೆ ಇದೆ. ಎಂತಹುದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ , ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
ಹಲವಾರು ಕಾರಣಗಳಿಂದಾಗಿ 'ವಿಕ' ದಿನಪತ್ರಿಕೆಯು ಇಂದು ರಾಜ್ಯದ ಪ್ರಮುಖ ದಿನಪತ್ರಿಕೆಯಾಗಿ ಹೊರಹೊಮ್ಮಿದೆ. ಈಗ ಅದು ಶತ ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಬಂದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ. ಪ್ರತಿಷ್ಟಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ 'ವಿಕ' ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ. ಹೀಗೊಂದು ಸುದೀರ್ಘ ಪತ್ರವನ್ನು 'ವಿಕ'ದ ಸಂಪಾದಕ ವಿಶ್ವೇಶ್ವರ ಭಟ್ ಗೆ ಬರೆದದ್ದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಶಂಕರ ಬಿದರಿ. ಎಲ್ಲರಿಗೂ ತಿಳಿದಂತೆ ಪತ್ರಿಕಾ ಲೋಕದಲ್ಲಿ ಸಂಚಲನ ಹುಟ್ಟಿಸಿದ್ದು, ಕಾಲಾನುಕೂಲಕ್ಕೆ ಬದಲಾಗುತ್ತಾ(ಮುಖಪುಟ, ವಿನ್ಯಾಸ, ಸುದ್ದಿಗಳು ಲೇಖನಗಳು) ಓದುಗರಿಗೆ ಹೊಸತನದ ಮುದ ನೀಡಿತು. ಆ ಮೂಲಕ ಜಡ್ಡು ಕಟ್ಟಿದ ಕನ್ನಡ ಪತ್ರಿಕೋಧ್ಯಮಕ್ಕೂ ಚುರುಕು ಮುಟ್ಟಿಸಿತು. ಪರಿಣಾಮ ಪ್ರಜಾವಾಣಿಯಂತಹ ಪತ್ರಿಕೆ ಕೂಡ ಬದಲಾವಣೆಗೆ ಸಿದ್ಧವಾಯಿತು. ಶತಮಾನದ ಕುರುಹುವಾಗಿರುವ 'ಸಂಯುಕ್ತ ಕರ್ನಾಟಕ' ಪತ್ರಿಕೆ ಸಹಾ ಹೊಸ ವಿನ್ಯಾಸ ಪಡೆಯಿತು. 'ಕನ್ನಡ ಪ್ರಭ'ದ ಮುಖಪುಟದ ಸುದ್ದಿ ಬಿಟ್ಟು ಒಳಗಿನದೆಲ್ಲಾ ಅಜೀರ್ಣವೇ ಸರಿ. ಇಂತಹ ಸನ್ನಿವೇಶದಲ್ಲಿ 'ಟೈಮ್ಸ್ ಆಫ್ ಇಂಡಿಯಾ' ದ ಬೆಂಗಳೂರು ಟೈಮ್ಸ್ ಪುಟದ ಅನುಕರಣೆ ಲವಲವಿಕೆಯೊಂದಿಗೆ 'ವಿಜಯ ಕರ್ನಾಟಕ' ಮತ್ತೊಮ್ಮೆ ಹೊಸ ರೂಪ ತಂದಿದೆ, ಪತ್ರಿಕೆಯ ಅಂಕಣಗಳು ಸುದ್ದಿ ವಿಶ್ಲೇಷಣೆಗಳು ಚೆನ್ನಾಗಿವೆ. ಆದರೆ 'ವಿಕ' ಎಲ್ಲೋ ಒಂದು ಕಡೆ ಇನ್ನೂ ಸಂಘ ಪರಿವಾರದ ಮುಖವಾಣಿಯಂತಿದೆ.
ವಿಶ್ವೇಶ್ವರ ಭಟ್ ಚಿಕ್ಕ ವಯಸ್ಸಿಗೆ ಮೀರಿದ ಹಲವು ಸ್ಥಾನಗಳನ್ನೇ ಅಲಂಕರಿಸಿದವರು ನಿರೀಕ್ಷೆಗೂ ಮೀರಿದ ವೇಗದಲ್ಲಿ ಬೆಳೆದವರು ಪತ್ರಿಕೆಯನ್ನು ಬೆಳೆಸಿದ್ದಾರೆ. ಆದರೆ ಪತ್ರಕರ್ತನಿಗಿರುವ ಇಗೋ ಜಾಗೃತಗೊಂಡರೆ ಆಗಬಹುದಾದ ಅನಾಹುತ ಮತ್ತು ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿರಲಾರದು. ನಮ್ಮ ಭಟ್ಟರ ವಿಷಯದಲ್ಲೂ ಇಂತಹ ಇಗೋ ಕೆಲಸ ಮಾಡಿರುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅನಂತಕುಮಾರ್ ಗೆ ಮಾಧ್ಯಮ ಸಲಹೆಗಾರರಾಗಿದ್ದ ಭಟ್ಟರು, ರಾಷ್ಟ್ರಪತಿ ಅಬ್ದುಲ್ ಕಲಾಂ ಜೊತೆ ವಿದೇಶ ಪ್ರವಾಸದಲ್ಲೂ ಜೊತೆಯಾಗಿದ್ದರಲ್ಲದೇ ಹಲವು ಉತ್ತಮ ಬರಹಗಳನ್ನು, ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಹೆಮ್ಮೆ ಅವರಿಗಿದೆ, ಓದಿದ ಖುಷಿ ನಮಗೂ ಇದೆ!. ಇಂತಿಪ್ಪ ಭಟ್ಟರು ಒಮ್ಮೆ ಅಡ್ವಾಣಿಯವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ನಡವಳಿಕೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು, ನಮ್ಮವರು ಹೇಗೆ ಸಿಡುಕುತ್ತಾರೆ ಏನೆಲ್ಲ ತಪ್ಪು ಮಾಡುತ್ತಾರೆ ಅದರ ಅಡ್ಡ ಪರಿಣಾಮವೇನು? ಎಂದೆಲ್ಲಾ ವಿವರವಾಗಿ ಬರೆದಿದ್ದರು. ಇದು ಪರೋಕ್ಷಾಗಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಉರಿಹತ್ತುವಂತೆ ಮಾಡಿತ್ತು. ಯಾಕೆಂದರೆ ಭಟ್ಟರ 'ಪೂರ್ವಾಪರ'ಗಳ ಸ್ಪಷ್ಟ ಅರಿವಿದ್ದ ಯಡ್ಡಿ ಸದರಿ ವರದಿಯಿಂದ ಕಂಗೆಟ್ಟು ಭಟ್ಟರಿಗೆ ಫೋನಾಯಿಸಿ ಜನ್ಮ ಜಾಲಾಡಿದ್ದರು. ಭಟ್ಟರಿಗೆ ಬೆವರಿಳಿದಿತ್ತು,(ಭಟ್ಟರು ಅನಂತಕುಮಾರ ಬೆಂಬಲಿಗರು ಅದಕ್ಕೆ ಹೀಗೆಲ್ಲ ಬರೆಯುತ್ತಿರಬಹುದು ಎಂಬು ಅವರ ಸಿಟ್ಟಿಗೆ ಕಾರಣವಾಗಿತ್ತು) ಆದರೆ ವಾಸ್ತವದಲ್ಲಿ ಭಟ್ಟರ ಉದ್ದೇಶ ಆ ರೀತಿ ಇರಲಿಲ್ಲ.
ಕೆಲ ವರ್ಷಗಳ ಹಿಂದೆ 'ಟೈಮ್ಸ್' ಗ್ರೂಪಿಗೆ ಸೇರ್ಪಡೆಗೊಂಡ ನಂತರ 'ವಿಕ'ದ ಖದರ್ರು ಬೇರೆಯಾಗಿದೆ. ಅಂತೆಯೇ ಭಟ್ಟರ ಖದರ್ರು ಸಹಾ. ಆದ್ದರಿಂದಲೇ ಅವರಿಗೆ ಅಂಗರಕ್ಷಕರನ್ನು ಹೊಂದುವ ಐಡಿಯಾ ಹೊಳೆದಿದೆ. ಸರಿ ಅದನ್ನು ಕಾರ್ಯರೂಪಕ್ಕೆ ತರಲು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಶಿಸ್ತು ಹಾಗೂ ದಿಟ್ಟತನಕ್ಕೆ ಹೆಸರಾದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶಂಕರ ಬಿದರಿಯವರು ಭಟ್ಟರ ಕೋರಿಕೆಯನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಭಟ್ಟರು ವಿಚಲಿತರಾದಂತಿದೆ. ರವಿಬೆಳಗೆರೆಯಂತಹ ಪತ್ರಕರ್ತರೇ ಆತ್ಮರಕ್ಷಣೆಗಾಗಿ ಪರವಾನಗಿ ಹೊಂದಿದ ಪಿಸ್ತೂಲು ಮತ್ತು ತಮ್ಮ ಪತ್ರಿಕಾ ಕಛೇರಿಗೆ ತಮ್ಮದೇ ಆದ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಾಗಿರುವಾಗ ಭಟ್ಟರಿಗೆ ಅಂಗರಕ್ಷಕರನ್ನು ಹೊಂದುವ ಅವಸರ ಮತ್ತು ಅವಶ್ಯಕತೆ ಏನಿತ್ತೋ ತಿಳಿಯುತ್ತಿಲ್ಲ. ವಿಶ್ವೇಶ್ವರಭಟ್ಟರು ಪ್ರಾಜ್ಞ ಮನಸ್ಥಿತಿಯ, ಸಂವೇದನಾ ಶೀಲ ಗುಣವುಳ್ಳವರು ಹಾಗಿದ್ದೂ ಹೀಗೇಕೆ ಮಾಡಿಕೊಂಡರೋ ? ಜನಮಾನಸದಲ್ಲಿ ಸ್ಥಾನ ಪಡೆದ ಪತ್ರಿಕೆಗೆ ಜನತೆಯ ಬೆಂಬಲವೂ ಸದಾ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ಗಟ್ಟಿಗೊಳ್ಳುತ್ತಾನೆ. ಆತನಿಗೆ ಸಂವಿಧಾನ ರಕ್ಷಣೆ ಬೇಕು. ಅದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ ನಡೆಯಬೇಕು. ಪತ್ರಕರ್ತರಿಗೆ ಕಾನೂನು ಬೆಂಬಲ ದಕ್ಕಿಸಿಕೊಳ್ಳುವ ಬಗ್ಗೆ ಪ್ರಯತ್ನವಾಗಬೇಕು. ಆದರೆ ತೀರಾ ಪೊಲೀಸ್ ರಕ್ಷಣೆಯಲ್ಲಿ, ಅಂಗರಕ್ಷಕರನ್ನಿಟ್ಟುಕೊಂಡು ಪತ್ರಕರ್ತರು ಓಡಾಡುವಂತಾಗ ಬಾರದು. ಅದು ಪತ್ರಿಕಾ ಧರ್ಮಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೇ ಸರಿ. ಹಾಗಂತ ಒಂದು ಜನಮಾನಸದ ಪತ್ರಿಕೆಯನ್ನು ವೈಯುಕ್ತಿಕ ವಿಚಾರಕ್ಕೆ ಬಳಸಿಕೊಳ್ಳುವುದು ಖಂಡಿತಾ ಸರಿಯಾದುದಲ್ಲ ಹೌದಲ್ವಾ?

Sunday, November 15, 2009

ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಎಂಬ ಅನುಮಾನ!


" ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಅನ್ನುವ ಅನುಮಾನ ಶುರುವಾಗಿದೆ,ನಿತ್ಯವೂ ಕಕ್ಷಿದಾರರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ! ಅಪರೂಪಕ್ಕೊಮ್ಮೆ ಮಾಧ್ಯಮದವರ ಮೇಲೂ ದೌರ್ಜನ್ಯವಾಗಿದೆ. ನ್ಯಾಯವಾದಿಗಳು ನ್ಯಾಯಕ್ಕಾಗಿ ಹೋರಾಡುವುದಷ್ಟೇ ಅಲ್ಲ, ಅವರ ಹೋರಾಟದ ಹಾದಿಯೂ ನ್ಯಾಯ ಮಾರ್ಗದಲ್ಲಿರಲಿ!! "ಹೀಗೆಂದವರು ಜೀ ಕನ್ನಡ ವಾಹಿನಿಯ ಮಧುಸೂಧನ್. ಹೌದು ಇಂತಹದ್ದೊಂದು ಮಾತನ್ನು ಒಪ್ಪಬೇಕಾ? ಯಾಕೆ ಹೀಗೆ ಪುನರಾವರ್ತನೆಯಾಗುತ್ತಿದೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವಾ? ಕರಿಕೋಟು ತೊಟ್ಟವರು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಯಾಕೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ?? ಎಂಬೆಲ್ಲ ಪ್ರಶ್ನೆಗಳು ಪುನಹ ಕಾಡಿದ್ದು ಕಳೆದ ವಾರದ ಬೆಳವಣಿಗೆಯ ನಂತರ.

ಹೌದು ಯಾಕೆ ಹೀಗೆ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ,ಶಾಸಕಾಂಗ ಪ್ರಧಾನವಾಗಿದ್ದರೆ ಪ್ರತ್ಯೇಕವಾಗಿ ಪ್ರಜಾಪ್ರಭುತ್ವದ ಕಾವಲು ನಾಯಿಯಂತಿರುವುದು ಪತ್ರಿಕಾರಂಗ. ಇಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂಬ ವಿಚಾರಗಳ ಅವಲೋಕನ ಅನಗತ್ಯ. ಅವರವರದೇ ನೆಲೆಗಟ್ಟಿನಲ್ಲಿ ಅವರು ಹೆಚ್ಚು ಶಕ್ತರು ಹಾಗೂ ಸಮಾಜದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುವವರು. ಎಲ್ಲರಿಗೂ ಅವರವರದೇ ಆದ ಗುರುತರ ಹೊಣೆಗಾರಿಕೆಗಳು ಇವೆ. ಹೀಗಿರುವಾಗ ಪರಸ್ಪರರನ್ನು ಗೌರವಿಸುವ, ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿ ಇರುತ್ತದೆ. ಅದೇ ಸಮಯದಲ್ಲಿ ಬಾಹ್ಯವಾಗಿ ನಮ್ಮ ನಡವಳಿಕೆಗಳು ಹೇಗೆ ಇರಬೇಕೆಂಬುದನ್ನು ಸಹಾ ಅರಿಯ ಬೇಕಾಗುತ್ತದೆ, ಯಾಕೆಂದರೆ ಅದು ಒಟ್ಟು ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹಾಗಾಗದಂತೆ ತಡೆಯಬೇಕಾದುದು ಪರಸ್ಪರರ ಕರ್ತವ್ಯ ಕೂಡ! ಆ ನಿಟ್ಟಿನಲ್ಲಿ ಕಳೆದ ವಾರ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರ ಮೇಲೆ ನಡೆದ ಹಲ್ಲೆ ಹೆಚ್ಚು ಪ್ರಸ್ತುತವೆನಿಸುತ್ತದೆ ಕೂಡಾ. ಪ್ರಸಕ್ತ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಹಲ್ಲೆ ಮಾಮೂಲು ಸಂಗತಿಯಾಗಿದೆ, ಆದರೆ ಸಮಾಜದ ಒಂದು ಪ್ರಜ್ಞಾವಂತ ಗುಂಪಿನಿಂದ ಸಾರ್ವಜನಿಕ ಹಲ್ಲೆ ಕಾನೂನು ಮೀರಿ ನಡೆದಾಗ ಅದು ಪ್ರಶ್ನಾರ್ಹವೇ ಆಗಿದೆ. ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಿ ದಿನಕರನ್ ಅಕ್ರಮ ಆಸ್ತಿಗಳಿಸಿದ್ದಾರೆ ಹಾಗಾಗಿ ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಬೇಕು , ಅವರು ನ್ಯಾಯಾಲಯ ಕಲಾಪಗಳನ್ನು ನಡೆಸಬಾರದು ಎಂದು ಪ್ರತಿಭಟನೆ ನಡೆಸಿದರು. ಅದೂ ಕೋರ್ಟ್ ಆವರಣದಲ್ಲಿ ಮತ್ತು ಕಲಾಪ ನಡೆಯುವ ವೇಳೆ, ಕೆಲವು ನ್ಯಾಯಾಧೀಶರನ್ನು ಕೊಠಡಿಯೊಳಗೆ ಕೂಡಿಹಾಕಿದ್ದಲ್ಲದೇ, ಅಡ್ಡಿ ಪಡಿಸುವ ಯತ್ನವಾಗಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳು ಘಟನೆಯನ್ನು ಕಂಡರು ದೃಶ್ಯವಾಹಿನಿಗಳವರು ಚಿತ್ರೀಕರಿಸಿಕೊಂಡರು, ಅದು ಜನ ಸಾಮಾನ್ಯರ ಹಿತಾಸಕ್ತಿಯಿಂದ. ಆದರೆ ಇದನ್ನು ಸಹಿಸದ ಕೆಲವು ದುಷ್ಕರ್ಮಿ ವಕೀಲರುಗಳು( ಕ್ಷಮಿಸಿ ಎಲ್ಲರೂ ಅಲ್ಲ) ಸಿಎನ್ ಎನ್ ಐ ಬಿ ಎನ್ ಚಾನಲ್ ನ ಛಾಯಾಗ್ರಾಹಕ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದರು, ಹಲವು ಪತ್ರಕರ್ತರನ್ನು ಮನಬಂದಂತೆ ಥಳಿಸಿದರು. ಇದು ವಕೀಲರುಗಳ ಹೋರಾಟದ ನ್ಯಾಯವಾದ ಮಾರ್ಗವೇ? ಇರಲಿ ಸ್ವಲ್ಪ ವಿಷಯಾಂತರ ಮಾಡೋಣ ಇಂತಹ ಹಲ್ಲೆಗಳು ಕೇವಲ ವಕೀಲರಿಂದ ಮಾತ್ರವೇ ಸಂಭವಿಸುತ್ತಿಲ್ಲ. ಸಮಾಜದ ಗಣ್ಯರೆನಿಸಿಕೊಂಡವರಿಂದಲೂ ಹಲ್ಲೆಗಳು ನಡೆದಿವೆ. ಕೆಲ ವರ್ಷಗಳ ಹಿಂದೆ ಮೈಸೂರಿನ ಪತ್ರಕರ್ತ ಸಂತೋಷ ನಡುಬೆಟ್ಟನನ್ನು ಚಾಮುಂಡಿ ಬೆಟ್ಟದ ಹಾದಿಯಲ್ಲಿ ಕ್ಷುಲ್ಲಕ ವಿಷಯಕ್ಕೆ ನಟ ಪುನೀತು ಬಡಿದಿದ್ದ, ನಾಗರಹೊಳೆ ಅರಣ್ಯದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಅಣ್ಣಯ್ಯ ಎಂಬಾತ ಈ ಟಿವಿ ಗೆಳೆಯರನ್ನು ಬಡಿದು ಕ್ಯಾಮೆರಾ ಹಾಳುಗೆಡವಿದ್ದ, ಹಾಸನದಲ್ಲಿಯೂ ಕೆಲವು ವಕೀಲರುಗಳಿಂದ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಿತ್ತು, ಮೊನ್ನೆ ಮೊನ್ನೆ ಶುಭಾಪೂಂಜಾ ಜೊತೆ ಕಾಣಿಸಿಕೊಂಡ ನಟ ವಿಜಯ್ ದೃಶ್ಯ ಮಾಧ್ಯಮದವರನ್ನು ತಡವಿಕೊಂಡಿದ್ದ ಹೀಗೆ ಅಂಕೆಗೆ ಸಿಗದಷ್ಟು ಲೆಕ್ಕದಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ನಿರಂತರವಾಗಿದೆ. ಯಾವ ಪ್ರಕರಣದಲ್ಲೂ ಇದುವರೆಗೂ ನ್ಯಾಯ ದಕ್ಕಿಲ್ಲ ಎಂಬುದು ದುರಂತದ ಸಂಗತಿಯೇ ಸರಿ. ಈ ಪ್ರಕರಣ ಕುರಿತು ಹೇಳಿಕೆ ನೀಡಿರುವ ರಾಜ್ಯದ ಕಾನೂನು ಸಚಿವ ಪ್ರಕರಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಫಲಿತಾಂಶ ಮಾತ್ರ ಇನ್ನೂ ಆಗಿಲ್ಲ.

ಇಂತಹ ಸಂಧರ್ಭದಲ್ಲಿ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಮಾಧ್ಯಮಗಳ ಕುರಿತು ಮೀಡಿಯಾ ಮಿರ್ಚಿ ಅಂಕಣ ಬರೆಯುವ, ಮಾದ್ಯಮ ಲೋಕದ ಒಳ-ಹೊರಗನ್ನು ಬಲ್ಲ ಸೂಕ್ಷ ಪ್ರಜ್ಞೆಯ ಜಿ ಎನ್ ಮೋಹನ್ ಮಾಧ್ಯಮ ಮಿತ್ರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಅಭಿಪ್ರಾಯ ಸೂಚಿಸುವಂತೆ ಕೋರಿದ್ದರು, ಈ ಮೇರೆಗೆ ಮೀಡಿಯಾ ಮಿರ್ಚಿ ಅಂತರ್ಜಾಲ ತಾಣದಲ್ಲಿ ಹಲವು ಗಣ್ಯರು, ಪತ್ರಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ, ಆ ಪ್ರತಿಕ್ರಿಯೆಗಳನ್ನು ಒಟ್ಟು ಮಾಡಿ ರಾಜ್ಯಪಾಲರಿಗೆ ಅರ್ಪಿಸಿ ಪತ್ರಕರ್ತರಿಗೆ ರಕ್ಷಣೆ ಕೋರುವ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಕಾನೂನು ಸಚಿವರ ಹೇಳಿಕೆಯಿಂದ ತೃಪ್ತರಾದಂತಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಇನ್ನೂ ತೂಕಡಿಕೆಯಲ್ಲಿದೆ, ಇದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಅದು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಹಾಗಾಗಿ ಅದನ್ನು ಪ್ರತಿನಿಧಿಸುವವರೂ ಕೂಡ ಒಂದು ತೂಕದಿಂದ ನಡೆದುಕೊಂಡರೆ ಒಳಿತು ಇಲ್ಲವಾದಲ್ಲಿ ವ್ಯವಸ್ಥೆ ಅವರ ವಿರುದ್ಧ ತಿರುಗಿ ಬೀಳುವ ದಿನಗಳು ದೂರವಿಲ್ಲ ಎಂಬುದನ್ನು ಅರಿಯಬೇಕಲ್ಲವೇ?

ಕೊನೆ ಮಾತು: ರಾಜ್ಯದಲ್ಲಿ ಈಗ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ ಇದು ಜನ ಸಾಮಾನ್ಯರಿಗೆ ಉದ್ಯೋಗ ಒದಗಿಸುವ ಬದಲು ಪಂಚಾಯತ್ ವ್ಯವಸ್ಥೆಯ ಅಧಿಕಾರಿಗಳು ಮತ್ತು ಇಂಜಿನಿಯರುಗಳ ಜೋಳಿಗೆ ತುಂಬಿಸುವ ಅಕ್ಷಯ ಯೋಜನೆಯಾಗಿದೆ. ದೇಶದ ೩.೫೨ ಕೋಟಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮಹತ್ತರ ಯೋಜನೆ. ರಾಜ್ಯದಲ್ಲಿ 13.50855ಕೋಟಿ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಆರಂಭದಲ್ಲಿ ಯೋಜನೆಯ ಕಠಣ ಮಾರ್ಗಸೂಚಿಗಳಿಂದ ಕುಂಟುತ್ತಾ ಸಾಗಿದ್ದ ಯೋಜನೆ , ಈಗ ಸಡಿಲಗೊಂಡಿರುವ ಮಾರ್ಗದರ್ಶಿಸೂತ್ರಗಳಿಂದ ಅಧಿಕಾರ/ರಿ ಶಾಹಿಗಳ ಮತ್ತು ಕಂಟ್ರಾಕ್ಟುದಾರರ ಅಕ್ಷಯ ಪಾತ್ರೆಯಾಗಿ ಪರಿವರ್ತನೆಯಾಗಿದೆ. ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ಇಂದಿನವರೆಗೆ ಕೇವಲ 14ಕೋಟಿರೂಪಾಯಿಗಳ ಕೆಲಸ ವಾಗಿದೆ ಆದರೆ ಮಾದ್ಯಮಗಳ್ಲಲಿ ಮಾತ್ರ ಜಿ.ಪಂ. ನ ಹಿರಿಯ ಅಧಿಕಾರಿಗಳು ಮತ್ತು ಅಧ್ಯಕ್ಷ/ಉಪಾಧ್ಯಕ್ಷರುಗಳು ಸಾರ್ವಜನಿಕರಿಗೆ ೨೫-30ಕೋಟಿ ಕೆಲಸವಾಗಿದೆಯೆಂಬ ಸುಳ್ಳುಹೇಳುತ್ತಿದ್ದಾರೆ. ಜಿಲ್ಲೆಯಾಧ್ಯಂತ ಹಲವೆಡೆ ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆ ತಯಾರಿಸುವ ಬದಲು ದುಡ್ಡು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಇದಕ್ಕೆ ಸ್ಪಷ್ಟ ಪಾರದರ್ಶಕ ಉದಾಹರಣೆಯೆಂದರೆ ಕೆರೆ ಅಭಿವೃದ್ದಿ ಕ್ರಿಯಾ ಯೋಜನೆಗಳು. ಶೇ.೨೦ ಜೆಸಿಬಿ ಬಳಸುತ್ತೇವೆಂದು ಹೇಳಲಾಗುತ್ತಿದ್ದರೂ ಶೇ.100ರಷ್ಟು ಜೆಸಿಬಿ ಬಳಕೆಯಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲವಾಗಿದೆ, ಅವರ ಜಾಬ್ ಕಾರ್ಡುಗಳು ಕಂಟ್ರಾಕ್ಟರುಗಳ ಬಳಿ ಇಲ್ಲವೇ ವಾರ್ಡು ಸದಸ್ಯರುಗಳ ಬಳಿ ಸಂಗ್ರಹವಾಗಿವೆ. ಕೆಲಸ ಮಾಡದೇ, ಅರೆಬರೆ ಕೆಲಸ ಮಾಡಿ ಲಕ್ಷಾಂತರ ರೂ ಕೊಳ್ಳೆ ಹೊಡೆಯಲಾಗಿದೆ.ಈ ಬಗ್ಗೆ ಪ್ರಶ್ನಿಸಿದರೆ ಆ ಬಗ್ಗೆ ದೂರುಕೊಡಿ ಪರಿಶೀಲಿಸುತ್ತೇವೆ ಎಂಬ ಹೊಣೆಗೇಡಿತನದ ಉತ್ತರ ನೀಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಕುಳಿತು ಮಜಾ ಉಡಾಯಿಸುವ ಅಧಿಕಾರಿ, ಜನಪ್ರತಿನಿಧಿ ಇದುವರೆಗೂ ಎಷ್ಟು ತಾಲೂಕುಗಳಿಗೆ, ಎಷ್ಟು ಪಂಚಾಯ್ತಿಗಳಿಗೆ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ? ತಪ್ಪಿತಸ್ಥರ ವಿರುದ್ಧ ಏನು ಕ್ರಮವಾಗಿದೆಯೆಂಬ ಬಗ್ಗೆ ಉತ್ತರವಿಲ್ಲ. ಗ್ರಾಮಪಂಚಾಯಿತಿಗಳಿಗೆ ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ದಿ ಯೋಜನೆಗಳು ಜಾರಿಯಲ್ಲಿವೆ. ಇಲ್ಲಿ ಒಂದೇ ಕೆಲಸಕ್ಕೆ ಹಲವು ಯೋಜನೆಗಳನ್ನು ಸೇರಿಸಿ ಹಾಡುಹಗಲೇ ಜನಸಾಮಾನ್ಯರ ಹಣ ದೋಚಲಾಗುತ್ತಿದೆ. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಲಾನಯನ ಹೀಗೆ ಇತರೆ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುವ ಉದ್ಯೋಗ ಖಾತ್ರಿ ಯೋಜನೆ ಲೆಕ್ಕಕ್ಕೆ ಸಿಗುವುದೇ ಇಲ್ಲ.ಇದೆಲ್ಲದರ ನಡುವೆ ರಾಮ-ಕೃಷ್ಣ ನ ಲೆಕ್ಕ ದಂತೆ ಆಗುವ-ಆಗದ ಕೆಲಸಗಳಿಗೆ ಎಂಬಿ ಬರೆಯುವ ಜಿ.ಪಂ. ಇಂಜಿನಿಯರುಗಳು ಕೋಟಿಗೆ ತೂಗುತ್ತಿದ್ದಾರೆ ಇಂತಿಷ್ಟು ಎಂದು %ಕೊಟ್ಟರೆ ಮುಗಿಯಿತು. ಅಸಲಿಗೆ ಸದರಿ ಯೋಜನೆ ನಮ್ಮ ಜಿಲ್ಲೆಗೆ ಅಗತ್ಯವೇ ಇರಲಿಲ್ಲ. ಆದರೂ ಬಂದ ಯೋಜನೆಯನ್ನಾದರೂ ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಭ್ರಷ್ಠಾಚಾರದಿಂದ ಮುಕ್ತವಾಗಿ ನಿರ್ವಹಿಸಲು ಅಧಿಕಾರಿಗಳಿಗೇನು ದಾಡಿ ಬಂದಿದೆ?

Tuesday, November 10, 2009

ಶಂಕರ್ ನಾಗ್ ನೆನಪಿಗೊಂದು ವೆಬ್ ಸೈಟು!

ಶಂಕರ್ ನಾಗ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ನಾಡಿನ ಜನಮನದಲ್ಲಿ ಅಜರಾಮರ. ಯಾವುದೇ ಸ್ಟಾರ್ ಗಿರಿಯ ಹಂಬಲವಿಲ್ಲದೇ ತನ್ನದೇ ಆದ ಆಲೋಚನೆಗಳಿಗೆ ರೂಪು ಕೊಡುತ್ತಾ, ಹೊಸ ಚಿಂತನೆಗಳನ್ನು ಹರವಿಕೊಳ್ಳುತ್ತಾ ಸಾರಸ್ವತ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಧೀಮಂತ. ನಾಟಕದ ಹುಚ್ಚು ಹತ್ತಿಸಿಕೊಂಡು ಇದ್ದ ಬ್ಯಾಂಕ್ ಆಫ್ ಇಂಡಿಯಾದ ನೌಕರಿಗೆ ತಿಲಾಂಜಲಿ ಇಟ್ಟು ಕನಸುಗಳನ್ನು ಕಟ್ಟಿದ, ಕನಸನ್ನು ನಿಜ ಮಾಡಿದ, ತಾನೂ ಬೆಳೆದ, ತನ್ನೊಂದಿಗೆ ಹಲವರನ್ನು ಬೆಳೆಸಿದ, ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನವನ್ನು ಹುಟ್ಟುಹಾಕಿದ ಸಾಹಸಿ ಆತ! ಬದುಕಿದ್ದು 3ದಶಕಗಳಾದರೂ ಸಾಧಿಸಿದ್ದು ಮತ್ತು ನಮ್ಮೊಂದಿಗೆ ಬಿಟ್ಟು ಹೋಗಿದ್ದು ಎಂದೆಂದಿಗೂ ಮರೆಯಲಾಗದ ಕನಸುಗಳ ಸಾಕಾರವನ್ನು ಹೊಸ ಸಂಚಲನದ ಸೃಷ್ಟಿಯನ್ನು. ಶಂಕರ್ ಗೆ ಅಂತ ಒಂದು ಅಭಿಮಾನಿ ಸಂಘವಿರಲಿಲ್ಲ ಆದರೆ ಆತ ತನ್ನ ನಾಟಕಗಳ ಮೂಲಕ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದ. ದೇಶಿ ಪರಂಪರೆಯನ್ನು ವಿದೇಶದಲ್ಲೂ ಪಸರಿಸಿದ್ದ, ಒಂದೇ ಒಂದು ಟೆಲಿ ಸೀರಿಯಲ್ ಸ್ವಾಮಿ ಅಂಡ್ ಹಿಸ್ ಪ್ರೆಂಡ್ಸ್ ಆತನಿಗೆ ಜಾಗತಿಕ ಖ್ಯಾತಿಯನ್ನು ತಂದು ಕೊಟ್ಟಿತು. ದೇಶದಲ್ಲಿಯೇ ಮೊದಲನೆಯದು ಎನ್ನುವಂತಹ ಕಂಟ್ರಿಕ್ಲಬ್ ನಿರ್ಮಿಸಿದ ಶಂಕರ್ ಒಂದೊಳ್ಳೆಯ ಪತ್ರಿಕೆಯನ್ನು, ನಮ್ಮದೇ ಆದ ಕನ್ನಡದ ಛಾನಲ್ ಅನ್ನು, ಬಡವರಿಗೆ ಕಡಿಮೆ ಬೆಲೆಯ ಮನೆಯನ್ನು, ನಂದಿ ಬೆಟ್ಟಕ್ಕೆ ರೋಪ್ ವೇ ಯನ್ನು, ಮೆಟ್ರೋ ರೈಲು ಯೋಜನೆಗೆ ಹೀಗೆ ಬಿಡುವಿಲ್ಲದ ಕನಸುಗಳನ್ನು ಕಟ್ಟಿಕೊಂಡಿದ್ದ . ಆದರೆ ಸಾಧಿಸುವುದು ಇನ್ನು ಇದೆಯೆನ್ನುವಾಗಲೇ ವಿಧಿ ಅವರನ್ನು ಸೆಳೆದು ಕೊಂಡು ಬಿಟ್ಟಿತು. ಇಂತಹ ಶಂಕರ್ ನಾಗ್ ನೆನಪಿಗಾಗಿ ಅವರ ಜನ್ಮ ದಿನವಾದ ನವೆಂಬರ್ 9ರಂದು ಹಿರಿಯ ಪತ್ರಕರ್ತ ರಾದ ಎಂ ಕೆ ಭಾಸ್ಕರ ರಾವ್ "ಶಂಕರ್ ನಾಗ್" ವೆಬ್ ಸೈಟನ್ನು ಸೃಜಿಸಿದ್ದಾರೆ. ನವೆಂಬರ್ 9ರಂದು ಅದು ಚಾಲನೆಗೊಂಡಿದೆ. ಖ್ಯಾತ ನಾಟಕಕಾರ ಗಿರಿಶ್ ಕಾರ್ನಾಡ್ ಅದನ್ನು ಉದ್ಘಾಟಿಸಿದ್ದಾರೆ. ಅಲ್ಲಿ ಶಂಕರ್ ನೆನಪಿನ ಅಪರೂಪದ ವಿವರಣೆಯಿದೆ, ಚಿತ್ರ ಸಂಪುಟವಿದೆ, ಕೆಲವು ಆಯ್ದ ಚಿತ್ರಗಳ ಲಿಂಕ್ ನೀಡಲಾಗಿದೆ. ನೀವೂ ಒಮ್ಮೆ ಭೇಟಿ ನೀಡಿ. ವಿಳಾಸ ಹೀಗಿದೆ. ಶಂಕರ್ ನಾಗ್ . ಇನ್. ಹಾಗೆ ಮತ್ತೊಂದು ವಿಚಾರ ಪ್ರಸಿದ್ದ ಅಂತರ್ ಜಾಲ ತಾಣ ಫೇಸ್ ಬುಕ್ ನಲ್ಲೂ ಶಂಕರ್ ನಾಗ್ ಫ್ಯಾನ್ ಕ್ಲಬ್ ಇದೆ, ಅಲ್ಲಿ ವಿಶೇಷವಾಗಿ ಶಂಕರ್ ಬಗ್ಗೆ ಚರ್ಚೆ ಸಂವಾದ ಇರುತ್ತೆ ಅಲ್ಲಿಗೂ ಹೋಗಿ ಬನ್ನಿ.

Sunday, November 1, 2009

ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ ಗೊತ್ತಾ???

ವರಕವಿ ದ.ರಾ. ಬೇಂದ್ರೆ ಮೈಸೂರಿನ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಕುವೆಂಪು ರವರೊಂದಿಗೆ ತೆಗೆಸಿದ ಫೋಟೋ
ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ? ಇಂತಹದ್ದೊಂದು ಪ್ರಶ್ನೆ ಕೇಳಿಕೊಳ್ಳುವ ದುರ್ಗತಿ ಸ್ವಾಭಿಮಾನಿ ಕನ್ನಡಿಗರದ್ದು ಅದು ದೌರ್ಭಾಗ್ಯದ ಸಂಗತಿಯೂ ಹೌದು. ಹಾಗಾದರೆ ಸ್ವಾಭಿಮಾನಿ ಗಳಲ್ಲದ ಕನ್ನಡಿಗರು ಯಾರು? ಇಂತಹ ವಿಭಿನ್ನ ಮನೋಭಾವದ ಗುಂಪು ಯಾಕೆ ಸೃಷ್ಟಿಯಾಗಿದೆ? ಇದರ ಪರಿಣಾಮಗಳೇನು? ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪ್ರೀತಿ ಯಾಕೆ ಜಾಗೃತವಾಗಬೇಕು? ಕನ್ನಡದ ಹೆಸರಿನಲ್ಲಿ ಇವತ್ತು ಏನೆಲ್ಲ ಆಗುತ್ತಿದೆ? ಯಾರ್ಯಾರು ಯಾವ ಯಾವ ರೀತಿಯ ಲಾಭ ಲೆಕ್ಕಾಚಾರಗಳನ್ನು ಕನ್ನಡ ಭಾಷೆಯನ್ನು ಮುಂದಿಟ್ಟುಕೊಂಡು ಮಾಡುತ್ತಿದ್ದಾರೆ? ಸರ್ಕಾರಗಳು ಏನು ಮಾಡುತ್ತಿವೆ? ಈ ನಡುವೆ ನಮ್ಮ ಕನ್ನಡಿಗರ ಮನಸ್ಥಿತಿ ಹೇಗಿದೆ? ನಮ್ಮ ಕನ್ನಡ ಸಂಸ್ಕೃತಿಗೆ ಯಾವ ರೀತಿಯ ಧಕ್ಕೆಯಾಗಿದೆ? ನಮ್ಮ ಕನ್ನಡವನ್ನು ಯಾಗಿಗೆಲ್ಲ ಅಡ ಇಡಲಾಗಿದೆ? ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳೇನು? ಎಂಬೆಲ್ಲಾ ಪ್ರಶ್ನೆಗಳು ಬೇತಾಳನಂತೆ ನಮ್ಮನಾವರಿಸಿವೆ. ಆದರೆ ಇವೆಲ್ಲಾ ಪ್ರಶ್ನೆಗೆ ಉತ್ತರ ಹುಡುಕಾಡುವವರು ಮಾತ್ರ ಅದೇ ಸ್ವಾಭಿಮಾನಿ ಕನ್ನಡಿಗರು! ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ , ಕನ್ನಡ ಜನರ ಹಿತಾಸಕ್ತಿಗೆ ನಮ್ಮ ನೆಲದಲ್ಲೆ ನಾವೇ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಒನ್ಸ್ ಎಗೈನ್ ಇಂತಹದ್ದೊಂದು ಪರಿಸ್ಥಿತಿಗೆ ಕಾರಣ ವಾಗಿರುವುದು ಮತ್ತದೇ ಜಾಗತೀಕರಣ!!
ಅದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಮೊದಲು ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 40ಮಿಲಿಯನ್ ಜನ ಕನ್ನಡ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಜ್ಞಾನಪೀಠಿಗಳನ್ನು ಪಡೆದಿದೆ. 47ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ. ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.
ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿದೆ. ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾದಾಕ್ಷಣ ಎಲ್ಲವೂ ಸರಿಯಾಗುತ್ತದೆ ಎನ್ನುವ ಸರ್ಕಾರಗಳು ರಾಜಕಾರಣಿಗಳು, ಮತ್ತು ಕೆಲವು ಸಾಹಿತ್ಯ ವಲಯದ ಅತಿಬುದ್ದಿವಂತರು ಈಗ ಏನೆನ್ನುತ್ತಾರೆ ಗೊತ್ತಿಲ್ಲ. ಕನ್ನಡ ನಮ್ಮ ಭಾವಸ್ಪೂರ್ತಿಯಾಗಿ, ನಮ್ಮ ಒಡಲಾಳದ ಧ್ವನಿಯಾಗಿ ನಮ್ಮ ನಿತ್ಯದ ಉಸಿರಾಗಿರುವಾಗ ಕನ್ನಡದ ಬಗ್ಗೆ ತಾತ್ಸಾರ ಅಸಡ್ಡೆ ಏಕೆ?

Sunday, October 25, 2009

2012ಕ್ಕೆ ಪ್ರಳಯ ನಿಜಾನಾ ? ಎನಿದೆಲ್ಲಾ?

2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇಂಟರ್ ನೆಟ್ ಗಳಲ್ಲಿ , ಹಾಲಿವುಡ್ ನಸಿನಿಮಾಗಳಲ್ಲಿ , ಆಂಗ್ಲ ಸಾಹಿತ್ಯದಲ್ಲಿ , ದೃಶ್ಯ ಮಾದ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಳಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಆ ಬಗೆಗಿನ ಕುತೂಹಲವೂ ಜಾಸ್ತಿಯಾಗುತ್ತಿದೆ. ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾ ತೀವ್ರವಾಗಿಯೇ ಆಗುತ್ತಿದೆ. ನಮಗೆತಿಳಿದೋ ತಿಳಿದಯದೆಯೋ ಇಂತಹದ್ದೊಂದು ಪ್ರಶ್ನೆ ನಮ್ಮೆಲ್ಲರೆದುರು ಬಂದು ಧುತ್ತನೆ ಪ್ರತ್ಯಕ್ಷವಾಗಿರುವಾಗ ಆತಂಕ/ಕುತೂಹಲ ಸಹಜವೇ ಈ ನಿಟ್ಟಿನಲ್ಲಿ ಒಂದುಷ್ಟು ವಿಚಾರಗಳನ್ನು ನೋಡೋಣ.
ಅಸಲಿಗೆ ಇಂತಹದ್ದೊಂದು ಪ್ರಶ್ನೆ ನಿನ್ನೆ ಮೊನ್ನೆಯದೇನಲ್ಲ, ಭೂ ಮಂಡಲದ ಮೇಲೆ ಜೀವ ವೈವಿದ್ಯ ಬಂದ ಮೇಲೆ ಮಾನವ ಜೀವಿಯ ಅಸ್ತಿತ್ವ ಹುಟ್ಟಿಕೊಂಡ ಮೇಲೆ ಟಿಸಿಲೊಡೆದ ಮೂಟೆ ಹಲವು ಕುತೂಹಲಗಳನ್ನು ವಿಸ್ಮಯಗಳನ್ನು ತೆರೆದಿಡುತ್ತಾ ಬಂದಿದೆ. ಇಂತಹ ವಿಸ್ಮಯಗಳು ಮತ್ತು ಆತಂಕಗಳನ್ನು ಪರಿಗ್ರಹಿಸಲು ಮತ್ತು ವಿಶ್ಲೇಷಿಸಲು ಜಾಗತಿಕ ಮಟ್ಟದಲ್ಲಿ" ನಾಸಾ " ಸಂಸ್ಥೆ ನಿರಂತರ ಸಂಶೋಧನೆಗಳನ್ನು ಮಾಡುತ್ತಲೆ ಬಂದಿದೆ. ಈ ಪೈಕಿ ಶೇ.10ರಷ್ಟಕ್ಕೆ ಅದು ಖಚಿತವಲ್ಲದ ಆದರೆ ಸತ್ಯಕ್ಕೆ ಹತ್ತಿರವಾದ ಉತ್ತರಗಳನ್ನು ಸಹಾ ಕಂಡು ಕೊಂಡಿದೆ. ಇನ್ನೂ ಹತ್ತು ಹಲವು ವಿಸ್ಮಯಗಳಿಗೆ ಉತ್ತರ ಸಿಗಬೇಕಾಗಿದೆ. ಇಂತಹವುಗಳಲ್ಲಿ ಆಕಾಶದಲ್ಲಿ ಕಂಡು ಬಂದ ಹಾರುವ ತಟ್ಟೆ, ದೇಗುಲದ ಮೇಲೆ ಬಿದ್ದ ಬೆಳಕಿನ ಕಿರಣಗಳು, ದೂರದ ಸಮುದ್ರದಲ್ಲೆಲ್ಲೋ ದಡದಲ್ಲಿ ಕಂಡು ಬಂದ ಇತ್ತ ಮನುಷ್ಯನೂ ಅಲ್ಲದ ಅತ್ತ ಪ್ರಾಣಿಯೂ ಅಲ್ಲದ ಜೀವಿ, ಮಂಗಳ ಗ್ರಹದಿಂದ ಬಂದ ಜೀವಿಯಂತೆ ಕಾಣುವ ಪುಟ್ಟ ಮಗುವಿನಾಕಾರದ ದೊಡ್ಡಕಣ್ಣುಗಳುಳ್ಳ ಜೀವಿ ಹೀಗೆ 1000ಕ್ಕೂ ಹೆಚ್ಚು ವಿಸ್ಮಯಗಳು ನಂಬಲು ಸಾಧ್ಯವಾಗದ ವಿಚಾರಗಳು ನಾಸಾ ದ ಸಂಶೋಧನೆಯಲ್ಲಿವೆ. ಈ ಸಂಧರ್ಭದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಪ್ರಳಯದ ಬಗ್ಗೆ ಜಗತ್ತಿನಾಧ್ಯಂತ ಕಲ್ಪಿತ ವಿಚಾರಗಳ ಸಂಗ್ರಹ ಮಾಧ್ಯಮಗಳಲ್ಲಿ, ಸಾಹಿತ್ಯದಲ್ಲಿ ಪ್ರಕಟವಾಗಿತ್ತು. ಪಾಶ್ಚಾತ್ಯ ಕಾದಂಬರಿಕಾರರಲ್ಲಿ ಪ್ರಸಿದ್ದರಾದ ಸರ್ ಟನ್ ಆರ್ಥರ್ ಕಾನನ್ ಡಾಯ್ಲ್ "ದಿ ಲಾಸ್ಟ್ ವರ್ಲ್ಡ್ " ಕೃತಿಯಲ್ಲಿ ಸಾದ್ಯಂತವಾಗಿ ಚಿತ್ರಿಸಿದ್ದರು. ತಾಂತ್ರಿಕ ವಿಚಾರ ಚಿಂತನೆಯಲ್ಲಿ ದೇಶೀಯರಿಗಿಂತ 100ವರ್ಷಗಳಷ್ಟು ಮುಂದಿರುವ ಪಾಶ್ಚಾತ್ಯರು ಸಿನಿಮಾಗಳಲ್ಲಿ ಪ್ರಪಂಚ ನಾಶದ ಬಗ್ಗೆ , ಅನ್ಯಗ್ರಹ ಜೀವಿಗಳ ಬಗ್ಗೆ ಕಪೋಲ ಕಲ್ಪಿತ ಚಿತ್ರಗಳನ್ನು ಬೂಮಂಡಲದಲ್ಲಿ ಸಾವಿರಾರು ವರ್ಷಗಳಷ್ಟು ಹಿಂದೆ ಜೀವಿಸದ್ದವೆನ್ನಲಾದ ಡೈನೋಸಾರಸ್ ಗಳ ಬಗ್ಗೆ ನೈಜ ರೀತಿಯಲ್ಲಿ ಚಿತ್ರಿಸಿದ್ದು, ಪ್ರಪಂಚವಿನಾಶದ ಕಲ್ಪನೆಗೆ ಜೀವ ತುಂಬಿತು.
ಇದನ್ನೆ ಬಂಡವಾಳ ಮಾಡಿಕೊಂಡ ಜ್ಯೋತಿಷಿಗಳು,ಪಾದ್ರಿಗಳು, ಧಾರ್ಮಿಕ ಸಂಸ್ಥೆಗಳು ಅದಕ್ಕೆ ಇನ್ನಷ್ಟು ಕಟ್ಟುಕಥೆಗಳನ್ನು ತುಂಬಿ ತಮ್ಮ ಧರ್ಮ ಪ್ರಚಾರಕ್ಕನುಗುಣವಾಗಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಹಣಗಳಿಸುವ ವಿಚಾರ ಮಾಡಿಕೊಂಡು ಜಾಗತಿಕ ಪ್ರಳಯವನ್ನು ಕಣ್ಣಂಚಿಗೆ ತಂದು ನಿಲ್ಲಿಸಿದೆ. ಇದು ಧಾರ್ಮಿಕ ನಂಬಿಕೆ ಇರಿಸಿಕೊಂಡ ಮಿಲಿಯನ್ ನಷ್ಟು ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಷ್ಟೋ ಮಂದಿ ತಮ್ಮ ಬದುಕಿನ ಆಧಾರವಾದ ಉದ್ದಿಮೆಯನ್ನು ಒಳ್ಳೊಳ್ಳೆ ನೌಕರಿಗಳನ್ನು ತ್ಯಜಿಸಿ ಆಧ್ಯಾತ್ಮಿಕ ಬದುಕಿಗೆ ಶರಣು ಹೋಗುತ್ತಿದ್ದಾರೆ. ಕ್ರೈಸ್ತರ ಮಾಯನ್ ಕನ್ನಡಿ ಕ್ಯಾಲೆಂಡರ್ ಇಂತಹದ್ದಕ್ಕೆ ಪುಷ್ಟಿ ನೀಡಿದೆ. ಈಗ ಭಾರತದಲ್ಲೂ ಇಂತಹ ಅಲೆ ಬಂದಿದೆ. ಹೇಳಿಕೇಳಿ ಭಾರತ ಅಪ್ಪಟ ದೈವಿಕ ಸಂಸ್ಕ್ರತಿ, ಮತ್ತು ನಂಬಿಕೆಗಳ ಮೇಲೆ ಆಧಾರವಾಗಿರುವ ಜನರನ್ನು ಹೊಂದಿರುವ ದೇಶ. ಇಂತಹ ನಂಬಿಕೆಗಳನ್ನು ಬಂಡವಾಳ ಮಾಡುವ ನಿಟ್ಟಿನಲ್ಲಿ ಮಾಂತ್ರಿಕರು, ಜ್ಯೋತಿಷಿಗಳು ಪ್ರಪಂಚದ ವಿವಿದೆಡೆ ಸಂಭವಿಸುತ್ತಿರುವ ಅವಘಡಗಳನ್ನು ತಮ್ಮ ಆಧಾರವಾಗಿ ತೋರಿಸಿಕೊಂಡು ನಮ್ಮ ಜನರನ್ನು ಇನ್ನಷ್ಟು ಆತಂಕಗಳಿಗೆ ತಳ್ಳುತ್ತಿದ್ದಾರೆ. ಏಸು ಹುಟ್ಟಿಬರುತ್ತಾನೆ, ಕಲ್ಕಿಯ ಜನ್ಮವಾಗುತ್ತದೆ, ಪೈಗಂಬರ್ ಅವತಾರ ತಾಳುತ್ತಾನೆ ಎಂಬೆಲ್ಲ ಬೊಗಳೆಗಳು ಪ್ರಳಯದ ತೀಕ್ಷಣತೆಯ ಅರಿವು ಮುಡಿಸುವುದರೊಂದಿಗೆ ಜನರ ನಂಬಿಕೆಯನ್ನು ತಮ್ಮ ಹಿಡಿತಕ್ಕೆ ತಂದು ಕೊಳ್ಳುತ್ತಿವೆ. ಆ ಮೂಲಕ ಧರ್ಮ ಪ್ರಚಾರ, ಇಲ್ಲವೇ ತಮ್ಮ ಬಂಡವಾಳಶಾಹಿ ಮನೋಧರ್ಮವನ್ನು ಜನರಿಗೆ ತಿಳಿಯದಂತೆ ಬಿತ್ತಲಾಗುತ್ತಿದೆ.ಧಾರ್ಮಿಕ ಕೇಂದ್ರಗಳು ಈ ನೆಪದಲ್ಲಿ ಜನರ ಆಕರ್ಷಣೆಯ ಕೇಂದ್ರಗಳಾಗಿ ಮಾಡಿಕೊಳ್ಳಲು ಮುಂದಾಗಿವೆ. ಜನರ ಹಪಾಹಪಿತನ, ಭ್ರಷ್ಠಾಚಾರ, ಕೊಲೆ, ಸುಲಿಗೆ ವಂಚನೆ, ಮೋಸ ಇವುಗಳಲ್ಲಿ ಏನಾದರೂ ಪ್ರಳಯದ ಕಾರಣಕ್ಕಾಗಿ ಬದಲಾದೀತೆ ಎಂದು ನೋಡುವುದಾದರೂ ನಮ್ಮ ಜನರ ಮನಸ್ಥಿತಿ ಆ ರೀತಿ ಇಲ್ಲ. ಬದುಕಿದಷ್ಟು ದಿನ ಸಿಕ್ಕಷ್ಟು ದೋಚಿಕೊಂಡು ಸಮೃದ್ದವಾಗಿ ನಾನು ಬದುಕಬೇಕು ಅಂದು ಕೊಳ್ಳುವವರದ್ದೇ ಹೆಚ್ಚಿನ ಸಂಖ್ಯೆ. ಪ್ರಳಯ ಹತ್ತಿರದಲ್ಲಿದೆ ಎಂದರೆ ಪ್ರಪಂಚದ ಎಲ್ಲ ಸುಖಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿ ಇದೆ. ಈ ನಡುವೆ ಆದ್ಯಾತ್ಮಿಕ ಚಿಂತನೆಯೆಡೆಗೆ ಸಾಗುವವರು ಈಗಾಗಲೇ ಎಲ್ಲವನ್ನು ಮಾಡಿ ಮುಗಿಸಿದ ಮಂದಿ.
ಹಾಗಾದರೆ ಪ್ರಳಯವಾಗೋದು ಸುಳ್ಳ? ಅದಕ್ಕೆ ವೈಜ್ಞಾನಿಕ ಕಾರಣಗಳಿವೆಯಲ್ಲ ಎನ್ನಬಹುದು. ಪ್ರಳಯವಾಗೋದು ನಿಜ ಮಾದ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ ಪ್ರಳಯದ ವರ್ಷ ಮತ್ತು ದಿನಾಂಕಗಳೆಲ್ಲ ಶುದ್ದಾಂಗ ಸುಳ್ಳು. ಏಕೆ ಅಂತೀರಾ ಸೌರವ್ಯೂಹದ ಬಗ್ಗೆ ಇನ್ನು ಸಂಶೋಧನೆಗಳು ನಡೆಯುತ್ತಿವೆ ಅವು ಭೂಮಿ ಗುರುತ್ವಾಕರ್ಷಣೆ ಕಳೆದು ಕೊಳ್ಳುವ ಬಗ್ಗೆ ತನ್ನ ಕಕ್ಷೆಯನ್ನು ಬದಲಿಸುವ ಬಗ್ಗೆ ಎಲ್ಲಿಯೂ ನಿಖರವಾಗಿ ತಿಳಿಸಿಲ್ಲ. ಆದರೆ ಒಂದಂತೂ ನಿಜ ನಾವು ಪ್ರಳಯಕ್ಕೆ ಹತ್ತಿರವಾಗುತ್ತಿದ್ದೇವೆ, ಅದು ಹೇಗೆ???ಅಮೇರಿಕದಲ್ಲಿ ಹರಿಕೇನ್ ನಂತಹ ಚಂಡಮಾರುತ, ಜಗತ್ತಿನೆಲ್ಲೆಡೆ ಸುನಾಮಿಯಂತಹ ಭಯಾನಕ ಸಮುದ್ರ ಅಲೆಗಳು, ಆಮ್ಲ ಮಳೆಗಳು, ಜ್ವಾಲಾಮುಖಿಗಳು, ಭೂಕಂಪನಗಳು, ಉಲ್ಕಾಪಾತಗಳು, ಮಹಾ ಯುದ್ದಗಳು, ಕಂಡೂ ಕೇಳರಿಯದ ಮಹಾಮಾರಿ ಕಾಯಿಲೆಗಳು, ಪ್ರಪಂಚದ ಜಾಗತಿಕ ತಾಪಮಾನ ಏರಿಕೆ, ನೀರಿನ ಪ್ರಮಾಣದ ಏರಿಕೆ, ಮಳೆಕಾಡುಗಳ ನಾಶ, ಪರಿಸರ ಅಸಮತೋಲನ, ಓಜೋನ್ ಪದರದ ನಾಶ ಇವು ಮಾತ್ರ ಜಗತ್ತಿನ ನಾಶದ ಸ್ಪಷ್ಟ ಚಿತ್ರಣಗಳು. ಜಗತ್ತಿನಲ್ಲಿ ಬೆಳೆಯುತ್ತಿರುವ ಅತಿಯಾದ ಔದ್ಯೋಗಿಕರಣ,ಅಣೆಕಟ್ಟುಗಳು, ರಾಸಾಯನಿಕ ಉದ್ದಿಮೆಗಳು, ಅಣು ಸ್ಥಾವರಗಳು ನಮ್ಮ ಬದುಕಿನ ವಿನಾಶದ ಕ್ಷಣಗಳನ್ನು ಕಣ್ಣ ಮುಂದೆಯೇ ತಂದು ನಿಲ್ಲಿಸಿವೆ. ಇದು ಕಣ್ಣೆದುರಿನ ಸತ್ಯ. ಈ ಸತ್ಯಕ್ಕೆ ಉತ್ತರವೂ ಇಲ್ಲಿಯೇ ಇದೆ, ನಮ್ಮ ಜನ ವಿಚಾರ ಜಾಗೃತಿ ಬೆಳೆಸಿಕೊಳ್ಳಬೇಕು, ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು, ಜಾಗತಿಕ ನಾಶಕ್ಕೆ ಕಾರಣವಾಗುವಂತಹ ಕ್ರಿಯೆಗಳ ನಿಯಂಯತ್ರಣ ಮನುಷ್ಯನಿಂದಲೇ ಸಾಧ್ಯ ಅದಕ್ಕಾಗಿ ಸಂಘಟಿತ ಪ್ರಯತ್ನವಾಗಬೇಕು, ಹೀಗಾದಾಗ ಯಾವ ಪ್ರಳಯವೂ ನಮ್ಮ ಮುಂದೆ ಸುಳಿಯಲಾರದಲ್ಲವೇ? ದಿನಬೆಳಗಾದರೆ ಟಿವಿ ಗಳಲ್ಲಿ ಪತ್ರಿಕೆಗಳಲ್ಲಿ ಒಂದಿಲ್ಲೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೋತಿಷಿಗಳು ತಮ್ಮ ಪ್ರವರಗಳನ್ನು ಮುಂದಿಡುತ್ತಿದ್ದಾರೆ. ಸದರಿ ವಿಚಾರದ ಕಾರ್ಯಕ್ರಮಗಳ ಟಿ ಆರ್ ಪಿ ಏರುತ್ತಿದೆ. ಮುಲ್ಟಿನ್ಯಾಷನಲ್ ಕಂಪನೆಗಳು ಆ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಜಾಹೀರಾತುಗಳನ್ನು ಹಾಕುತ್ತಿವೆ, ಕೆಲಸಕ್ಕೆ ಬಾರದ ತಮ್ಮ ಉತ್ಪನ್ನಗಳನ್ನು ನಮ್ಮ ಮನೆಯಂಗಳಕ್ಕೆ ತಂದು ಹಾಕುತ್ತಿವೆ. ಆ ಮೂಲಕ ನಮ್ಮ ನಂಬಿಕೆಯ ಅಸ್ತಿತ್ವಕ್ಕೆ , ಧಾರ್ಮಿಕ ಭಾವನೆಗೆ, ಸಂಸ್ಕ್ರತಿಗೆ ಕೊಡಲಿ ಏಟು ನೀಡುತ್ತಿವೆ, ಒನ್ಸ್ ಎಗೈನ್ ಇದು ಜಾಗತೀಕರಣದ ಮತ್ತೊಂದು ಕೊಡುಗೆ!
ಹೀಗಿರುವಾಗ ಯಾವನೋ ಪಾದ್ರಿ, ಸೈತಾನ,ಮೌಲ್ವಿ,ಸ್ವಾಮೀಜಿ, ಜ್ಯೋತಿಷಿ ನಮ್ಮ ನಂಬಿಕೆಗಳ ಮೇಲೆ ಸವಾರಿ ಮಾಡಲು ಬಿಡಬೇಕೆ? ಆ ಮೂಲಕ ವಸಾಹತು ಶಾಹಿ ವಿಜೃಂಬಿಸಲು ಅವಕಾಶ ಮಾಡಬೇಕೆ? ಹೋಗಲಿ ಪ್ರಳಯದಿಂದ ತಪ್ಪಿಸಿಕೊಳ್ಳಲು ಅವರು ಸೂಚಿಸುವ ಮಾರ್ಗವೇನು? ಯಾರೋ ಧಾರ್ಮಿಕ ಪುರುಷನೊಬ್ಬ ಅವತರಿಸುತ್ತಾನಂತೆ, ಹಾಗಾಗಿ ಅವರು ಹೇಳಿದಂತೆ ನಾವು ಮತಾಂತರವಾಗಬೇಕಂತೆ,ಅವನಿಂದ ಹೊಸ ಜಗತ್ತು ಸೃಷ್ಟಿಯಾಗುತ್ತಂತೆ ಕೆಟ್ಟವರು ನರಕಕ್ಕೆ ಹೋಗುತ್ತಾರಂತೆ ಇಂತವೆಲ್ಲ ಚಂದಮಾಮ ಕಥೆಗಳಿಗೆ ಫುಲ್ ಸ್ಟಾಪ್ ಇಡಿ ಸ್ವಾಮಿ,ವಾಸ್ತವ ನೆಲೆಗಟ್ಟಿನಲ್ಲಿ ವಿಚಾರ ಮಾಡಿ, ಈ ಬಗ್ಗೆ ಈ ನಿಟ್ಟಿನಲ್ಲಿ ಆರೋಗ್ಯಕರ ಚರ್ಚೆಗಳಾಗಲೀ ಮತ್ತು ಕಾರ್ಯರೂಪಕ್ಕೂ ಬರುವುದು ಉಚಿತವಲ್ಲವೇ ನೀವೇ ಹೇಳಿ????

Wednesday, October 14, 2009

ಕ್ಯಾಂಪಸ್ ನತ್ತ ಭಟ್ಟರ "ಮನಸಾರೆ" ಸವಾರಿ







ಮನಸಾರೆ ತಂಡ ಚಿತ್ರದ ಪ್ರಮೋಷನ್ ಗಾಗಿ ಊರೂರು ಸುತ್ತುತ್ತಿದೆ. "ಮನಸಾರೆ" ಚಿತ್ರದ ಕಥಾವಸ್ತು ಉತ್ತರ ಕರ್ನಾಟಕದ ಪರಿಸರದಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಾವ್ಯ. ಬದುಕಿನ ನೈಜ ಸತ್ಯಗಳನ್ನು ಫಿಲ್ಟರ್ ಇಲ್ಲದಂತೆ ಹೊರಹಾಕುವ ಸಂಭಾಷಣೆ. ಕಣ್ಣಿಗೆ ತಂಪೆನಿಸುವ ಸುಂದರ ಛಾಯಾಗ್ರಹಣ, ಉತ್ತಮ ಸಂಕಲನ, ದಿಗಂತ್ ಹಾಗೂ ಅಂದ್ರಿತಾ ರೇ ಯವರ ಅತ್ಯುತ್ತಮವೆನಿಸುವ ಅಭಿನಯವಿರುವ ಮನಸಾರೆ ಒಂದು ಉತ್ತಮ ಅಭಿರುಚಿಯ ಚಿತ್ರ. ಈ ಚಿತ್ರ ಬಿಡುಗಡೆಯಾದ ಸಂಧರ್ಭದಲ್ಲಿಯೇ ಉತ್ತರ ಕರ್ನಾಟಕದ ೧೨ ಜಿಲ್ಲೆಗಳು ನೆರೆಗೆ ಸಿಲುಕಿ ನಲುಗಿದೆ. ಅದರೂ ಚಿತ್ರದ ಓಟಕ್ಕೇನೂ ಅಡ್ಡಿಯಾಗಿಲ್ಲ ಎನ್ನುತ್ತಾರೆ ಭಟ್ಟರು, ಅಲ್ಲಿನ ಜನ ನೆರೆಯಲ್ಲೂ ಚಿತ್ರ ನೋಡಿ ಸಂತಸ ಪಡುತ್ತಿದ್ದಾರಂತೆ. ಮನಸಾರೆ ರಾಜ್ಯಾಧ್ಯಂತ 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಸದ್ದಿಲ್ಲದೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ಳುತ್ತಿದೆ ಇದನ್ನು ಇನ್ನೂ ಉತ್ತೇಜಿಸಲು ಚಿತ್ರದ ನಿರ್ದೇಶಕ ಯೋಗರಾಜಭಟ್, ನಾಯಕ ದಿಗಂತ್ ಮತ್ತು ನಾಯಕಿ ಐಂದ್ರಿತಾ ರೇ ಮತ್ತು ಇತರ ನಟರೊಂದಿಗೆ ರಾಜ್ಯಾಧ್ಯಂತ ಪ್ರವಾಸ ಕೈಗೊಂಡಿದ್ದಾರೆ. ಯುವ ಸಮೂಹವನ್ನು ಚಿತ್ರದೆಡೆಗೆ ಆಕರ್ಷಿಸುವುದು ಮನಸಾರೆ ಯ ಮುಖ್ಯ ಅಜೆಂಡಾ ಅಂತೆ. ಯಾಕ್ರಿ ಭಟ್ರೆ ಕ್ಯಾಂಪಸ್ ಕಡೆಗೆ ಹೊರಟ್ರೀ ? ಅಂತಾ ಪ್ರಶ್ನಿಸಿದರೆ, ಇದು ಯುವ ಸಮೂಹದ ಚಿತ್ರ ಇಲ್ಲಿ ಸಂದೇಶ ವಿದೆ ವಿಚಾರವಿದೆ ಅದು ಅವರನ್ನು ತಲುಪಬೇಕು ಹಾಗಾಗಿ ಇವೆಲ್ಲಾ ಎಂದು ಮುಗುಳ್ನಕ್ಕರು ಭಟ್ಟರು.
ಮೊದಲ ಹಂತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಮನಸಾರೆ ತಂಡ ಮೊನ್ನೆ ಹಾಸನಕ್ಕೆ ಬಂದಿತ್ತು. ಬಂದವರೇ ಸೀದಾ ಹೆಣ್ಣುಮಕ್ಕಳ ಎವಿಕೆ ಕಾಲೇಜಿಗೆ ಭೇಟಿ ನೀಡಿತು. ಮನಸಾರೆಯ ಉತ್ಸಾಹ ಕಂಡು ಹಿಗ್ಗಿ ಹೀರೇಕಾಯಿ ಆದ ಭಟ್ಟರು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಪ್ರದರ್ಶನವನ್ನು ಒಮ್ಮೆ ಮಾತ್ರ ಉಚಿತವಾಗಿ ತೋರಿಸಲಾಗುವುದು ಎಂದು ಘೋಷಿಸಿದರು. ಹೀಗೆ ತಂಡ ರಾಜ್ಯಾಧ್ಯಂತ ತನ್ನ ಪ್ರವಾಸವನ್ನು ಮುಂದುವರೆಸಿದೆ. ಈ ಸಂಧರ್ಭದಲ್ಲಿ ಅವರನ್ನು ಮಾತಿಗೆಳೆದಾಗ ಭಟ್ಟರು ತಮ್ಮ ಅನುಭವಗಳನ್ನು ಹಂಚಿಕೊಂಡರು.
  • ಮನಸಾರೆ ಪ್ರದರ್ಶನ ರಾಜ್ಯಾಧ್ಯಂತ ಹೇಗಿದೆ?

-ಅದ್ಭುತವಾಗಿದೆ... ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಉತ್ತರಕರ್ನಾಟಕದ ಜನ ನೆರೆಯಲ್ಲೂ ಚಿತ್ರ ನೋಡ್ತೀದಾರೆ ಇದು ಅಚ್ಚರಿಯ ಸಂಗತಿ. ಮಳೆ ಬಂದಾಗ ಸ್ವಲ್ಪ ಕಡಿಮೆಯಾಗಿತ್ತಾದರೂ ನಂತರದ ಫಲಿತಾಂಶ ನನ್ನ ನಿರೀಕ್ಷೆ ಮೀರಿದ್ದು.

  • ಕಾಲೇಜು ಕ್ಯಾಂಪಸ್ ಕಡೆ ಮೊದಲ ಸಲ ಹೋಗ್ತದೀರಿ, ಪ್ರತಿಕ್ರಿಯೆ ಹೇಗಿದೆ?

- ಕ್ಯಾಂಪಸ್ ಕಡೆ ಹೋಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಂದಾಗ ನಾನು, ಗಣೇಶ
ಇಬ್ರೂ ಹೋಗಿದ್ವಿ, ನಂತರದಲ್ಲಿ ನಾನೊಬ್ಬನೇ ತಾಲ್ಲೂಕು ಕೇಂದ್ರಗಳಿಗೂ ಹೋಗಿದ್ದೇನೆ. ಅವಾಗಿನ ಕ್ರೌಡು ಬೇರೆ, ಈಗಿನದ್ದೇ ಬೇರೆ. ಯುವ ಸಮೂಹದ ಪ್ರತಿಕ್ರಿಯೆ ಸಖತ್ತಾಗಿದೆ. ಯೂತ್ಸ್ ಇಷ್ಟೊಂದು ರೆಸ್ಪಾನ್ಸ್ ಮಾಡ್ತಾರೆ ಅಂದಕೊಂಡಿರಲಿಲ್ಲ. ಹೊದಕಡೆಯೆಲ್ಲ ಹುಡುಗೀರು ದಿಗಂತ ನನ್ನು ಮುತ್ತಿಗೆ ಹಾಕಿದ್ರೆ ಐಂದ್ರಿತಾ ರನ್ನು ಹುಡುಗರು ಮುತ್ತಿಕೊಳ್ತಾರೆ , ಅವರ ಅಭಿನಯವನ್ನು ಮತ್ತು ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ.ಮನಸಾರೆ ಗೆ ಹುಡುಗ-ಹುಡುಗಿಯರ ದೊಡ್ಡ ಆಶೀರ್ವಾದವಿದೆ.

  • ಮಾಸ್ ಪ್ರತಿಕ್ರಿಯೆ ಹೇಗಿದೆ?

-ನೋಡಿ ನನ್ನ ಪ್ರಕಾರ ಮಾಸ್ ಅಂತೇನಿಲ್ಲ, ಅದು ಅವತ್ತಿಗೂ ಇಲ್ಲ, ಇವತ್ತಿಗೂ ಇಲ್ಲ. ನನ್ನ ಕನ್ನಡದ ಜನರು ಮತ್ತು ಇತರರು ಅವರ ಪ್ರತಿಕ್ರಿಯೆ ಚೆನ್ನಾಗಿದೆ ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನಮ್ಮ ಜನ ನೋಡ್ತೀದಾರೆ ಅನ್ನೊದೆ ಒಂದು ಖುಷಿ. ಇದನ್ನೆಲ್ಲ ನೋಡ್ತಾ ನಾವು ಮಜಾ ತಗೋತೀದೀವಿ.

  • ಎಲ್ಲೆಲ್ಲಿ ಭೇಟಿ ನೀಡಿದ್ದೀರಿ? ಕಲೆಕ್ಷನ್ ಹೇಗಿದೆ ?

ಈ ಗಾಗಲೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೇವೆ ಇನ್ನೂ ಪ್ರವಾಸ ಮಾಡಬೇಕಿದೆ. ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ತಿದೆ. ನನ್ನ ಹಿಂದಿನ ಚಿತ್ರಗಳು ಸಹಾ ಹಾಗೆಯೇ ನಿಧಾನವಾಗಿ ಮೇಲೆ ಬಂದವು. ಆದರೆ ಮನಸಾರೆ ಸ್ಪೀಡ್ ಜಾಸ್ತಿಯಾಗಿದೆ. ಒಳ್ಲೇ ಪವರ್ ಫುಲ್ ನಿರ್ಮಾಪಕರು ಇದ್ದಾರೆ ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಚಿತ್ರ 50ದಿನ, 100ದಿನ ಓಡುವ ಸಂಧರ್ಭಕ್ಕೆ ನಿರ್ಮಾಪಕರು ಬಿಡುವು ಮಾಡಿಕೊಂಡು ಜೊತೆಯಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲು ಕಲೆಕ್ಷನ್ ಚೆನ್ನಾಗಿದೆ.

  • ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆ ಏನು?

-ಇನಿಷಿಯಲ್ ಗೆ ಇಷ್ಟೊಂದು ಯಶಸ್ಸು ಆಗುತ್ತೇ ಅಂತಾ ಖಂಡಿತಾ ಗೊತ್ತಿರಲಿಲ್ಲ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಜನರ ಹಾರೈಕೆ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಮಾತು ಮುಗಿಸಿದರು ಭಟ್ಟರು.



Thursday, October 8, 2009

ಮಳೆ ನಿಂತು ಹೋದ ಮೇಲೆ.... ಬದುಕು ಬಾಡಿ ಹೋಗಿದೆ.

ಕಳೆದ ವಾರ ಉತ್ತರಕನ್ನಡದ 11ಜಿಲ್ಲೆಗಳಲ್ಲಿ ಸತತವಾಗಿ ಸುರಿದ ಮಳೆ ಅಲ್ಲಿನ ಜನರ ಬದುಕುಗಳನ್ನೆ ಒರೆಸಿ ಹಾಕಿದೆ! ಬಹುಶ: ಆ ಭಾಗದ ಮಂದಿ ಯಾವತ್ತಿಗೂ ನಿರೀಕ್ಷಿಸಿರದ ಮಳೆ ಅನಿರೀಕ್ಷಿತವಾಗಿ ಬಂದೆರಗಿ ಜನರನ್ನು ಬೀದಿ ಪಾಲು ಮಾಡಿದೆ. 1992ರಲ್ಲಿ ಈ ಭಾಗದಲ್ಲಿ ಇದೇ ರೀತಿಯ ಮಳೆ ಸುರಿದಿತ್ತಾದರು ಇಷ್ಟೊಂದು ಪ್ರಮಾಣದ ಅನಾಹುತ ಸಂಭವಿಸಿರಲಿಲ್ಲ. ರಾಜ್ಯದಲ್ಲಿ ಸೂಕ್ತ ರೀತಿಯ ನೀರಾವರಿ ಯೋಜನೆಗಳನ್ನು ಜಾರಿಗೊಳಿಸದಿರುವುದು (ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ) ಮತ್ತು ನಿರಾವರಿ ಇಲಾಖೆಯ ಇಂಜಿನಿಯರುಗಳ ಮೇಲೆ ಸರ್ಕಾರ ಸಮರ್ಥ ಹಿಡಿತ ಹೊಂದದಿರುವುದು ಇವತ್ತಿನ ಅವಘಡಗಳಿಗೆ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ.
ಬರದ ಜಿಲ್ಲೆಗಳಿಗೆ ಸುಧಾರಣೆ ಹಾಗೂ ಅಭಿವೃದ್ದಿಗೆ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ(ಅದು ಎಷ್ಟರ ಮಟ್ಟಿಗೆ ಜನರಿಗೆ ತಲುಪುತ್ತಿದೆ ಎಂಬುದು ಬೇರೆ ಮಾತು!) ಆದರೆ ಅಭಿವೃದ್ದಿ ಶೂನ್ಯ. ಈ ನಡುವೆ ಪ್ರಳಯ ಸ್ವರೂಪಿಯಾಗಿ ಕಾಡಿದ ವರುಣ ದೇವನ ಮುನಿಸಿನಿಂದ ಜನರ ಮನೆ,ಮಠ,ಆಸ್ತಿ-ಪಾಸ್ತಿ,ಜನ-ಜಾನುವಾರು, ರಸ್ತೆ-ಸೇತುವೆ, ಕೃಷಿ ಭೂಮಿ ಎಲ್ಲವೂ ನಾಶವಾಗಿದೆ. ೪-೫ ದಿನಗಳ ಕಾಲ ಸುರಿದ ಮಳೆಗೆ 200ಕ್ಕೂ ಹೆಚ್ಚುಮಂದಿ ಜೀವ ಕಳೆದುಕೊಂಡಿದ್ದರೆ, 2ಲಕ್ಷ ಮನೆಗಳು ನಾಶವಾಗಿವೆ. ಇನ್ನೂ ಒಂದು ಲಕ್ಷದಷ್ಟು ಮನೆಗಳು ಆಗಲೋ ಈಗಲೋ ಎಂಬ ಸ್ಥಿತಿಯಲ್ಲಿವೆ. 30ಲಕ್ಷ ಕೃಷಿ ಸಾಗುವಳಿ ಭೂಮಿ-ಬೆಳೆ ಸಂಪೂರ್ಣ ಹಾಳಾಗಿದೆ. ವಿದ್ಯುತ್ ವ್ಯವಸ್ಥೆ ಹದಗೆಟ್ಟಿದೆ. ಒಟ್ಟಾರೆ 17000ಕೋಟಿಯಷ್ಟು ನಷ್ಟ ಸಂಭವಿಸಿದೆ, 18ಮಿಲಿಯನ್ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ.
ಮಳೆಯಿಂದ ನೆರೆ ಬಂದು 2ದಿನದ ನಂತರ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ ಮಠದಿಂದ ಆಚೆಗೆ ಬಂದಿದೆ.ಪರಿವಾರ ಸಮೇತ ಮಠದಲ್ಲಿ ಬಿಡಾರ ಹೂಡಿ ಗುಜರಾತ್ ರಾಜ್ಯದ ಮೋದಿಯಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ ಶಾಸಕರು-ಮಂತ್ರಿ ಮಹೋದಯರು ನಿದ್ರೆಯಿಂದ ಎಚ್ಚೆತ್ತವರಂತೆ ಆಚೆ ಬಂದರಾದರೂ ಅವರು ನಡೆದು ಕೊಳ್ಳುತ್ತಿರುವ ರೀತಿಯಾದರೂ ಎಂತಹುದು? ಮುಖ್ಯಮಂತ್ರಿ ಯಡಿಯೂರಪ್ಪ ತರಾತುರಿಯಲ್ಲಿ ಸಭೆ ನಡೆಸಿ ನೆರೆ ಸಂತ್ರಸ್ತರಿಗೆ 200ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ಒಂದು ಸುತ್ತು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈಗ ನಿಧಿ ಸಂಗ್ರಹಕ್ಕೆ ಬೀದಿಗಿಳಿದಿದ್ದಾರೆ, ಅದಕ್ಕೂ ಮುನ್ನ ನೆರೆಹೊರೆಯ ರಾಜ್ಯಗಳಿಗೆ ಸಹಾಯಕೋರಿ ಪತ್ರ ಬರೆದಿದ್ದಾರೆ. ಅತ್ತ ಅಧಿಕಾರಿಗಳನ್ನು ಮಾನಿಟರ್ ಮಾಡುವ , ತತ್ ಕ್ಷಣದ ಪರಿಹಾರವನ್ನು ಸಮರೋಪಾದಿಯಲ್ಲಿ ಮಾಡಿಸುವವರು, ಇಲ್ಲದಂತಾಗಿದ್ದಾರೆ...! ಇದು ಸಧ್ಯದ ಸ್ಥಿತಿ.
4-5 ದಿನಗಳ ಹಿಂದೆಯಷ್ಟೇ ಗುಲ್ಬರ್ಗಾ ದಲ್ಲಿರುವ ನನ್ನ ಹಿರಿಯ ಅಧಿಕಾರಿ ಮಿತ್ರೊಬ್ಬರು ದೂರವಾಣಿಯಲ್ಲಿ ಮಾತಿಗೆ ಸಿಕ್ಕಿದ್ದರು. ವಿಪರೀತವಾದ ಮಳೆಯಿಂದ ನೆರೆ ಬಂದಿದ್ದರಿಂದ ತುರ್ತು ಕಾರ್ಯಾಚರಣೆ ನಡೆಸಲು ಉನ್ನತಾಧಿಕಾರಿಗಳಿಗೆ ಸ್ವಯಂ ಅಧಿಕಾರವಿದ್ದರೂ ಅವರನ್ನು ಮಾನಿಟರ್ ಮಾಡುವ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ರಕ್ಷಣಾ ಪಡೆ ಕರೆಸುವಲ್ಲಿ, ಲೈಫ್ ಬೋಟ್ ತರಿಸುವಲ್ಲಿ ವಿಳಂಬವಾಯ್ತಂತೆ.. ಇದು ಗುಲ್ಬರ್ಗಾ ಜಿಲ್ಲೆಯ ಕಥೆ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳ ಕಥೆಯೂ ಅದೇ ಆಗಿತ್ತಂತೆ. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣವಾದ ನಂತರ ಅವರಿಗೆ ಬಟ್ಟೆ ಬರೆ, ಔಷದ, ಇತರೆ ಪದಾರ್ಥಗಳನ್ನು ಕೊಂಡುಕೊಳ್ಳಲು ಹಣವನ್ನು ನೇರವಾಗಿ ವಿತರಿಸುವ ಬದಲಿಗೆ ಚೆಕ್ ವಿತರಿಸಲು ಹೇಳಲಾಯ್ತಂತೆ... ಹೀಗಾದಾಗ ಯಾವ ಸಂತ್ರಸ್ತ ಬ್ಯಾಂಕಿಗೆ ಹೋಗಿ ಖಾತೆ ತೆರೆದು ನಗದು ಮಾಡಿಸಿಕೊಳ್ಳಲು ಸಾಧ್ಯ ಅಲ್ಲಿಯವರೆಗೂ ಅವನ ಸಹನೆ ಇರುವುದೇ? ಎಂದು ಅಳಲು ತೋಡಿಕೊಂಡರು ನನ್ನ ಅಧಿಕಾರಿ ಮಿತ್ರರು.
ಇನ್ನು ವಿರೋಧ ಪಕ್ಷಗಳು ರಾಜ್ಯದಲ್ಲಿ ಸಂಕಷ್ಟ ಸ್ಥಿತಿ ಇರುವಾಗ ಆಡಳಿತದೊಂದಿಗೆ ಒಗ್ಗೂಡಿ ಸಹಾಯಕ್ಕೆ ಧಾವಿಸುವ ಬದಲಿಗೆ ಬಿಜೆಪಿಗಳನ್ನು ತೀಕ್ಷ್ಣ ಮಾತುಗಳಿಂದ ಟೀಕಿಸುತ್ತಾ "ನೆರೆ"ಯಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ದೇಶಪಾಂಡೆ ಇವರೆಲ್ಲ ಹೊಣೆಗೇಡಿತನದಿಂದ ವರ್ತಿಸುತ್ತಿದ್ದಾರೆ. ಆಡಳಿತ ಸರ್ಕಾರ ೀ ಸಂಧರ್ಭದಲ್ಲಿ ಏನೇ ತಪ್ಪು ಮಾಡಿರಲಿ ಅದನ್ನು ಚರ್ಚಿಸಲು ಇದು ಸಕಾಲವಲ್ಲ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡಿ ಏನು ಮಾಡಬಹುದು. ಸಂತ್ರಸ್ತರ ಬದುಕುಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಯೋಚಿಸಿ ಕಾರ್ಯೋನ್ಮುಖವಾಗಬೇಕಿದೆ. ಯಡಿಯೂರಪ್ಪನ ಸರ್ಕಾರ ಅನುಭವಿಗಳಿಲ್ಲದ , ಅನುಭವವಿಲ್ಲದ ಸರ್ಕಾರ. ಅದಾಗ್ಯೂ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರಕ್ಕೆ 10000ಕೋಟಿ ರೂಪಾಯಿಗಳ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲಿ 17ಸಾವಿರ ಕೋಟಿಯಷ್ಟು ಹಾನಿಯಾಗಿದೆ . ಇಂತಹ ಸನ್ನಿವೇಶದಲ್ಲಿ ಪಕ್ಕದ ತಮಿಳುನಾಡಿನ ರಾಜಕಾರಣಿಗಳು ನಮ್ಮ ರಾಜ್ಯದ ರಾಜಕಾರಣಿಗಳಿಗೆ ಮಾದರಿಯಾಗ ಬೇಕಾಗಿದೆ..!
ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜೋಳಿಗೆ ಹಿಡಿದು ಬೀದಿಗೆ ಇಳಿದಿರುವ ಯಡಿಯೂರಪ್ಪ ಮತ್ತು ಅವರ ಸರ್ಕಾರದ ಸಚಿವರು ಶಾಸಕರುಗಳು ಬೆಂಗಳೂರೊಂದರಲ್ಲಿ ಕೇವಲ 2ದಿನದಲ್ಲಿ ಸುಮಾರು 700ಕೋಟಿ ರೂಗಳಷ್ಟು ಹಣ ಸಂಗ್ರಹಣೆ ಮಾಡಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಸ್ಪಂದಿಸಿರುವ ಜನರ ಮಾನವೀಯತೆಯನ್ನು ಕಂಡು ಯಡೀಯೂರಪ್ಪ ಉಬ್ಬ ಬೇಕಿಲ್ಲ. ಏಕೆಂದರೆ . ಒಂದು ಜವಾಬ್ದಾರಿಯುತವಾದ ಸರ್ಕಾರದ ಅಧಿಪತಿಯಾಗಿದ್ದು ಜನರಿಂದ ಬಿಕ್ಷೆ ಎತ್ತುವುದಕ್ಕಿಂತ ಆಡಳಿತದಲ್ಲಿ ಬಿಗಿ ಇಟ್ಟುಕೊಂಡು 5ಡಜನ್ ನಷ್ಟಿರುವ ತನ್ನ ಸಚಿವರುಗಳನ್ನು ಒಬ್ಬೊಬ್ಬರಬ್ಬನ್ನು ಒಂದೊಂದು ಜಿಲ್ಲೆಯ ನೆರೆಸಂತ್ರಸ್ತರ ನೆರವಿಗೆ ಉಸ್ತುವಾರಿಗೆ ಕಳುಹಿಸಿದಿದ್ದರೆ ಅದರ ತೂಕವೇ ಬೇರೆ ಇರುತಿತ್ತು. ಮಂತ್ರಾಲಯದಲ್ಲಿ ಸಾವಿರಾರು ಮಂದಿ ಭಕ್ತರು ಸಿಕ್ಕಿ ಜೀವಭಯದಿಂದ ನಡುಗುತ್ತಿದ್ದರೆ. ಮಂತ್ರಾಲಯದ ಸ್ವಾಮೀಜಿಯೊಬ್ಬರನ್ನು ರಕ್ಷಣೆ ಮಾಡಿ ಕೃತಾರ್ಥತೆ ಅನುಭವಿಸಿದರಲ್ಲ? ಇತರೆ ಭಕ್ತಾದಿಗಳ ಜೀವ ಜೀವವಲ್ಲವೇ? ಇದು ಎಂಥ ಸಂದೇಶವನ್ನು ನೀಡಿದಂತಾಯಿತು.? ನೆರೆ ಪೀಡಿತ ಪ್ರದೆಶಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಹುರಿದುಂಬಿಸ ಬೇಕಾದ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ತನ್ನನ್ನು ಸೀಮಿತ ಮಾಡಿಕೊಂಡರೆ ಇವರನ್ನ್ನು ಜನ ಕ್ಷಮಿಸುತ್ತಾರೆಯೇ? ಉತ್ತರಕರ್ನಾಟಕದ ಭೀಮಾ ನದಿ, ಕೃಷ್ಣಾ ನದಿ , ಬ್ಯಾರೇಜುಗಳು, ಎಲ್ಲ ಅಣೆಕಟ್ಟುಗಳಿಂದಲೂ ಇಂಜಿನಿಯರುಗಳು ಯಾವುದೇ ಷೆಡ್ಯೂಲ್ ಇಟ್ಟುಕೊಳ್ಳದೇ ಏಕಾಏಕಿ ಬಾಗಿಲು ತೆರೆದು ನೀರು ಹರಿಯ ಬಿಟ್ಟರೇ ನೆರೆ ಬರದೇ ಇನ್ನೇನಾದೀತು? ಹೆಚ್ಚು ಅಂದರೆ 35 ರಿಂದ 45ಸಾವಿರ ಕ್ಯೂಸೆಕ್ಷ್ ನೀರು ಹೊರ ಬಿಡಬೇಕಾದ ಜಾಗದಲ್ಲಿ ಏಕಾಏಕಿ 5ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಷ್ ನೀರು ಹೊರಗೆ ಹರಿದಿದೆ. ಕಾಲಾನುಕಾಲಕ್ಕೆ ಒಳ ಹರಿವು ಮತ್ತು ಹೊರ ಹರಿವನ್ನು ನಿಭಾಯಿಸದ ನೀರಾವರಿ ಇಲಾಖೆಯ ಇಂಜಿನಿಯರುಗಳು ಇವತ್ತಿನ ದುಸ್ಥಿತಿಗೆ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ. ಇವರ ಮೇಲೇ ಯಾವ ತನಿಖೆಯೂ ಇಲ್ಲ ಕ್ರಮವೂ ಇಲ್ಲ , ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲವೇಕೆ? ಹೆಚ್ಚುವರಿ ನೀರನ್ನು ಹರಿಯ ಬಿಟ್ಟದ್ದರಿಂದ ಇವತ್ತು ಪಕ್ಕದ ಆಂಧ್ರದಲ್ಲಿ ಲೆಕ್ಕಕ್ಕೆ ಸಿಗದಷ್ಟು ನಷ್ಟ ಹಾಗೂ ಸಾವು-ನೋವು ಸಂಭವಿಸಿದೆ, ಇದಕ್ಕೆ ನಮ್ಮ ಇಂಜಿನಿಯರುಗಳ ಕೊಡುಗೆ ಇದೆಯಲ್ಲವೇ?
ಉತ್ತರ ಕರ್ನಾಟಕದ ಶಾಸಕರೊಬ್ಬರು ವೈಯುಕ್ತಿಕವಾಗಿ 10ಕೋಟಿ ರೂಪಾಯಿಗಳನ್ನು ನೀಡಿ ಮಾದರಿಯಾಗಿದ್ದಾರೆ. ಇವತ್ತು ಸರ್ಕಾರದ ಒಬ್ಬೊಬ್ಬ ಸಚಿವನೂ, ಶಾಸಕನೂ ಸಾವಿರಾರು ಕೋಟಿಗೆ ಬೆಲೆ ಬಾಳುತ್ತಾರೆ. ವಿರೋಧ ಪಕ್ಷದ ಮುಖಂಡರು ಇದರಲ್ಲಿ ಕಡಿಮೆ ಏನಿಲ್ಲ. ಇವರಿಗೆ ಪಕ್ಷದ ಟಿಕೆಟ್ ಪಡೆಯಲು ಚುನಾವಣೆಗೆ ಖರ್ಚು ಮಾಡಲು ಶಾಸಕರನ್ನು ಕೊಳ್ಳಲು ಕೋಟ್ಯಾಂತರ ರೂ ಹಣ ವಿದೆ ಆದರೆ ನೆರೆ ಸಂತ್ರಸ್ತರಿಗೆ ಉದಾರವಾಗಿ ಕೊಡಲು ಯಾಕೆ ಮುಂದಾಗುತ್ತಿಲ್ಲ? ಜನರ ಬಳಿ ಯಾಕೆ ಬಿಕ್ಷೆ ಎತ್ತಲು ಬರಬೇಕು ? ಮೊದಲು ರಾಜ್ಯದ ಶಾಸಕರೇ, ಮಂತ್ರಿ ಮಹೋದಯರೇ ನಿಮ್ಮ ಖಜಾನೆ ತೆರೆದಿಡಿ, ಜನಸಾಮಾನ್ಯರನ್ನು ಕೇಳುವ ಅವಶ್ಯಕತೆಯಿಲ್ಲ ಅವರಿಗೂ ಮನುಷ್ಯತ್ವವಿದೆ ಅವರ ಕೆಲಸ ಅವರು ಮಾಡುತ್ತಾರೆ ಮೊದಲು ನಿಮ್ಮ ಮುಖವಾಡ ಕಳಚಿ! ಜನರಿಗೆ ನೆರವಿನ ಹಸ್ತ ಚಾಚಿ. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಕೆಲವು ಜಿಲ್ಲೆಗಳಿಗೆ ಮಲತಾಯಿ ಧೋರಣೆ ತೋರುವಂತೆ ನೆರೆ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪಕ್ಕದ ಆಂಧ್ರಕ್ಕೆ 156.84 ಕೋಟಿ ಹಣ ನೀಡಿದ್ದರೆ ರಾಜ್ಯಕ್ಕೆ ಕೇವಲ 52.26ಕೋಟಿ ಹಣ ನೀಡಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ರಾಜ್ಯದ 4-5ಮಂದಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ದೇವೇಗೌಡ, ಅನಂತಕುಮಾರ್ ರಂತಹ ಘಟಾನುಘಟಿಗಳಿದ್ದಾರೆ ಅದಾಗ್ಯೂ ಅವರು ರಾಜ್ಯಕ್ಕೆ ನೆರವು ತರುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ರೀತಿಯ ನಿರ್ಲಿಪ್ತ ಧೋರಣೆ ಮುಂದುವರೆದರೆ ಜನತೆ ಇವರನ್ನು ಯಾವತ್ತಿಗೂ ಕ್ಷಮಿಸಲಾರರು.

Friday, October 2, 2009

ನಮ್ಮ "ಶಂಕರ"ನ ನೆನಪು.. ರಂಗನಮನ,ಸಿನಿಮಾ ಇತ್ಯಾದಿ



ಫೋಟೋಗಳು ವಿಸ್ಮಯ ಶಿವೂ




ಶಂಕರ್ ನಾಗ್ ಜೀವಿತದ ಅಲ್ಪ ಕಾಲದಲ್ಲಿಯೇ ಊಹೆಗೂ ನಿಲುಕದ ಮಹತ್ಸಾಧನೆಯನ್ನು ಮಾಡಿದ ಸಾಧಕ,ಸಾಹಸಿ ಮತ್ತು ಕ್ರಿಯಾಶೀಲ. ಚಲನ ಚಿತ್ರ, ನಾಟಕ ಮತ್ತಿತರ ವಿಭಾಗಗಳಲ್ಲಿ ತಾನು ಕಂಡ ಕನಸುಗಳನ್ನು ನಿಜವಾಗಿಸುವೆಡೆಗೆ ತುಡಿತವಿರಿಸಿಕೊಂಡಿದ್ದ ಶಂಕರ್ ಒಂದು ಪ್ರಬುದ್ದ ಮನಸ್ಥಿತಿಯ ವ್ಯಕ್ತಿತ್ವ. ತಾನೂ ಎತ್ತರಕ್ಕೆ ಬೆಳೆಯುವ ಜೊತೆಗೆ ತನ್ನೊಂದಿಗೆ ದುಡಿಯುವ ಒಬ್ಬ ಸಾಮಾನ್ಯನನ್ನು ಸಹಾ ಅತ್ಯಂತ ಗೌರವದಿಂದ ಕಾಣುತ್ತಿದ್ದ ಶಂಕರ್ ನಾಗ್ , ಅವರನ್ನು ತನ್ನ ಜೊತೆಗೆ ಬೆಳೆಸುತ್ತಿದ್ದ! ಬಹುಶ: ಶಂಕರ್ ನಾಗ್ ಒಬ್ಬ ಕ್ರಿಯಾಶೀಲ ನಿರ್ದೇಶಕನಾಗಿ ನಟನಾಗಿ ಮಾತ್ರ ನಮ್ಮ ಬಹುತೇಕ ಜನರಿಗೆ ಗೊತ್ತೇ ವಿನಹ ಆತ ಸಮಾಜದ ಅಭಿವೃದ್ದಿಗೆ ಚಿಂತಿಸುತ್ತಿದ್ದುದು, ಮತ್ತು ನಾವು ಈಗ ಕಾಣುತ್ತಿರುವ ಕನಸನ್ನು ಅವರು ಬಹಳ ಹಿಂದೆಯೇ ಸಾಕಾರ ಗೊಳಿಸಲು ಯತ್ನಿಸಿದ್ದರು ಮತ್ತು ಆ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಅವರು ನೀಡಿದ್ದರು ಎಂಬು ಬಹುತೇಕ ಮಂದಿಗೆ ತಿಳಿದಿರಲಾರದು. ಶಂಕರ್ ವಿಧಿವಶರಾಗಿದ್ದು 35ನೇ ವಯಸ್ಸಿನಲ್ಲಿ, ಇಂದಿಗೆ ಅವರು ಗತಿಸಿ 19ವರ್ಷ 10ತಿಂಗಳು 21ದಿನಗಳು ಸಂದಿವೆ.
ವಿಧಿಯೇ ಹಾಗೇ ಒಳ್ಳೆಯವರನ್ನು, ಸಾಧಕರನ್ನು ಇನ್ನೂ ಬದುಕಿರಬೇಕಿತ್ತು ಎಂದು ಕೊಳ್ಳುವಾಗಲೇ ಕರೆದುಕೊಂಡು ಹೋಗಿ ಬಿಡುತ್ತದೆ. ಶಂಕರ್ ಸಹಾ ಹಾಗೇಯೇ 'ಒಂದಾನೊಂದು ಕಾಲದಲ್ಲಿ' ಬಂದು 'ಮಿಂಚಿನ ಓಟ' ಗಾರನಾಗಿ 'ಆಕ್ಸಿಡೆಂಟ್ 'ಮೂಲಕ ಅಂತರ ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿ 'ಸುಂದರ ಕಾಂಡ' ಬರೆದು 'ನಿಗೂಡ ರಹಸ್ಯ' ಲೋಕಕ್ಕೆ ಹೊರಟು ಹೋದರು. ಶಂಕರ್ ನಾಗ್ ಬಗ್ಗೆ ಯಾಕೆ ಇಷ್ಟೆಲ್ಲಾ ಬರೆಯಬೇಕು? ಅವರೇನು ಸಮಾಜ ಸುಧಾರಕರೇ? ಯ:ಕಶ್ಚಿತ್ ಒಬ್ಬ ನಟ ನಿರ್ದೇಶಕ-ನಟ ಅಷ್ಟೇ ಎಂದು ಮೂಗೆಳೆಯುವವರು ಉಂಟು. ಹೌದಲ್ವಾ ಯಾಕೆ ಶಂಕರ್ ನಾಗ್ ನೆನಪಾಗ ಬೇಕು ? ಇಂತಹದ್ದೊಂದು ಪ್ರಶ್ನೆ ಎದುರಾಗಿದ್ದು ಸಮಾನ ಮನಸ್ಕ ಗೆಳೆಯರೆಲ್ಲ ಸೇರಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ "ಶಂಕರನ ನೆನಪು..." ಕಾರ್ಯಕ್ರಮ ಮಾಡಲು ಹೊರಟಾಗ.
ಮೊದಲಿಗೆ ಹೇಳಿ ಬಿಡ್ತೀನಿ ಅಸಲಿಗೆ ನಾವು ಶಂಕರ್ ನಾಗ್ ಅಭಿಮಾನಿ ಸಂಘದವರಲ್ಲ.., ಆದರೆ ಶಂಕರ್ ಅಲ್ಪ ಕಾಲದಲ್ಲಿ ಬಿಟ್ಟು ಹೋದ ತಾನೇ ಸೃಜಿಸಿದ ರಂಗ ಪರಂಪರೆಯನ್ನು,ಹೊಸ ದಿಕ್ಕಿನಲ್ಲಿ ಯೋಚಿಸುವ ಚಿತ್ರಗಳನ್ನಅತ್ಯಂತ ಆಧುನಿಕವಾದ ಅಭಿವೃದ್ದಿ ಚಿಂತನೆಯ ಪ್ರಯತ್ನಗಳನ್ನು ಬಲ್ಲವರು. ಹಾಗಾಗಿಯೇ ಶಂಕರನ ನೆನಪು ಜೊತೆಗೆ ಒಂದು ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸುವ ಪ್ರಯತ್ನವಷ್ಟೇ ಆಗಿತ್ತು. ಇದಕ್ಕೆ ಕಾರಣಗಳು ಇಲ್ಲದಿಲ್ಲ, ನಮ್ಮೂರಿನಲ್ಲಿ ರಾಜಕೀಯ ಹಾಸಿ ಹೋದ್ದು ಮಲಗುವಂತಹ ಸ್ಥಿತಿ ಇದೆ. ಯಾವುದೇ ಕಾರ್ಯಕ್ರಮಕ್ಕೆ ರಾಜಕೀಯ ಥಳುಕು ಹಾಕಿ ಕೊಂಡಿರುತ್ತದೆ. ಇಂತಹ ವಾತಾವರಣದಿಂದ ಹೊರತಾದ ಕಾರ್ಯಕ್ರಮ ಮಾಡುವುದಷ್ಟೇ ಗುರಿಯಾಗಿತ್ತು. ಇರಲಿ ಇಲ್ಲಿ ವಿಷಯ ಅದಲ್ಲ. ಕಳೆದ ಒಂದು ವರ್ಷದ ಹಿಂದೆ ನಮ್ಮ ಪತ್ರಿಕೆಯ ಸಂಪಾದಕರಾದ ಆರ್ ಪಿ ವಿ ಯವರಿಗೆ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ಬಂದಾಗ ಝಿ ಕನ್ನಡದ ಮುಖ್ಯ ಛಾಯಾಗ್ರಾಹಕ ರಾಮ್ ಕಿ ಎಂಬುವವರ ಪರಿಚಯವಾಗಿತ್ತು, ಆತ ಶಂಕರ್ ನಾಗ್ ಶಿಷ್ಯ ರಂತೆ. ಮಂಡ್ಯ ಜಿಲ್ಲೆಯವರಾದ ರಾಮಕ್ರಿಷ್ಣ ಪದವಿ ಮುಗಿಸಿ ನಿರುದ್ಯೋಗಿ ಯಾಗಿದ್ದ ದಿನಗಳಲ್ಲಿ ರಂಗ ತಾಲೀಮು ನೋಡಲು ಹೋಗುತ್ತಿದ್ದರಂತೆ. ಅಂತಹ ದಿನಗಳಲ್ಲಿ ಈತನ ಆಸಕ್ತಿಯನ್ನು ಗುರುತಿಸಿದ ಶಂಕರ್ ನಾಗ್ ಆತನ ಹೆಗಲ ಮೇಲೆ ಕೈ ಇರಿಸಿ "ಬಾ ಗೆಳೆಯ ನಮ್ಮ ತುತ್ತಿನಲ್ಲಿ ನಿನಗೂ ಒಂದು ತುತ್ತಿದೆ" ಎಂದರಲ್ಲದೇ ನಾಟಕದ ಎಲ್ಲ ವಿಭಾಗಗಳಲ್ಲೂ ಆತನನ್ನು ಯಶಸ್ವಿಯಾಗಿ ಬೆಳೆಸಿದರಂತೆ. ಹಾಗೆಯೇ ರಾಮಕ್ರಷ್ಟ , ಶಂಕರ್ ನಾಗ್ ರ ಸಹಚರ್ಯದಿಂದ ಅವರ ಬಾಯಲ್ಲೇ ರಾಮ್ ಕಿ ಯಾದರಂತೆ ಇಷ್ಟು ಹೇಳಿ ಕಣ್ಣೀರಾದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಧೋರಣೆ ಬೆಳೆಸಿಕೊಂಡಿದ್ದ ಶಂಕರ್ ನಾಗ್ ಮರಾಠಿ ರಂಗಭೂಮಿಯ ಮೂಲಕ ಬೆಳಕಿಗೆ ಬಂದರಾದರೂ ಅಪ್ರತಿಮ ಸಾಧನೆಗೈದಿದ್ದು ಎತ್ತರಕ್ಕೆ ಬೆಳೆದು ನಿಂತದ್ದು ಮಾತ್ರ ಕನ್ನಡದಲ್ಲಿ. ತನ್ನದೇ ಆದ ಸಂಕೇತ್ ತಂಡ ಕಟ್ಟಿದ ಶಂಕರ್ ಕನ್ನಡ ನಾಟಕ ಪರಂಪರೆಯನ್ನು ಬೆಳೆಸಿದ ರೀತಿ ಎಂತಹವರು ಹುಬ್ಬೇರಿಸುವಂತಹದ್ದು. ಕನ್ನಡದ ನಾಟಕಗಳನ್ನು ಸಪ್ತ ಸಾಗರದಾಚೆಗೂ ತೆಗೆದುಕೊಂಡು ಹೋದ ಶಂಕರ್ ೭-8ರಾಷ್ಟ್ರಗಳಲ್ಲಿ ನಾಟಕಗಳ ಪ್ರದರ್ಶನ ನೀಡಿದ್ದರು. ಸ್ವಾಭಿಮಾನದ ಪ್ರತೀಕದಂತಿದ್ದ ಶಂಕರ್ ನಾಗ್ ನಮ್ಮವರು ಚಲನ ಚಿತ್ರದ ಧ್ವನಿ ಗ್ರಹಣಕ್ಕಾಗಿ ತಮಿಳುನಾಡಿಗೆ ಹೋಗುತ್ತಿದ್ದಂತಹ ದಿನಗಳಲ್ಲಿ ನಮ್ಮದೇ ಆದ ಧ್ವನಿಗ್ರಹಣ ಕೇಂದ್ರವನ್ನು ಮೊದಲಿಗೆ ಆರಂಭಿಸಿದರು. ನಮಗೆ ಸಂಪೂರ್ಣ ಅಪರಿಚಿತವಾಗಿದ್ದ ರೆಸಾರ್ಟ್ ಮಾದರಿಗಳನ್ನು ವಿದೇಶಗಳಲ್ಲಿ ಸುತ್ತಿ ಬಂದಿದ್ದ ಶಂಕರ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಇಡೀ ಭಾರತ ದೇಶದಲ್ಲಿಯೇ ಅಪರೂಪವೆನಿಸುವಂತಹ ಮತ್ತು ಮೊದಲ ಕಂಟ್ರಿಕ್ಲಬ್ ನಿರ್ಮಾಣಕ್ಕೆ ಮುಂದಾದರು. ಅಲ್ಲಿ ರಂಗ ಚಟುವಟಿಕೆ, ಸಿನಿಮಾ, ವಸತಿ, ಹೋಟೆಲ್, ಕಾರ್ಯಕ್ರಮ ಸಭಾಂಗಣ, ಹಳ್ಳಿ ಮಾದರಿಯ ಮನೆಗಳು ಮತ್ತು ಈಜುಕೊಳ ಹೀಗೆ ಎಲ್ಲವನ್ನು ಸೃಜಿಸಿದರು.ನಂದಿ ಬೆಟ್ಟಕ್ಕೆ ರೋಪ್ ವೇ ಹಾಕುವ ಯೋಜನೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸಮಾಜದಲ್ಲಿನ ಬಡವರಿಗೆ ಅತ್ಯಂತ ಕಡಿಮ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಹಾಲೆಂಡ್ ದೇಶದ ತಂತ್ರಜ್ಙಾನವನ್ನು ಭಾರತಕ್ಕೆ ತರುವ ಮಹತ್ವದ ಕನಸು ಕಂಡಿದ್ದರು. ನಾವು ಈಗ ಕಾಣುತ್ತಿರುವ ಮಲ್ಟಿಪ್ಲೆಕ್ಷ್ ಚಿತ್ರಮಂದಿರಗಳು ಮತ್ತು ಮೆಟ್ರೋ ರೈಲ್ವೇ ಯೋಜನೆಯ ನೀಲಿ ನಕಾಶೆಯನ್ನು 20ವರ್ಷಗಳ ಹಿಂದೆ ಮೊದಲಿಗೆ ಸಿದ್ದಪಡಿಸಿದ್ದು ಇದೇ ಶಂಕರ್ ನಾಗ್.
ನಮ್ಮ "ಶಂಕರನ ನೆನಪು" ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಪ್ರಜಾವಾಣಿಯ ಹಿರಿಯ ಪತ್ರಕರ್ತರು ಹಾಗೂ ಸಿನಿಮಾಗಳಲ್ಲಿ ತೊಡಗಿಕೊಂಡಿರುವ, ಶಂಕರ್ ನಾಗ್ ಒಡನಾಟವಿರಿಸಿಕೊಂಡಿದ್ದ ಎಂ ಕೆ ಭಾಸ್ಕರ್ ರಾವ್ ಹೇಳಿದ ಮಾತು ಸಹ ಶಂಕರ್ ನಾಗ್ ವ್ಯಕ್ತಿತ್ವಕ್ಕೆ ಇನ್ನೂ ಹೆಚ್ಚಿನ ಹೊಳಪು ಸಿಗುವಂತೆ ಮಾಡಿತು. "ಅದು ಎರ್ಜೆನ್ಸಿ ಸಂಧರ್ಭ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದ್ದ ಸಮಯದಲ್ಲಿ ಜೆಪಿ ಚಳುವಳಿಯ ಅಲೆ ಸೃಷ್ಟಿಯಾಗಿತ್ತು, ಆಗ ಶಂಕರ್ ನಾಗ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ದ ದೊಡ್ಡ ಧ್ವನಿ ಎತ್ತಿದ್ದರು", "ತನ್ನ ನಾಟಕದ ತಂಡದ ಮೂಲಕ "ಸತ್ತವರ ನೆರಳು" ನಾಟಕವನ್ನು ಆಡಿ ಸರ್ಕಾರದ ವಿರುದ್ದ ತಮ್ಮ ಅಸಹನೆ ವ್ಯಕ್ತಪಡಿಸಿದ್ದರು, ತಮ್ಮ ನಿರ್ದೇಶನದ ಸಿನಿಮಾಗಳಲ್ಲೂ ಅದನ್ನು ಒಡಮೂಡಿಸಿದರು, ಆದರೆ ವಿರೋಧ ಪಕ್ಷದ ಮಂದಿ ಅವರನ್ನು ಜನತಾ ಪಕ್ಷದ ಬೆಂಬಲಿಗನೆಂದು ಗುರುತಿಸಿದರು, ಇದು ಅತ್ಯಂತ ನೋವಿನ ಸಂಗತಿ ಎಂದರು. ಶಂಕರ್ ಯಾವತ್ತಿಗೂ ರಾಜಕೀಯ ಪಕ್ಷದ ಬೆಂಬಲಿಗನಾಗಿರಲಿಲ್ಲ ಆದರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಬೆಂಬಲಿಗರಾಗಿದ್ದರು. ಆದರೆ ಯಾವತ್ತೂ ಪಕ್ಷ ರಾಜಕಾರಣಕ್ಕೆ ಮತ್ತು ಸ್ವತ: ರಾಜಕೀಯಕ್ಕೆ ಧುಮುಕುವುದಕ್ಕೆ ಅವರು ಆಸಕ್ತರಾಗಿರಲಿಲ್ಲವೆವೆಂಬುದು ಗಮನಾರ್ಹ. ಶಂಕರನ ನೆನಪು.. ರೂವಾರಿ ಶಶಿಧರಗೇರುಕುಪ್ಪೆ ಇದಕ್ಕೆ ಸಾಥ್ ನೀಡಿದ್ದು ನಾನು, ಪತ್ರಕರ್ತ ಮಿತ್ರರಾದ ಚಂದ್ರಶೇಖರ್, ಸುಬ್ಬರಾವ್, ಶ್ರೀಕಾಂತ್,ಶಂಕರ್,ಝೀ ಕನ್ನಡದ ಮದುಸೂಧನ ಮತ್ತು ಇತರರು. ಶಂಕರ್ ನಾಗ್ ರೊಂದಿಗೆ ಬೆಳೆದ, ಶಂಕರ್ ಬೆಳೆಸಿದ ಅನೇಕರು ಇವತ್ತು ಚಿತ್ರರಂಗದಲ್ಲಿದ್ದಾರೆ. ಈ ಪೈಕಿ ಪಂಚಮ ವೇದ ಚಿತ್ರದ ನಿರ್ದೇಶಕ ಪಿ ಎಚ್ ವಿಶ್ವನಾಥ್, ನಿರ್ಧೇಶಕ ನಾಗಾಭರಣ, ಶಿವಮಣಿ,ಸುನಿಲ್ ಕುಮಾರ್ ದೇಸಾಯಿ ನಟರಾದ ರಮೇಶ್ ಭಟ್, ಮನದೀಪ್ ರಾಯ್, ಸಂಕೇತ್ ಕಾಶಿ ಮಾಸ್ಟರ್ ಮಂಜುನಾಥ್ ಹೀಗೆ ಎಷ್ಟೋ ಮಂದಿ ಶಂಕರ್ ಗರಡಿಯಲ್ಲಿ ಪಳಗಿದವರು. ಶಂಕರ್ ನಿಧನದ ನಂತರ ಅವರ ಸಹೋದರ ಅನಂತ್ ನಾಗ್ ಮತ್ತು ಅರುಂಧತಿ ಸೇರಿದಂತೆ ಎಲ್ಲರೂ ದಿಕ್ಕಾಪಾಲಾಗಿ ಚದುರಿಹೋಗಿದ್ದಾರೆ. ಸಂಕೇತ್ ಧ್ವನಿಗ್ರಹಣ ಕೇಂದ್ರ ಮುಚ್ಚಿ ಹೋಗಿದೆ, ಶಂಕರ್ ಕನಸಿನ ಕಂಟ್ರಿಕ್ಲಬ್ ಮಾರಾಟವಾಗಿದೆ, ಸಂಕೇತ್ ತಂಡದ ರಂಗಚಟುವಟಿಕೆ ನಿಂತ ನೀರಾಗಿದೆ, ಅಲ್ಲೀಗ Hi-Profile ಜನರಿಗೆ ಟೆಕ್ಕಿಗಳಿಗೆ ಪಾಶ್ಚಿಮಾತ್ಯ ರಂಗನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಶಂಕರ್ ನೆನಪು ಮಾಡಿಕೊಳ್ಳುವ ಕಾರ್ಯಕ್ರಮಕ್ಕೂ ಕಾಲ್ ಶೀಟ್ ಮನಿ ನಿರೀಕ್ಷೆ ಮಾಡುವ ಮಟ್ಟಕ್ಕೆ ಅವರಿಂದ ಬೆಳೆದವರು ತಲುಪಿದ್ದಾರೆ. ಯಾರಿಗೂ ಈಗ ಶಂಕರನ ನೆನಪಾಗುತ್ತಿಲ್ಲವೇಕೆ? ಕೇವಲ 35ವರ್ಷಗಳ ಕಾಲ ಬದುಕಿದ್ದ ಶಂಕರ್ ನಾಗ್ ಕ್ರಿಯಾಶೀಲತೆಗೆ ಮತ್ತೊಂದು ಹೆಸರು.ಆತನ ವರ್ಕಾಲಿಕ್ ನೇಚರ್, ಆತನ ಕನಸು, ಛಲ ಹಿಡಿದು ಸಾಧಿಸಿದ ಕೆಲಸ, ಬೆಳೆದ ಎತ್ತರವನ್ನು ಯಾರೂ ಸರಿಗಟ್ಟಲಾರರು ಆ ಕಾರಣಕ್ಕಾದರೂ ಶಂಕರನ ನೆನಪಾಗಬೇಕು.ಈಗ ಹೇಳಿ ಶಂಕರ್ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಲ್ಲವೇ.. ಆತನ ನೆನಪು ಮಾಡಿಕೊಳ್ಳುವುದು ಸೂಕ್ತವೆನಿಸುವುದಿಲ್ಲವೇ. ಒಂದು ಚಲನಶೀಲತೆಯನ್ನು ಹುಟ್ಟುಹಾಕಿದ ಶಂಕರ್ ಒಮ್ಮೆ ಹೀಗೆ ಹೇಳಿದ್ದರು "ಸತ್ತ ಮೇಲೆ ಗೋರಿಯಲ್ಲಿ ಹಾಯಾಗಿ ನಿದ್ರೆ ಮಾಡಲು ಬೇಕಾದಷ್ಟು ಸಮಯವಿರುತ್ತೆ, ಆದ್ದರಿಂದ ಸೋಮಾರಿಗಳಾಗಬೇಡಿ, ಸಮಯ ಹಾಳುಮಾಡಬೇಡಿ ಕ್ರಿಯಾಶೀಲರಾಗಿರಿ" ಅದು ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ಸಮಾಜಕ್ಕೆ ಆದರ್ಶ, ಅನುಕರಣೀಯ ಆ ಮೂಲಕ ಶಂಕರ್ ನಮ್ಮೊಂದಿಗೆ ಜೀವಂತವಾಗಿದ್ದಾರೆ ಅಲ್ಲವೇ?



Thursday, September 24, 2009

ಮನಸಿಟ್ಟು "ಮನಸಾರೆ" ಮಾಡಿದ್ದೀನಿ: ಯೋಗರಾಜ್ ಭಟ್



ಯೋಗರಾಜ್ ಭಟ್ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆಯ ಮೂಲಕ ಹೊಸತನದ ಸ್ಪರ್ಶ ನೀಡಿದವರು, ಇದಕ್ಕೂ ಮುನ್ನ "ಮಣಿ","ರಂಗಎಸ್ ಎಸ್ ಎಲ್ ಸಿ" ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿದರು ಅವರ ವೃತ್ತಿ ಬದುಕಿಗೆ ತಿರುವು ನೀಡಿದ್ದು ಮಾತ್ರ "ಮುಂಗಾರುಮಳೆ" ಚಿತ್ರ. ತದನಂತರ ನಿರ್ದೇಶಿಸಿದ "ಗಾಳೀಪಟ" ಸಹ ಯಶಸ್ಸು ಪಡೆಯಿತು. ಈಗ "ಮನಸಾರೆ" ಎಂಬ ನೂತನ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರಕಥೆ-ಸಂಭಾಷಣೆ-ಗೀತಸಾಹಿತ್ಯ-ನಿರ್ದೇಶನ ಎಲ್ಲವನ್ನೂ ನಿಬಾಯಿಸಿರುವ ಭಟ್ಟರು ಮನಸಾರೆಯನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರಂತೆ. ಮನಸಾರೆ ಇದೇ ಶುಕ್ರವಾರ(ಸೆ.25)ದಂದು ರಾಜ್ಯಾಧ್ಯಂತ ತೆರೆಗೆ ಬರಲಿದೆ. ಈ ಸಂಧರ್ಭದಲ್ಲಿ ಅವರು ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದರು.
**ಒಂದೂವರೆ ವರ್ಷದ ಗ್ಯಾಪ್ ನಲ್ಲಿ ಸಿನಿಮಾ ಮಾಡ್ತಾ ಇದೀರಿ, ಈ ಮಧ್ಯೆ ಲಗೋರಿ ಪ್ರಾಜೆಕ್ಟ್ ರದ್ದಾಯಿತು..
  • ಹೌದು ನಿರ್ದೇಶಕನಾದ ನನಗೆ ಅಂತಹದ್ದೊಂದು ಗ್ಯಾಪ್ ಬೇಕಾಗುತ್ತೆ, ಎಲ್ಲ ಹಂತದಲ್ಲೂ ಎಚ್ಚರವಹಿಸಿ ಕೆಲಸ ಮಾಡಬೇಕಲ್ವಾ?
**ಮನಸಾರೆ ಚಿತ್ರ ಹೇಗಿದೆ ? ಅದರ ಥೀಮ್ ಏನು?
  • ಮನಸಾರೆ ಪ್ರೆಶ್ ಆಗಿದೆ, ನಾನಂದು ಕೊಂಡಂತೆ ಚಿತ್ರಕ್ಕೆ ಎಲ್ಲವೂ ಕೂಡಿ ಬಂದಿದೆ. ನನ್ನ ಇತರೆ ಚಿತ್ರಗಳಿಗಿಂತ ಭಿನ್ನವಾಗಿದೆ. ಯಂಗ್ ಫೀಲ್ ಇದೆ, ಸಂಭಾಷಣೆ ಗಮನ ಸೆಳೆಯುವಂತಿದೆ. ಚಿತ್ರಕ್ಕೆ ಪೂರಕವ಻ದ ಪರಿಸರದಲ್ಲೂ ಹೊಸತನವಿದೆ. ಥೀಮ್ ಚಿತ್ರ ನೋಡಿ ತಿಳ್ಕೊಳ್ಳಿ.
**ಮನಸಾರೆ ಪ್ರೇಮ ಕಥೇನಾ?
  • ಹೌದು ಪ್ರೇಮ ಕಥೇನೇ.. ಈ ಚಿತ್ರ ಪ್ರೇಕ್ಷಕರನ್ನು ವಿಪರೀತ ನಗಿಸುತ್ತೆ ಮತ್ತೆ ವಿಪರೀತ ಅಳಿಸುತ್ತೆ. ಆದರೆ ಕಥೆ ಬಗ್ಗೆ ಹೇಳಲ್ಲ, ಸಿನಿಮಾ ನೋಡಿ.
**ನಿಮ್ಮ ಹಿಂದಿನ ಚಿತ್ರಗಳಲ್ಲಿ ಗಣೇಶ್ ಇದ್ರು ಇಲ್ಲಿ ದಿಗಂತ್ ಇದ್ದಾರಲ್ಲ?
  • ಮನಸಾರೆ ಚಿತ್ರದ ಪಾತ್ರಕ್ಕೆ ದಿಗಂತ್ ಸೂಟಬಲ್ ಬಾಯ್ ಅನಿಸ್ತು. ಇದು ಗಣೇಶ್ ಗೆ ಹೊಂದುವಂತಹ ಪಾತ್ರವಲ್ಲ, ನನ್ನ ಎರಡು ಸಿನಿಮಾಗಳಲ್ಲಿ ದಿಗಂತ್ ನಟಿಸಿದ್ದ, ಇಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾನೆ ಪಾತ್ರ ನಿರ್ವಹಣೆ ಚೆನ್ನಾಗಿ ಮಾಡಿದ್ದಾನೆ.
**ಚಿತ್ರದ ಪರಿಸರದ ಬಗ್ಗೆ ಹೇಳಿ
  • ಉತ್ತರ ಕರ್ನಾಟಕದ ಬಯಲು ಸೀಮೆ, ಗಂಗಾವತಿ, ಸಂಡೂರು ಗಳಲ್ಲಿ ಹಾಡಿನ ಚಿತ್ರೀಕರಣವಾಗಿದೆ. ಉಳಿದ ಮಾತಿನ ಭಾಗವನ್ನು ಮೈಸೂರು, ಮಡಿಕೇರಿ, ಮಂಡ್ಯ, ಕಾರಾವಾರ ಮತ್ತು ಬೆಂಗಳೂರಿನ ಸ್ಟುಡಿಯೋಗಳಲ್ಲಿ ಮಾಡಿದ್ದೇನೆ ಎಲ್ಲವೂ ಚೆನ್ನಾಗಿ ಒಡಮೂಡಿದೆ, ಪ್ರೇಕ್ಷಕರಿಗೂ ಇಷ್ಟವಾಗಬಹುದು.
**ಮನಸಾರೆಯಲ್ಲಿ ಏನೋ ನಿಮ್ಮ ಹೊಸಕಲ್ಪನೆಗಳು ಇವೆ ಎಂಬ ಸುದ್ದಿ ಇತ್ತು.
  • ನನ್ನ ಹುಟ್ಟೂರು ಹಾನಗಲ್, ಅಲ್ಲಿನ ಪರಿಸರದಲ್ಲಿ ನಾನು ಕಂಡ ಕನಸು ಅಂದುಕೊಂಡ ಸಾಧ್ಯತೆಗಳನ್ನು ಈ ಚಿತ್ರದಲ್ಲಿ ಸಾಕಾರ ಮಾಡಿಕೊಂಡಿದ್ದೇನೆ. ಈ ಪೈಕಿ ನಾನು ಪದವಿ ವಿದ್ಯಾರ್ತಿಯಾಗಿದ್ದಾಗ ಮಾಡಿದ್ದ ಒಂದು ಪ್ರಾಜೆಕ್ಟ್ ಅನ್ನು ಇಲ್ಲಿ ಸಾಕ್ಷಿಕರಿಸಿದ್ದೇನೆ, ಹೆಚ್ಚು ವಾಹನಗಳು ಓಡಾಡುವ ರಸ್ತೆಯಲ್ಲಿ ಡುಬ್ಬು ನಿರ್ಮಿಸಿ ಅಲ್ಲಿ ಬೀಳುವ ಒತ್ತಡದಿಂದ ವಿದ್ಯುತ್ ಚ್ಚಕ್ತಿ ನಿರ್ಮಿಸಬಹುದೆಂಬ ಕಲ್ಪನೆಯಿತ್ತು. ಅದು ಈಗ ವಾಸ್ತವದಲ್ಲೂ ಸಾಧ್ಯವಿದೆ ಅದರ ಒಂದು ತುಣುಕನ್ನು ಮನಸಾರೆ ಹಾಡಿನ ಸನ್ನಿವೇಶದಲ್ಲಿ ಬಳಸಿದ್ದೇನೆ. ಮತ್ತೆ specific ಆಗಿ ಚಿತ್ರದಲ್ಲಿ ಬರುವ ತಿರುವುಗಳು shocking ಆಗಿವೆ, ಮನಸ್ಸನ್ನು ಆವರಿಸುವಂತಹ ಎಷ್ಟೋ ಸಂಗತಿಗಳಿವೆ.
**ಸಂಗೀತ ಮತ್ತು ಸಾಹಿತ್ಯದಲ್ಲಿ ಹೊಸತೇನಿದೆ?
  • ಮನಸಾರೆಯಲ್ಲಿ ಸರಳ ಸಾಹಿತ್ಯ ಮತ್ತು ಸಂಗೀತವಿದೆ, ಇಲ್ಲಿ ಸಂಪೂರ್ಣ ತಾಕತ್ತು ಬಳಕೆಯಾಗಿದೆ. ಸಿಂಪಲ್ ಮೆಲೋಡಿಯಿದೆ. ಮೊದಲು ನನಗೆ ತುಂಬಾ ಹೆದರಿಕೆಯಾಗಿತ್ತು, ಆದರೆ ಧ್ವನಿ ಸುರುಳಿ ಬಿಡುಗಡೆಯಾಗಿ ಮಾರ್ಕೆಟ್ ಹಿಟ್ ಆಗಿದೆ. ಜನ ಹಾಡುಗಳನ್ನು ಸಂಗೀತವನ್ನು ಇಷ್ಟ ಪಟ್ಟಿದ್ದಾರೆ, ಜಯಂತ್ ಕಾಯ್ಕಿಣಿ ಸಾಹಿತ್ಯ ಮನೋಮೂರ್ತಿ ಸಂಗೀತ ಫೈನ್. ಎಲ್ಲೋ ಮಳೆಯಾಗಿದೆ..... ಎಂಬ ಟ್ರಾಕ್ ತುಂಬಾ ಇಷ್ಟ.
**ಚಿತ್ರೀಕರಣ ಸಂಧರ್ಭ ಹಾಗೂ ಚಿತ್ರದ ನಾಯಕಿ ಬಗ್ಗೆ ಹೇಳಿ?
  • ನಾಯಕಿ ಅಂದ್ರಿತಾ ರೇ ನನ್ನ ನಿರೀಕ್ಷೆಗೂ ಮೀರಿ ಅಭಿನಯ ಮಾಡಿದ್ದಾಳೆ. ಆ ಹುಡುಗಿ ಅಭಿನಯದಲ್ಲಿ ತುಂಬಾ Involvement ತಗೊಂಡಿದ್ದಾಳೆ.ರೋಮ್ಯಾಂಟಿಕ್ ಸೀನ್ ನಲ್ಲಂತೂ ಸೂಪರ್ ಒಳ್ಳೆ Glamorous ಗೊಂಬೆ ಅವಳು. ಅವಳ ಅಭಿನಯವನ್ನ ನೋಡೀನೇ ಆನಂದಿಸಬೇಕು. ದಿಗಂತ್ ಕೂಡ ವಿಶಿಷ್ಠವಾಗಿ ಅಭಿನಯಿಸಿದ್ದಾನೆ. ಅಂದ್ರಿತಾ ಹಾಗೂ ದಿಗಂತ್ ಕೆಮಿಸ್ಟ್ರಿ ಚೆನ್ನಾಗಿ workout ಆಗಿದೆ.ಎಲ್ಲರೂ ಶ್ರಮವಹಿಸಿ ಚಿತ್ರ ಮಾಡಿದ್ದೇವೆ, ಚಿತ್ರೀಕರಣ ಸಂಧರ್ಭ ೆಲ್ರೂ Normal ಆಗಿದ್ದೆವು. ಕ್ರಿಕೆಟ್ ಆಡಿಕೊಂಡು, ತಮಾಷೆಯಾಗಿ ಕೆಲಸ ಮಾಡಿದ್ವಿ. ನಿರ್ಮಾಪಕರು ನಮಗೆ ಒತ್ತಾಸೆಯಾಗಿ ಇದ್ರು.
**ಮನಸಾರೆ ಸಂದೇಶ ನೀಡುವ ಚಿತ್ರಾನಾ? ಅಥವಾ ಬರೀ ಎಂಟರ್ ಟೈನ್ ಮೆಂಟಾ ?
  • ಹೌದು, ಮನಸಾರೆ ಸಂದೇಶ ನೀಡುವ ಚಿತ್ರ. ತುಂಬಾ ಪವರ್ ಫುಲ್ ಆಗಿದೆ... ಚಿತ್ರ ನೋಡಿ. ಮನಸಾರೆ ಚಿತ್ರವನ್ನು ಮನಸಿಟ್ಟು ಮಾಡಿದ್ದೇನೆ, ಸಹೃದಯ ಪ್ರೇಕ್ಷಕರಿಗೆ ಅರ್ಪಿಸುತ್ತಿದ್ದೇನೆ. ಇದು ಮೂರುವರೆ ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತೆ.
**ಚಿತ್ರದ promotion campaign ಏನಾದ್ರೂ..
  • ಹಾಗೇನಿಲ್ಲ, ಸಹಜವಾಗಿ ಕೆಲವು ಟಿವಿ ಮಾಧ್ಯಮಗಳಲ್ಲಿ ಸಂದರ್ಶನ ಇರುತ್ತೆ. ಆದರೆ ಚಿತ್ರ ಓಡಬೇಕು ಎಲ್ಲರಿಗು ಇಷ್ಟವಾಗಬೇಕು... ಆಮೇಲೆ ಅವೆಲ್ಲಾ....
**ಮುಂದಿನ ಚಿತ್ರ ಯಾವಾಗ? ಪುನೀತ್ ನಿಮ್ಮ ಚಿತ್ರದಲ್ಲಿ ನಟಿಸುತ್ತಾರೆ ಎಂಬ ರೂಮರ್ ಇದೆಯಲ್ಲ?
  • ಹೌದು, ಮನಸಾರೆ ಬಿಡುಗಡೆಯಾದ ಮೇಲೆ ಮುಂದಿನ ಚಿತ್ರದ ಸಿದ್ದತೆ ಆಗಲಿದೆ. ಪುನೀತ್ ನನ್ನ ಹೊಸಚಿತ್ರದ ನಾಯಕ ನಾಯಕರಾಗ್ತಾರೆ. ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ಕಡೆಯ ಬಾರಿ ಕೇಳ್ಕೋಳೋದು ಇಷ್ಟೆ, ಮನಸಾರೆ Good Feel ಇರುವ, Fresh Young Team ಇರೋ ವಿಭಿನ್ನ ಅಭಿರುಚಿಯ ಸಿನಿಮಾ, ನೋಡಿ ಆನಂದಿಸಿ ಎಂದು ಮಾತು ಮುಗಿಸಿದರು ಯೋಗರಾಜ್ ಭಟ್

This featured article published in thatskannada.com, I thank to Web Editor Sham Sundar. If you want read web article plz click on this link

http://thatskannada.oneindia.in/movies/headlines/2009/09/25-an-interview-with-yograj-bhat.html

Saturday, September 12, 2009

ಆಧುನೀಕರಣದ ಭರಾಟೆಯಲ್ಲಿ ಸಿದ್ದಾಂತ ಬರೀ ಓಳಾ..?


ತಂಬಾಕಾ...? ಅಯ್ಯೋ ಇದನ್ನಾ.. ನಾವು ಕೀಟನಾಶಕವಾಗಿ ಬಳಸ್ತೀವೀ.! ಇದನ್ನಾ ಬೆಳೆಯೋಕೆ ಸಿಕ್ಕಾಪಟ್ಟೆ ಪೆಸ್ಟಿಸೈಡ್, ಕೆಮಿಕಲ್ ಮೆನ್ಯೂರ್ ಎಲ್ಲಾ ಹಾಕಿ ಬೇಳೀತೀರಲ್ಲಾ ದೇವ್ರೇ.. ಎಂದು ಬೇಸರಿಸಿಕೊಂಡವರು ಶಿರಸಿಯ ಸುನೀತಾ ರಾವ್. ಮೊದಲಿಗೆ ಹೇಳಿಬಿಡ್ತೀನಿ ಸುನೀತಾ ರಾವ್ ಅಂದ್ರೆ ಅಗ್ರಿಕಲ್ಚರ್ ಸೈಟಿಂಸ್ಟ್, ಅವರ ಮುತ್ತಾತ ಅರಕಲಗೂಡು ಮೂಲದವರಂತೆ, ಈ ಸುನೀತಾರಾವ್ ಅವರ ಮೊಮ್ಮಗಳು. ಕರ್ನಾಟಕ ಹಾಗೂ ಪಾಂಡಿಚೆರಿಯ ಯುನಿವರ್ಸಿಟಿಗಳಲ್ಲಿ ಎರಡೆರೆಡು ಸ್ನಾತಕ ಪದವಿ ಎಕಾಲಜಿ, ಸಂಶೋಧನೆ ಹೀಗೆ ಶಿಕ್ಷಣ ಮುಗಿಸಿ ದೆಹಲಿ ಹಾಗೂ ದೇಶದ ವಿವಿಧ ಕೃಷಿ ವಿವಿ ಗಳಲ್ಲಿ ಕೆಲಸ ಮಾಡಿ 38-40 ರ ಹರಯದಲ್ಲಿ ಉತ್ತರ ಕನ್ನಡದ ಶಿರಸಿಯಿಂದ 20ಕಿಮಿ ದೂರದಲ್ಲಿ ಒಂದಷ್ಟು ಜಮೀನು ಖರೀದಿಸಿ ಸಾವಯವ ಕೃಷಿಯ ಕಡೆಗೆ ಹೊರಳಿಕೊಂಡಿದ್ದಾರೆ. ಅಲ್ಲಿ ರೈತ ಮಹಿಳೆಯರನ್ನು ಸಂಘಟಿಸುವ ಮಹತ್ತರವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ವನಸ್ತ್ರೀ ಎಂಬ ಹೆಸರಿನ ಆ ಸಂಸ್ಥೆ ಮಲೆನಾಡು ಕೈತೋಟ, ಬೀಜ ಸಂರಕ್ಷಣಾ ಗುಂಪು ರಚಿಸಿಕೊಂಡಿದೆ. ಅಲ್ಲಿ ಸಂಶೋಧನೆಯು ನಿರಂತರ. ಮದುವೆಯ ಬಂಧನಕ್ಕೊಳಗಾಗದೇ ಒಂದು ಸಿದ್ದಾಂತವಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಇವರ ಕಾರ್ಯ ವೈಖರಿಯು ಮೆಚ್ಚುವಂತಹುದೆ. ಕಳೆದ ವರ್ಷ ಜೀ ಕನ್ನಡ ವಾಹಿನಿ ಇವರ ಸಾಧನೆಯನ್ನು ಗುರುತಿಸಿ ಪುರಸ್ಕಾರ ನೀಡಿ ಗೌರವಿಸಿದೆ. ಸದಾ ಕೃಷಿಯಲ್ಲಿ ಪ್ರಯೋಗ ಶೀಲ ಮನಸ್ಸು ಹೊಂದಿರುವ ಇಂತಹ ಸುನೀತಾ ರಾವ್ ಅರಕಲಗೂಡು ಮೂಲದವರಾದರು ಅವರಿಗೆ ಸೇರಿದ ಯಾವುದೆ ಮನೆ, ಜಮೀನು, ಇಲ್ಲವೇ ಗುರುತಿರುವವರು ಈಗ ಇಲ್ಲಿ ಬದುಕುಳಿದಿಲ್ಲ. ಆದರೂ ತಂದೆಯ ಹೆಸರಿನೊಂದಿಗೆ ಅಂಟಿಕೊಂಡಿರುವ ಅರಕಲಗೂಡು ಹೆಸರಿನ ಕುತೂಹಲದಿಂದ ನನ್ನ ಮಿತ್ರ ಜೀ ಕನ್ನಡದ ಮಧುಸೂಧನ ರೊಂದಿಗೆ ಭೇಟಿ ನೀಡಿದ ಸುನೀತಾ ರಾವ್ ಇಲ್ಲಿಯ ಪರಿಸರದ ಬೆಳೆ ನೋಡುವ ಇಚ್ಚೆ ವ್ಯಕ್ತಪಡಿಸಿದರು. ಹಾಗಾಗಿ ಅವರನ್ನು ತಾಲೂಕಿನ ರಾಮನಾಥಪುರದ ಬಳಿಯ ಮಲ್ಲಿನಾಥಪುರದ ಪದ್ಮನಾಭರವರ ಸಾವಯವ ಕೃಷಿಯ ಗದ್ದೆ ಹಾಗೂ ತೋಟ ನೋಡಲು ಹೋದೆವು. ಈ ಪದ್ಮನಾಭ ಒಂಥರಾ ವಿಚಿತ್ರ ವ್ಯಕ್ತಿ ಹಾರಂಗಿ ನಾಲೆಯಲ್ಲಿ ನಿರಂತರವಾಗಿ ಹರಿದು ಬರುವ ನೀರಿನಲ್ಲಿ ಸಮೃದ್ದವಾಗಿ ಕೃಷಿ ಮಾಡುವ ಇವರ ಭತ್ತದ ಗದ್ದೆ ನೂರಾರು ಎಕರೆ ಗದ್ದೆ ಬಯಲಿನ ನಡುವೆ 1-2 ಎಕರೆಯಷ್ಟಿದೆ. ಅಲ್ಲಿ ಇವರು ಭತ್ತವನ್ನು ಸಹಾ ಸಾವಯವ ಮಾದರಿಯಲ್ಲೇ ಬೆಳೆದಿದ್ದಾರೆ. ಸುತ್ತಮುತ್ತಲಿನ ಗದ್ದೆಗಳಿಗೆ ಸಿಕ್ಕಾಪಟ್ಟೆ ರಸಗೊಬ್ಬರ ಹಾಕುತ್ತಾರಂತೆ. ಅಲ್ಲ ಮಾರಾಯ್ರೇ ಇದು ಆಧುನಿಕ ಭರಾಟೆಯ ದಿನಗಳು, ನೀವು ಯಾವುದಾದ್ರೂ ಕಮರ್ಷಿಯಲ್ ಕ್ರಾಪು ತಂಬಾಕಿನಂತಹದ್ದು ಯಾಕೆ ಬೆಳೆದಿಲ್ಲ, ಅದರಲ್ಲಿ ಕೈ ತುಂಬಾ ದುಡ್ಡು ಸಿಕ್ಕುತ್ತಲ್ವಾ? ಅಂದೆ. ಇಲ್ಲ ಸಾರ್ ಅದೇನೋ ಮೊದಲಿನಿಂದಲೂ ನಮಗೆ ಅಂತಹ ಬುದ್ದಿ ಬರಲಿಲ್ಲ ನಮ್ಮ ತಂದೆ, ಅವರ ತಂದೆ ಎಲ್ಲಾ ಅದನ್ನ ಬೆಳೆಯೋದು ಬೇಡ ಬಿಟ್ಟರು ನಾನು ಅದನ್ನೇ ಮುಂದುವರೆಸಿದೆ ಅಷ್ಟೇ ಅಂದ್ರು . ಆಗ ಮಧು ಸೂಧನ್ ಹೇಳಿದ ಮಾತು ಒಂದು ಕ್ಷಣ ಮೌನ ಆವರಿಸುವಂತೆ ಮಾಡಿತು. ಈ ತಂಬಾಕು ಕಟಾವು ಮಾಡಿ ಬೇಯಿಸುತ್ತಾರಲ್ಲಾ ಆಗ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ನೋಡಬೇಕು, ಊರಿನ ಜನ, ಮನೆ ಜನವೆಲ್ಲ ಒಂಥರಾ ಕಾಮಾಲೆ ರೋಗ ಪೀಡಿತರಂತೆ ಆಗಿರುತ್ತಾರೆ, ಏನು ದುಡ್ಡು ದುಡಿದ್ರೆ ಏನು ಮೈಗೆ ಆರೋಗ್ಯ ಸರೀ ಇಲ್ಲ ಅಂದ್ರೆ ಅಂದ್ರು. ಆ ಮಾತಿನಲ್ಲಿ ಸತ್ಯವೂ ಇತ್ತು. ನೋಡಿ ನಮ್ಮ ಅರಕಲಗೂಡು, ಪಿರಿಯಾಪಟ್ನ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳು ಇವೆಯಲ್ಲ ಇಲ್ಲೆಲ್ಲಾ ಅಂತರ ರಾಷ್ಟ್ರೀಯ ಗುಣಮಟ್ಟದ ತಂಬಾಕು ಬೆಳೆಯುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ 4-5ಸಾವಿರ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತಿದ್ದ ತಂಬಾಕು. ಈಗ ತಂಬಾಕನ್ನು ನಿಷೇದಿಸುವ ಮಾತು ಶುರು ಮಾಡಿದ ಮೇಲೆ 11500 ಹೆಕ್ಟೇರಿಗೆ ವಿಸ್ತರಿಸಿದೆ, ಸುಮಾರು 5000 ದಷ್ಟು ಅನಧಿಕೃತ ಬೆಳೆಗಾರರಿದ್ದಾರೆ. ಎಲ್ಲಾ ಸೇರಿ 20ಸಾವಿರ ದಷ್ಟು ಆಗಬಹುದೇನೋ.. ಆಂಧ್ರದ ವ್ಯಾಪಾರಿಗಳು ಇಲ್ಲಿಯ ಮಾರುಕಟ್ಟೆಗೆ ದಿವಾನರು.
ತಂಬಾಕಿನ ಚಟದ ತರಹ ಶುಂಠಿಯು ಸಹಾ ಇಲ್ಲಿ ವಿಸ್ತೃತವಾಗಿ ಹರಡಿದೆ ಸಿಕ್ಕ ಸಿಕ್ಕ ಕಡೆಯೆಲ್ಲ ಶುಂಠಿ ಬೆಳೆಯುತ್ತಿದ್ದಾರೆ, ಕಮರ್ಷಿಯಲ್ ಕ್ರಾಪು ಬೆಳೆಯುವ ಭರಾಟೆಯಲ್ಲಿ ಭೂಮಿಗೆ ಬಿಡುವು ಸಿಗುತ್ತಿಲ್ಲ ಪರಿಣಾಮ ಮಣ್ಣಿನ ರೆಸಿಸ್ಟೆನ್ಸ್ ಪವರ್ರೆ ಹೋಗಿಬಿಟ್ಟಿದೆ. ಇನ್ನೂ ಪಿ ಹೆಚ್ ವ್ಯಾಲ್ಯೂ ಬಗ್ಗೆ ಏನೂ ಹೇಳೋಕಾಗಲ್ಲ ಬಿಡಿ. ಇದೇ ಬಾಗದ ರುದ್ರಪಟ್ಟಣದಲ್ಲಿ ನನ್ನ ಹಿರಿಯ ವೈದ್ಯ ಮಿತ್ರರಾದ ನಾಗರಾಜ್ ಎಂಬುವವರು ಇದ್ದಾರೆ, ಓದಿದ್ದು ವೈದ್ಯ ಪದವಿಯಾದರೂ ಹೆಚ್ಚಿನ ಭಾಗ ತೊಡಗಿಸಿಕೊಂಡದ್ದು ಕೃಷಿಯಲ್ಲಿ ಅವರು ಇದುವರೆಗೂ ಅವರ ತೋಟ ಮತ್ತು ಜಮೀನಿಗೆ ಒಂದು ಬಾರಿಯೂ ರಸಗೊಬ್ಬರ ಹಾಕಿಲ್ಲವಂತೆ ರಾಗಿ, ಭತ್ತ, ಹುರುಳಿ, ಹಲಸಂದೆ ಬಿಟ್ಟರೆ ಅವರ ಜಮೀನಿನಲ್ಲಿ ಇದುವರೆಗೂ ಆಲೂಗಡ್ಡೆ, ಶುಂಠಿ ಹಾಗೂ ತಂಬಾಕು ಬೆಳೆದಿಲ್ಲ. ಅಕ್ಕಪಕ್ಕದವರು, ಹೊರಗಿನವರು ಬಂದು ಎಷ್ಟೇ ಒತ್ತಡ ಹೇರಿದರೂ ತಮ್ಮ ನಿಲುವನ್ನು ಅವರು ಬದಲಾಯಿಸಿಲ್ಲವಂತೆ, ಇದೇ ಭಾಗದ ರಾಮನಾಥಪುರದ ಕೃಷ್ಣ ಎಂಬ ರೈತ ಹೊಸ ಹೊಸ ಪ್ರಯೋಗ ಮಾಡುತ್ತ ಸಾವಯವ ಕೃಷಿಗೆ ಮಾರುಹೋಗಿ ಏಕಾಂಗಿ ಬ್ರಹ್ಮಾಚಾರಿಯಾಗಿ ಉಳಿದುಬಿಟ್ಟಿದ್ದಾರೆ, ಕೃಷಿ ಅವರನ್ನು ಅಷ್ಟರ ಮಟ್ಟಿಗೆ ಸೆಳೆದಿದೆ. ಆದರೂ ಸುತ್ತಲಿನ ಜನರಿಗೆ ಈ ಕೃಷ್ಣ , ನಾಗರಾಜ್, ಪದ್ಮನಾಭ ತರಹದವರು ಹುಚ್ಚರ ತರಹ ಕಾಣಿಸುತ್ತಾರೆ ಯಾಕೆಂದ್ರೆ ಅವರು ನಂಬಿದ ಸಿದ್ದಾಂತ ಬಿಟ್ಟಿಲ್ಲ.
ಇನ್ನೊಬ್ಬರು ನಮ್ಮೂರಿನವರೇ ಆದ ಯೋಗಾರಮೇಶ್ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿಯಲಿದ್ದಾರಾದರೂ ವಾರದ 2ದಿನಗಳಲ್ಲಿ ಹಾಜರಾಗುವುದು ಕೃಷಿ ತೋಟಗಳಿಗೆ, ಜಮೀನುಗಳಿಗೆ. ಪ್ರವಾಸ ನಿಮಿತ್ತ ರಾಜ್ಯದ ಯಾವ ಭಾಗಕ್ಕೆ ಹೋದರು ವಿವಿಧ ಜಾತಿಯ, ವಿವಿಧ ತಳಿಯ ಗಿಡಗಳನ್ನು ತಂದು ಬೆಳೆಸುವುದು ಇವರಿಗೆ ರೂಡಿಯಾಗಿದೆ, ಕಳೆದ ಒಂದೆರೆಡು ವರ್ಷಗಳಿಂದ ವೃಕ್ಷ ಬೆಳೆಸುವ ಆಂಧೋಲನವನ್ನೆ ಆರಂಭಿಸಿ ಬಿಟ್ಟಿದ್ದಾರೆ. ತಾಲೂಕಿನ ಪ್ರತೀ ಹಳ್ಳಿಗೆ ತೆರಳುವುದು ಬೆಲೆ ಬಾಳುವ ಗಿಡಗಳನ್ನು ಉಚಿತವಾಗಿ ರೈತರಿಗೆ ವಿತರಿಸುವುದು, ವಿತರಿಸ ಮೇಲೆ ಅದು ಪಾಲನೆಯ ಯಾವ ಹಂತದಲ್ಲಿ ಇದೆ ಎಂದು ನೋಡುವುದು ಇವರ ಕಾಯಕ. ಇನ್ನು ಆಲೂಗಡ್ಡೆ ಬೆಳೆಯುವುದು ನಮ್ಮಲ್ಲಿ ರೂಡಿಗತ ವಾದುದು. ಕಳೆದ ಬಾರಿ ಹಾಸನ ಜಿಲ್ಲೆಯಲ್ಲಿ 40ಸಾವಿರ ಹೆಕ್ಟೇರು ಆಲೂ ನಾಶವಾದರೂ ಈ ಬಾರಿ ಮತ್ತೆ 18ಸಾವಿರ ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ನಷ್ಟವಾದರೂ, ರೋಗ ಬರುತ್ತದೆ ಎಂದು ತಿಳಿದಿದ್ದರೂ ಆಲೂಗಡ್ಡೆಯನ್ನು ಬೆಳೆಯುವ ಪದ್ದತಿಯನ್ನು ನಮ್ಮ ರೈತರು ಬಿಟ್ಟಿಲ್ಲ ಈ ದಿಸೆಯಲ್ಲಿ ಯೋಗಾರಮೇಶ್ ಸಮಸ್ತ ರೈತರನ್ನು ಕಲೆಹಾಕುವ ಕೆಲಸ ಆರಂಭಿಸಿದ್ದಾರೆ. ರೈತರನ್ನು ಪ್ರೊತ್ಸಾಹಿಸುವ, ವಿಜ್ಞಾನಿಗಳಿಂದ ಅಗತ್ಯ ತಿಳುವಳಿಕೆಯನ್ನು ಸಮಯಾನು ಸಂಧರ್ಭ ನೀಡುವ ಕ್ರಿಯೆಯನ್ನು ಜಾರಿಯಲ್ಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಜೊತೆ ಗಂಗೋತ್ರಿಯಲ್ಲಿ ಪತ್ರಿಕೋಧ್ಯಮ ಕಲಿಯುತ್ತಿದ್ದ ಸ್ನೇಹಿತರೊಬ್ಬರು ಸಿಕ್ಕಿದ್ದರು. ಅವರು ಸರ್ಕಾರಿ ನೌಕರಿಯಲ್ಲಿದ್ದರೂ ಹಾಸನದ ಮನೆ ಮಠ ಮಾರಿ ಹಳೇಬೀಡಿನ ಸಮೀಪದಲ್ಲೆಲ್ಲೋ ಜಮೀನು ತೋಟ ಖರೀದಿಸಿ ಅಲ್ಲೆ ಸೆಟ್ಲ್ ಆಗಿದ್ದಾರಂತೆ ೧೫-೨೦ ಹಸುಕಟ್ಟಿ ಹೈನುಗಾರಿಕೆಯನ್ನು ಮಾಡುತ್ತಾರಂತೆ ಸರ್ಕಾರಿ ಉದ್ಯೋಗಕ್ಕಿಂತ ಕೃಷಿ ಕೆಲಸವೇ ಖುಷಿ ಕೊಡುವ ಬದುಕಂತೆ. ಮದಲಾಪುರ ಗ್ರಾಮವಿದೆ ಅಲ್ಲಿ ಸುಮಾರು 80ಎಕರೆಯಷ್ಟು ಖಾಲಿ ಜಮೀನಿದೆ ಅಲ್ಲಿನ ಜನ ಸದರಿ ಸ್ಥಳದಲ್ಲಿ ಮನೆಗಿಷ್ಟು ಎಂದು ದುಡ್ಡು ಎತ್ತಿ ಗಿಡ ನೆಡುವ ಕೆಲಸ ಮಾಡುತ್ತಿದ್ದಾರೆ, ಅದೇ ಗ್ರಾಮದ ರಂಗಸ್ವಾಮಿ ಎಂಬುವವರು ೫-6ಸಾವಿರ ಗಿಡಗಳನ್ನು ಉಚಿತವಾಗಿ ಕೊಡಿಸಿದ್ದಾರೆ ಅಷ್ಟೇ ಅಲ್ಲ ಮೇಲುಸ್ತುವಾರಿ ನಡೆಸಿದ್ದಾರೆ, ಇದನ್ನೆಲ್ಲ ಯಾರು ಅವರಿಗೆ ಹೇಳಿಕೊಟ್ಟಿಲ್ಲ, ಇದಕ್ಕೆಲ್ಲ ಯಾವ ಸರ್ಕಾರಿ ಯೋಜನೆಗಳು ಬಳಕೆಯಾಗಿಲ್ಲ. ಹೀಗೆ ಹೇಳುತ್ತಾ ಹೋದರೆ ಹಲವರು ಸಿಗುತ್ತಾರೆ. ಆದರೆ ಲಕ್ಷಾಂತರ ಮಂದಿಯ ಪೈಕಿ ಅಂತಹವರು ಕೇವಲ ೫-೧೦% ನಷ್ಟು.
ಇದೆಲ್ಲಾ ನೋಡಿ ನನಗನ್ನಿಸಿದ್ದು ಆಧುನಿಕ ಜಗತ್ತಿನ ಆದ್ಯತೆಗಳು ಬದಲಾದಂತೆ ಮನುಷ್ಯನ ನಡವಳಿಕೆಗಳಲ್ಲು ಕಾಲಾನುಕಾಲಕ್ಕೆ ಬದಲಾವಣೆ ಅನಿವಾರ್ಯವೇ? ಬದಲಾಗದಿದ್ದರೆ ಎಂಥಹ ಪರಿಸ್ಥಿತಿ, ಬದಲಾಯಿಸುವ ಹಠತೊಟ್ಟವರನ್ನು ಅಥವ ಬದಲಾವಣೆಗೆ ಒಳಪಡದವರನ್ನು ಸಮಾಜವಾದರೂ ಯಾಕೆ "ಹುಂಬ"ತನವೆನ್ನಬೇಕು. ಅಲ್ವಾ? ಮೊನ್ನೆ ಸಂಘಟನೆಯೊಂದರೆ ಕಾರ್ಯಕರ್ತರು ರಸ್ತೆಯೊಂದರ ದುಸ್ಥಿತಿ ಕಂಡು ದಾನಿಗಳಿಂದ (ಕಂಟ್ರಾಕ್ಟರುಗಳಿಂದ) ಜೆಲ್ಲಿ ಪಡೆದು ರಸ್ತೆ ಗುಂಡಿ ಮುಚ್ಚಿದರು ಅದನ್ನು ಕಂಡ ಬೇರೆ ಬಾಗದ ಕೆಲ ಮಂದಿ ನಮ್ಮ ಮನೆ ಮುಂದಿನ ರಸ್ತೆ ಗುಂಡಿ ಬಿದ್ದಿದೆ ಅದನ್ನು ಮುಚ್ಚಿ ಎಂದರಂತೆ..! ಸಮಾಜದ ಮನಸ್ಥಿತಿ ಹೀಗಾದರೆ ಬದಲಾವಣೆಯಾದರೂ ಹೇಗೆ ? ನಮ್ಮ ಸಿದ್ದಾಂತಗಳಿಗೇಕೆ ಬೆಲೆ ಇಲ್ಲಾ ಅಥವ ಇದೆಲ್ಲಾ ಓಳಾ? ಒಂದು ಜಾಗೃತ ಹೋರಾಟ ನಡೆದರೆ ಅಲ್ಲಿ ಏನೋ ಲಾಭವಿದೆ ಅದಕ್ಕೆ ಎಂದು ಬಾವಿಸುವವರೇ ಹೆಚ್ಚು, ಹೀಗೆ ಆದುನಿಕ ಜನರ ಮನಸ್ಥಿತಿ ಇದ್ದರೆ ಭವಿಷ್ಯದಲ್ಲಿ ನಮಗೆ ಉಳಿಗಾಲ ಉಂಟೆ?

Friday, September 4, 2009

ಶಿಕ್ಷಕರ ಸ್ಥಿತಿ ಏನಾಗಿದೆ ಗೊತ್ತಾ ???

ಈ ಮಾಸವಿಡೀ ಶಿಕ್ಷಕರ ದಿನಾಚರಣೆ, ಶಿಕ್ಷಕರನ್ನು ಸ್ಮರಿಸುವ ಗೌರವಿಸುವ ಸುದಿನ. ದಿನಾಚರಣೆಯ ಮುನ್ನಾ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಸಮಾರಂಭ ಗಳಲ್ಲಿ ಪಾಲ್ಗೊಳ್ಳುವ ಗಣ್ಯರು ಎಲ್ಲರೂ ಶಿಕ್ಷಕರನ್ನು ಸ್ತುತಿಸುವವರೇ. ಕಾರ್ಯಕ್ರಮಕ್ಕೆ ಬಂದ ಕೆಲ ಗಣ್ಯರೆನಿಸಿಕೊಂಡವರಿಂದ ಉಚಿತ ಗೀತೋಪದೇಶ ಬೇರೆ. ಕರೆಸಿದ ತಪ್ಪಿಗೆ ಅದನ್ನು ಸಹಿಸಿಕೊಳ್ಳುವ ದುರ್ಗತಿ ಶಿಕ್ಷಕರದ್ದು. ಶಿಕ್ಷಕರನ್ನು ಗೌರವಿಸುವ ವೇದಿಕೆಗಳಲ್ಲೂ ರಾಜಕಾರಣಿಗಳದ್ದೇ ಕಾರುಬಾರು ಇರುತ್ತದೆ. ಶಾಲಾ-ಕಾಲೇಜುಗಳ ಎಲ್ಲಾ ಸಮಾರಂಭಗಳಲ್ಲೂ ದಾಂಗುಡಿ ಇಡುವ ರಾಜಕಾರಣಿಗಳು ಇಂತಹ ಸ್ಮರಣೀಯ ದಿನಗಳಲ್ಲಾದರೂ ಸಾಧನೆ ಮಾಡಿದ ಶಿಕ್ಷಕರು, ಹಿರಿಯ ಶಿಕ್ಷಕರುಗಳು ಮಾತ್ರ ವೇದಿಕೆಯಲ್ಲಿ ಕೂರಿಸಿ ರಾಜಕಾರಣಿಗಳು ಮತ್ತು ಇತರೆ ಗಣ್ಯರು ವೇದಿಕೆಯ ಕೆಳಗೆ ಕುಳಿತು ಸಹಕರಿಸಿದರೆ ಶಿಕ್ಷಕರ ದಿನಾಚರಣೆಗೂ ಒಂದು ಅರ್ಥ ಬಂದೀತು.

ಶಿಕ್ಷಕ ವೃತ್ತಿ ಜಗತ್ತಿನೆಲ್ಲೆಡೆ ಗೌರವಿಸಲ್ಪಡುವಂತಹದ್ದು, ಸಮಾಜದ ವಿವಿಧ ಸ್ಥರಗಳಲ್ಲಿ ಹಂಚಿ ಹೋಗುವ ಕೋಟ್ಯಾಂತರ ವ್ಯಕ್ತಿತ್ವಗಳನ್ನು ಸೃಷ್ಟಿಸುವ ಸಂಚಲನಾತ್ಮಕ ಕ್ರಿಯೆಯಲ್ಲಿ 'ಗುರು' ಸದಾ ನಿರತ. ಬದುಕುಗಳನ್ನು ರೂಪಿತವಾಗುವ ಮುನ್ನಾ ದಿನಗಳಲ್ಲಿ ಅಕ್ಷರದ ಅಕ್ಕರೆಯನ್ನು ಕಲಿಕೆಯ ಸೊಬಗನ್ನು ಭಾವನಾತ್ಮಕವಾಗಿ ಚಿಂತನ-ಮಂಥನಗಳನ್ನು ಸೃಷ್ಟಿಸುವ ಗುರು, ಮಾರ್ಗದರ್ಶಿಯಾಗಿ ಆಪ್ತಮಿತ್ರನಾಗಿ, ಸಹೋದರನಾಗಿ, ಮಾತಾ-ಪಿತರಿಗಿಂತ ಹೆಚ್ಚು ಸ್ಪಂದನೆಗೆ ಸಿಗುವ ಏಕೈಕ ವ್ಯಕ್ತಿಯಾಗಿರುತ್ತಾನೆ.

ಹಿಂದಿನ ಪರಿಸರದಲ್ಲಿ ಗುರುವಿಗೆ ಇದ್ದ ಸ್ಥಾನ-ಮಾನ-ಆದ್ಯತೆಗಳು ಇಂದಿನ ಆಧುನಿಕ ಪರಿಸರದಲ್ಲಿ ಇರುವ ಸ್ಥಾನ-ಮಾನ-ದ್ಯತೆಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಕರನ್ನು ಸಮಾಜ ನೋಡುವ ನೋಟ ಬದಲಾಗಿದೆ. ಅದಕ್ಕೆ ಹತ್ತು ಹಲವು ಕಾರಣಗಳು ಇರಬಹುದು. ಮೊದಲಾದರೆ ಶಿಕ್ಷಕ ಎನಿಸಿಕೊಂಡವರಿಗೆ ಅರ್ಪಣಾ ಮನೋಭಾವ ಇತ್ತು. ಈಗ ಆ ಭಾವ ಬದಲಾಗಿದೆ. ಹೀಗಾಗಲು ವ್ಯವಸ್ಥೆಯ ದೋಷಗಳು ಕಾರಣ ಇರಬಹುದು. ಹ಻ಗಾಗಿಯೇ ಇಂದು ಶಿಕ್ಷಕ ವೃತ್ತಿಯಲ್ಲಿ ಸಂಪೂರ್ಣವಾಗಿ ಪಾವಿತ್ರತೆ ಕಾಣುವುದು ಸಾಧ್ಯವಿಲ್ಲ. ಇಂತಹ ಬೆಳವಣಿಗೆಯಿಂದ ಶಿಕ್ಷಕ ವೃತ್ತಿಯಲ್ಲಿರುವ ಎಷ್ಟೋ ಮಂದಿ ವೃತ್ತಿಯನ್ನೇ ತೊರೆದು ಬೇರೆ ಕೆಲಸಗಳಿಗೆ ಹೋಗುವ ಚಿಂತನೆಯಲ್ಲಿರುತ್ತಾರೆ. ಬದಲಾದ ಪರಿಸರ ಇಂತಹದ್ದಕ್ಕೆ ಒತ್ತು ನೀಡುತ್ತದೆ.

ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲನ್ನು ಹತ್ತು ಹಲವು ಜವಾಬ್ದಾರಿ ಹೇರಿಕೊಳ್ಳುತ್ತವೆ ಮತ್ತು ಅಣಕಿಸಲಾರಂಬಿಸುತ್ತವೆ. ಶಿಕ್ಷಕರಿಗೆ ಯೋಜನಾ ಹೊರೆ ಜಾಸ್ತಿಯಾಗಿದೆ. ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿನೀಡಲಾಗುತ್ತಿಲ್ಲ. ಶಾಲಾ ಸಮಿತಿಗಳ ಗೂಂಡಾ ವರ್ತನೆ, ಯಾವುದೇ ಇಲಾಖಾಧಿಕಾರಿಯೂ ಸಹಾ ಯಾವುದೇ ಶಾಲೆಗೆ ಭೇಟಿ ನೀಡಿ ತಪಾಸಣೆ ಮಾಡುವ ಅಧಿಕಾರ ಿರುವಾಗ ಮುಕ್ತ ವಾತಾವರಣದಲ್ಲ ಶಿಕ್ಷಕರು ಕಾರ್ಯ ನಿರ್ವಹಿಸುವುದಾದರೂ ಹೇಗೆ ? ಪ್ರಸಕ್ತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಿಕ್ಷಕನೂ 15ಕ್ಕೂ ಹೆಚ್ಚು ತರಬೇತಿಗಳು ಮತ್ತು ಯೋಜನಾ ಅನುಷ್ಠಾನಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಬಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂಧೋಲನ, ಸಮುದಾಯದತ್ತ ಶಾಲೆ, ನನ್ನೊಳಗಿನ ನಾನು,ಜೀವನ ವಿಜ್ಞಾನ, ಜೀವನ ಶಿಕ್ಷಣ,ಆಂಗ್ಲಭಾಷೆ ತರಭೇತಿ, ಚೈತನ್ಯ, ತರಣಿ-1, ತರಣಿ-2, ನಲಿಕಲಿ, ಬಹುಮುಖಿ, ರಂಗಕಲೆ, ಕ್ರಿಯಾ ಸಂಶೋಧನೆ, ವಿಷಯ ಸಂಪದ್ದೀಕರಣ, ಗಣಕ ತರಭೇತಿ, ಮೂಲಭೂತ ಸೌಕರ್ಯಾಭಿವೃದ್ದಿ, ಕಟ್ಟಡಗಳ ನವೀಕರಣ, ಶಾಲಾಭಿವೃದ್ದಿ ಸಮಿತಿ, ಜನಗಣತಿ, ಮಕ್ಕಳ ಗಣತಿ ಹೀಗೆ ಒಂದೇ ಎರಡೇ? ವರ್ಷವಿಡೀ ಬಿಡುವಿಲ್ಲದಂತೆ ಹೀಗೆ ಶಿಕ್ಷಕ ಪಾಲ್ಗೊಂಡರೆ ಅದೆಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠ ಹೇಳಿಕೊಡಲು ಸಾಧ್ಯ? ಗುಣಮಟ್ಟ ಕಾಯ್ದು ಕೊಳ್ಳುವುದು ಹೇಗೆ? ಶಿಕ್ಷಕರನ್ನು ಹೈರಾಣ ಮಾಡುವ ಇಂತಹ ಯೋಜನೆಗಳು, ಉಸ್ತುವಾರಿಗಳು ಬೇಕೆ? ಶಿಕ್ಷಣದ ಅಭಿವೃದ್ದಿಗೆ ವಿಶ್ವಬ್ಯಾಂಕ್ ನೆರವು ನೀಡುತ್ತದೆ. ಪೊಗದಸ್ತಾಗಿ ಅಲ್ಲಿಂದ ಬರುವ ಹಣವನ್ನು ಥೈಲಿಗೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಮಂತ್ರಿ ಮಹೋದಯರು ಹಾಗೂ ಹಿರಿಯ ಐ ಎ ಎಸ್ ಅಧಿಕಾರಿಗಳು ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದರ ಅರಿವಿಲ್ಲದೆ ಯೋಜನೆಯನ್ನು ಜಾರಿಗೆ ತರುತ್ತಾರೆ. ಅದೂ ಸಾಲದೆಂಬಂತೆ ಕ್ಷೆತ್ರ ಶಿಕ್ಷಣಾಧಿಕಾರಿಗಳ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಅನೇಕ ಉಪ ಹುದ್ದೆಗಳನ್ನು ಸೃಷ್ಟಿಸಲಾಗಿದೆ, ಅಲ್ಲಿಗೂ ಪಾಠ ಹೇಳುವ ಶಿಕ್ಷಕರನ್ನೇ ನೇಮಿಸಲಾಗಿದೆ. ಈ ಬೆಳವಣಿಗೆಯಂತೂ ಶಿಕ್ಷಕರಿಗೆ ನುಂಗಲಾರದಂತಹ ತುತ್ತಾಗಿದೆ. ಇಲಾಖೆಯು ಜಾರಿಗೆ ತರುವ ಯೋಜನೆಗಳ ಬಗ್ಗೆ ಕನಿಷ್ಟ ತಿಳುವಳಿಕೆಯಿಲ್ಲದ ವ್ಯಕ್ತಿಗಳು ಸಹಾ ಶಾಲಾಭಿವೃದ್ದಿ ಸಮಿತಿಯಲ್ಲಿ ಸೇರಿ ಶಿಕ್ಷಕರನ್ನು ನಿಯಂತ್ರಣದಲ್ಲಿಡ ಬಯಸುತ್ತಾರೆ.ರಾಜಕೀಯ ಬೆರೆಸುತ್ತಾರೆ. ಇವೆಲ್ಲಾ ಸೇರಿ ಶಿಕ್ಷಕರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ.

ಶಿಕ್ಷಕ ಸಮುದಾಯದಲ್ಲಿ ವೃತ್ತಿಗೆ ಅಗೌರವ ತಂದು ಕೊಡುವಂತೆ ನಡೆದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಕುಡಿತ, ತಂಬಾಕು, ಇಸ್ಪೀಟು, ಕೇರಂ, ಕಾಮ, ರಾಜಕೀಯ ಹೀಗೆ ಎಲ್ಲವೂ ಬೆರೆತ ಶಿಕ್ಷಕರೂ ಇಡೀ ಸಮುದಾಯಕ್ಕೆ ಕಂಟಕ ಪ್ರಾಯರು, ಅವರ ಸಂಖ್ಯೆ ಕಡಿಮೆ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ. ಇದೆಲ್ಲಾ ಒತ್ತಟ್ಟಿಗಿರಲಿ ಶಿಕ್ಷಕ ಸಮುದಾಯವನ್ನು ಅನಗತ್ಯವಾಗಿ ಹಾಡಿ ಹೊಗಳುವುದನ್ನು ಬಿಟ್ಟು ಅವರ ಸಮಸ್ಯೆಗಳನ್ನು ಆಲಿಸಿ-ಮುಕ್ತ ವಾತಾವರಣದಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಲು ಅವಕಾಸ ಮಾಡಿದರೆ ಅದಕ್ಕಿಂತ ಬೇರೆ ಗೌರವ ಬೇಕಿಲ್ಲ ಅಲ್ಲವೇ? ಅಂದ ಹಾಗೆ ನಿಮ್ಮ ಬದುಕಿಗೆ ತಿರುವು ನೀಡಿದ, ಬದುಕು ರೂಪಿಸಿದ ಗುರುಗಳನ್ನು ನೆನಪು ಮಾಡಿಕೊಂಡಿರಾ ? ಅವರಿಗೆ ಶುಬಾಶಯ ಹೇಳಿದ್ರಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...