Sunday, May 24, 2009

ಕ್ರಿಕೇಟ್ ಎಂಬ ಮಾಯೆಯು......

ಬಿಡೆನೆಂದರೂ ಬಿಡದೀ ಮಾಯೆ ಎಂಬಂತೆ.... ಕ್ರಿಕೇಟ್ ಎಂಬ ಆಟ ಜಗತ್ತಿನಾಧ್ಯಂತ ಸಮಸ್ತರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಈಗ ನಡೆಯುತ್ತಿರುವ ಐಪಿಎಲ್ ಕ್ರಿಕೇಟ್ ಸಹ ಕ್ರೀಡಾಸಕ್ತರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ. ನೋಡಿದಷ್ಟು ನೋಡಬೇಕು ಹಾಗೂ ಸಾಕು ಎನಿಸದಷ್ಟು ಆವರಿಸಿಕೊಳ್ಳುವ ಕ್ರಿಕೇಟ್ ಇಂದು ಜಗತ್ತಿನ ಅತ್ಯಂತ ಶ್ರೀಮಂತ ಆಟ. ಟೆನ್ನಿಸ್, ಚೆಸ್ ಹಾಗು ಪುಟ್ಬಾಲ್ ಪಂದ್ಯಗಳಿಗೆ ನಂತರದ ಸ್ಥಾನವಿದೆ. ಈ ಆಟದಲ್ಲಿ ಆಡುವವರಿಗೂ, ಪ್ರಾಯೋಜಿಸುವವರಿಗೂ ಹಣದ ಹೊಳೆಯೇ ಹರಿಯುತ್ತದೆ. ಇದನ್ನು ಪ್ರಸಾರ ಮಾಡುವ ದೃಶ್ಯ ಮಾದ್ಯಮಗಳಿಗೆ ಸೆಕೆಂಡುಗಳ ಲೆಕ್ಕದಲ್ಲಿ ಮಿಲಿಯನ್ ಲೆಕ್ಕದಲ್ಲಿ ಹಣದ ಹೊಳೆ ಹರಿದು ಬರುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿವೆ. ಮೊದಲಿಗೆ ಟೆಸ್ಟ್ ಪಂದ್ಯಗಳು ಆರಂಭವಾದರೆ ನಂತರದಲ್ಲಿ ಒಂದು ದಿನದ ಪಂದ್ಯಗಳು ಚಾಲನೆ ಪಡೆದುಕೊಂಡವು, ಈಗ ಬದಲಾದ ಪರಿಸ್ಥಿತಿಯಲ್ಲಿ 20ಓವರ್ ಗಳ ಪಂದ್ಯ ಜಾರಿಯಲ್ಲಿದೆ. ಬಂಡವಾಳ ಶಾಹಿಗಳು ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಂಡು ಪಂದ್ಯಗಳನ್ನು ಪ್ರಾಯೋಜಿಸುತ್ತಿದ್ದಾರೆ. ಪಂದ್ಯದ ಆಕರ್ಷಣೆಗಾಗಿ ತುಂಡು ಬಟ್ಟೆ ಧರಿಸಿದ ಲಲನೆಯರು, ಬಾಲಿವುಡ್ ನಟಿಯರನ್ನು ಕರೆದು ತಂದಿವೆ. ಒಂದೊಂದು ತಂಡಗಳ ಮೇಲೂ ೪೦೦-500ಕೋಟಿ ರೂಪಾಯಿಗಳ ಹೂಡಿಕೆಯಾಗಿದೆ. ಇವುಗಳ ಜಾಹೀರಾತು ಪ್ರಾಯೋಜನೆ 1000ಕೋಟಿ ವಹಿವಾಟು ನಡೆಸುತ್ತಿದೆ. ಅದಕ್ಕಿಂತ ಹೆಚ್ಚಾಗಿ ಅನಧಿಕೃತವಾಗಿ ನಡೆಯುವ ಬೆಟ್ಟಿಂಗ್ ದಂಧೆ ಕೋಟ್ಯಾಂತರ ರೂಪಾಯಿಗಳನ್ನು ಬದಲಿಸುತ್ತದೆ. ಇಂತಹದ್ದೊಂದು ಆಟ ಹೇಳಿಕೊಡಲೆಂದೆ ತರಭೇತಿ ಕೇಂದ್ರಗಳು ಹುಟ್ಟಿಕೊಂಡಿವೆ. ಬಹುತೇಕ ತಂದೆ ತಾಯಿಯೂ ತಮ್ಮ ಮಕ್ಕಳು ಕ್ರಿಕೇಟ್ ಕಲಿಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ದುಡ್ಡು ಸುರಿಯಲು ತಯಾರಾಗಿರುತ್ತಾರೆ. ಪಂದ್ಯದ ದಿನಗಳಲ್ಲಿ ರಸ್ತೆಗಳು ನಿರ್ಜನವಾಗುತ್ತವೆ, ನೀರವ ವಾತಾವರಣ ಇರುತ್ತದೆ. ಇಂತಹ ಕ್ರಿಕೆಟ್ ಹುಟ್ಟಿದ್ದು ಹೇಗೆ ಗೊತ್ತೇ? ನಿಮ್ಮ ಕುತೂಹಲಕ್ಕಾಗಿ ಒಂದಿಷ್ಟು ಮಾಹಿತಿ ನೀಡಿದ್ದೇನೆ ಓದಿಕೊಳ್ಳಿ
ಕ್ರಿಕೇಟ್ ಆಟ ಆರಂಭವಾಗಿದ್ದು 16ನೇ ಶತಮಾನದಲ್ಲಿ , ಮೊದಲ ಅಂತರ ರಾಷ್ಟ್ರೀಯ ಪಂದ್ಯ ಆಡಲ್ಪಟ್ಟಿದ್ದು ೧೮೪೪,ಅಧಿಕೃತವಾಗಿ ಟೆಸ್ಟ್ ಪಂದ್ಯ ಆಡಿದ್ದು 1877ರಲ್ಲಿ. ದಕ್ಷಿಣ-ಪೂರ್ವ ಇಂಗ್ಲೆಂಡ್ ನಲ್ಲಿ ಕೆಂಟ್ ಮತ್ತು ಸಸೆಕ್ಷ್ ನಗರಗಳಲ್ಲಿ ಮೊದಲಬಾರಿಗೆ ಕ್ರಿಕೇಟ್ ಆಡಲಾಯಿತು. 1598ರಲ್ಲಿಯೇ 'ಕ್ರಿಕೆಟ್ 'ಎಂಬ ಹೆಸರನ್ನು ಈ ಆಟಕ್ಕೆ ಇಡಲಾಯಿತು. ಇದು ಡಚ್ ಮೂಲದ ಪದವಾಗಿದೆ. ಬಹುತೇಕ ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ಇದನ್ನು ಆಡಲಾಗುತ್ತದೆ. ಮೊದಲಭಾರಿ ಲಂಡನ್ ನಿಂದ ಹೊರಗೆ 17ನೇ ಶತಮಾನದಲ್ಲಿ ಉತ್ತರ ಅಮೇರಿಕಾಕ್ಕೆ ಕ್ರಿಕೇಟ್ ಆಟವನ್ನು ಪರಿಚಯಿಸಲಾಯಿತು.18ನೇ ಶತಮಾನದಲ್ಲಿ ಜಗತ್ತಿನಾದ್ಯಂತ ಹಂತ ಹಂತವಾಗಿ ಕ್ರಿಕೆಟ್ ಆಟ ಪರಿಚಯವಾಯಿತು. ಭಾರತ ಮತ್ತು ವೆಸ್ಟ್ ಇಂಡೀಸ್ ಗೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಗಳು ಕ್ರಿಕೇಟ್ ಆಟವನ್ನು ಪರಿಚಯಿಸಿದವು, ಆಸ್ಟ್ರೇಲಿಯಾದಲ್ಲಿ 1988ರಲ್ಲಿ , ನ್ಯೂಜಿಲ್ಯಾಂಡ್, ದಕ್ಷಿಣ ಆಪ್ರಿಕಾದಲ್ಲಿ 19ನೇ ಶತಮಾನದಲ್ಲಿ ಕ್ರಿಕೇಟ್ ಆಡಲ್ಪಟ್ಟಿತು. 1744ರಲ್ಲಿ ಕ್ರಿಕೇಟ್ ಆಟಕ್ಕೆ ನಿರ್ದಿಷ್ಠ ಮಾರ್ಗಸೂಚಿಗಳನ್ನು ರಚಿಸಲಾಯಿತು. ನಂತರ ಕ್ಲಬ್ ರೂಪದಲ್ಲಿ ತಂಡಗಳು ರಚನೆಯಾಗಿ ಕ್ರಿಕೇಟ್ ಆಡಲಾಯಿತು. ಅಂತರಾಷ್ಟ್ರೀಯ ಮಟ್ಟದ ಕ್ಲಬ್ ಗಳು ರಚನೆಯಾದವು ಅದರ ನಂತರವೇ ವರ್ಲಡ್ ಕಪ್ ಪಂದ್ಯಾವಳಿ ಪ್ರಾಯೋಜಿಸಲಾಯಿತು. ಕ್ರಿಕೇಟ್ ಆಟ ಆಯಾ ದೇಶಗಳ ಪ್ರತಿಷ್ಟೆಯ ಪ್ರಶ್ನೆಯಾಗಿದ್ದು ಆಗಲೇ. ಈಗ ಅಂತರ ರಾಷ್ಟ್ರೀಯ ಕ್ರಿಕೇಟ್ನಲ್ಲಿ ೧೨ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಈ ಕ್ರಿಕೇಟ್ ಜ್ವರ ಎಷ್ಟರ ಮಟ್ಟಿಗೆ ಏರಿದೆಯೆಂದರೆ ಅಲ್ಲಿ ನಮ್ಮ ತಂಡ ಸೋತರೆ, ನಮ್ಮ ಆಟಗಾರ ಔಟಾದರೆ ಇಲ್ಲಿ ಹೃದಯ ಕ್ರಿಯೆ ನಿಲ್ಲುತ್ತದೆ. ಹುಚ್ಚೆದ್ದ ಅಬಿಮಾನಿಗಳು ಗೆದ್ದರೆ ಮೆರವಣಿಗೆ ಸೋತರೆ ಗಲಭೆ ಮಾಡಿಸುವಷ್ಟರ ಮಟ್ಟಿಗೆ ಕ್ರಿಕೇಟ್ ಬೆಳವಣಿಗೆಯಾಗಿದೆ. ಇದೇ ಕ್ರಿಕೇಟ್ ಮಾಯೆ.

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...