Thursday, May 21, 2009

ಯುವ ನೇತಾರನಿಗೆ ಆದಿಕಾರದ ಚುಕ್ಕಾಣಿ ಸಿಕ್ಕೀತೆ

ಯುಪಿಎ ಇಂದು ಸರ್ಕಾರ ರಚನೆಮಾಡಲಿದೆ. ದೇಶಕ್ಕೆ ಆರ್ಥಿಕ ಉದಾರೀಕರಣ ನೀತಿಯನ್ನು ಪರಿಚಯಿಸಿದ ಖ್ಯಾತ ಅರ್ಥ ಶಾಸ್ತ್ರಜ್ಞ ಮನಮೋಹನ್ ಸಿಂಗ್ ಎರಡನೇ ಭಾರಿಗೆ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗುತ್ತಿದ್ದಾರೆ. ಸರ್ಕಾರ ರಚನೆಯಲ್ಲಿ ಪಾಲುದಾರರಾಗಿರುವ ಸಣ್ಣಪುಟ್ಟ ಪಕ್ಷಗಳು ತಮಗೆ ಇಂತಹುದೇ ಖಾತೆ ಬೇಕೆಂದು ಕ್ಯಾತೆ ತೆಗೆಯುತ್ತಿವೆಯಾದರೂ ಅಂತಿಮವಾಗಿ ಸಿಕ್ಕಿದ್ದೇ ಸೀರುಂಡೆ ಎಂದು ಸುಮ್ಮನಾಗಬಹುದೇನೋ. ಸಂಪುಟದಲ್ಲಿ ತಮಿಳುನಾಡು ಕರುಣಾನಿದಿ ಪುತ್ರ ಮತ್ತು ಪುತ್ರಿ, ದಯಾನಿಧಿ ಮಾರನ್ ನಂತಹ ವಿದ್ಯಾವಂತ ಯುವಪಡೆ ಸಂಪುಟದಲ್ಲಿ ಸೇರ್ಪಡೆಯಾಗುತ್ತಿದೆ.ಅತ್ಯಂತ ಗಮನ ಸೆಳೆಯುತ್ತಿರುವ ಸಂಗತಿಯೆಂದರೆ ಇದುವರೆಗೂ ಪ್ರಧಾನಿ ಪಟ್ಟಕ್ಕೆ ಹೆಸರು ಕೇಳಿ ಬರುತ್ತಿದ್ದ ರಾಹುಲ್ ಗಾಂದಿ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ದಿ ಇಲ್ಲವೇ ಮಾನವ ಸಂಪನ್ಮೂಲ ಸಚಿವರಾಗುತ್ತಾರೆನ್ನುವುದು. ಈ ಹಿಂದೆ ಅವರ ಹೆಸರು ಜವಾಬ್ಧಾರಿ ಹುದ್ದೆಗಳಿಗೆ ಕೇಳಿಬಂದಾಗ " ನಾನು ಅನನುಭವಿ " ಎಂದೇ ಹೇಳುತ್ತಿದ್ದರು. ರಾಹುಲ್ ಜನಿಸಿದ್ದು 19 ಜೂನ್ 1970, ಅವರ 20ನೇ ವಯಸ್ಸಿನ್ಲ್ಲಿ ಇಂದಿರಾಗಾಂದಿಯ ಹತ್ಯೆಯಾಯ್ತು. ಹೊಸದೆಹಲಿಯ ಸೆ. ಕೊಲಂಬಿಯಾ ಶಾಲೆಯಲ್ಲಿ ಕಲಿತ ರಾಹುಲ, ನಂತರ ಡೋನ್ ಶಾಲೆ ಸೇರಿದರು. ಮುಂದೆ ರಕ್ಷಣಾ ಕಾರಣಗಳಿಂದಾಗಿ ಮನೆಯಲ್ಲಿಯೇ ಕಲಿತು ಹೈಸ್ಕೂಲ್ ಶಿಕ್ಷಣ ಪುರೈಸಿದರು, ಮತ್ತೆ ಸೆ. ಸ್ಟೀಫನ್ ಕಾಲೇಜು ಸೇರಿ ಅರ್ಥಶಾಸ್ತ್ರದಲ್ಲಿ ಪದವಿಗೆ ಸೇರಿದರು. ಓದಿನಲ್ಲಿ ಅಷ್ಟೇನೂ ಜಾಣನಲ್ಲದ ರಾಹುಲ್ ಅತ್ಯುತ್ತಮ ಪಿಸ್ತೂಲ್ ಶೂಟರ್ ಆಗಿದ್ದು ವಿಶೇಷ. ಮುಂದೆ ಫ್ಲೋರಿಡಾದ ರೋಲ್ಲಿನ್ಸ್ ನಲ್ಲಿ ಸೇರಿ ಬಿಎ ಪದವಿ ಮುಗಿಸಿದರು. ಹಾಗೆಯೇ ಕೇಂಬ್ರೀಡ್ಜ್್ ನ ಟ್ರಿನಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಅಬಿವೃದ್ದಿಯಲ್ಲಿ ಎಂಫಿಲ್ ಸ್ನಾತಕ ಪದವಿ ಗಳಿಸಿದರು. ಭಾರತಕ್ಕೆ ವಾಪಾಸಾಗುವ ಮುಂಚೆ ಲಂಡನ್ ನ ಸ್ಟ್ರಾಟೆಜಿ ಕನ್ಸಲ್ಟೆನ್ಸಿ ಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು. ತನ್ನ ಗೆಳತಿ ವೆರೋನಿಕಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಮೊದಲಭಾರಿಗೆ ಇವರನ್ನು ಮಾದ್ಯಮದಲ್ಲಿ ಪ್ರಚಾರಕ್ಕೆ ಎಳೆಯಿತು. ಕಳೆದ 2004ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ಬಂದ ರಾಹುಲ್ ರಾಜಕೀಯ ಜೀವನಕ್ಕೆ ಅಧಿಕ್ಋತ ಸೇರ್ಪಡೆಯಾದರು. ಆ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 3,00,500 ಆಗಿತ್ತು. ಮೊದಲಿಗೆ ಪ್ರಿಯಾಂಕ ಗಾಂದಿಗೆ ಅಲ್ಲಿ ಸ್ಪರ್ಧಿಸುವ ಒತ್ತಡವಿತ್ತಾದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ರಾಹುಲ್ ಗಾಂದಿಗೆ ಅವಕಾಶ ಒದಗಿ ಬಂತು. ಚುನಾವಣೆಗಳಲ್ಲಿ ಸೋತು ಸುಣ್ನವಾಗಿ ಸಮ್ಮಿಶ್ರ ಸರ್ಕಾರಗಳ ಯುಗ ಆಗ ಆರಂಬವಾಗಿತ್ತು. ಕಾಂಗ್ರೆಸ್ ಪಕ್ಷದ ಉಳಿವು ಉಳಿವಿಗೂ ಗಾಂಧಿ ಮನೆತನದ ವರ್ಚಸ್ಸು ಬೇಕಿತ್ತು. ಹೀಗೆ ರಾಜಕೀಯ ಜೀವನ ಆರಂಭಿಸಿದ ರಾಹುಲ್, ನೇರವಾಗಿ ಯಾವುದೇ ಮಂತ್ರಿಗಿರಿ ಪಡೆಯದಿದ್ದರು ಗೃಹಖಾತೆಯ ಸಲಹಾ ಸಮಿತಿಯಲ್ಲಿ ಸದಸ್ಯರಾಗಿದ್ದರು, ಸೆ.24, 2007ರವೇಳೆಗೆ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿಯಾದರು ಮುಂದೆ ಯುವ ಕಾಂಗ್ರೆಸ್ನ ಅಧ್ಯಕ್ಷರು ಆದರು. ಈ ಹುದ್ದೆಗೆ ಬಂದ ನಂತರ ಕಾಂಗ್ರೆಸ್ ನಲ್ಲಿ ಯುವಪಡೆಯನ್ನು ಅತ್ಯಂತ ಯಶಸ್ವಿಯಾಗಿ ಕಟ್ಟಿ ಬೆಳೆಸಿದ ಕೀರ್ತಿ ರಾಹುಲ್ಗೆ ಸಲ್ಲುತ್ತದೆ. ದೇಶದ ಎಲ್ಲ ರಾಜ್ಯಗಳಲ್ಲು ಜಿಡ್ಡು ಗಟ್ಟಿದ್ದ ಯುವ ಕಾಂಗ್ರೆಸ್ ಗೆ ಚೈತನ್ಯ ತುಂಬಿದ ರಾಹುಲ್ ಹೊಸ ಸಂಚಲನಕ್ಕೆ ಕಾರಣರಾದರು. ದೇಶದ ಎಲ್ಲೆಡೆಯೂ ಒಂದು ಚಟುವಟಿಕೆಯ ತಂಡ ರೂಪುತಳೆಯಿತು, ಈ ಬಾರಿಯ ಕಾಂಗ್ರೆಸ್ ಗೆಲುವಿಗೂ ಅದು ಸಾಥ್ ನೀಡಿತು. ಆ ಮೂಲಕ ಕಾಂಗ್ರೆಸ್ನ ಹಳೆಯ ತಲೆಗಳ ಜೊತೆಗೆ ಹೊಸ ತಲೆಗಳ ಸೇರ್ಪಡೆಯೂ ಆಯಿತು. ರಾಹುಲ್ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂದಿ ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ದಿಗೆ ಮಹತ್ವ ನೀಡಿದವರು, ಅಂತೆಯೇ ರಾಹುಲ್ ಕೇಂದ್ರ ಮಂತ್ರಿಯಾದರೆ ಗ್ರಾಮೀಣಾಭಿವೃದ್ದಿಯ, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹೊಸತನ್ನು ನಿರೀಕ್ಷಿಸಬಹುದೇನೋ.ಕಾದು ನೋಡೋಣ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...