2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇಂಟರ್ ನೆಟ್ ಗಳಲ್ಲಿ , ಹಾಲಿವುಡ್ ನಸಿನಿಮಾಗಳಲ್ಲಿ , ಆಂಗ್ಲ ಸಾಹಿತ್ಯದಲ್ಲಿ , ದೃಶ್ಯ ಮಾದ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಳಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಆ ಬಗೆಗಿನ ಕುತೂಹಲವೂ ಜಾಸ್ತಿಯಾಗುತ್ತಿದೆ. ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾ ತೀವ್ರವಾಗಿಯೇ ಆಗುತ್ತಿದೆ. ನಮಗೆತಿಳಿದೋ ತಿಳಿದಯದೆಯೋ ಇಂತಹದ್ದೊಂದು ಪ್ರಶ್ನೆ ನಮ್ಮೆಲ್ಲರೆದುರು ಬಂದು ಧುತ್ತನೆ ಪ್ರತ್ಯಕ್ಷವಾಗಿರುವಾಗ ಆತಂಕ/ಕುತೂಹಲ ಸಹಜವೇ ಈ ನಿಟ್ಟಿನಲ್ಲಿ ಒಂದುಷ್ಟು ವಿಚಾರಗಳನ್ನು ನೋಡೋಣ.Sunday, October 25, 2009
2012ಕ್ಕೆ ಪ್ರಳಯ ನಿಜಾನಾ ? ಎನಿದೆಲ್ಲಾ?
2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇಂಟರ್ ನೆಟ್ ಗಳಲ್ಲಿ , ಹಾಲಿವುಡ್ ನಸಿನಿಮಾಗಳಲ್ಲಿ , ಆಂಗ್ಲ ಸಾಹಿತ್ಯದಲ್ಲಿ , ದೃಶ್ಯ ಮಾದ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಳಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಆ ಬಗೆಗಿನ ಕುತೂಹಲವೂ ಜಾಸ್ತಿಯಾಗುತ್ತಿದೆ. ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾ ತೀವ್ರವಾಗಿಯೇ ಆಗುತ್ತಿದೆ. ನಮಗೆತಿಳಿದೋ ತಿಳಿದಯದೆಯೋ ಇಂತಹದ್ದೊಂದು ಪ್ರಶ್ನೆ ನಮ್ಮೆಲ್ಲರೆದುರು ಬಂದು ಧುತ್ತನೆ ಪ್ರತ್ಯಕ್ಷವಾಗಿರುವಾಗ ಆತಂಕ/ಕುತೂಹಲ ಸಹಜವೇ ಈ ನಿಟ್ಟಿನಲ್ಲಿ ಒಂದುಷ್ಟು ವಿಚಾರಗಳನ್ನು ನೋಡೋಣ.Wednesday, October 14, 2009
ಕ್ಯಾಂಪಸ್ ನತ್ತ ಭಟ್ಟರ "ಮನಸಾರೆ" ಸವಾರಿ


- ಮನಸಾರೆ ಪ್ರದರ್ಶನ ರಾಜ್ಯಾಧ್ಯಂತ ಹೇಗಿದೆ?
-ಅದ್ಭುತವಾಗಿದೆ... ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಉತ್ತರಕರ್ನಾಟಕದ ಜನ ನೆರೆಯಲ್ಲೂ ಚಿತ್ರ ನೋಡ್ತೀದಾರೆ ಇದು ಅಚ್ಚರಿಯ ಸಂಗತಿ. ಮಳೆ ಬಂದಾಗ ಸ್ವಲ್ಪ ಕಡಿಮೆಯಾಗಿತ್ತಾದರೂ ನಂತರದ ಫಲಿತಾಂಶ ನನ್ನ ನಿರೀಕ್ಷೆ ಮೀರಿದ್ದು.
- ಕಾಲೇಜು ಕ್ಯಾಂಪಸ್ ಕಡೆ ಮೊದಲ ಸಲ ಹೋಗ್ತದೀರಿ, ಪ್ರತಿಕ್ರಿಯೆ ಹೇಗಿದೆ?
- ಕ್ಯಾಂಪಸ್ ಕಡೆ ಹೋಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಂದಾಗ ನಾನು, ಗಣೇಶ
ಇಬ್ರೂ ಹೋಗಿದ್ವಿ, ನಂತರದಲ್ಲಿ ನಾನೊಬ್ಬನೇ ತಾಲ್ಲೂಕು ಕೇಂದ್ರಗಳಿಗೂ ಹೋಗಿದ್ದೇನೆ. ಅವಾಗಿನ ಕ್ರೌಡು ಬೇರೆ, ಈಗಿನದ್ದೇ ಬೇರೆ. ಯುವ ಸಮೂಹದ ಪ್ರತಿಕ್ರಿಯೆ ಸಖತ್ತಾಗಿದೆ. ಯೂತ್ಸ್ ಇಷ್ಟೊಂದು ರೆಸ್ಪಾನ್ಸ್ ಮಾಡ್ತಾರೆ ಅಂದಕೊಂಡಿರಲಿಲ್ಲ. ಹೊದಕಡೆಯೆಲ್ಲ ಹುಡುಗೀರು ದಿಗಂತ ನನ್ನು ಮುತ್ತಿಗೆ ಹಾಕಿದ್ರೆ ಐಂದ್ರಿತಾ ರನ್ನು ಹುಡುಗರು ಮುತ್ತಿಕೊಳ್ತಾರೆ , ಅವರ ಅಭಿನಯವನ್ನು ಮತ್ತು ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ.ಮನಸಾರೆ ಗೆ ಹುಡುಗ-ಹುಡುಗಿಯರ ದೊಡ್ಡ ಆಶೀರ್ವಾದವಿದೆ.
- ಮಾಸ್ ಪ್ರತಿಕ್ರಿಯೆ ಹೇಗಿದೆ?
-ನೋಡಿ ನನ್ನ ಪ್ರಕಾರ ಮಾಸ್ ಅಂತೇನಿಲ್ಲ, ಅದು ಅವತ್ತಿಗೂ ಇಲ್ಲ, ಇವತ್ತಿಗೂ ಇಲ್ಲ. ನನ್ನ ಕನ್ನಡದ ಜನರು ಮತ್ತು ಇತರರು ಅವರ ಪ್ರತಿಕ್ರಿಯೆ ಚೆನ್ನಾಗಿದೆ ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನಮ್ಮ ಜನ ನೋಡ್ತೀದಾರೆ ಅನ್ನೊದೆ ಒಂದು ಖುಷಿ. ಇದನ್ನೆಲ್ಲ ನೋಡ್ತಾ ನಾವು ಮಜಾ ತಗೋತೀದೀವಿ.
- ಎಲ್ಲೆಲ್ಲಿ ಭೇಟಿ ನೀಡಿದ್ದೀರಿ? ಕಲೆಕ್ಷನ್ ಹೇಗಿದೆ ?
ಈ ಗಾಗಲೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೇವೆ ಇನ್ನೂ ಪ್ರವಾಸ ಮಾಡಬೇಕಿದೆ. ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ತಿದೆ. ನನ್ನ ಹಿಂದಿನ ಚಿತ್ರಗಳು ಸಹಾ ಹಾಗೆಯೇ ನಿಧಾನವಾಗಿ ಮೇಲೆ ಬಂದವು. ಆದರೆ ಮನಸಾರೆ ಸ್ಪೀಡ್ ಜಾಸ್ತಿಯಾಗಿದೆ. ಒಳ್ಲೇ ಪವರ್ ಫುಲ್ ನಿರ್ಮಾಪಕರು ಇದ್ದಾರೆ ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಚಿತ್ರ 50ದಿನ, 100ದಿನ ಓಡುವ ಸಂಧರ್ಭಕ್ಕೆ ನಿರ್ಮಾಪಕರು ಬಿಡುವು ಮಾಡಿಕೊಂಡು ಜೊತೆಯಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲು ಕಲೆಕ್ಷನ್ ಚೆನ್ನಾಗಿದೆ.
- ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆ ಏನು?
-ಇನಿಷಿಯಲ್ ಗೆ ಇಷ್ಟೊಂದು ಯಶಸ್ಸು ಆಗುತ್ತೇ ಅಂತಾ ಖಂಡಿತಾ ಗೊತ್ತಿರಲಿಲ್ಲ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಜನರ ಹಾರೈಕೆ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಮಾತು ಮುಗಿಸಿದರು ಭಟ್ಟರು.
Thursday, October 8, 2009
ಮಳೆ ನಿಂತು ಹೋದ ಮೇಲೆ.... ಬದುಕು ಬಾಡಿ ಹೋಗಿದೆ.
ಕಳೆದ ವಾರ ಉತ್ತರಕನ್ನಡದ 11ಜಿಲ್ಲೆಗಳಲ್ಲಿ ಸತತವಾಗಿ ಸುರಿದ ಮಳೆ ಅಲ್ಲಿನ ಜನರ ಬದುಕುಗಳನ್ನೆ ಒರೆಸಿ ಹಾಕಿದೆ! ಬಹುಶ: ಆ ಭಾಗದ ಮಂದಿ ಯಾವತ್ತಿಗೂ ನಿರೀಕ್ಷಿಸಿರದ ಮಳೆ ಅನಿರೀಕ್ಷಿತವಾಗಿ ಬಂದೆರಗಿ ಜನರನ್ನು ಬೀದಿ ಪಾಲು ಮಾಡಿದೆ. 1992ರಲ್ಲಿ ಈ ಭಾಗದಲ್ಲಿ ಇದೇ ರೀತಿಯ ಮಳೆ ಸುರಿದಿತ್ತಾದರು ಇಷ್ಟೊಂದು ಪ್ರಮಾಣದ ಅನಾಹುತ ಸಂಭವಿಸಿರಲಿಲ್ಲ. ರಾಜ್ಯದಲ್ಲಿ ಸೂಕ್ತ ರೀತಿಯ ನೀರಾವರಿ ಯೋಜನೆಗಳನ್ನು ಜಾರಿಗೊಳಿಸದಿರುವುದು (ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ) ಮತ್ತು ನಿರಾವರಿ ಇಲಾಖೆಯ ಇಂಜಿನಿಯರುಗಳ ಮೇಲೆ ಸರ್ಕಾರ ಸಮರ್ಥ ಹಿಡಿತ ಹೊಂದದಿರುವುದು ಇವತ್ತಿನ ಅವಘಡಗಳಿಗೆ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ. Friday, October 2, 2009
ನಮ್ಮ "ಶಂಕರ"ನ ನೆನಪು.. ರಂಗನಮನ,ಸಿನಿಮಾ ಇತ್ಯಾದಿ
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
Interview: Arkalgud Jayakumar (ಬ್ಲಾಗ್ ನಲ್ಲಿ ಏಕತಾನತೆಯ ಬರಹಗಳಿಂದ ಸ್ವಲ್ಪಮಟ್ಟಿಗಿನ ರಿಲ್ಯಾಕ್ಸ್ ಗಾಗಿ ಇದನ್ನು ಇಲ್ಲಿ ನೀಡಲಾಗಿದೆ) Small screen is now f...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು...