ರುದ್ರಪಟ್ಟಣ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಇದೆ. ಸಂಗೀತ ಗ್ರಾಮವೆಮ್ಧೆ ವಿಶ್ವ ಪ್ರಸಿದ್ದಿ ಗಳಿಸಿರುವ ರುದ್ರಪಟ್ಟಣ ಗ್ರಾಮದಿಂದ ೨೫ಕ್ಕೂ ಹೆಚ್ಚು ಶಾಸ್ತ್ರಿಯ ಸಂಗೀತ ಗಾರರು 'ಕರ್ನಾಟಕ ಶಾಸ್ತ್ರಿಯ ಸಂಗೀತ ಪರಂಪರೆ'ಗೆ ಸೇರ್ಪಡೆಯಾಗಿದ್ದಾರೆ.ಈ ಪೈಕಿ ಕ್ಯಾತ ಸಂಗೀತ ಕಲಾನಿಡಿ ಆರ್. ಕೆ . ಪದ್ಮನಾಭ ಸಂಗೀತ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹತ್ತು ಹಲವು ಕಾಯಕದಲ್ಲಿ ತೊಡಗಿ ಕೊಳ್ಳುವ ಮುಲುಕ ಪ್ರಸ್ತುತವಾಗಿದ್ದಾರೆ. ಕಳೆದ ೭-೮ ವರ್ಷಗಳಿಂದ ಗ್ರಾಮದಲ್ಲಿ ಅವರು ೧೦ದಿನ್ಗಲ ಸಂಗೀತ ಗೋಷ್ಠಿಯನ್ನು ನ್ವೆಸುವ ಮೂಲಕ ದೇಶದ ಮುಲೆಮುಲೆಯಲ್ಲಿರುವ ಸಂಗೀತಗಾರರನ್ನು ಒಂದೆಡೆ ಸೇರಿಸುತ್ತಾರೆ ಮತ್ತು ಅ ಮೂಲಕ ಗ್ರಾಮದ ಮೂಲ ಸಂಸ್ಕೃತಿ ಉಳಿಸುವ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಗ್ರಾಮದಲ್ಲಿ ಸರಿಸುಮಾರು ೬೦-೭೦ಲಕ್ಶ ವೆಚ್ಚದಲ್ಲಿ ' ಸ ರೀ ಗ ಮ ಪ ದ ನಿ 'ಸಪ್ತಸ್ವರದ ಅಡಿದೆವತೆಗಳನ್ನು ಪ್ರತಿಷ್ಟಪಿಸಿಸಿ ವಿಶ್ವದಲ್ಲೇ ವಿಶಿಷ್ಟ ಮತ್ತು ಪ್ರಥಮ ಎನ್ನಬಹುದಾದ ತಮ್ಬುರಿಯಾಕಾರದ 'ಸಪ್ತ ಸ್ವರ ದೇವತಾ' ಮಂದಿರವನ್ನು ನಿರ್ಮಿಸಿದ್ದಾರೆ.
ಇವರ ಹತ್ತು ಹಲವು ಶಿಷ್ಯರು ಅಭಿಮಾನಿಗಳು ಈ ದಿಸೆಯಲ್ಲಿ ಸಹಾಯ ಹಸ್ತ ನೀಡಿದ್ದಾರೆ . ಈಗ ಇದು ಪ್ರಮುಖ ಯಾತ್ರ ಸ್ಥಳವಾಗಿದೆ, ಸಂಗೀತಾಸಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ.
No comments:
Post a Comment