" ಅವನ್ಯಾವನ್ರಿ ಅವನು ಯಡಿಯೂರಪ್ಪ? ಬೋಸುಡಿ ಮಗ. ಮಂತ್ರಿಯಾಗ ಬೇಕು ಅಂತ ಶೋಭಕರೆಂದ್ಲಾಜೆನಾ ಕಳಿಸಿದ್ದ, ಬ್ಲಡಿ ಬಾಸ್ಟರ್ಡ್ ಅವನೇನು ಅಂತ ನನಗೆ ಗೊತ್ತು. ಇವನ್ಯಾರ್ರಿ?ಗೌಡರ ವಿರುದ್ದ ರೈತರ ರಣ ಕಹಳೆ ಅಂತೆ ಅವನ ಪೇಪರ್ ನಲ್ಲಿ ಏನೋ ಬರ್ಕೋಂಡಿದ್ದಾನೆ(ಹಾರನಹಳ್ಳಿ ಅಶೋಕ್), ಅವನೊಬ್ಬ ಸಂಡೇ ಲಾಯರ್, ಇನ್ನೊಬ್ಬ ಇದ್ದಾನೆ ಶಿವಮೊಗ್ಗದವನು ಲೀಗಲ್ ಅಡ್ವೈಸರು, ಓಡಾಡೋಕೆ ಗೂಟದ ಕಾರು ಬೇಕು........." ಹೀಗೆ ಅಳತೆ ಮೀರಿ ಒಬ್ಬ ಮಾಜಿ ಪ್ರಧಾನಿ, ಹಿರಿಯ ಮುತ್ಸದ್ದಿ ಎಚ್ ಡಿ ದೇವೇಗೌಡ ಮಾತಾಡಿದ್ದು ಇಡೀ ದೇಶವೇ ನೋಡಿದೆ. ನೈಸ್ ಕಾರಿಡಾರ್ ಸಂಸ್ಥೆ ನಿರ್ಮಿಸಿರುವ ರಸ್ತೆಯ ಇಕ್ಕೆಲಗಳಲ್ಲಿ ಟೌನ್ ಶಿಪ್ ಯೋಜನೆಗಾಗಿ ರೈತರಿಂದ ವಶಪಡಿಸಿಕೊಂಡ ಭೂಮಿಯನ್ನು ಕೋಟಿ ಗಳ ಲೆಕ್ಕದಲ್ಲಿ ಮಾರಿಕೊಳ್ಳುತ್ತಿರುವುದನ್ನು ವಿರೋಧಿಸಿ ಕಳೆದ 3ದಿನಗಳಿಂದ ಆ ಭಾಗದಲ್ಲಿ ಭೂಮಿ ಕಳೆದು ಕೊಂಡ ರೈತರು ನಡೆಸುತ್ತಿದ್ದ ಹೋರಾಟಕ್ಕೆ ದೇವೇಗೌಡ ಧುಮುಕ್ಕುತ್ತಾರೆ ಎನ್ನುವಾಗಲೇ ಏನಾದರೂ ಎಡವಟ್ಟು ಗ್ಯಾರಂಟಿ ಎಂಬ ನಿರೀಕ್ಷೆಯಿತ್ತು. ಆದರೆ ಅದು ಅಸಂವಿಧಾನಿಕ ಪದಗಳ ಬಳಕೆಯಲ್ಲಿ ತೀವ್ರ ಸ್ವರೂಪ ಪಡೆಯಬಹುದು ಎಂಬುದನ್ನು ಯಾರೂ ನಿರೀಕ್ಷಿಸಿರಲಿಲ್ಲ.
ರಾಜಕೀಯ ತಿಕ್ಕಾಟದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ, ಆದರೆ ಒಂದು ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬ ಸ್ಥಾನ ಗೌರವ ಮರೆತು, ತನ್ನ ರಾಜಕೀಯ ಮುತ್ಸದ್ದಿತನವನ್ನು ಮರೆತು ಕೀಳು ಭಾಷೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ನಿಂದಿಸುವುದು ದೊಡ್ಡತಪ್ಪು. ಇದು ದೇವೇಗೌಡರ ದುಂಡಾವರ್ತನೆಯೇ ಸರಿ. ರಾಜಕೀಯದಲ್ಲಿ ದೇವೇಗೌಡ ಮಾತ್ರ ಇಂತಹ ಅವಾಚ್ಯ ಶಬ್ದ ಗಳನ್ನು ಬಳಕೆ ಮಾಡಿದ ಮೊದಲಿಗರೇನಲ್ಲ. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ಸಿಗದಿದ್ದಾಗ ದೇವೇಗೌಡ-ಕುಮಾರಸ್ವಾಮಿಯವರ ನಾಲಿಗೆಯಿದ್ದ ಜಾಗದಲ್ಲಿ ಎಕ್ಕಡ-ಹಾವು ಚಿತ್ರ ಬರೆದು ಚಪ್ಪಲಿ ಸೇವೆ ಮಾಡಿ ಕಾಲಿನಿಂದ ತುಳಿದು ಅತೀ ಕೀಳು ದರ್ಜೆಯ ಶಬ್ದ ಗಳನ್ನು ಬಳಸಿದ ಅನಾಗರಿಕ ಪ್ರತಿಭಟನೆಯ ನೇತೃತ್ವವನ್ನು ಅಂದು ವಹಿಸಿದ್ದವರು ಇದೇ ಯಡಿಯೂರಪ್ಪ. ಈಗ ಮತ್ತದೇ ಪುನರಾವರ್ತನೆಯಾಗಿದೆ ಈ ಅನಿಷ್ಟ ಮಂದಿಗೆ ಕನಿಷ್ಠ ನಾಗರೀಕತೆಯ ಪ್ರಜ್ಞೆಯೂ ಇಲ್ಲದಂತಾಗಿರುವುದು ದುರಂತ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದೆ, ಹಿಂದಿನ ದಿನಗಳಲ್ಲಾದರೆ ಎಲೆಕ್ಟ್ರಾನಿಕ್ ಮೀಡಿಯಾಗಳಿರಲಿಲ್ಲ, ಪತ್ರಿಕೆಗಳಲ್ಲಿ ಬಂದ ಮಾತುಗಳನ್ನು ತಿರುಚಿದ್ದಾರೆ ಎಂದು ತಪ್ಪಿಸಿ ಕೊಳ್ಳುತ್ತಿದ್ದ ರಾಜಕಾರಣಿಗಳು ಈಗ ತಪ್ಪಿಸಿ ಕೊಳ್ಳಲು ಸಾಧ್ಯವೇ ಇಲ್ಲ, ಪ್ರತಿಯೋದು ನೇರವಾಗಿ ಲೈವ್ ಆಗುತ್ತೆ, ಹೀಗಿರುವಾಗ ತಾವೇನು ಮಾತಾಡುತ್ತಿದ್ದೇವೆ ಎಂಬ ಪರಿಜ್ಞಾನ ಇಟ್ಟುಕೊಳ್ಳದೇ ಮಾತನಾಡುವುದು ಸಮಾಜದ ಮೇಲೆ ಎಂತಹ ಪರಿಣಾಮ ಬೀರೀತು?
ಅಷ್ಟಕ್ಕೂ ಈ ದೇವೇಗೌಡರಿಗೇನಾಗಿದೆ? ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ರಾಜಕೀಯದಲ್ಲಿರುವ ಇವರು ದೇಶದ ಅತ್ಯುತ್ತನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ನೂರಾರು ಚಳುವಳಿಗಳಲ್ಲಿ ಪಾಲ್ಗೊಂಡಿದ್ದಾರೆ, ವೇದಿಕೆಗಳಲ್ಲಿ ತುಂಬಾ ದೊಡ್ಡ ಮಾತುಗಳನ್ನು ಸಮಯಾನು ಸಂಧರ್ಭ ಮಾತನಾಡುತ್ತಾರೆ ಆದರೆ ಪ್ರಯೋಜನವೇನು? ಸ್ಥಿಮಿತ ಕಳೆದು ಕೊಂಡು ಮನ ಬಂದಂತೆ ಮಾತನಾಡಿದರೆ ಇವರ ಯಾವ ಘನತೆ-ಗೌರವವಿದ್ದರೆಷ್ಟು, ಬಿಟ್ಟರೆಷ್ಟು? 1995ರಲ್ಲಿ ಹೆಚ್ ಡಿ ದೇವೇಗೌಡ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲೇ ನೈಸ್ ಕಾರಿಡಾರ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೆ ಎಚ್ ಪಟೇಲರು ಮುಖ್ಯಮಂತ್ರಿಯಾದಾಗ ರಸ್ತೆಗಾಗಿ ಜಮೀನು ನೀಡಿದ್ದಾರೆ, ಟೌನ್ ಶಿಪ್ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ನೂರು ಚಿಲ್ಲರೆಯಷ್ಟು ಭೂಮಿಯನ್ನು ಮಂಜೂರು ಮಾಡಿದೆ. ಸದರಿ ನೂರು ಚಿಲ್ಲರೆ ಭೂಮಿಯನ್ನು ಸ್ಥಳೀಯ ರೈತರಿಂದ ಕೊಳ್ಳುವಾಗ ಕೇವಲ 80ಸಾವಿರದಿಂದ 3ಲಕ್ಷಗಳವರೆಗೆ ಎಕರೆಯೊಂದಕ್ಕೆ ಖರೀದಿ ಮಾಡಿದ ಸರ್ಕಾರ ನೈಸ್ ಸಂಸ್ಥೆಗೆ ನೀಡಿದೆ. ಈಗ ಅದೇ ನೈಸ್ ಸಂಸ್ಥೆ ಸದರಿ ಜಮೀನನ್ನು ಎಕರೆಗೆ 3ರಿಂದ7ಕೋಟಿ ಪ್ರತೀ ಎಕರೆಗೆ ಮಾರುತ್ತಿದೆ. ಈ ಬೆಳವಣಿಗೆಯಿಂದ ಕಂಗಾಲಾದ ರೈತರು ತಮಗೆ ನ್ಯಾಯವಾದ ಬೆಲೆ ನೀಡಿ ಜಮೀನು ಖರೀದಿಸುವಂತೆ ಹೋರಾಟ ಮಾಡುತ್ತಿರುವುದು ಖರೆ. ಈ ಹೋರಾಟಕ್ಕೆ ಡಿವೈಎಫ್ ವೈ ಮತ್ತು ಜೆಡಿಎಸ್ ಬೆಂಬಲ ನೀಡಿದೆ. ಸ್ವತಹ ದೇವೇಗೌಡರು ಈ ಹೋರಾಟಕ್ಕೆ ಧುಮುಕಿದ್ದಾರೆ, ಒಂದೆಡೆ ರೈತರಿಗೆ ಬೆಂಬಲ ನೀಡಿದಂತೆ ಆಗಬೇಕು ಮತ್ತೊಂದೆಡೆ ಅಶೋಕ್ ಖೇಣಿಯ ಅಟ್ಟಹಾಸ ಮುರಿಯಬೇಕು, ಆದರೆ ಈ ನಡುವೆ ಮುಖ್ಯ ಮಂತ್ರಿ ಯಡಿಯೂರಪ್ಪನವರ ವೈಯುಯಕ್ತಿಕ ಮತ್ತು ಸಾರ್ವಜನಿಕ ತೇಜೋವಧೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಪತ್ರಿಕೆಯೊಂದರಲ್ಲಿ ಬಂದ ಮುಖಪುಟದ ಸುದ್ದಿಯಲ್ಲಿ ದೇವೇಗೌಡರ ಜೊತೆಗಿರುವವರು ನಿಜವಾದ ರೈತರಲ್ಲ, ಅವರೆಲ್ಲ ಬಾಡಿಗೆ ಗೂಂಡಾಗಳು ಎಂದು ಬರೆಯಲಾಗಿದೆಯಲ್ಲದೇ ದೇವೇಗೌಡರ ವಿರುದ್ದ ರೈತರ ರಣಕಹಳೆ ಎಂಬ ಶೀರ್ಷಿಕೆ ನೀಡಲಾಗಿದೆ, ಅಸಲಿಗೆ ಗೌಡರನ್ನು ಕೆರಳಿಸಿರುವುದೇ ಈ ಸಂಗತಿ. ಅಷ್ಟೇ ಅಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಇಂದು (ಜ.೧೦)ಬೆಳಿಗ್ಗೆ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕುರಿತು ಖಾರವಾಗಿ ಮಾತನಾಡಿದ್ದು, ಮಂಗಳೂರಿನಲ್ಲಿ ಬಿಜೆಪಿ ಅಧ್ಯಕ್ಷ ಸದಾನಂದ ಗೌಡ ಮುಖ್ಯಮಂತ್ರಿಯ ಮಾತಿಗೆ ಇಂಬು ನೀಡಿ 'ಮಣ್ಣಿನ ಮಗ ರಾಜಕೀಯ ಸರ್ವನಾಶಕ್ಕೆ ಹುಟ್ಟಿದ್ದಾರೆ' ಎಂದದ್ದನ್ನು ಮಾಧ್ಯಮ ಮಿತ್ರರು ಮುಗಿಬಿದ್ದು ದೇವೇಗೌಡರನ್ನು ಪ್ರಶ್ನಿಸುತ್ತಿದ್ದಂತೆ ಅಡೆತಡೆ ಇಲ್ಲದೇ ಮಾತುಗಳನ್ನು ಹರಿಯಬಿಟ್ಟದ್ದು ಒಬ್ಬ "ಮುತ್ಸದ್ದಿ" ರಾಜಕಾರಣಿ.
ಈ ಹಿಂದೆ ದೇವೇಗೌಡ ರಾಜ್ಯದ ಮುಖ್ಯಮಂತ್ರಿಯಾಗುವ ಸಂಧರ್ಭ ಬಂದಾಗ ರಾಮಕೃಷ್ಣ ಹೆಗಡೆಗೆ ಬೆಂಬಲಿಗರಿಂದ ಚಪ್ಪಲಿ ಸೇವೆ ಮಾಡಿದಸಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ವಿರೇಂದ್ರಪಾಟೀಲರು, ಚಿತ್ರ ನಟರಾದ ಶಂಕರ್ ನಾಗ್ - ಅನಂತನಾಗ್ ಚುನಾವಣಾ ಪ್ರಚಾರಕ್ಕೆ ಬಂದಾಗ ಕಲ್ಲು ಹೊಡೆಸಿದ್ದು, ಒಮ್ಮೆ ಲಿಂಗಾಯಿತರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು ಹೀಗೆ ದೇವೇಗೌಡ ಮಾಡಿಕೊಂಡ ಅವಾಂತರಗಳು ಒಂದೆರೆಡಲ್ಲ. ಅಪ್ಪನಿಗಿಂತ ಮಕ್ಕಳೇನು ಕಮ್ಮಿ ಇಲ್ಲ ಎನ್ನುವಂತೆ ಮಾಜಿ ಮುಖ್ಯಕುಮಾರಸ್ವಾಮಿ ಕೂಡ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ದವೇ ಮಾತಾಡಿದ್ದಾರೆ, ಯಡಿಯೂರಪ್ಪನ ಸಂಬಳದಲ್ಲಿ ಬದುಕುತ್ತಿದ್ದಾರೆ ಎಂಬ ಕ್ಷುಲ್ಲುಕ ಮಾತಾಡುತ್ತಾರೆ. ೨-೩ ದಿನಗಳ ಹಿಂದೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ದೇವೇಗೌಡ ಹಾಸನದಲ್ಲಿರುವ ಅವರ ಕಛೇರಿಗೆ ಬರದಿದ್ದರು ಲಕ್ಷಾಂತರ ರೂ ವೆಚ್ಚಲ್ಲಿ ಕೊಠಡಿ ನವೀಕರಣವಾಗುತ್ತಿದೆ, ಗೌಡರು ಜಿಲ್ಲೆಗೆ ಬಂದು ಮತದಾರನ ಬವಣೆ ಕೇಳುತ್ತಿಲ್ಲ, ಬೆಂಗಳೂರಿಗೆ ಹೋದರೆ ಅಲ್ಲು ದರ್ಶನ ಭಾಗ್ಯ ಸಿಕ್ಕರೆ ಅದೃಷ್ಟ ಎಂದು ವಸ್ತು ನಿಷ್ಟವಾಗಿ ಬರೆದರೆ ಅದನ್ನು ಅರಗಿಸಿಕೊಳ್ಳಲಾಗದ ಇನ್ನೊಬ್ಬ ಪುತ್ರ ರೇವಣ್ಣ ಪತ್ರಕರ್ತರ ವಿರುದ್ದವೇ ಕಿಡಿಕಾರುತ್ತಾರೆ. ಯಾಕೆ ಹೀಗೆ ? ಈ ಅಪ್ಪ ಮಕ್ಕಳಿಗೇನು ಕೇಡುಗಾಲ ಬಂದಿದೆ? ಸದಾ ಜಿಲ್ಲೆಯ ಅಭಿವೃದ್ದಿ ಬಗ್ಗೆ ಮಾತಾಡುವ ಇವರು ವಿವೇಚನಾಯುಕ್ತ ನಡವಳಿಕೆ ಕಲಿಯೋದು ಯಾವಾಗ? ಹೋಗಲಿ ದೇವೇಗೌಡರಿಗಾದರೂ ಸ್ಥಿಮಿತ ಯಾಕೆ ಕಳೆದುಕೊಳ್ಳಬೇಕು?, ಅವರ ಸ್ಥಾನಮಾನಕ್ಕನುಗುಣವಾಗಿ ಮಾತನಾಡಲು ಅಡ್ಡಿಏನು? ಇದರಿಂದ ಸಮಾಜಕ್ಕೆ ಎಂತಹ ಸಂದೇಶ ರವಾನೆಯಾದೀತು ಎಂಬ ಎಚ್ಚರ ಬೇಡವೇ? ಇದ್ಯಾವ ಸಭ್ಯತೆ? ಇದ್ಯಾವ ಸಂಸ್ಕೃತಿ?