Thursday, June 5, 2008

ಬೆಲೆ ಏರಿಕೆ ಸಾಧುವೇ....???

ಕೇಂದ್ರ ಸರ್ಕಾರದ ಅಸಮರ್ಪಕ ನೀತಿಯಿಂದಾಗಿ ಜನಸಾಮಾನ್ಯ ಸಂಕಟಕ್ಕೆ ಒಳಗಾಗುವಂತಾಗಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದ ಮೇಲೆ ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಇದು ಯುಪಿಎ ಸರ್ಕಾರದಲ್ಲಿ ಮಾತ್ರವಲ್ಲ ಈ ಹಿಂದೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವಿದ್ದಾಗಲೂ ಬೆಲೆ ಏರಿಕೆ ಆಗಿತ್ತು. ಜನಸಾಮಾನ್ಯರು ಬಳಸುವ ದಿನಬಳಕೆ ವಸ್ತುಗಳಾದ ಸೀಮೇಎಣ್ಣೆ, ಡೀಸೆಲ್, ಪೆಟ್ರೊಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಉಂಟಾಗಿದೆ, ಇದು ದೇಶದ ಮಧ್ಯದ ವರ್ಗದ ಜನರ ಮೇಲೆ ಪ್ರಮುಖವಾಗಿ ಪರಿಣಾಮ ಬೀರಲಿದೆ. ಸೂಕ್ರ ಕಾಲದಲ್ಲಿ ರಸಗೊಬ್ಬರಕ್ಕೆ ಸಬ್ಸಿಡಿ ನೀಡದ್ದರಿಂದ ಸಕಾಲದಲ್ಲಿ ರೈತರಿಗೆ ಗೊಬ್ಬರ ಪೂರೈಕೆಯಾಗುತ್ತಿಲ್ಲ ಈ ನಡುವೆಯೇ ಬೆಲೆ ಏರಿಕೆಯಂತಹ ವಿಷಯಗಳು ಶ್ರೀ ಸಾಮಾನ್ಯನನ್ನು ಆತಂಕ ಉಂಟುಮಾಡಿವೆ. ತೈಲ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಸಹಜವಾಗಿ ಬಸ್ ಮತ್ತು ರೈಲು ದರ ಏರಿಕೆಯಾಗುತ್ತದೆ. ಆದ್ದರಿಂದ ಜನಸಾಮಾನ್ಯರ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ಈ ಎಲ್ಲ ಬೆಳವಣಿಗೆಗೆ ಸರ್ಕಾರದ ನೀತಿ ಕಾರಣವಾಗಿದೆ. ಎಲ್ಲಿ ಜನರ ಹಿತಾಸಕ್ತಿಗನುಗುಣವಾಗಿ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಕೊರತೆ ಸರಿದೂಗಿಸಿಕೊಳ್ಳಲು ಪರ್ಯಾಯ ಮಾರ್ಗ ಕಂಡು ಕೊಳ್ಳುವುದಿಲ್ಲವೋ ಆಗ ಇಂತಹ ನಿರ್ಧಾರಗಳು ಜನರಿಗೆ ಹೊರೆಯಾಗಿ ಪರಿಣಮಿಸುತ್ತವೆ. ಮೊದಲೇ ದೇಶದ ಜನರ ಜೀವನ ಮಟ್ಟ ಮತ್ತು ಅವರ ಾರ್ಥಿಕ ಸ್ಥಿತಿಗತಿ ಶೇ.5 ಕ್ಕಿಂತ ಹೆಚ್ಚಿಲ್ಲ ಿದರಲ್ಲಿ ಹೊಟ್ಟೆ ಬಟ್ಟೆಗೆ ನೇರ ಮಾಡಿಕೊಳ್ಳುವಷ್ಟರಲ್ಲಿ ಸೋತು ಹೋಗುತ್ತಾನೆ, ಈ ನಡುವೆ ಸಂಪತ್ತು ಕ್ರೋಢೀಕರಣ ಮಾಡಿಕೊಂಡ ಮಂದಿ ಮತ್ತಷ್ಟು ಜನರನ್ನು ಸುಲಿಯಲು ಈ ಸರ್ಕಾರಗಳು ಅವಕಾಶ ಮಾಡಿಕೊಡುತ್ತಿವೆ ಇದು ಸಧ್ಯದ ಮಟ್ಟಿಗಂತೂ ಒಳ್ಳೆಯ ಬೆಳವಣಿಗೆಯಲ್ಲ... ರಾಜ್ಯಗಳ ವಿಷಯದಲ್ಲು ಅಷ್ಟೆ ಚುನಾವಣೆ ಗೆಲ್ಲುವ ಸಲುವಾಗಿ ಪ್ರಕಟಿಸುವ ಅಗ್ಗದ ಯೋಜನೆಗಳು ಉದಾಹರಣೆಗೆ ಬಿಜೆಪಿ ಸರ್ಕಾರ ಪ್ರಕಟಿಸಿರುವ ಶೆ.3 ರ ಕೃಷಿ ಸಾಲ, ಉಚಿತ ವಿದ್ಯುತ್ ಕಾಂಗ್ರೆಸ್ ಸರ್ಕಾರದ ಬಣ್ಣದ ಟೀವಿ ಯೋಜನೆ..... ಎವೆಲ್ಲ ಸಮಾಜದ ಅಭಿವೃದ್ದಿಗೆ ಬದಲಾಗಿ ವ್ಯವಸ್ಥೆಯಲ್ಲಿರುವ ಸಮತೋಲನವನ್ನು ಹಾಳು ಮಾಡುತ್ತವೆ ಹಾಗೂ ಹೆಚ್ಚುವರಿ ತೆರಿಗೆ ಮತ್ತು ಬೆಲೆ ಏರಿಕೆಗೆ ಪರೋಕ್ಷವಾಗಿ ಕಾಣಿಕೆ ನೀಡುತ್ತವೆನ್ನುವುದು ಸಹಾ ಸತ್ಯ.

ಯಡ್ಯೂರಪ್ಪ ಸರ್ಕಾರದ ನಿರೀಕ್ಷೆಗಳು.............


ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕಾಲ ಮುಗಿದಿದೆ, ಇದೇ ಪ್ರಥಮ ಭಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸಕಾಱರ ರಚಿಸಿದೆ, ಈಗ ಸಕಾಱರಕ್ಕಿರುವ ಅಲ್ಪ ಬಹುಮತಕ್ಕೆ ಪಕ್ಷೇತರರು ಆಸರೆಯಾಗಿದ್ದಾರೆ. ಅದಕ್ಕೂ ಮಿಗಿಲಾಗಿ ಬಳ್ಳಾರಿಯ ಗಣಿದೊರೆಗಳ ಕಪಿ ಮುಷ್ಠಿಯಲ್ಲಿ ಸರ್ಕಾರ ನಡೆಯುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ . ಸಚಿವ ಸ್ಥಾನಗಳ ಹಂಚಿಕೆ ಯಲ್ಲೂ ಅಸಮಧಾನ ಬುಗಿಲೆದ್ದಿದೆ. 4ಭಾರಿ ಆಯ್ಕೆಯಾದವರು ಕೇವಲ ಶಾಸಕರಾಗಿ ಉಳಿದಿದ್ದಾರೆ. ನಿನ್ನೆ ಗೆದ್ದವರು ಹೊಸದಾಗಿ ಪಕ್ಷ ಸೇರಿದವರು ಮಂತ್ರಿಗಳಾಗಿದ್ದಾರೆ. ಇದರಿಂದ ಅಸಮಧಾನ ಹೊಗೆಯಾಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಇದು ನುಂಗಲಾರದ ತುತ್ತು. ಸದಾಶಯ ಇಟ್ಟುಕೊಂಡು ರಚನೆಯಾಗಿರುವ ಸರ್ಕಾರದಲ್ಲಿ ಮುಖ್ಯಮಂತ್ರಿ ಯವರು ರೈತರಿಗೆ ಶೇ.3ರ ದರದ ಕೃಷಿ ಸಾಲ, ಹೈನುಗಾರಿಕೆಯಲ್ಲಿ ತೊಡಗುವ ಮಹಿಳೆಯರಿಗೆ 2ರೂ ಪ್ರತಿ ಲೀ. ಹಾಲಿಗೆ ಪ್ರೋತ್ಸಾಹ ಧನ ನೀಡುವ ಮಾತನ್ನಾಡಿದ್ದಾರೆ. ಮತ್ತುರೈತರಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ಥಾವನೆಯನ್ನು ಮಾಡಿದ್ದಾರೆ. ಇವು ಸದುದ್ದೇಶಗಳೆ. ಮುಖ್ಯಮಂತ್ರಿಯವರ ಯೋಜನೆಗಳು ಫಲಪ್ರದವಾಗಬೇಕಾದರೆ ವಿಶ್ವಾಸಮತ ಸಾಬೀತು ಮಾಡುವ ಜೊತೆಗೆ ಸ್ಥಿರತೆಯನ್ನು ಕಾಯ್ದು ಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯಾಗ ಬೇಕಾದರೆ ಅಭಿವೃದ್ದಿಗೆ ಹಣ ತರಬೇಕಾದರೆ ಸ್ಥಿರ ಸರ್ಕಾರದ ಅವಶ್ಯಕತೆಯೂ ಸಹಾ ಇದೆ ಈ ನಿಟ್ಟಿನಲ್ಲಿ ವಿಶ್ವಾಸ ಮತ ಬೇಕು ಹಾಗು ಮತ್ತೊಂದು ಚುನಾವಣೆ ಅತಂತ್ರ ಸರ್ಕಾರ ಯಾರಿಗೂ ಬೇಕಿಲ್ಲ ಹಾಗಾಗಿ ಬಿಜೆಪಿ ಐದು ವರ್ಷಗಳ ಯಶಶ್ವಿ ಸರ್ಕಾರ ನೀಡುವುದೇ? ಸ್ಥಿರತೆ ಕಾಯ್ದು ಕೊಳ್ಳುವುದೇ ಕಾದು ನೋಡೋಣ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...