ಹೇ.. ಅವ್ನು ಕಿಡಿಗೇಡಿ ನನ್ಮಗ.., ಆ ಮರ ಕಡಿಯೋಕೆ ಹೋದ್ರೆ ಅಡ್ಡಿ ಮಾಡಿ ಪೇಪರ್ನಲ್ಲಿ ಬರೀತಾನೆ.. ಇನ್ನೂ ಅಕ್ಕಪಕ್ಕ ೨-೩ ಮರ ಇದಾವಲ್ಲ, ಅವುನ್ನ ಕಡೀವಾಗ ಏನ್ ಮಾಡ್ತಾನೆ ನೋಡೋಣ. ಇಂತಹದ್ದೊಂದು ಮಾತು ನನ್ನ ಬೆನ್ನ ಹಿಂದೆ ಕಳೆದ 15ದಿನದಿಂದಲೂ ಕೇಳಿ ಬರ್ತಿದೆ. ಒಂದು ಮಾತಿದೆ ದುರ್ಜನರ ದುಷ್ಠತನಕ್ಕಿಂತ ಸಜ್ಜನರ ಮೌನವೇ ಹೆಚ್ಚು ಅಪಾಯಕಾರಿ ಅಂತ. ವಿಷಯ ಏನು ಅಂದ್ರಾ? ಹೇಳ್ತೀನಿ ಕೇಳಿ.. ಅರಕಲಗೂಡು, ಹಾಸನ ಜಿಲ್ಲೆಯಲ್ಲಿ ಬರುವ ಒಂದು ತಾಲ್ಲೂಕು ಕೇಂದ್ರ. ರಾಜ್ಯದಲ್ಲಿಯೇ ಅತೀ ಹೆಚ್ಚಿನ ಗುಣಮಟ್ಟದ ತಂಬಾಕು ಮತ್ತು ಅಡಿಕೆ ಬೆಳೆಯುವ ಅರೆಮಲೆನಾಡು. ಒಂದೆಡೆ ಕೊಡಗು ಜಿಲ್ಲೆ ಮತ್ತೊಂದೆಡೆ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಊರುಗಳನ್ನು ಗಡಿಭಾಗದಲ್ಲಿ ಹೊಂದಿದೆ.ಸಾಂಸ್ಕೃತಿಕವಾಗಿಯೂ ಸಂಪನ್ನವಾಗಿದೆ.ಇಂತಹದ್ದೊಂದು ಊರಿಗೆ ಆಧುನೀಕತೆಯ ಗರ ಬಂತು ನೋಡಿ ಈಗ್ಯೆ 2ವರ್ಸಗಳ ಹಿಂದೆ ಊರಿಗೆ ಹೆದ್ದಾರಿ ರಸ್ತೆ, ಕ್ರೀಡಾಂಗಣ, ಬಸ್ ನಿಲ್ದಾಣ, ವಿವಿಧ ಸರ್ಕಾರಿ ಕಛೇರಿಗಳು ಹೀಗೆ ಆಬಿವ್ರದ್ದಿ ಕಾಮಗಾರಿಗಳ ಮಹಾಪೂರವೇ ಹರಿದು ಬಂತು. ಅಭಿವ್ರದ್ದಿ ನೆಪದಲ್ಲಿ ರಸ್ತೆ ಬದಿಯ ಮತ್ತು ರಸ್ತೆಯಿಂದ ದೂರವಿದ್ದ ಸಾವಿರಾರು ಮರಗಳ ಹನನ ನಡೆಯಿತು. 800ವರ್ಸಗಳಷ್ಟು ಹಳೆಯದಾದ 13ಎಕರೆ ವಿಸ್ತಾರದ ತುಂಬಿದ ಕೆರೆಯನ್ನು ಬರಿದುಗೊಳಿಸಿ ಮಣ್ಣು ತುಂಬಲಾಯಿತು, ಅನಗತ್ಯವಾಗಿ ಸಾರ್ವಜನಿಕರ ಕಟ್ಟಡಗಳನ್ನು ಒಡೆಯಲಾಯಿತು. ಇಂತಹ ದೋರಣೆಯ ವಿರುದ್ದ ಎದ್ದ ಬೆರಳೇಣಿಕೆಯ ಪ್ರತಿಭಟನೆಗಳು, ಪತ್ರಿಕಾ ವರದಿಗಳು ಯಾವುದು ಫಲಕಾರಿಯಾಗಲಿಲ್ಲ. ಆಡಳಿತ ಷಾಹಿ ತನ್ನ ಅಟ್ಟಹಾಸವನ್ನು ಮೆರೆಸಿತು. ಇದೆಲ್ಲ ಆಗಿ ತಿಂಗಳುಗಳೇ ಸರಿದು ಹೋಗಿವೆ. ಮುಚ್ಚಿಹೋದ ಕೆರೆಯ ಮೇಲೆ ಆದುನಿಕ ರಸ್ತೆ ನಿರ್ಮಾಣವಾಗಿದೆ ಬದುಕಿದೆಯಾ ಬಡಜೀವವೇ ಎಂಬಂತೆ ಆ ರಸ್ತೆಯ ಬದಿಗೆ ಬ್ರಹತ್ ಆದ ೩-೪ ಮರಗಳು ಇನ್ನು ಉಳಿದು ಕೊಂಡಿವೆ. ಅಲ್ಲಿ ನೂರಾರು ಬಾವಲಿಗಳು ಹಕ್ಕಿ ಪಕ್ಷಿಗಳು ಇಂದಿಗೂ ವಾಸ ಮಾಡಿ ಕೊಂಡಿವೆ. ರಸ್ತೆಯ ಬದಿ ನಡೆದು ಹೋಗುವವರಿಗೆ ನೆಮ್ಮದಿಯ ನೆರಳನ್ನು ಗಾಳಿಯನ್ನು ಅವು ನೀಡುತ್ತಿವೆ. ಹೀಗಿರುವಾಗ ರಸ್ತೆಯ ಇನ್ನೊಂದು ಬದಿಗೆ ತೋಟದ ಜಾಗವನ್ನು ಖರೀದಿಸಿರುವ ಮಾರ್ವಾಡಿ ಯೋರ್ವ ಬ್ರಹತ್ ಮರವೊಂದರ ಸನಿಹದಲ್ಲೇ ಕಾಂಕ್ರಿಟ್ ಕಟ್ಟಡ ನಿರ್ಮಿಸುತ್ತಿದ್ದಾರೆ. ರಸ್ತೆ,ಮರ ಸದರಿಯವರ ಕಟ್ಟಡದಿಂದ 30ಮೀಟರ್ ದೂರವಿದೆ. ಆದರೂ ಕಟ್ಟಡಕ್ಕೆ ಮರೆಯಾಗುತ್ತದೆ ಎಂದು ಭಾವಿಸಿದ ಕಟ್ಟಡದ ಮಾರ್ವಾಡಿ ಒಂದು ದಿನ ಸ್ಥಳೀಯ ಅರಣ್ಯ ಇಲಾಖೆಯ ಭಕ್ಷಕ ನೌಕರರಿಗೆ ಎಂಜಲು ತಿನ್ನಿಸಿ ಮರ ಕಡಿಯಲು ಶುರುಮಾಡಿದ್ದಾನೆ, ಪತ್ರಕರ್ತ ಮಿತ್ರ ಅರಾಸು ಅದನ್ನು ತಡೆದಿದ್ದಾರೆ. ಅರೆಜೀವವಾದ ಮರದ ೊಂದು ಬದಿಯ ಬೇರುಗಳನ್ನು ವ್ಯವಸ್ಥಿತವಾಗಿ ತುಂಡರಿಸಿದ ಆತ ಮರ ಬೀಳುವ ಸ್ಥಿತಿಯಲ್ಲಿದೆ ಎಂಬ ಬೇನಾಮಿ ಪತ್ರವೊಂದನ್ನು ಸಿದ್ಧಪಡಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಮೇಧ್ಯ ತಿನ್ನಿಸಿ ಕಡಿಯುವ ಪ್ರಕ್ರಿಯೆಗೆ ಹರಾಜು ಹೊರಡಿಸಿದ. ಈ ವಿಚಾರ ತಿಳಿದ ಪತ್ರಕರ್ತ ಮಿತ್ರರಾದ ಅರಾಸು,ಚಂದ್ರು,ಶ್ರೀಕಾಂತ್,ಶಂಕ್ರ ನಾನು ಸದರಿ ಮರವನ್ನು ಯಾವ ಕಾರಣದಿಂದಲೂ ಕಡಿಯದಂತೆ ಅಡ್ಡಿ ಪಡಿಸಿದೆವು. ಮತ್ತು ಅರಣ್ಯಾಧಿಕಾರಿಗಳಿಗೆ ದೂರು ನೀಡಿದೆವು. ಮರುದಿನವೇ ಹರಾಜು ಸೂಚನೆಯಿತ್ತಲ್ಲ, ಊರಿನ ಗಣ್ಯರೆನಿಸಿಕೊಂಡ ಮುಖಂಡರು, ಕೌನ್ಸಿಲರ್ ಗಳು ಮಾರ್ವಾಡಿಯ ಬೆಂಬಲಕ್ಕೆ ನಿಂತು ನಮ್ಮನ್ನು ಹಿಂದೆ ಸರಿಯುವಂತೆ ಸೂಚಿಸಿದರು. ಬೆದರಿಕೆ ಹಾಕಿದರು, ಆದರೆ ನಾವು ಜಗ್ಗಲಿಲ್ಲ. ಯಾವುದೇ ರೀತಿಯಿಂದಲು ತೊಂದರೆಯಾಗದ ಮರವನ್ನು ಯಾಕೆ ಕಡಿಯಬೇಕು ಎಂಬುದಷ್ಟೇ ನಮ್ಮ ಪ್ರಶ್ನೆ ಯಾಗಿತ್ತು. ಉದ್ದುದ್ದ ಭಾಷಣ ಬಿಗಿಯುವವರು, ರಾಜಕಾರಣಿಗಳು ಯಾರು ಮರ ುಳಿಸುವ ನಮ್ಮ ಹೋರಾಟಕ್ಕೆ ಬರಲೇ ಇಲ್ಲ. ಆದರೆ ಬಿಗಿಯಾದ ನಮ್ಮ ಪಟ್ಟು, ಅಧಿಕಾರಿಗಳನ್ನು ನಾವು ಎದುರಿಸಿದ ಪರಿ ಕೊಡಲಿಯೇಟು ತಿಂದ ಮರದ ಪ್ರಾಣ ಉಳಿಯುವಂತೆ ಮಾಡಿತು. ಇಂತಹದ್ದೊಂದು ಕೆಲಸಕ್ಕೆ ನಮಗೆ ಸಿಕ್ಕ ಪಟ್ಟ ಕಿಡಿಗೇಡಿಗಳು.. ಈಗ ಮರಕ್ಕೆ ಮತ್ತೊಂದು ಅಪಾಯ ಎದುರಾಗಿದೆ ಮರದ ಬುಡಕ್ಕೆ ಮರ್ಕ್ಯೂರಿ ಹಾಕುತ್ತಾರಂತೆ.. ನಾವೀಗ ಕಿಡಿಗೇಡಿಗಳಾದರು ಪರ್ವಾಗಿಲ್ಲ ಮರಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇವೆ. ಈಗ ಹೇಳಿ ನೀವೇನಂತೀರಿ...????
Subscribe to:
Post Comments (Atom)
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
ಮೊ ನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾ...
-
Interview: Arkalgud Jayakumar (ಬ್ಲಾಗ್ ನಲ್ಲಿ ಏಕತಾನತೆಯ ಬರಹಗಳಿಂದ ಸ್ವಲ್ಪಮಟ್ಟಿಗಿನ ರಿಲ್ಯಾಕ್ಸ್ ಗಾಗಿ ಇದನ್ನು ಇಲ್ಲಿ ನೀಡಲಾಗಿದೆ) Small screen is now f...
No comments:
Post a Comment