Wednesday, July 23, 2008

ನಂಬಿಕೆ ಎಂದರೇನು ಗೊತ್ತಾ?



ನಂಬಿಕೆಗಳು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತವೆ, ಮತ್ತು ಅವು ನಮ್ಮನ್ನು ಜಾಗೃತಾವಸ್ಥೆಯಲ್ಲಿಡುತ್ತವೆ. ನಂಬಿಕೆಗಳು ದೈವನಂಬಿಕೆ,ಮೂಢನಂಬಿಕೆ,ಪರಸ್ಪರರ ನಡುವಣ ನಂಬಿಕೆ ಹೀಗೆ ಏನೇನೋ. ನಿಮಗೆ ಗೊತ್ತಾ ಇಂತಹ ನಂಬಿಕೆಗಳಿಂದಲೇ ಅದೆಷ್ಟೋ ವ್ಯವಹಾರಗಳು ನಡೆಯುತ್ತವೆ. ಮೊನ್ನೆಯಷ್ಠೆ ನಡೆದ ಭಾರತ-ಅಮೇರಿಕ ಅಣುಒಪ್ಪಂದ ಮಾಡಿಕೊಳ್ಳುವಾಗ ಪ್ರಧಾನಿ ಮನಮೋಹನ್ ಸಿಂಗ್ ರಿಗೆ ತಾವು ಸಂಸತ್ ನಲ್ಲಿ ಈ ಸಂಬಂಧ ಬರುವ ಎಂತಹುದೇ ಅಡ್ಡಿ ಆತಂಕವನ್ನು ಎದುರಿಸುತ್ತೇನೆ ಎಂಬ ನಂಬಿಕೆ ಅಣುಒಪ್ಪಂದಕ್ಕೆ ಕಾರಣವಾಯಿತು. ಅದೇ ರೀತಿ ನಮ್ಮ ದಿನನಿತ್ಯದ ಆಗು ಹೋಗುಗಳಲ್ಲಿ ತಂದೆ-ತಾಯಿಗೆ ಮಕ್ಕಳ ಮೇಲಿನ ನಂಬಿಕೆ ಮಕ್ಕಳು ಓದುತ್ತಾರೆ, ಒಳ್ಳೆಯವರು, ಮಾತು ಹೇಳಿದಂತೆ ಕೇಳುತ್ತಾರೆ ಎಂಬು ನಂಬಿಕೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ತಾವು ಓದಿದ್ದು ಬಂದಿರುತ್ತದೆಂಬ ನಂಬಿಕೆ, ಪಾಸಾಗುವ ನಂಬಿಕೆ, ಯುವಕ-ಯುವತಿಯರಿಗೆ ಪ್ರೀತಿ ಯ ನಂಬಿಕೆ, ಆಸ್ತಿಕರಿಗೆ ದೇವರ ನಂಬಿಕೆ, ನಾಸ್ತಿಕರಿಗೆ ಎಲ್ಲವೂ ಮಿಥ್ಯವೆಂಬ ನಂಬಿಕೆ, ವೃದ್ಧರಿಗೆ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಂಬಿಕೆ ಹೀಗೆ ಉದ್ದುದದ ಪಟ್ಟಿ ಸಾಗುತ್ತದೆ. ಆದರೆ ಒಂದಂತೂ ಸತ್ಯ ನಂಬಿಕೆಗಳು ನಮ್ಮನ್ನು ಕಾಯುತ್ತವೆ. ನಂಬಿಕೆಗಳು ನಮ್ಮನ್ನು ಬೆಳೆಸುತ್ತವೆ. ಸ್ನೇಹಿತರಲ್ಲಿಡುವ ನಂಬಿಕೆಗಳು ಸ್ನೇಹವನ್ನು ಅಚಲವಾಗಿಸುತ್ತವೆ. ಸಂಬಂಧಿಕರಲ್ಲಿಡುವ ವಿಶ್ವಾಸ ಸಂಭಂಧವನ್ನು ಗಟ್ಟಿಗೊಳಿಸುತ್ತವೆ. ಮಹಾಭಾರತದಲ್ಲಿ ಅರ್ಜುನ ಕೌರವ ಸಮೂಹವನ್ನು ಎದುರಿಸಿದ್ದು ತನ್ನ ತೋಳ್ಬಲದಿಂದಲ್ಲ ಕೃಷ್ಣ ಪರಮಾತ್ಮ ತನ್ನ ಜೊತೆಗಿದ್ದಾನೆಂಬ ನಂಬಿಕೆಯಿಂದ. ಅಭಿಮನ್ಯು ಚಕ್ರವ್ಯೂಹವನ್ನು ಭೇಧಿಸಿದ್ದು ತನ್ನ ಸಾಮರ್ಥ್ಯದ ಮೇಲಿನ ನಂಬಿಕೆಯಿಂದ........(ಮುಂದುವರಿಯುವುದು)

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...