- ಮನಸಾರೆ ಪ್ರದರ್ಶನ ರಾಜ್ಯಾಧ್ಯಂತ ಹೇಗಿದೆ?
-ಅದ್ಭುತವಾಗಿದೆ... ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಉತ್ತರಕರ್ನಾಟಕದ ಜನ ನೆರೆಯಲ್ಲೂ ಚಿತ್ರ ನೋಡ್ತೀದಾರೆ ಇದು ಅಚ್ಚರಿಯ ಸಂಗತಿ. ಮಳೆ ಬಂದಾಗ ಸ್ವಲ್ಪ ಕಡಿಮೆಯಾಗಿತ್ತಾದರೂ ನಂತರದ ಫಲಿತಾಂಶ ನನ್ನ ನಿರೀಕ್ಷೆ ಮೀರಿದ್ದು.
- ಕಾಲೇಜು ಕ್ಯಾಂಪಸ್ ಕಡೆ ಮೊದಲ ಸಲ ಹೋಗ್ತದೀರಿ, ಪ್ರತಿಕ್ರಿಯೆ ಹೇಗಿದೆ?
- ಕ್ಯಾಂಪಸ್ ಕಡೆ ಹೋಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಂದಾಗ ನಾನು, ಗಣೇಶ
ಇಬ್ರೂ ಹೋಗಿದ್ವಿ, ನಂತರದಲ್ಲಿ ನಾನೊಬ್ಬನೇ ತಾಲ್ಲೂಕು ಕೇಂದ್ರಗಳಿಗೂ ಹೋಗಿದ್ದೇನೆ. ಅವಾಗಿನ ಕ್ರೌಡು ಬೇರೆ, ಈಗಿನದ್ದೇ ಬೇರೆ. ಯುವ ಸಮೂಹದ ಪ್ರತಿಕ್ರಿಯೆ ಸಖತ್ತಾಗಿದೆ. ಯೂತ್ಸ್ ಇಷ್ಟೊಂದು ರೆಸ್ಪಾನ್ಸ್ ಮಾಡ್ತಾರೆ ಅಂದಕೊಂಡಿರಲಿಲ್ಲ. ಹೊದಕಡೆಯೆಲ್ಲ ಹುಡುಗೀರು ದಿಗಂತ ನನ್ನು ಮುತ್ತಿಗೆ ಹಾಕಿದ್ರೆ ಐಂದ್ರಿತಾ ರನ್ನು ಹುಡುಗರು ಮುತ್ತಿಕೊಳ್ತಾರೆ , ಅವರ ಅಭಿನಯವನ್ನು ಮತ್ತು ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ.ಮನಸಾರೆ ಗೆ ಹುಡುಗ-ಹುಡುಗಿಯರ ದೊಡ್ಡ ಆಶೀರ್ವಾದವಿದೆ.
- ಮಾಸ್ ಪ್ರತಿಕ್ರಿಯೆ ಹೇಗಿದೆ?
-ನೋಡಿ ನನ್ನ ಪ್ರಕಾರ ಮಾಸ್ ಅಂತೇನಿಲ್ಲ, ಅದು ಅವತ್ತಿಗೂ ಇಲ್ಲ, ಇವತ್ತಿಗೂ ಇಲ್ಲ. ನನ್ನ ಕನ್ನಡದ ಜನರು ಮತ್ತು ಇತರರು ಅವರ ಪ್ರತಿಕ್ರಿಯೆ ಚೆನ್ನಾಗಿದೆ ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನಮ್ಮ ಜನ ನೋಡ್ತೀದಾರೆ ಅನ್ನೊದೆ ಒಂದು ಖುಷಿ. ಇದನ್ನೆಲ್ಲ ನೋಡ್ತಾ ನಾವು ಮಜಾ ತಗೋತೀದೀವಿ.
- ಎಲ್ಲೆಲ್ಲಿ ಭೇಟಿ ನೀಡಿದ್ದೀರಿ? ಕಲೆಕ್ಷನ್ ಹೇಗಿದೆ ?
ಈ ಗಾಗಲೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೇವೆ ಇನ್ನೂ ಪ್ರವಾಸ ಮಾಡಬೇಕಿದೆ. ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ತಿದೆ. ನನ್ನ ಹಿಂದಿನ ಚಿತ್ರಗಳು ಸಹಾ ಹಾಗೆಯೇ ನಿಧಾನವಾಗಿ ಮೇಲೆ ಬಂದವು. ಆದರೆ ಮನಸಾರೆ ಸ್ಪೀಡ್ ಜಾಸ್ತಿಯಾಗಿದೆ. ಒಳ್ಲೇ ಪವರ್ ಫುಲ್ ನಿರ್ಮಾಪಕರು ಇದ್ದಾರೆ ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಚಿತ್ರ 50ದಿನ, 100ದಿನ ಓಡುವ ಸಂಧರ್ಭಕ್ಕೆ ನಿರ್ಮಾಪಕರು ಬಿಡುವು ಮಾಡಿಕೊಂಡು ಜೊತೆಯಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲು ಕಲೆಕ್ಷನ್ ಚೆನ್ನಾಗಿದೆ.
- ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆ ಏನು?
-ಇನಿಷಿಯಲ್ ಗೆ ಇಷ್ಟೊಂದು ಯಶಸ್ಸು ಆಗುತ್ತೇ ಅಂತಾ ಖಂಡಿತಾ ಗೊತ್ತಿರಲಿಲ್ಲ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಜನರ ಹಾರೈಕೆ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಮಾತು ಮುಗಿಸಿದರು ಭಟ್ಟರು.