Thursday, June 5, 2008

ಯಡ್ಯೂರಪ್ಪ ಸರ್ಕಾರದ ನಿರೀಕ್ಷೆಗಳು.............


ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕಾಲ ಮುಗಿದಿದೆ, ಇದೇ ಪ್ರಥಮ ಭಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸಕಾಱರ ರಚಿಸಿದೆ, ಈಗ ಸಕಾಱರಕ್ಕಿರುವ ಅಲ್ಪ ಬಹುಮತಕ್ಕೆ ಪಕ್ಷೇತರರು ಆಸರೆಯಾಗಿದ್ದಾರೆ. ಅದಕ್ಕೂ ಮಿಗಿಲಾಗಿ ಬಳ್ಳಾರಿಯ ಗಣಿದೊರೆಗಳ ಕಪಿ ಮುಷ್ಠಿಯಲ್ಲಿ ಸರ್ಕಾರ ನಡೆಯುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ . ಸಚಿವ ಸ್ಥಾನಗಳ ಹಂಚಿಕೆ ಯಲ್ಲೂ ಅಸಮಧಾನ ಬುಗಿಲೆದ್ದಿದೆ. 4ಭಾರಿ ಆಯ್ಕೆಯಾದವರು ಕೇವಲ ಶಾಸಕರಾಗಿ ಉಳಿದಿದ್ದಾರೆ. ನಿನ್ನೆ ಗೆದ್ದವರು ಹೊಸದಾಗಿ ಪಕ್ಷ ಸೇರಿದವರು ಮಂತ್ರಿಗಳಾಗಿದ್ದಾರೆ. ಇದರಿಂದ ಅಸಮಧಾನ ಹೊಗೆಯಾಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಇದು ನುಂಗಲಾರದ ತುತ್ತು. ಸದಾಶಯ ಇಟ್ಟುಕೊಂಡು ರಚನೆಯಾಗಿರುವ ಸರ್ಕಾರದಲ್ಲಿ ಮುಖ್ಯಮಂತ್ರಿ ಯವರು ರೈತರಿಗೆ ಶೇ.3ರ ದರದ ಕೃಷಿ ಸಾಲ, ಹೈನುಗಾರಿಕೆಯಲ್ಲಿ ತೊಡಗುವ ಮಹಿಳೆಯರಿಗೆ 2ರೂ ಪ್ರತಿ ಲೀ. ಹಾಲಿಗೆ ಪ್ರೋತ್ಸಾಹ ಧನ ನೀಡುವ ಮಾತನ್ನಾಡಿದ್ದಾರೆ. ಮತ್ತುರೈತರಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ಥಾವನೆಯನ್ನು ಮಾಡಿದ್ದಾರೆ. ಇವು ಸದುದ್ದೇಶಗಳೆ. ಮುಖ್ಯಮಂತ್ರಿಯವರ ಯೋಜನೆಗಳು ಫಲಪ್ರದವಾಗಬೇಕಾದರೆ ವಿಶ್ವಾಸಮತ ಸಾಬೀತು ಮಾಡುವ ಜೊತೆಗೆ ಸ್ಥಿರತೆಯನ್ನು ಕಾಯ್ದು ಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯಾಗ ಬೇಕಾದರೆ ಅಭಿವೃದ್ದಿಗೆ ಹಣ ತರಬೇಕಾದರೆ ಸ್ಥಿರ ಸರ್ಕಾರದ ಅವಶ್ಯಕತೆಯೂ ಸಹಾ ಇದೆ ಈ ನಿಟ್ಟಿನಲ್ಲಿ ವಿಶ್ವಾಸ ಮತ ಬೇಕು ಹಾಗು ಮತ್ತೊಂದು ಚುನಾವಣೆ ಅತಂತ್ರ ಸರ್ಕಾರ ಯಾರಿಗೂ ಬೇಕಿಲ್ಲ ಹಾಗಾಗಿ ಬಿಜೆಪಿ ಐದು ವರ್ಷಗಳ ಯಶಶ್ವಿ ಸರ್ಕಾರ ನೀಡುವುದೇ? ಸ್ಥಿರತೆ ಕಾಯ್ದು ಕೊಳ್ಳುವುದೇ ಕಾದು ನೋಡೋಣ.

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...