Sunday, March 7, 2010

'ಭಾವನೆ'ಗೆ ಬೆಂಕಿ ಬಿದ್ರೆ ಏನಾಗುತ್ತೆ ಗೊತ್ತಾ?

ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ ಎಂಬ ಮಾತಿದೆ ಅದು ನಿತ್ಯಾನಂದ ಸ್ವಾಮಿಯ ವಿಚಾರದಲ್ಲಿ ನಿಜವಾಗಿಬಿಟ್ಟಿದೆ. ನಿತ್ಯಾನಂದನ ನಿತ್ಯ 'ಆನಂದ' ಈಗ ಜಗಜ್ಜಾಹೀರು, ಕೆಲ ದಿನಗಳ ಹಿಂದೆ ಆಂದ್ರದ ರಾಜ್ಯಪಾಲರಾಗಿದ್ದ ಎನ್ ಡಿ ತಿವಾರಿ ಸಹಾ ಇಂತಹುದೇ ಸೆಕ್ಸ್ ಹಗರಣಕ್ಕೆ ಸಿಲುಕಿ ಮನೆಗೆ ಹೋಗ ಬೇಕಾಯಿತು. ಇಂತಹ ಪ್ರಕರಣಗಳು ಬಹುಬೇಗ ಪ್ರಚಾರಪಡೆದು ಬಿಡುತ್ತವೆ ಮತ್ತು ಅಷ್ಟೇ ಬೇಗ ಮರೆಯಾಗುತ್ತವೆ. ಜನ ಮತ್ತೆ ಖಾದಿಗಳನ್ನು, ಖಾವಿಗಳನ್ನು ನಂಬುತ್ತಾರೆ ಅವರನ್ನು ಇನ್ನಿಲ್ಲದಂತೆ ಆರಾದಿಸುತ್ತಾರೆ. ಹಾಗಂತ ಎಲ್ಲ ಖಾದಿಗಳನ್ನು-ಖಾವಿಗಳನ್ನು ಒಂದೇ ಓರೆಗೆ ಹಚ್ಚಬೇಕಿಲ್ಲ. ಆದರೆ ಒಂದು ಮಾತ್ರ ಸತ್ಯ ಜನರ ಭಾವನೆಗಳಿಗೆ ಧಕ್ಕೆ ಒದಗಿದರೆ ಯಾರಿಗೂ ಮತ್ತು ಯಾವುದಕ್ಕೂ ಉಳಿಗಾಲವಿಲ್ಲ.
ಹೌದು, ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಮಾತ್ರ ಇಂತಹವೆಲ್ಲ ಬಹಿರಂಗವಾಗುತ್ತವೆ, ಕೋಲಾಹಲಕ್ಕೆ ಕಾರಣವಾಗುತ್ತವೆ ಎಂದು ಭಾವಿಸ ಬೇಕಿಲ್ಲ . ಜಗತ್ತಿನ ಎಲ್ಲ ರಾಷ್ಟ್ರಗಳಲ್ಲು ಹೆಸರ ಮಾಡಿದ 'ದೊಡ್ಡ' ವ್ಯಕ್ತಿಗಳೂ ಇಂತಹದ್ದೊಂದು ಅನಾಹುತವನ್ನು ಮಾಡಿಕೊಂಡಿರುತ್ತಾರೆ. ಅಷ್ಟಕ್ಕೂ ಒಂದು ಖಾಸಗಿ ಬದುಕಾದ ಸೆಕ್ಸ್ ಯಾಕೆ ಬಹಿರಂಗಕ್ಕೆ ಬರಬೇಕು? ಅವರು ಸೆಕ್ಸ್ ಮಾಡಿದರೆ ಇವರಿಗೇನು ನಷ್ಟ? ಅದಕ್ಕೇಕೆ ಅಷ್ಟೊಂದು ಪ್ರಚಾರ? ಎಂಬ ಪ್ರಶ್ನೆಗಳು ಏಳುವುದು ಸಹಜ. ಅಂತಹ ಮಠಗಳು, ಸ್ವಾಮೀಜಿಗಳು ಬೇಕೆ? ಅವರಿಗೆ ಸಮಾಜದಿಂ ದ ಸಿಗುತ್ತಿರುವ ಗೌರವ ಸಾಧುವೇ? ಅವರಿಂದ ಸಮಾಜಕ್ಕ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ? ಅವರು ನಿಜವಾಗಿ ಇರಬೇಕಾದುದೆಲ್ಲಿ? ಈಗ ಎಲ್ಲಿದ್ದಾರೆ ಅವರ ಸ್ಥಾನಮಾನವೇನು? ಜನಪ್ರಿಯತೆಗೆ ಅವರು ಅನುಸರಿಸುತ್ತಿರುವ ಮಾರ್ಗವಾದರೂ ಎಂತಹುದು?ಇವಷ್ಟು ಪ್ರಶ್ನೆಗಳು ಸಾಕು ಒಬ್ಬ ಸ್ವಾಮಿಜಿಯ ಬಂಡವಾಳ ಬಯಲು ಮಾಡಲು. ಸ್ವಾಮೀಜಿ ಎಂದರೆ ಮೂರು ಬಿಟ್ಟವನಲ್ಲ, ಆತನಿಗೆ ಹಲವು ಇತಿಮಿತಿಗಳಿವೆ,ಆ ಚೌಕಟ್ಟಿನೊಳಗೆ ಬಂದರೆ ಮಾತ್ರ ಆತನಿಗೆ ಗೌರವ. ನೋಡಿ ಒಬ್ಬ ವ್ಯಕ್ತಿ ಬೆಳಕಿಗೆ ಬರಬೇಕಾದರೆ ಅದು ಆತನೊಬ್ಬನ ಶ್ರಮದ ಮೇಲೆ ನಿಂತಿರುವುದಿಲ್ಲ, ಆತನ ತತ್ವ, ಸಿದ್ದಾಂತ, ಆಚಾರ-ವಿಚಾರಗಳು ಜನರ ಬದುಕಿನೊಂದಿಗೆ ತಾಳೆಯಾಗ ಬೇಕು ಜನರಿಗೆ ಅದು ಇಷ್ಟವಾಗಬೇಕು ಆಗ ಮಾತ್ರ ಆತನನ್ನು ಸಮುದಾಯ ಸ್ವೀಕರಿಸುತ್ತದೆ. ಆದರೆ ವಿಚಾರವೇ ಬೇರೆ ಆಚಾರವೇ ಬೇರೆ ಅಂದಾಗ ಮಾತ್ರ ಎಡವಟ್ಟು ಕಟ್ಟಿಟ್ಟಬುತ್ತಿ. ನಿತ್ಯಾನಂದನ ವಿಚಾರದಲ್ಲಿ ಆದದ್ದೂ ಇದೇ ಜಗತ್ತಿನಾಧ್ಯಂತ 44ಕ್ಕೂ ಹೆಚ್ಚು ಮಠದ ಶಾಖೆಗಳು ಲಕ್ಷಾಂತರ ಮಂಧಿ ಭಕ್ತರನ್ನು ಹೊಂದಿರುವ ಈತ ಜನರಿಗೆ ಅದೇನೂ ಮರುಳು ಮಾಡಿದ್ದನೋ ದೇವರೇ ಬಲ್ಲ. ಸ್ವಾಮೀಜಿಗ ಆಸೆ-ಕಾಮ ಜಾಗೃತವಾದರೆ ಅವನು ಸ್ವಾಮಿ ಎನಿಸಿಕೊಳ್ಳಲು ಅರ್ಹನಲ್ಲ, ದಶಕಗಳ ಹಿಂದೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಮೋಹಕ್ಕೆ ಸಿಲುಕಿದಾಗ ತಕ್ಷಣವೆ ಪೀಠ ಬಿಟ್ಟೆದ್ದರು, ಆ ಕಾರಣಕ್ಕೆ ಇಂದಿಗೂ ಅವರಿಗೆ ಜನಮಾನಸದಲ್ಲಿ ಸ್ಥಾನ-ಮಾನವಿದೆ. ಆದರೆ ಇದೇನಿದು ನಿತ್ಯಾನಂದ ಕಥೆ?
ಒಬ್ಬ ಸ್ವಾಮೀಜ ಎಂದರೆ ಆತ ದೇವರಿಗೆ ಸಮಾನ, ಅವನನ್ನು ನಡೆದಾಡುವ ದೇವರು, ನಿಜದೇವರು ಎಂದೇ ಭ್ರಮಿಸಲಾಗುತ್ತದೆ. ಅದಕ್ಕಾಗಿ ಆತ ಕಾಮ,ಕ್ರೋಧ,ಲೋಭ, ಮದ, ಮಾತ್ಸರ್ಯ ಇತ್ಯಾದಿಗಳನ್ನು ತ್ಯಜಿಸಬೇಕಾಗುತ್ತದೆ. ಆದರೆ ವಾಸ್ತವದಲ್ಲಿ ಆಗುತ್ತಿರುವುದೇನು ಸ್ವಾಮಿ? ಇವತ್ತು ಕರ್ನಾಟಕದಲ್ಲಿ ಏನಿಲ್ಲವೆಂದರೂ ಸಾವಿರಾರುಮಠಗಳಿವೆ, ಅದಕ್ಕೂ ಮಿಕ್ಕಿದ ಸಂಖ್ಯೆಯ 'ಜಗದ್ಗುರು'ಗಳಿದ್ದಾರೆ, ಅವುಗಳಿಗೆ ಮುಡಿಪು ಸಲ್ಲಿಸುವ ಭಕ್ತರಿದ್ದಾರೆ, ಜನರ ಭಾವನೆಗಳನ್ನ ಅಡವಿಡುವ ಮುಖ್ಯಮಂತ್ರಿ ಮತ್ತಿತರರು ಇದ್ದಾರೆ. ಆದರೆ ಮಠಗಳು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯೋನ್ಮುಖವಾಗಿವೆಯೇ? ಸ್ವಾಮಿಯ ವೇಷದಲ್ಲಿ ಕುಳೀತ ಅವಿವೇಕಿಗಳೂ ಹೇಗೆ ನಡೆದು ಕೊಳ್ಳುತ್ತಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತೇ? ಇವತ್ತು ಪ್ರತೀ ಜಾತಿಗೂ ಒಬ್ಬ ಸ್ವಾಮಿಜಿ, ಆ ಸ್ವಾಮಿಜಿಗಳಿಗೊಬ್ಬ ಜಗದ್ಗುರುಗಳು ಪ್ರತಿಷ್ಠಾಪಿತರಾಗಿ ಬಿಟ್ಟಿದ್ದಾರೆ. ಐಹಿಕ ಸುಖ-ಭೋಗಗಳನ್ನು ತ್ಯಜಿಸಿ, ಅರಿಷಡ್ವರ್ಗಗಳನ್ನ ಗೆಲ್ಲ ಬೇಕಾದವರು ಜನರ ಭಾವನೆಗಳನ್ನು ಆಳುತ್ತಾ ಕಾಮ,ಕ್ರೋದ,ಲೋಭ, ಮದ, ಮಾತ್ಸರ್ಯಗಳನ್ನು ಮೈಗೂಡಿಸಿ ಕೊಂಡು ಬಿಟ್ಟಿದ್ದಾರೆ. ಹಾಗಾಗಿ ಸ್ವಾಮಿಜಿಗಳ ನಡುವೆ ಮಠಾಧಿಕಾರಕ್ಕೆ, ಆಸ್ತಿಯ ಹಕ್ಕಿಗೆ ಕಿತ್ತಾಟ ಶುರುವಾಗಿದೆ, ಪರಸ್ಪರರ ನಡುವೆ ದ್ವೇಷಾಸೂಯೆ ಮಡು ಗಟ್ಟಿದೆ ಇಂತಹದ್ದರ ನಡುವೆ ನಿತ್ಯಾನಂದ ನಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರೂ ಇದ್ದಾರೆ. ಒಂದು ಮಠವೆಂದರೆ ಅಲ್ಲಿ ಭಕ್ತಿ-ಭಾವ ಹೋಗಿಬಿಟ್ಟಿದೆ. ಅಲ್ಲೀಗ ಆಧ್ಯಾತ್ಮದ ಹೆಸರಿನಲ್ಲಿ , ದೇವರ ಹೆಸರಿನಲ್ಲಿ , ಸಾಧು ಸಜ್ಜನರು, ದಾರ್ಶನಿಕ ರಹೆಸರಿನಲ್ಲಿ ಜನರನ್ನು ಮರುಳು ಮಾಡಲಾಗುತ್ತಿದೆ. ಮಠಗಳಿಗೆ ಯಡಿಯೂರಪ್ಪನವರ ಕೃಪೆಯಿಂದ ಕೋಟಿ ಕೋಟಿ ಅನುದಾನ ನೀಡಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳನ್ನ ನೀಡುವ ಮೂಲಕ ಶಿಕ್ಷಣದ ಅಧಿಕೃತ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾವ ಸ್ವರ್ಗ ಸುಖಕ್ಕೂ ಕಡಿಮೆ ಇಲ್ಲದಂತಹ ಬಂಗಲೆಗಳು, ತೋಟಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು ... ಹೇಳಿ ಸ್ವಾಮಿ ಇವೆಲ್ಲಾ ಯಾರ ಸುಖಕ್ಕೆ. ಇವತ್ತು ಎಷ್ಟು ಮಂದಿ ಬಡವ-ಮದ್ಯಮ ವರ್ಗದ ರೋಗಿ , ವಿದ್ಯಾರ್ಥಿ ಗಳಿಗೆ ಈ ಮಠದ ಸ್ವಾಮೀಜಿಗಳು ಉಚಿತ ಸೇವೆ ನೀಡಿದ್ದಾರೆ?
ವಿಪರ್ಯಾಸದ ಸಂಗತಿ ಏನು ಗೊತ್ತಾ ಹಿಂದೆ ಬಸವಧರ್ಮದ ಮಠಗಳು, ಬ್ರಾಹ್ಮಣರ ಮಠಗಳು ಮತ್ತು ಸ್ವಾಮೀಜಿಗಳು ಇದ್ದರು,ಇವತ್ತೇನಾಗಿದೆ? ಅವತ್ತು ಕೇಂದ್ರೀಕೃತವಾಗಿದ್ದು ಇವತ್ತು ಪಸರಿಸಿದೆ. ಹಿಂದುಳಿದವರ್ಗಗಳು, ದಲಿತರುಗಳಿಗೂ ಮಠಗಳು ಸ್ವಾಮೀಜಿಗಳು ಉದಯಿಸಿದ್ದಾರೆ. ಮಠಗಳು ಜಾತಿಯ ಕೇಂದ್ರಗಳಾಗಿವೆ, ಸ್ವಾಮೀಜಿಗಳು ಇವತ್ತು ಜಾತಿಯ ನೇತಾರರಾಗಿದ್ದಾರೆ, ಯಾವುದೇ ಕೆಲಸ ಕಾರ್ಯವಾಗಬೇಕಿದ್ದರೂ(ಚುನಾವಣೆಯಲ್ಲಿ ಮತಹಾಕುವುದಕ್ಕೂ) ಸ್ವಾಮೀಜಿಗಳ ಹಸ್ತಕ್ಷೇಪವಿಲ್ಲದೇ ನಡೆಯುತ್ತಿಲ್ಲ ಇದೆಲ್ಲಾ ಬೇಕಾ ? ಜನರ ಬಾವನೆಗಳೊಂದಿಗೆ ಹುಡುಗಾಟ ಆಡುವ ಸ್ವಾಮಿಜಿಗಳು ಹೇಳೋದು ಅಚಾರ, ಮಾಡೋದು ಅನಾಚಾರ ಎಂಬಂತೆ ನಡೆದು ಕೊಳ್ಳುತ್ತಿದ್ದಾರೆ. ಕೆಲವು ಹೆಸರು ಮಾಡಿದ ಮಠಗಳಲ್ಲಿ ಇವತ್ತಿಗೂ ಜಾತಿ ಪದ್ದತಿ ಅಸ್ತಿತ್ವದಲ್ಲಿದೆ, ಸ್ವಾಮೀಜಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು, ಮುಖವಾಡ ಕಳಚ ಬೇಕು, ನಂಬಿದ ಜನರಿಗೆ ವಂಚನೆ ಮಾಡಿದರೆ ಖಂಡಿತಾ ಉಳಿಗಾಲವಿಲ್ಲ. ಇಲ್ಲದಿದ್ದರೆ ಜನರೇ ನಿಮ್ಮನ್ನು ಬಯಲು ಮಾಡುವ ದಿನಗಳು ದೂರವಿಲ್ಲ ಎಚ್ಚರವಿರಲಿ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...