Sunday, May 23, 2010

ಕನ್ನಡ ಕಟ್ಟುವ ಕೆಲಸ ಅಂದ್ರೆ ಏನು?



ಹೌದು ಇಂತಹದ್ದೊಂದು ಪ್ರಶ್ನೆ ಕಾಡಿದ್ದು 3-4ವಾರಗಳ ಹಿಂದೆ. ಅದು ಹಲ್ಮಿಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನಪದ ಪರಿಷತ್ ಕಾರ್ಯಕ್ರಮ, ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಿದ್ದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಎಡಬಿಡಂಗಿಯಂತೆ ಮಾತನಾಡುತ್ತಿದ್ದರು. "ಹಲ್ಮಿಡಿ" ಗ್ರಾಮ ಕನ್ನಡ ಅಕ್ಷ ರಲೋಕ ದಹೆಬ್ಬಾಗಿಲು, ಇಲ್ಲಿ ಮೂಲ ಸೌಕರ್ಯಗಳ ಅಭಿವೃದ್ದಿಯಾಗಿಲ್ಲ, ಗ್ರಾಮಕ್ಕೆ ಸರಿಯಾದುದೊಂದು ರಸ್ತೆಯಿಲ್ಲ,ಇಲ್ಲಿ ಪ್ರವಾಸೋಧ್ಯಮದ ಕೇಂದ್ರ ಆರಂಭವಾಗಬೇಕು, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ,ಆಡಳಿತ ಸತ್ತಿದೆ, ಶಾಸಕರುಗಳು ಗಮನ ಹರಿಸುತ್ತಿಲ್ಲ ", " ಆದರೆ ಸಿಎಂ ಯಡ್ಡಿಯೂರಪ್ಪ ಒಳ್ಳೆಯವರು ಅವರನ್ನ ಅಪ್ರೋಚ್ ಮಾಡಿದರೆ ಅಭಿವೃದ್ದಿ ಆಗುತ್ತೆ, ಆದ್ರೆ ಅಧಿಕಾರಸ್ಥರು ಈ ಬಗ್ಗೆ ಗಮನ ಹರಿಸುತ್ತಿಲ್ಲ" ಹೀಗೆ ಪುಂಖಾನುಪುಂಖವಾಗಿ ಅವತ್ತು ಮಾತನಾಡಿದ್ದು ಇದೆ ನಲ್ಲೂರು ! ಕನ್ನಡದ ಕೆಲಸಕ್ಕೆ ಅಧಿಕಾರಸ್ಥರ ಓಲೈಕೆ ಬೇಕಾ? ಅನಿಸಿತು ಆ ಕ್ಷಣಕ್ಕೆ. ಇದೇ ನಲ್ಲೂರು ಪ್ರಸಾದ್ ಕಸಾಪ ದ ರಾಜ್ಯಾಧ್ಯಕ್ಷರಾಗಿದ್ದಾರೆ, ಅವರ ಹುದ್ದೆಗಿರುವ ತಾಕತ್ತು ಬಳಸಿ ಗುಟುರು ಹಾಕಿದರೆ ಸಾಕಲ್ವಾ?ಕನ್ನಡದ ಕೆಲಸಕ್ಕೆ ಯಾವ ಸಿಎಂ ಆದರೇನು? ಪಿಎಂ ಆದರೇನು? ಇವತ್ತು ಹಾಸನ ಜಿಲ್ಲೆಯಲ್ಲಿ ಅನುದಾನವಿದ್ದರೂ ಸ್ಥಗಿತಗೊಂಡಿರುವ ಹೊಯ್ಷಳ ಮಹೋತ್ಸವ ನಡೆದಿಲ್ಲವೆಂದರೆ ಅದಕ್ಕೆ ಕಾರಣ ಬಿಜೆಪಿ ಸರ್ಕಾರ ಜಿಲ್ಲೆಯ ಬಗ್ಗೆ ತಳೆದಿರುವ ಮಲತಾಯಿ ಧೋರಣೆಯೇ ಕಾರಣ. ಕನ್ನಡ ಭಾಷೆಗೆ ಸಂಬಂದಿಸಿದಂತೆ ಅತೀ ಮುಖ್ಯ ಎನಿಸಿರುವ ಹಲ್ಮಿಡಿ ಗ್ರಾಮ ದಬಗ್ಗೆ ಅಲ್ಲಿನ ಸ್ಮಾರಕದ ಬಗ್ಗೆ ಆಸ್ಥೆ ವಹಿಸದಿರಲು ರಾಜ್ಯ ಸರ್ಕಾರ ನೇರ ಹೊಣೆ ಯಲ್ಲವೇ? ಸರ್ಕಾರದ ಇಂತಹ ನಿಲುವುಗಳ ಬಗ್ಗೆ ಸ್ಥಳೀಯ ಆಡಳಿತವನ್ನು ದೋಷಿಸದೇ ರಾಜ್ಯ ಮಟ್ಟದಲ್ಲಿ ಸರಿಯಾದ ಗುದ್ದು ಹಾಕಿದರೆ ಇದೆಲ್ಲಾ ಎಷ್ಟರ ಮಾತು ಪ್ರಸಾದ್?
ಹೌದು ಕನ್ನಡ ಕಟ್ಟುವ ಕೆಲಸ ಎಂದರೇನು? ಕನ್ನಡ ಭಾಷೆಯ ಪ್ರಾಮುಖ್ಯತೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಇದೆ? ಕನ್ನಡಕ್ಕೆ ಸಂಬಂಧಿಸಿದ ರಚನಾತ್ಮಕ ಕೆಸಲಗಳು ಹೇಗೆ ಸಾಗಿದೆ? ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಕಟ್ಟುವ ಕೆಲಸ ಹೇಗಿದೆ? ಬೇರೆ ಬಾಷೆಗಳಿಗಿಂ ತಕನ್ನಡ ಹೇಗೆ ಭಿನ್ನವಾಗಿದೆ? ಕನ್ನಡದ ಹೋರಾಟ ಯಾ ವದಿಕ್ಕಿನಲ್ಲಿ ಸಾಗಿದೆ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿದ್ದು ಒನ್ಸ್ ಎಗೇನ್ ಅದೇ ಹಲ್ಮಿಡಿಯ ಕಾರ್ಯಕ್ರಮದಲ್ಲಿ. ಇರಲಿ ಈಗ ನೇರವಾಗಿ ವಿಚಾರಕ್ಕೆ ಬರುತ್ತೇನೆ. ಅದು ಹಾಸನ ನಗರದ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮ ಪ್ರಧಾನ ಭಾಷಣಕಾರರೊಬ್ಬರು ಪ್ರಶ್ನೆ ಹಾಕಿದರು. ಕನ್ನಡ ದಪ್ರಥಮ ಶಾಸನ ಎಲ್ಲಿದೆ? " ಬೆಳಗಾಂ, ಹಾವೇರಿ, ದಾರವಾಡ ಹೀಗೆ ನಾನಾ ಬಗೆಯ ಉತ್ತರಗಳು ವಿದ್ಯಾರ್ಥಿ ಸಮೂಹದಿಂದ ಕೇಳಿಬಂತು. ಪ್ರಶ್ನೆ ಹಾಕಿದವರಿಗೆ ಪಿಚ್ಚೆನ್ನಿಸಿತು. ಬರೀ ವಿದ್ಯಾರ್ಥಿಗಳೇ ಯಾಕೇ ಸ್ವಾಮಿ ಇವತ್ತು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಹೇಳುವ ಎಷ್ಟೋ ಮಂದಿಗೆ ಹಲ್ಮಿಡಿ ಶಾಸನದ ಬಗ್ಗೆ ತಿಳಿದಿದೆಯೇ ವಿನಹ ಅದು ಸಿಕ್ಕಿದ್ದು ಎಲ್ಲಿ ಎಂಬುದು ಯಾರಿಗೂ ತಿಳಿದಿಲ್ಲದಿರುವುದು ವಿಷಾಧನೀಯಕರ ಸಂಗತಿ. ಹಲ್ಮಿಡಿ ನಾ ಅದೆಲ್ಲಿದೆ ಎಂದು ಕೇಳುವವರ ಸಂಖ್ಯೆಯೇ ಹೆಚ್ಚು. ಇಂತಹ ಸನ್ನಿವೇಶದಲ್ಲಿ ಸದರಿ ಪ್ರಶ್ನೆ ಎತ್ತಿದ ಭಾಷಣಕಾರ ಹಲ್ಮಿಡಿಯ ಶಾಶ್ವತ ನೆನಪು ಉಳಿಯಬೇಕೆಂದರೆ ಆ ಗ್ರಾಮದಲ್ಲಿ ಒಂದು ಸ್ಮಾರಕವಾಗಬೇಕು, ಅದು ಕನ್ನಡದ ಮಣ್ಣಿ ನಮಕ್ಕಳಿಗೆ ಯಾತ್ರಾ ಸ್ಥಳವಾಗಬೇಕು, ಎಂದೆಲ್ಲಾ ಯೋಚಿಸಿ ಕಾರ್ಯಪ್ರವೃತ್ತ ವಾದವರು ಅದೇ ಭಾಷಣಕಾರ.ಇಂತಹದ್ದೊಂದು ಹಠಕ್ಕೆ ಬಿದ್ದು ಅಂದು ಕೊಂಡಿದ್ದನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹಲವರ ಸಹಕಾರದೊಂದಿಗೆ ಮಾಡಿಮುಗಿಸಿದ ಹಾಸನದ ಮದನಗೌಡ! ಅಂದು ಸರ್ಕಾರದಲ್ಲಿ ಸಚಿವರಾಗಿದ್ದ ರಾಣಿಸತೀಶ್, ಜಿಲ್ಲಾಧಿಕಾರಿಯಾಗಿದ್ದ ಅತೀಖ್ ಮತ್ತಿತರರು ಮದನಗೌಡರ ಬೆನ್ನಿಗೆ ನಿಂತು ಅಕ್ಷರ ಲೋಕದ ಹೆಬ್ಬಾಗಿಲಿಗೆ ಒಂದು ಸ್ಪಷ್ಟ ರೂಪ ಕೊಟ್ಟರು. ಅದುವರೆಗೂ ಹನುಮಿಡಿ ಗ್ರಾಮವೆಂದೇ ಕರೆಸಿಕೊಳ್ಳುತ್ತಿದ್ದ ಗ್ರಾಮಕ್ಕೂ ಮದನಗೌಡ ಹೊಸ ಹೆಸರು ನೀಡಿದರು. ಈಗ ಅದು ಹಲ್ಮಿಡಿ ಗ್ರಾಮವೆಂದೇ ಕರೆಯಲ್ಪಡುತ್ತಿದೆ. ಊರಿನಲ್ಲಿ ಸುಂದರವಾದ ಕನ್ನಡ ಸ್ಮಾರಕವೇನೋ ಇದೆ ಆದರೆ ಮೂಲಭೂತ ಸೌಕರ್ಯಗಳ ಕೊರತೆ ಬೆಟ್ಟದಷ್ಟಿದೆ. ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ಸಾಗುವ ಹಾದಿಯಲ್ಲಿ 15ಕಿಮಿ ಸಾಗಿದರೆ ಎಡಕ್ಕೆ ತಿರುವು ತೆಗೆದುಕೊಳ್ಳುವ ಕಚ್ಚಾ ರಸ್ತೆಯ ಏರಿಳಿತಗಳಲ್ಲಿ ಕಷ್ಟಪಟ್ಟು ಸಾಗಿದರೆ ಸಿಗುವುದೇ ಹಲ್ಮಿಡಿ ಗ್ರಾಮ. ತಿರುವು ತೆಗೆದುಕೊಳ್ಳುವ ಹಾದಿಯಲ್ಲಿ ನಿಲ್ಲಿಸಿರುವ ಹಲ್ಮಿಡಿ ಗ್ರಾಮ ದ/ಸ್ಮಾರಕದ ವಿವರ ಸಾರುವ ಫಲಕದಲ್ಲ ಕನಿಷ್ಠವೆಂದರೂ 20ತಪ್ಪುಗಳು ಕಾಣಸಿಗುತ್ತವೆ! ಇದು ಆಡಳಿತಗಾರರ ನಿರ್ಲಕ್ಷ್ಯದ ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ಕಾರ್ಯಕ್ರಮಕ್ಕೆ ನನ್ನೊಂದಿಗೆ ಬಂದಿದ್ದ ಕನ್ನಡ ಸಂಘಟನೆಯೊಂದರ ಮುಖಂಡ ಇಂತಹದ್ದೊಂದು ಗ್ರಾಮದ ಬಗ್ಗೆ/ಸ್ಮಾರಕದ ಬಗ್ಗೆ ಗೊತ್ತಿರಲಿಲ್ಲ ಎಂದರು ಬೆಪ್ಪಾಗುವ ಸರದಿ ನನ್ನದಾಗಿತ್ತು.
ಇವತ್ತು ಶಾಲಾ-ಕಾಲೇಜುಗಳ ಶೈಕ್ಷಣಿಕ ಪ್ರವಾಸವನ್ನು ದೇವಸ್ಥಾನಗಳಿಗೆ, ವಿಹಾರ ತಾಣಗಳಿಗೆ ಏರ್ಪಡಿಸಲಾಗುತ್ತದೆ, ಆದರೆ ಅಪ್ಪಿತಪ್ಪಿಯೂ ಹಲ್ಮಿಡಿ ಗ್ರಾಮಕ್ಕೆ ಅವರ ಸವಾರಿ ಹೋಗುವುದಿಲ್ಲ. ಗ್ರಾಮಗಳ ಉದ್ದಾರಕ್ಕೆ ಸರ್ಕಾರದಿಂದ ಸುವರ್ಣ ಗ್ರಾಮ ಯೋಜನೆ, ಉದ್ಯೋಗ ಖಾತ್ರಿಯಂತಹ ಕಾರ್ಯಕ್ರಮಗಳಿವೆ ಆದರೆ ಅಂತಹ ಯೋಜನೆಗಳ ಫಲವೂ ಕೂಡ ಈ ಗ್ರಾಮಕ್ಕ ದಕ್ಕಿದ ಕುರುಹುಗಳಿಲ್ಲದಿರುವುದು ದುರಂತ. ನಲ್ಲೂರು ಪ್ರಸಾದ್ ಹೇಳುವಂತೆ ಇಲ್ಲ ಪ್ರವಾಸೋಧ್ಯಮ ಇಲಾಖೆ ಕೇಂದ್ರ ಸ್ಥಾಪನೆಯಾದರೆ, ಮೂಲ ಸೌಕರ್ಯ ಗ್ರಾಮಕ್ಕೆ ಲಭಿಸಿದರೆ ಗಮನ ಸೆಳೆಯಬಹುದೇನೋ? ಆದರೆ ಅದನ್ನು ಅನುಷ್ಟಾನಕ್ಕೆ ತರು ವತಾಕತ್ತು ಅಧಿಕಾರಸ್ಥರಿಗೆ ಬರಬೇಕಷ್ಟೇ. ತಮಿಳು ಸಂತ ತಿರುವಳ್ಳುವರ್ ನ ಪ್ರತಿಮೆ ಸ್ಥಾಪನೆಗೆ ಮುತುವರ್ಜಿ ವಹಿಸುವ ರಾಜ್ಯ ಸರ್ಕಾರ ಕನ್ನಡ ಸ್ಮಾರಕದ ಅಭಿವೃದ್ದಿಯ ಬಗ್ಗೆಯೂ ವೈಯುಕ್ತಿಕ ದ್ವೇಷ ಬಿಟ್ಟು ಕೆಲ ಸ ಮಾಡಬೇಕಾಗಿದೆ. ನೆರೆಯ ಹೆಸರಿನಲ್ಲಿ ಹಾಸನ ಜಿಲ್ಲೆಯ ಹೊಯ್ಸಳ ಮಹೋತ್ಸವ ಸ್ಥಗಿತಗೊಳಿಸುವ ರಾಜ್ಯ ಸರ್ಕಾರ, ತೆಲುಗು ಪರಂಪರೆಯ ಕೃಷ್ಣದೇವರಾಯ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸುತ್ತದೆ ಎಂದರೆ ಇದು ಯಾರಾದರೂ ಒಪ್ಪುವ ಮಾತೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...