Sunday, February 28, 2010

ಬಜೆಟ್ ಬಂಡಲ್ ಯಾಕ್ರೀ ಬೇಕು?

ನಿರೀಕ್ಷೆಗಳು ಬೇಕು ಆದರೆ ಅತಿಯಾದ ನಿರೀಕ್ಷೆಗಳು ಭ್ರಮನಿರಸನ ಉಂಟುಮಾಡಿಬಿಡುತ್ತವೆ, ಅಷ್ಟೇ ಏಕೆ ದುಖವನ್ನು ತಂದುಬಿಡುತ್ತವೆ. ಆದ್ದರಿಂದಲೇ ಆಸೆಗಳು ಇರಬೇಕು ಆಸೆಯ ಜೊತೆಗೆ ಸಾಧ್ಯತೆಗಳ ದಿಕ್ಕನ್ನು ಕೈಗೆಟುಕುವಂತೆ ಮಾಡಿ ಕಸಿದುಕೊಳ್ಳುವ ಧೋರಣೆ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಳ್ಳಬೇಕು ಮತ್ತು ಅದನ್ನು ಪಡೆಯುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು. ಈ ಮಾತು ಯಾಕೀಗ ಅಂತೀರಾ? ಕೇಂದ್ರ ಸರ್ಕಾರ ತನ್ನ ವಿತ್ತೀಯ ಬಜೆಟ್ ಅನ್ನು ಮಂಡಿಸಿದೆ, ಅದರ ಸಾಧಕ ಬಾಧಕಗಳೇನೇ ಇರಲಿ, ಜನಸಾಮಾನ್ಯರ ದೃಷ್ಟಿಯಿಂದ ಮಾತ್ರ ಇದೊಂದು ನಿರಾಶಾದಾಯಕ ಬಜೆಟ್ಟೆ ಸರಿ.ಅದಕ್ಕೆ ಈ ಮಾತು ಹೇಳಬೇಕಾಯಿತು.
ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಉದ್ದೇಶದಿಂದ ರಾಜಕೀಯ ಪಕ್ಷಗಳು ತಂತಮ್ಮ ಹಿತಾಸಕ್ತಿಗಳಿಗನುಗುಣವಾಗಿ ಬಜೆಟ್ ನಲ್ಲಿ ಆಕರ್ಷಕವಾದ ಯೋಜನೆಗಳನ್ನು ಪ್ರಕಟಿಸಿ ಜನ ಸಾಮಾನ್ಯರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತವೆ. ಇದು ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿ. ದೇಶದ ಆರ್ಥಿಕತೆ ಮತ್ತು ಅಭಿವೃದ್ದಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರ ಕಣ್ಣೊರೆಸುವ ನಾಟಕ ಮಾಡುವ ಸರ್ಕಾರಗಳು ಬಂಡವಾಳ ಶಾಹಿಗಳ ಮತ್ತು ಮೇಲ್ವರ್ಗದವರ ಹಿತಕಾಯಲು ನಿಂತು ಬಿಡುತ್ತವೆ. ಹಾಗಾಗಿ ದೇಶದ ಜನ ಸಾಮಾನ್ಯರ ಸಂಕಷ್ಟಗಳು ಪರಿಹಾರವಾಗದೇ ಉಳಿದು ಬಿಡುತ್ತವೆ. ಇದು ನಮ್ಮ ದೇಶದ ಜನರಿಗೊದಗಿದ ದುರ್ಗತಿ.
ಇಲ್ಲಿ ಕೇಂದ್ರದ ವಿತ್ತೀಯ ಬಜೆಟ್ ಕುರಿತು ನಾನು ಪ್ರಸ್ತಾಪಿಸಲು ಹೊರಟದ್ದು ಪ್ರಮುಖವಾಗಿ ತೆರಿಗೆ ವಿಚಾರದ ಬಗೆಗೆ. ಅದಕ್ಕೂ ಮುನ್ನ ಕಳೆದ ಸಾಲಿನ ಬಜೆಟ್ ನಲ್ಲಿ ಏನಾಗಿತ್ತು ಗೊತ್ತಾ? ಕಳೆದ ಬಾರಿ ಲೋಕಸಭಾ ಚುನಾವಣೆ ಎದುರಾಗಿತ್ತು ಈ ಹಿನ್ನೆಲೆಯಲ್ಲಿ ಕೇಂದ್ರದ ಯುಪಿಎ ಸರ್ಕಾರ ಪ್ರಕಟಿಸಿದ ವಿತ್ತೀಯ ಬಜೆಟ್ ನಲ್ಲಿ ಜನಸಾಮಾನ್ಯರನ್ನು ಮೆಚ್ಚುಸುವಂತಹ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು. ಅದು ಆಡಳಿತಾರೂಡ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಲಾಭವನ್ನು ತಂದು ಕೊಟ್ಟಿತ್ತು. ಆದರೆ ಈ ಭಾರಿ ಅಂತಹ ಘೋಷಣೆಗಳಿಲ್ಲವಾದರೂ ಪರೋಕ್ಷವಾಗಿ ಭಾರಿ ಹೊಡೆತವನ್ನು ದೇಶದ ಬಡವರಿಗೆ ಮತ್ತು ಮದ್ಯಮ ವರ್ಗದವರಿಗೆ ನೀಡಲಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಆಹಾರ ಪದಾರ್ಥಗಳ ಬೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಾರೀ ಏರಿಕೆ ಆಗಿರುವುದನ್ನು ಗಮನಿಸಬಹುದು. ಸಕ್ಕರೆ, ತೊಗರಿಬೇಳೆ, ಆಹಾರ ತಯಾರಿಕೆಗೆ ಬಳಸಲ್ಪಡುವ ಇತ್ಯಾದಿ ಪದಾರ್ಥಗಳು ತುಟ್ಟಿಯಾಗಿವೆ. ಚಿನ್ನದ ಬೆಲೆಯಲ್ಲಿ ಸಮತೋಲನವಿಲ್ಲ , ಇಂಧನ-ತೈಲಗಳ ಬೆಲೆ ಗಗನಕ್ಕೇರಿದೆ. ಕೇಂದ್ರ ಸರ್ಕಾರ ರೈತರಿಗೆ ಸಬ್ಸಿಡಿ ರಸಗೊಬ್ಬರಕ್ಕೆ ಘೋಷಿಸಿದ್ದ 50ಕೋಟಿ ಅನುದಾನ ಬರಲೇ ಇಲ್ಲ. ಜ್ಞಾನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ನಿರೀಕ್ಷಿತ ಹಣಕಾಸು ಲಭ್ಯವಾಗಿಲ್ಲ. ಮಾನವ ಸಂಪನ್ಮೂಲ ಉತ್ತೇಜಿಸು ವವಿಭಾಗಗಳಿಗೆ ಪ್ರೋತ್ಸಾಹವಿಲ್ಲ.ಆದರೆ ಕಾರ್ಪೋರೇಟ್ ವಲಯಕ್ಕೆ ಕುಮ್ಮಕ್ಕು ನೀಡುವ ಅಂಶಗಳಿಗೆ ಭಾರೀ ಮಹತ್ವ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಂತೂ ರೈತರಿಗೆ ಶೇ.3ರ ಬಡ್ಡಿದರದ ಸಾಲ ನೀಡುವ ಆಸೆ ತೋರಿಸಲಾಗಿದೆ. ಆದರೆ ಆಹಾರೋತ್ಪಾದನೆಗೆ ಪೂರಕವಾದ ವಿಚಾರಗಳ ಪ್ರಸ್ತಾಪವಿಲ್ಲ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ, ಮಾರುಕಟ್ಟೆ ಸುಧಾರಿಸುವ ಯೋಜನೆಗಳ ಪ್ರಸ್ತಾಪವಿಲ್ಲದಿರುವುದು ದುರಂತ. ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಇಂಧನ ಬೆಲೆ ಏರಿಕೆ ಯಲ್ಲದೇ ದೈನಂದಿನ ಜೀವನದಲ್ಲಿ ಜನರಿಗೆ ತಲುಪುವ ಹಲವು ಉತ್ಪನ್ನಗಳ ಮೇಲೆ ಪರೋಕ್ಷ ತೆರಿಗೆಯನ್ನು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವಿಧಿಸಿರುವುದು ದೊಡ್ಡ ಹೊಡೆತ. ಆದರೆ ಕಾರ್ಪೊರೇಟ್ ವಲಯದವರಿಗೆ ಶೇ.50ಕ್ಕಿಂತ ಕಡಿಮೆ ಪ್ರಮಾಣದ ನೇರ ತೆರಿಗೆ ವಿಧಿಸಲಾಗಿದೆ. ಆರ್ಥಿಕ ಸಲಹೆಗಾರ ಮಿತ್ರ ಮಧುಸೂಧನ್ ಹೇಳುವ ಪ್ರಕಾರ ಈ ಪ್ರಮಾಣದ ತೆರಿಗೆಯನ್ನು ಅಂದರೆ ಶೇ.50ಮೀರಿದ ತೆರಿಗೆಯನ್ನು ಜನರ ಮೇಲೆ ವಿಧಿಸುವಂತಹ ಪ್ರಕ್ರಿಯೆಗಳು ಜಗತ್ತಿನ ಯಾವುದೇ ದೇಶದಲ್ಲೂ ಕಾಣುವುದು ಸಾಧ್ಯವಿಲ್ಲವಂತೆ, ಆದರೆ ಭಾರತದಲ್ಲಿ ಇದು ಸಾಧ್ಯವಾಗಿದೆ. ಇದು ಜನಪರ ನೀತಿಯೇ? ಇಲ್ಲಿ ಕೇಂದ್ರ ಸರ್ಕಾರದ ನೀತಿ ಹಲವು ರೀತಿಯಲ್ಲಿ ಪ್ರಶ್ನಾರ್ಹವಾಗುತ್ತದೆ. ಜನರ ಪರ ಎಂದು ಬಿಂಬಿಸಿಕೊಳ್ಳಲು ಉದ್ಯೋಗ ಖಾತ್ರಿ, ಹಂ ಆದ್ಮಿ ಇತ್ಯಾಧಿ ಕಾರ್ಯಕ್ರಮಗಳನ್ನು ಘೋಷಿಸುವ ಯುಪಿಎ ಸರ್ಕಾರ ಬಜೆಟ್ ಹೊರೆಯನ್ನೇಕೆ ಹೊರಿಸಿದೆಯೋ ತಿಳಿಯುತ್ತಿಲ್ಲ.ಅವರಿಗೆ ಬಂಡವಾಳ ಶಾಹಿಗಳ ಹಿತ ಬೇಕಾಗಿದಯೇ ವಿನಹ ಜನಸಾಮನ್ಯರ ಹಿತವಲ್ಲ ಎಂಬುದು ತಿಳಿಯುತ್ತಿದೆ.
ಇನ್ನು ರಾಜ್ಯ ಬಜೆಟ್ ವಿಚಾರಕ್ಕೆ ಬರುವುದಾದರೆ ಕಳೆದ ಬಿಜೆಪಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜನಪರವಾಗಿ ಪ್ರಕಟಿಸಿತ್ತು. ಆದರೆ ಅವುಗಳಾವುವು ಅನುಷ್ಠಾನಕ್ಕೆ ಬರದಿದ್ದುದು ದುರಂತವೇ ಸರಿ. ರಾಜ್ಯ ಸರ್ಕಾ ರನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಬದಲಿಗೆ ಅದಿರು ಮತ್ತು ಅದಿರು ಉತ್ಪನ್ನದ ಲೂಟಿಗೆ ಒತ್ತು ಕೊಡು ವಮೂಲಕ ರೆಡ್ಡಿ ಗಳ ಹಿತ ಕಾಯಲು ಕಂಕಣ ಬದ್ದವಾಗಿದೆ. ಪರಿಣಾಮ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಉತ್ತರ ಕರ್ನಾಟಕದ ಬಹುತೇಕ ಮಂದಿ ದಕ್ಷಿಣದೆಡೆಗೆ ಕೂಲಿ ಕಾರ್ಮಿಕರಾಗಿ ವಲಸೆ ಬರುವ ಪ್ರಮಾಣ ಹೆಚ್ಚುತ್ಗಿದೆ. ನೀರಾವರಿಗೆ ಆದ್ಯತೆ ನೀಡಿದಲ್ಲಿ ಉದ್ಯೋಗಾವಕಾಶದ ಜೊತೆಗೆ ಆಹಾರ ಸ್ವಾವಲಂಬನೆ ಸುಧಾರಿಸುತ್ತದಲ್ಲವೇ?
ರಾಜ್ಯ ಸರ್ಕಾರ ನಕ್ಸಲ್ ಸಮಸ್ಯೆ ಸುದಾರಣೆಗೆ ವಿಶೇಷ ಪ್ಯಾಕೇಜ್ ಘೋಷಿಸಿತ್ತು ಆದರೆ ಆಗಿದ್ದೇನು? ಪ್ಯಾಕೇಜ್ ರೂಪ ದ635ಕೋಟಿ ಇನ್ನೂವರೆಗೆ ಬಂದಿಲ್ಲ. ಹೀಗಿರುವಾಗ ಸಮಸ್ಯೆ ಸುಧಾರಣೆ ಹೇಗಾದೀತು? ಮಠ-ಮಾನ್ಯಗಳಿಗೆ ಲೆಕ್ಕಾಚಾರವಿಲ್ಲದಂತೆ ಕೋಟಿ ಕೋಟ ಿದುಡ್ಡು ಕೊಟ್ಟ ಬಿಜೆ ಸರ್ಕಾರ ಜನಸಾಮಾನ್ಯರಿಗೆ ಪೂರಕವಾ ದಯೋಜನೆಗಳಿಗೆ ಹಣವನ್ನೇ ಸರಿಯಾಗಿ ನೀಡಲಿಲ್ಲ ಇದು ಏನ್ನನು ಸೂಚಿಸುತ್ತದೆ? 2ರೂ.ಗೆ 25ಕೇಜಿ ಅಕ್ಕಿ ನೀಡುತ್ತೇವೆ ಎಂದರು, ನಿರುಧ್ಯೋಗ ಭತ್ಯೆ ಕೊಡುತ್ತೇವೆ ಅಂದ್ರು, ರೈತರಿಗೆ ಬೀಜ ಕೊಳ್ಳಲು 1000ಕೋಟ ಿಸಹಾಯ ಧನ ನೀಡುತ್ತೇವೆಂದರು, ವಿಶೇಷ ಘಟಕ ಯೋಜನೆಯಡಿ 835ಕೋಟಿ ಕೊಡುತ್ತೇವೆಂದು ಹೇಳಿ ಕೇವಲ 312 ಕೋಟಿ ಕೊಟ್ಟರು, ನಿರಂತರ ಜ್ಯೋತಿ ನೀಡುತ್ತೇವೆಂದು ಬಡಾಯಿ ಕೊಚ್ಚಿದರು ಎಲ್ಲಿ ಸ್ವಾಮಿ ? ಯಾವ ವುದು ಅನುಷ್ಟಾನವಾಗಿದೆ ಹೇಳಿ? ರಾಜ್ಯದ ದಲಿತರು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 1ವರ್ಷದಿಂ ದ ಸುಮಾರು 50ಕೋಟಿಯಷ್ಟು ಸ್ಕಾಲರ ಶಿಪ್ ನೀಡಿಲ್ಲ ಯಾಕೆ? 3ರ ಬಡ್ಡಿ ಸಾಲ ಕೈಗೆಟುಕ ದದ್ರಾಕ್ಷಿಯಂತಾಗಿದೆ ಏನ್ರಿ ಇದೆಲ್ಲಾ ? ಬಜೆಟ್ ಬಂಡಲ್ ಬಿಡೋದು ಯಾಕ್ರಿ ? ಜನರೇನು ದಡ್ಡರಲ್ಲ ಅಧಿಕಾರಸ್ಥರು ಏನು ಮಾಡ್ರೀರಿ ?ಅನ್ನೋದು ತಿಳಿಯುತ್ತೆ. ಈ ಸಲದ ಬಜೆಟ್ ನಲ್ಲಾದರೂ ಬಂಡಲ್ ಬಿಡೋದು ನಿಲ್ಲಿಸಿ ಜನಸಾಮಾನ್ಯರ ಹಿತಕಾಯಲು ಯೋಗ್ಯ ಬಜೆಟ್ ನೀಡಬೇಕಾಗಿದೆ. ನೀವೇನಂತೀರಾ ಸ್ವಾಮಿ?

Why Not a Budget for the Farmers?

The Sucide of farmers in 2008 is 16,196 according to national survey statistics. Further the number of farmers sucided from 1997 to 2008 is 1,99,132. A Survey of the world organization says eight million farmers have lost their lands upto Thirty Four Thousand million in 10years. This shocking statistics was given through sms by Yogaramesh of the Potato club.
This is really a shocking news. In the Kannada literary meet at Gadag recently, Mr. Kodihally Chandrashekhar, a Rajya Ryota Sangha Working President laid a stress for a separate budget for the farmers by the central and state Governments. India is a Country with 75% of farmers and hence a need for budget for them. The governments can be elected and defeated by the farmers but the politicians have failed in protecting the interest of the farmers. Instead they have sold the life of the farmers to the multinational companies(MNC's).
Globalisation process is going on in the country and in the name of SEZ's agricultural lands are being grabbed from the past 18years by the successive governments. According to the Government Notifications in 2002 and 2005, 146 SEZs were proposed and according to the new notifications they went upto more than 500. The government has approved 220 such proposals already. These SEZs were supposed to provide employment opportunities to 17.44 lakh million people. The initial plan was to acquire 1,25,163 thousand hectares, but now the demand has gone upto 10times of this. As a result the farmers from Bellary, Raichur, Belgaum, Mysore, Hassan, Mangalore, Davanagere and Bangalore districts are migrated forcibly from their villages and the number of displaced farmers is increasing day by day. The farmer Prime Minister H.D. Devegowda seems to join hands with the protesting farmers, eventhough he did nothing for the farmers while in power. Other political parties also joined their hands to oppose the present BJP governments move to permit mining in 3-4 districts of their reserved forest areas.This way agricultural lands are being grabbed for constructing airports and power projects also.
The two houses of the Karnataka State Assembly sessions begins from February 25th. The government has decicded to bring a bill on banning the cows slaughter and the opposition parties are opposing it to please the Muslims, Dalits and other people, who according to them are used to eat cows. Different reasons are given by them in support of its. They say when land is being grabbed the cows cannot survive and hence they can eat cows. There is no facility in every village to take care of the cows and especially those which do not give milk. The government has to answer many more questions that may arise from this problem. For want of space the discussion is not complete and the people are free to express their views on this.

Sunday, February 21, 2010

ರೈತರ ಹಿತಕ್ಕೆ ಕೃಷಿ ಬಜೆಟ್ ಯಾಕಿಲ್ಲ??



2008ರ ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 16,196. 1997 ರಿಂದ 2008ರ ವರೆಗೆ ಇದೇ ಅಂಕಿ-ಅಂಶದ ಪ್ರಕಾರ ಸಾವಿಗೆ ಶರಣಾದ ರೈತ ರಸಂಖ್ಯೆ1,99,132. ಹಾಗೆಯೇ ವಿಶ್ವಸಂಸ್ಥೆಯ ಅಧ್ಯಯನವೊಂದ ರ ಪ್ರಕಾರ 1991 ಮತ್ತು 2001ರ ನಡುವೆ ಕೃಷಿಯಿಂದ ವಿಮುಖರಾ ದರೈತರ ಸಂಖ್ಯೆ 8ಮಿಲಿಯನ್, ಅದೇ ಪ್ರಕಾರ ದಿನವೊಂದಕ್ಕೆ 200ದಂತೆ 10ವರ್ಷಕ್ಕೆ ಕೃಷಿಯಿಂದ ವಿಮುಖರಾ ದರೈತರ ಸಂಖ್ಯೆ 2008ಕ್ಕೆ 34ಸಾವಿರ ಮಿಲಿಯನ್! ಇಂತಹದ್ದೊಂದು ಆಘಾತಕಾರಿ ಅಂಕಿ-ಅಂಶದ ಮಾಹಿತಿಯನ್ನು ಎಸ್ ಎಂ ಎಸ್ ಮೂಲಕ ನೀಡಿದ್ದು ಪೊಟ್ಯಾಟೋ ಕ್ಲಬ್ ನ ಯೋಗಾರಮೇಶ್. ಹೌದು ಇಂತಹದ್ದೊಂದು ಬೆಳವಣಿಗೆ ಮನುಕುಲಕ್ಕೆ ಅತ್ಯಂತ ಆಘಾತ ಕಾರಿಯಾದುದು. ನಿನ್ನೆ ಗದುಗಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತ ಸಂಘದ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಕೇಂದ್ರ ಸರ್ಕಾರ ಸೇರಿಂದತೆ ದೇಶದ ಎಲ್ಲ ರಾಜ್ಯಗಳಲ್ಲೂ ಕೃಷಿ ವಲಯಕ್ಕೆ ಆದ್ಯತ ಕೊಡುವ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಹೌದು ಇದು ಎಲ್ಲರೂ ಒಪ್ಪಬೇಕಾದ ಮಾತೆ ಸರಿ.ಹೇಳಿಕೇಳಿ ನಮ್ಮ ದೇಶ ಹಳ್ಳಿಗಳ ದೇಶ, ಶೇ.75ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕು ಸವೆಸುತ್ತಿದ್ದಾರೆ, ಇದು ದೇಶದ ಆರ್ಥಿಕ ಬೆನ್ನೆಲುಬು ಹೌದು. ಆದರೆ ಇದಕ್ಕೆ ಪೂರಕವಾ ದ ವಾತಾವರಣ ನಿರ್ಮಿಸುವಲ್ಲಿ ಪ್ರೋತ್ಸಾಹಿಸುವಲ್ಲಿ ಮಾತ್ರ ಸರ್ಕಾರಗಳು ಹಿಂದೆ ಬಿದ್ದಿವೆ.ದೇಶದಲ್ಲಿ ಆಹಾರ ಸ್ವಾವಲಂಬನೆಗೆ ಮತ್ತು ಆರ್ಥಿಕತೆಗೆ ಬೆನ್ನೆಲುಬಾಗಿರುವ ಕೃಷಿಗೆ ಯಾಕೆ ವಿಶೇಷ ಬಜೆಟ್ ಮಂಡಿಸುತ್ತಿಲ್ಲ? ಈ ದೇಶದ ಬಹುತೇಕ ರಾಜಕಾರಣ ನಿಂತಿರುವುದೇ ರೈತರ ಅಸ್ತ್ವಿತ್ವದ ಮೇಲೆ, ಆದರೆ ಅಧಿಕಾರಕ್ಕೆ ಏರಿದ ಮೇಲೆ ಅವರು ರೈತರ ಕೊರಳನ್ನು ಕುಯ್ಯುವ ಕೆಲಸವನ್ನು ಸರಾಗವಾಗಿ ಮಾಡುತ್ತಿದ್ದಾರೆ. ರೈತರ ಬದುಕನ್ನು ವಿದೇಶಿ ಕಂಪನೆಗಳಿಗೆ ಅಡವಿಡುತ್ತಾರೆ. ಅಭಿವೃದ್ದಿಯ ಹೆಸರಿನಲ್ಲಿ ರೈತರ ಹಿತವನ್ನು ಸಾರಾಸಗಟಾಗಿ ಬಲಿಕೊಡುತ್ತಾರೆ , ಯಾಕೆ ಹೀಗೆ?
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ? ರಾಜ್ಯದಲ್ಲಿಯೂ ಸಹಾ ಜಾಗತೀಕರಣ ನೀತಿಯ ದೆಸೆಯಿಂದಾಗಿ ಅಭಿವೃದ್ದಿಯ ಹಪಾಹಪಿಗೆ ಬಿದ್ದು ಕಳೆದ 18ವರ್ಷಗಳಿಂದಲೂ ರೈತ ರಶೋಷಣೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಎಸ್ ಇ ಜೆಡ್ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ಸರ್ಕಾರ ರೈತರನ್ನು ಬಿಕಾರಿಗಳನ್ನಾಗಿ ಮಾಡುತ್ತಿದ್ದೆ. ಕಳೆ ದ18ವರ್ಷಗಳಲ್ಲಿ ಕೃಷಿ ಭೂಮಿಯ ಪ್ರಮಾಣ ತೀವ್ರ ಗತಿಯಲ್ಲಿ ಕಡಿಮೆಯಾಗುತ್ತಿದೆ. 2002 ಹಾಗೂ 2005ರಲ್ಲಿ ಎಸ್ ಇ ಜೆಡ್ ಕುರಿತಂತೆ ಸರ್ಕಾರ ಪ್ರಕಟಿಸಿದ ಹೊಸ ನೀತಿಗಳನ್ವಯ ಆರಂಭದಲ್ಲಿ ರಾಷ್ಟ್ರಾಧ್ಯಂತ 146 ವಿಶೇಷ ಆರ್ಥಿಕವಲಯಗಳ ಪ್ರಸ್ತಾಪವಿತ್ತು ಆದರ ೆಅದು ಹೊಸನೀತಿ ಜಾರಿಯಾದ ಮೇಲೆ 500ಕ್ಕೂ ಹೆಚ್ಚು ಪ್ರಸ್ತಾವಗಳ ುಬಂದಿವೆ ಮತ್ತು 220ಪ್ರಸ್ತಾವಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಇಂತಹ ವಲಯಗಳ ಮೂಲಕ ದೇಶದ 17.44ಲಕ್ಷ ಮಿಲಿಯನ್ ಜನರಿಗೆ ಉದ್ಯೋಗ ಕಲ್ಪಿಸುವ ಇರಾದೆಯನ್ನು ಕೇಂದ್ರಸರ್ಕಾರ ವ್ಯಕ್ತಪಡಿಸಿದೆ. ಆರಂಭದಲ್ಲಿ 1,25,163 ಸಾವಿರ ಹೆಕ್ಟೇರು ಭೂಮಿ ವಶಕ್ಕೆ ತೆಗೆದುಕೊಳ್ಳುವ ಇದ್ದರೆ, ಈಗ ಅದು ಅದರ ಹತ್ತು ಪಟ್ಟು ಹೆಚ್ಚು ಭೂಮಿಯನ್ನ ಬೇಡುತ್ತಿದೆ. ಪರಿಣಾ ಮ ರಾಜ್ಯದ ಬಳ್ಳಾರಿ, ರಾಯಚೂರು, ಬೆಳಗಾಂ, ಮೈಸೂರು, ಮಂಗಳೂರು, ದಾವಣಗೆರೆ, ಬೆಂಗಳೂರು ಮತ್ತಿತರೆಡೆಗಳಲ್ಲಿ ರೈತರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೂಮಿಯಲ್ಲಿ ಗೇದು ಬದುಕು ಸವೆಸುತ್ತಿದ್ದವನು ಬಲವಂತವಾಗಿ ಒಕ್ಕಲೆಬ್ಬಿಸಿಕೊಂಡು ಗ್ರಾಮಗಳನ್ನು ತೊರೆದ ುಹೋಗುವಂತಹ ಪರಿಸ್ಥಿತಿ ದಿನೇದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಣ್ಣ ಮುಂದಿ ನಜ್ವಲಂತ ುದಾಹರಣೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ರೈತರದ್ದು, ಹಾಗೆಯೇ ನೈಸ್ ಕಾರಿಡಾರ್ ರಸ್ತೆ ಯೋಜನೆ, ಬಳ್ಳಾರಿವಿದ್ಯುತ್ ಸ್ಥಾವರಕ್ಕೆ ಜಮೀನು ಕಳೆದುಕೊಂಡವರ ಬದುಕು ಮೂರಾಬಟ್ಟೆಯಾಗಿದೆ. ರಾಜಕಾರಣದಲ್ಲಿ ಒಂದು ಬಂಡೆಗಲ್ಲಿನಂತಿರು ವಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರೈತ ರಭೂಮಿಯನ್ನು ಕಸಿದುಕೊಳ್ಳುವ ಸರ್ಕಾರದ ನೀತಿಯ ವಿರುದ್ದ ಸಿಡಿದೆದ್ದಿದ್ದಾರೆ. ರೈತರ ಸಮಾವೇಶಗಳನ್ನು ನಡೆಸುತ್ತಿದ್ದಾರೆ, ಈ ಕುರಿತು ಸಂಸತ್ತಿನಲ್ಲಿಯೂ ಪ್ರಸ್ತಾಪಿಸುವ ಮಾತನಾಡಿದ್ದಾರೆ. ಅಧಿಕಾರದಲ್ಲಿದ್ದಾಗ ತಾವೇ ಅಂತಹ ತಪ್ಪುಗಳನ್ನು ಮಾಡಿದ್ದರೂ ವಿರೋಧಪಕ್ಷೆದಲ್ಲಿದ್ದಾಗ ಮಾತ್ರ ಅವರು ರೈತರ ಪರ ಹೋರಾಟಕ್ಕಿಳಿದಿರುವುದು ಪ್ರಶಂಸಿಸಬೇಕಾ ದವಿಚಾರವೇ ಸರಿ. ಆದರೆ ಕಾಂಗ್ರೆಸ್ ಆಗಲಿ ಇತರೆ ಸಂಘಟನೆಗಳಾಗಲಿ ಇಂತಹದ್ದೊಂದು ಪ್ರಯತ್ನಕ್ಕೆ ಇಳಿಯುತ್ತಿಲ್ಲ. ಬದಲಾಗಿ ಆಡಳಿತ ಬಿಜೆಪಿ ಸರ್ಕಾರ ಕಳೆದು ಒಂದು ವಾರದಿಂದ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ದವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. 3-4 ಜಿಲ್ಲೆಗಳಲ್ಲಿ ಮೈನಿಂಗ್ ಮಾಫಿಯಾಗೆ ಅನುಮತಿ ನೀಡಿದೆ, ನೈಸ್ ಕಾರಿಡಾರ್ ಯೋಜನೆ ಕುರಿತು ಸ್ಪಷ್ಟವಾದ ನಿಲುವಿಗೆ ಬಾರದೆ ರೈತರ ಹಿತಾಸಕ್ತಿಗೆ ವಿರುದ್ದ ನಿಲುವು ತಳೆಯುತ್ತಿದೆ. ಈಗಾಗಲೇ ನೈಸ್ ಯೋಜನೆಯಿಂ ದ ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡಿರು ವರೈತರು ನೋವನ್ನನುಭವಿಸುತ್ತಿದ್ದಾರೆ. ಇದೇ ರೀತಿ ವಿಮಾ ನನಿಲ್ದಾಣಗಳಿಗೆ, ದೊಡ್ಡ ಕಂಪನಿಗ ಳಘಟಕಗಳಿಗೆ, ನೀರಾವರಿ ಯೋಜನೆಗಳಿಗೆ, ವಿದ್ಯುತ್ ಘಟಕಗಳಿಗೆ, ಸಾಪ್ಟ್ ವೇರ್ ಕಂಪನಿಗಳಿಗೆ, ಮೈನಿಂಗ್ ಮಾಫಿಯಾಕ್ಕೆ ರೈತರ ಜಮೀನುಗಳು ಬಲಿಯಾಗುತ್ತಿವೆ ಜೊತೆಗೆ ರೈತ ರಬದುಕುಗಳೂ ಕೂಡ!

ಇದೇ ಫೆಬ್ರುವರಿ 25ರಿಂದ ರಾಜ್ಯ ಸರ್ಕಾರದ ಉಭಯ ಮಂಡಲಗಳ ಅಧಿವೇಶ ಜರುಗಲಿದೆ. ಈ ಸಂಧರ್ಭದಲ್ಲಿ ವಿರೋಧ ಪಕ್ಷಗಳು ರಾಜ್ಯದ ಜನ ರಹಿತವನ್ನು ಎಷ್ಟರ ಮಟ್ಟಿಗೆ ಕಾಯುತ್ತಾರೆ ? ಅಥವ ಜನರ ಹಿತಾಸಕ್ತಿ ಕಡೆಗಣಿಸಿ ಸಮ ಯವ್ಯರ್ಥಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೆದ ವಿಧೆಯಕವನ್ನು ಜಾರಿಗೆ ತರುವ ಮಾತಾಡುತ್ತಿದೆ, ಇಲ್ಲಿ ಒಂದು ಪ್ರಶ್ನೆಯಿದೆ. ಇವತ್ತು ದೇಶದಲ್ಲಿಯೇ ಅತೀ ಹೆಚ್ಚು ಗೋತಳಿಗಳನ್ನು ಹೊಂದಿದ ರಾಜ್ಯ ನಮ್ಮದು. ಗೋವು ದೇವರ ಸಮಾನ, ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಉನ್ನತ ಸ್ಥಾನವಿದೆ ಎಂದೆಲ್ಲ ಹೇಳಲಾಗುತ್ತಿದೆ ಮತ್ತು ಆ ಕಾರಣಕ್ಕಾಗಿಯೇ ಬಿಜೆಪಿ ಚಡ್ಡಿ ಧೋರಣೆ ಪ್ರದರ್ಶಿಸುತ್ತಾ ಹಿಂದೆ ಮುಂದೆ ನೋಡದೆ ವಿಧೇಯಕ ಮಂಡನೆಗೆ ಮುಂದಾಗಿದೆ. ಇವತ್ತು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಜಾಗತಿಕವಾಗಿ ಗೋಮಾಂಸ ಭಕ್ಷಕರಿದ್ದಾರೆ, ಭಾರತದಲ್ಲಿಯೂ ಸಹಾ ಮುಸಲ್ಮಾನರು ಮತ್ತು ಕೆಲವು ದಲಿತರು ಗೋಮಾಂಸವನ್ನು ಆಹಾರ ಕ್ರಮವಾಗಿ ರೂಢಿಸಿಕೊಂಡಿದ್ದಾರೆ. ಇದಕ್ಕೆ ಸ್ಥಳೀಯವಾಗಿ ಎರಡು ಕಾರಣಗಳನ್ನು ನೀಡಲಾಗುತ್ತದೆ, ಅಗ್ಗದ ದರದಲ್ಲಿ ಗೋಮಾಂಸದ ಲಭ್ಯತೆ ಮತ್ತು ಇತರೆ ಮಾಂಸಗಳಿಗಿಂತ ಗೋಮಾಂಸ ಹೆಚ್ಚು ಪುಷ್ಠಿದಾಯಕ ಮತ್ತು ಕೆಲವು ರೋಗಗಳಿಗೆ ಸಿದ್ದೌಷಧ ಎನ್ನಲಾಗುತ್ತದೆ. ಇಂತಹ ವಾದಗಳು ಏನೇ ಇರಲಿ ನನ್ನ ಪ್ರಕಾರ ಹೇಳುವುದಾದರೆ ಇವತ್ತು ಹಸು ಸಾಕಾಣಿಕೆಗೆ ಪೂರಕವಾದ ವಾತಾವರಣ ಎಲ್ಲಿದೆ.? 70ರ ದಶಕದಲ್ಲಿ ಹಸುಗಳ ಸಾಗಾಣಿಕೆಗೆಂದೆ ಮೀಸಲಾಗಿದ್ದ ಅಮೃತ ಮಹಲ್ ಗಳು ಅಸ್ತಿತ್ವ ಇವತ್ತು ಎಲ್ಲಿವೆ?. ಪ್ರತೀ ಗ್ರಾಮಗಳಲ್ಲಿದ್ದ ಗೋಮಾಳ ಜಾಗದ ಕಥೆಗಳೇನಾಗಿದೆ.? ಎಸ್ ಇ ಜೆಡ್ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವಾಗ ಹಸುಗಳನ್ನಾದರೂ ಏನು ಮಾಡಬೇಕು.? ಆಧುನೀಕರಣದ ಭರಾಟೆಯಲ್ಲಿ ಕೃಷಿ ಕ್ಷೇತ್ರಕ್ಕೆ ಯಂತ್ರೋಪಕರಣಗಳ ಆಗಮನವಾಗಿದೆ,ಟ್ರ್ಯಾಕ್ಟರುಗಳು ಮನೆಗೊಂದರಂತೆ ಬಂದಿವೆ ಹೀಗಾದಾಗ ಗೋವುಗಳನ್ನು ಸಾಕುವುದಾದರೂ ಹೇಗೆ? ಹಾಲು ಕರೆಯುವ ಜಾನುವಾರುಗಳು ಓಕೆ ಹಾಲು ಕರೆಯದ ಹೋರಿಗಳನ್ನೇನು ಮಾಡಬೇಕು? ಉಪಯೋಗಕ್ಕೆ ಬರುವ ಹಸುಗಳ ಸಾಕಾಣಿಕೆಯೇ ಹೆಚ್ಚು ಶ್ರಮದಾಯಕ ಹಾಗಿರುವಾಗ ಉಪಯೋಗಕ್ಕೆ ಬಾರದ ಗೋವುಗಳನ್ನು ಏನು ಮಾಡಬೇಕು? ಅದಕ್ಕೆ ಸಂಪನ್ಮೂಲ ಎಲ್ಲಿದೆ? ಅದನ್ನು ಎಲ್ಲರಿಂದಲೂ ಭರಿಸಲು ಸಾಧ್ಯವೇ? ಹಾಗಂತ ಅವುಗಳನ್ನು ಕಡಿದು ತಿನ್ನಿ ಎಂದು ಹೇಳಲಾಗದು, ಆದರೆ ಗೋಮಾಂಸ ಭಕ್ಷಣೆ ಸಾಂಪ್ರದಾಯಿಕ ಆಹಾರವಾಗಿರುವ ಒಂದು ವರ್ಗದ ಜನರು ಏನು ಮಾಡಬೇಕು? ಹಸು ಸಾಕಾಣಿಕೆಯ ಪಿಂಜರಾಪೋಲುಗಳಿಗೆ ಪ್ರತೀ ಊರಿನಲ್ಲೂ ಸೌಲಭ್ಯ ಒದಗಿಸಲು ಸಾಧ್ಯವೇ ? ಹೀಗೆ ಪ್ರಶ್ನೆಗಳು ಇವೆ ಸರ್ಕಾರವೇ ಇದಕ್ಕೆ ಉತ್ತರಿಸಬೇಕು.ಇಲ್ಲಿ ಸ್ಥಳಾಭಾವದಿಂದ ಚರ್ಚೆ ಅಪೂರ್ಣ, ನಿಮ್ಮ ಮೌಲ್ಯಯುತ ಅನಿಸಿಕೆ ಹೇಳಲು ನೀವು ಸ್ವತಂತ್ರರು..

Sunday, February 14, 2010

'ಪ್ರೇಮಕ್ಕೂ ಪರ್ಮಿಟ್ ' ಇದ್ಯಾವ ಸೀಮೆ ರಾದ್ದಾಂತ?


ವ್ಯಾಲೆಂಟೈನ್ಸ್ ಡೇ ಆಚರಿಸಬೇಕೋ ? ಬೇಡವೋ ? ಎಂಬ ಪ್ರಶ್ನೆ ಇಟ್ಟುಕೊಂಡು ವೃಥಾ ಕಾಲಹರಣದ ಚರ್ಚೆ ಮಾಡಿಕೊಂಡು, ಕಿತ್ತಾಡಿಕೊಂಡು ನೆಮ್ಮದಿ ಹಾಳು ಮಾಡುತ್ತಿದ್ದರಲ್ಲ ಈ ಅವಿವೇಕಿಗಳು ಬಹುಶ: ಇದಕ್ಕಿಂತ ಅವಿವೇಕದ ಸಂಗತಿ ಮತ್ತೊಂದಿರಲಾರದೇನೊ ಅನಿಸಲಾರಂಭಿಸಿದ್ದು ಕಳೆದ ಎರಡು ಮೂರು ದಿನಗಳ ಬೆಳವಣಿಗೆಯಿಂದ. ಕೆಲವು ಅವಿವೇಕಿಗಳ ವಿಚಾರ ಹೀನತೆಯಿಂದ, ಭೌದ್ದಿಕ ಶಕ್ತಿಯ ಕೊರತೆಯಿಂದ ರಾಜ್ಯದಲ್ಲಿ ಅನಗತ್ಯವಾಗಿ ಗಲಭೆ, ಗುಂಪು ಘರ್ಷಣೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಯಂತಹ ಕೃತ್ಯಗಳು ಯಾವ ಎಗ್ಗುತಗ್ಗು ಇಲ್ಲದೇ ನಡೆಯುತ್ತಿವೆ.ಬಂದ್, ಗಲಭೆ ಮೂಲಕ ಶಾಂತಿ ಕದಡುವ ಮತ್ತು ಜನರ ನೆಮ್ಮದಿ ಕೆಡಿಸುವ ಖೂಳರ ಅಂಡಿನ ಮೇಲೆರೆಡು ಬಿಗಿದು ಮಟ್ಟಹಾಕುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಇದೆಲ್ಲಾ ವಿರೋಧ ಪಕ್ಷದವರ ಪ್ರೀ ಪ್ಲಾನು, ಪ್ರೇಮಿಗಳಿಗೆ ರಕ್ಷಣೆ ಕೊಡ್ತೀವಿ ಅನ್ನೋ ಮಾತಾಡಿದ್ದಾರೆ.ಇದನ್ನೆಲ್ಲಾ ಕೇಳಿಸಿಕೊಳ್ಳಬೇಕಾದ ದುರ್ಗತಿ ನಮ್ಮ ಜನರಿಗೆ, ಇಂಥಹದ್ದೆಲ್ಲ ಬೇಕಿತ್ತೇನ್ರಿ?
ಯಾವುದ್ರೀ ಅದು ವ್ಯಾಲೆಂಟೈನ್ಸ್ ಡೇ?? ಬಲವಂತವಾಗಿ ಅದನ್ನೇನು ಸಮಾಜದ ಮೇಲೆ ಹೇರಿದ್ದಾರ? ಈ ಮೂರ್ಖರಿಗೇನಾಗಿದೆ? ಹಿಂದೂ ಧರ್ಮದ ಹೆಸರಿನಲ್ಲಿ ಇಲ್ಲದ ರಾಡಿ ಎಬ್ಬಿಸಲು ಇವರಿಗೇನು ಹಕ್ಕಿದೆ? ಯಾವ ಪುರುಷಾರ್ಥಕ್ಕೆ ಈ ಕ್ಷುಲ್ಲುಕ ವಿಚಾರಕ್ಕೆ ಬಡಿದಾಡಬೇಕು? ಎಂಬೆಲ್ಲಾ ಪ್ರಶ್ನೆಗಳು ನಿಮ್ಮಲ್ಲೂ ಬಂದಿರಲಿಕ್ಕೆ ಸಾಕು. ಹೌದು ಯಾಕೆ ಈ ವಿಚಾರ ಇಷ್ಟೊಂದು ಮಹತ್ವ ಪಡೆಯಬೇಕು ? ಇದನ್ನು ಚರ್ಚಿಸುವ ಮುನ್ನ ಈ ವ್ಯಾಲೆಂಟೈನ್ ಡೇ ಬಗ್ಗೆ ಸಂಕ್ಷಿಪ್ತವಾಗಿ ಒಂದಷ್ಟು ವಿಚಾರ ತಿಳಿಯೋಣ.
ವ್ಯಾಲೆಂಟೈನ್ ಡೇ ಅರ್ಥಾತ್ 'ಪ್ರೇಮಿಗಳ ದಿನ'ಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ, ವ್ಯಾಲೆಂಟೈನ್ ಒಬ್ಬ ಸಂತ ಆತನ ಪ್ರೇಮ ವಿಚಾರ ಬಹಿರಂಗವಾದಾಗ ಆತನನ್ನು ಗಲ್ಲಿಗೆ ಹಾಕಲಾಯಿತು ಎಂಬ ಕಥೆ ಸಾಧಾರಣವಾದುದು. ಆದರೆ ಇಂಥ ನೂರಾರು ಕಥೆಗಳು ವ್ಯಾಲೆಂಟೈನ್ ಡೇ ಹಿನ್ನಲೆಯಲ್ಲಿ ಕಾಣ ಸಿಗುತ್ತವೆ. ಕ್ರಿಸ್ತ ಪೂ.496ರಲ್ಲಿ ಇಂತಹದ್ದೊಂದು ಆಚರಣೆ ಚಲಾವಣೆಯಲ್ಲಿದ್ದ ಬಗ್ಗೆ ಮಾಹಿತಿ ಇದೆ. ಬೇರೆ ಬೇರೆ ದೇಶಗಳಲ್ಲಿ ಬೇರೆಯದೇ ರೀತಿಯ ಆಚರಣೆಗಳು ಮತ್ತು ಅರ್ಥಗಳು ಸಿಗುತ್ತವೆ, ಹಾಗಾಗಿ ನಿಖರವಾಗಿ ಇಂತಹದ್ದೇ ಕಥೆಯ ಹಿನ್ನೆಲೆಯಿದೆ ಎಂದು ಹೇಳಲಾಗದು. 15ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಅಲ್ಲಲ್ಲಿ ಇಂತಹ ಆಚರಣೆಗಳು ಕಂಡು ಬಂದರೂ, ಇದು ಒಂದು ಫ್ಯಾಶನ್ ಆಗಿ ಪರಿಚಯವಾಗಿದ್ದು 19ನೇ ಶತಮಾನದಲ್ಲೇ. ಬ್ರಿಟೀಶರು ತಮ್ಮ ವ್ಯಾಪಾರ ವಸಾಹತುಗಳನ್ನು ಜಗತ್ತಿನ ವಿವಿದೆಡೆ ತೆಗೆದುಕೊಂಡು ಹೋದಾಗಲೇ ಈ ವ್ಯಾಲೆಂಟೈನ್ ಎಲ್ಲೆಡೆಯೂ ಹಬ್ಬಿದೆ. ಅಷ್ಟಕ್ಕೂ ಇದು ಕ್ರಿಸ್ಚಿಯನ್ ಕಲ್ಚರ್ ಆಗಿರುವುದರಿಂದ ಜಾಗತಿಕವಾಗಿ ಪಸರಿಸಿದೆ ಎನ್ನಲಡ್ಡಿಯಿಲ್ಲ. ವಯಸ್ಸಿಗೆ ಬಂದ ಹುಡುಗ-ಹುಡುಗಿ,ಮದುವೆಯಾದ ನವ ವಧು-ವರರು,ಗಂಡ-ಹೆಂಡತಿ ಹೀಗೆ ಭಾವನೆಗಳು ಗಾಡವಾಗಿ ಹರಿದಾಡುವ ಸಂಬಂಧಗಳಲ್ಲಿ ಪರಸ್ಪರರಿಗೆ ಪ್ರೀತಿ ವ್ಯಕ್ತಪಡಿಸುವ, ಮೌನವಾಗಿ ನಿವೇದಿಸುವ ಅವಕಾಶವೇ ಈ ವ್ಯಾಲೆಂಟೈನ್ ಡೇ. ಇಲ್ಲಿ ಪರಸ್ಪರರ ನಡುವೆ ಗ್ರೀಟಿಂಗ್ ಕಾರ್ಡು ವಿನಿಮಯ, ಗುಲಾಬಿ ವಿನಿಮಯ, ಗಿಪ್ಟ್ ವಿನಿಮಯ, ಚಾಕೋಲೇಟ್ ವಿನಿಮಯ ಮಿತಿಮೀರಿದರೆ ಮುತ್ತಿನ ವಿನಿಮಯ.... ಹೀಗೆ ಅವರವರ ಭಾವಕ್ಕೆ ತಕ್ಕಂತೆ ಏನೇನೋ ಇವೆ. ಒಂದು ಹೊಸ ವರ್ಷಕ್ಕೆ ಹೇಗೆ ಜಾಗತಿಕ ದಿನ ಇದೆಯೋ ಅದೇ ರೀತಿ ಪ್ರೇಮಿಗಳ ದಿನವೂ ಕೂಡ. ಇಡೀ ಜಗತ್ತಿಗೆ ಫೆಬ್ರುವರಿ 14 ವ್ಯಾಲೆಂಟೈನ್ ದಿನವಾದರೆ ಬ್ರೆಜಿಲ್ ದೇಶದಲ್ಲಿ ಮಾತ್ರ ಜೂನ್ 12ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ.ಯಾವುದಾದರೂ ಒಂದು ದಿನ ಅಂತ ಇರುವುದಾದರೂ ಯಾತಕ್ಕೆ ಹೇಳಿ ? ಒಂದು ಮರೆಯಲಾಗದ ಕ್ಷಣದ ನೆನಪು, ಭಾವದ ನೆನಪಿಗೆ ಅಲ್ಲವೇ? ಅದನ್ನು ಬೇಕು ಎಂದರೆ ಆಚರಿಸಿಕೊಳ್ಳಲಿ ಬೇಡವೆಂದರೆ ಬಿಡಲಿ. ಆದರೆ ಈಗ ಆಗುತ್ತಿರುವುದೇನು? ಪ್ರೇಮಿಗಳ ದಿನದ ನೆಪ ಮಾಡಿಕೊಂಡು ಹುಡುಗ-ಹುಡುಗಿ ಸ್ವೇಚ್ಚಾಚಾರದ ಲೈಂಗಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದು ಭಾರತದಂತಹ ದೇಶದಲ್ಲಿ ಸಂಪ್ರದಾಯವಾದಿ ಮನೋಧರ್ಮಕ್ಕೆ ನೋವು ಉಂಟುಮಾಡಿದೆ.ಪ್ರೀತಿಯ ಹೆಸರಿನಲ್ಲಿ ನಡೆಯುವ ಇಂತಹ ಚಟುವಟಿಕೆಗಳನ್ನು ತಡೆಯಲು ಪೋಷಕರು ಜವಾಬ್ದಾರಿ ಹೊರಬೇಕೆ ವಿನಹ ಪ್ರೇಮಿಗಳ ದಿನ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಇಡೀ ಜಗತ್ತೇ ಪ್ರೀತಿ-ಪ್ರೇಮದ ಮೇಲೆ ನಿಂತಿದೆ ಹಾಗೆಂದ ಮಾತ್ರಕ್ಕೆ ಅದು ಸ್ವಾರ್ಥದ ಆಕರ್ಷಣೆಯಾಗಬಾರದು, ಹಾಗಾದಾಗ ಮಾತ್ರ ಸಮಾಜದಲ್ಲಿ ಕ್ಷೋಭೆ ಖಚಿತ. ಸೌದಿ ಅರೆಬಿಯಾದಲ್ಲಿ , ಪಾಕಿಸ್ತಾನದಲ್ಲಿ ಹಾಗೂ ಇತರೆ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರೇಮಿಗಳ ದಿನ ಆಚರಣೆಗೆ ಕಟ್ಟುನಿಟ್ಟಿನ ನಿಷೇಧವಿದೆ. ಧಾರ್ಮಿಕ ಮತಾಂಧತೆ ಮಿತಿಮೀರಿರುವ ಅಲ್ಲಿ ಇದು ಸಾಮಾನ್ಯವಾದರೂ ನಮ್ಮಲ್ಲಿ ಯಾಕೆ ಇದನ್ನು ವಿರೋಧಿಸಬೇಕೋ ಅರ್ಥವಾಗುತ್ತಿಲ್ಲ. ನೋಡಿ ಈ ದಶಕದ ಆರಂಭದಲ್ಲಿ 2001ರಲ್ಲಿ ಮೊದಲ ಭಾರಿಗೆ ಭಾಳ ಠಾಕ್ರೆಯ ಶಿವಸೇನಾ ವ್ಯಾಲೆಂಟೈನ್ ದಿನವನ್ನು ವಿರೋಧಿಸುವ ಹೇಳಿಕೆ ನೀಡಿತು,ಅದನ್ನು ಬೆಂಬಲಿಸಿದವರು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನವರು.ಅಲ್ಲಿಯವರೆಗೂ ವ್ಯಾಲೆಂಟೈನ್ ಡೇ ತೀವ್ರತೆ ಪಡೆದುಕೊಡಿರಲಿಲ್ಲ, ಯಾವಾಗ ವಿರೋಧಗಳು ಬಂದವೊ ಆಗ ಬಹುತೇಕ ಮಂದಿಗೆ ಅಂತಹದ್ದೊಂದು ದಿನವಿದೆ ಎಂದು ಗೊತ್ತಾಗುತ್ತಿದ್ದಂತೆ ಆಚರಣೆಗೆ ತೀವ್ರತೆ ದಕ್ಕಿತು. ಕಳೆದ ವರ್ಷ ಪ್ರಮೋದ್ ಮುತಾಲಿಕ್ ಪ್ರೇಮಿಗಳ ದಿನದಂದು ಸಿಕ್ಕಿ ಬೀಳುವ ಜೋಡಿಗಳಿಗೆ ಮದುವೆ ಮಾಡಿಸುವ ಬೆದರಿಕೆ ಒಡ್ಡುತ್ತಿದ್ದಂತೆ ಅದರ ಕಾವು ಇನ್ನಷ್ಟು ಹೆಚ್ಚಿತು. ಆತನಿಗೆ ಪಿಂಕ್ ಚಡ್ಡಿಗಳ ಮಹಾಪೂರವೇ ಹರಿದು ಬಂತು, ಪ್ರೇಮಿಗಳ ದಿನದ ಮುನ್ನಾದಿನ ಆತನನ್ನು ಬಂಧಿಸಲಾಗಿತ್ತು.ಈ ವರ್ಷವೂ ಪ್ರೇಮಿಗಳ ದಿನ ಹತ್ತಿರವಾಗುತ್ತಿದ್ದಂತೆ ಟಿವಿ ಚಾನಲ್ ಗಳು ಪೈಪೋಟಿಯ ಮೇಲೆ ಈ ಸುದ್ದಿಗೆ ಮಹತ್ವ ನೀಡಿದುವಲ್ಲದೇ ಗಂಭೀರತೆ ಪಡೆಯುತ್ತಿರುವ ವಿಷಯವೊಂದರ ಬಗ್ಗೆ ಸಾರ್ವಜನಿಕವಾಗಿ ಸಂವಾದದ ಹೆಸರಿನಲ್ಲಿ ಸುವರ್ಣ ಛಾನಲ್ ಶೋ ನಡೆಸಿತು. ಬಹುಶ ವಿಷಯದ ತೀವ್ರತೆಯ ಅರಿವಿದ್ದಿದ್ದರೆ ಮತ್ತು ಅದನ್ನು ನಿರ್ವಹಿಸುತ್ತಿದ್ದ ನಿರೂಪಕ ರಂಗನಾಥ ಭಾರದ್ವಾಜ್ ಗೆ ಸ್ವಲ್ಪ ಮಟ್ಟಿನ ತಿಳುವಳಿಕೆ ಇದ್ದಿದ್ದರೆ ಇವೆಲ್ಲ ರಗಳೆಗೆ ಆಸ್ಪದವಿರುತ್ತಿರಲಿಲ್ಲವೇನೋ. ಅಲ್ಲಿ ವೇದಿಕೆಯ ಮೇಲೆ ಗಂಭೀರ ಚರ್ಚೆಯಾಗುತ್ತಿದ್ದರೆ ಕೆಳಗಿಳಿದು ಬಂದ ಆತ ವೇದಿಕೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನಾಲ್ಕು ಮಂದಿಯ ಬೆಂಬಲಿಗರ ಪ್ರತಿಕ್ರಿಯೆ ಕೇಳಲಾರಂಬಿಸಿದ್ದು ಕೆಲವರ ಅಸಹನೆಗೆ ಕಾರಣವಾಗಿತ್ತು, ಇದೇ ಸಂಧರ್ಭವನ್ನು ಬಳಸಿಕೊಂಡ ಕೆಲವು ಕಿಡಿಗೇಡಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಮುತಾಲಿಕ್ ರನ್ನು ಕಡವಿಕೊಂಡು ಇಂಕ್ ಸುರಿದರು. ಇದು ಖಂಡನಾರ್ಹ ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಎಚ್ ಕೆ ಪಾಟೀಲರ ಪುತ್ಥಳಿಗೆ ಚಪ್ಪಲಿ ಹಾರ ಹಾಕೋದು, ಬಸ್ ಗಳಿಗೆ ಬೆಂಕಿ ಇಡೋದು, ಮನೆಗಳ ಮೇಲೆ ಕಲ್ಲು ತೂರುವುದು, ಕಛೇರಿಗಳಿಗೆ ಬೆಂಕಿ ಇಡುವುದು, ಕಂಡವರ ಮೇಲೆ ಹಲ್ಲೆ ನಡೆಸುವುದು ಯಾಕೆ? ನೋಡಿ ಪ್ರೇಮಿಗಳ ದಿನದಂದು ನಡೆಯುವ ಅನಾಚಾರ ವಿರೋಧಿಸುವುದಕ್ಕೆ ಸಮಸ್ತರ ವಿರೋಧವೂ ಇದೆ ಅದೇ ರೀತಿ ಮುತಾಲಿಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಯಾದುದಕ್ಕೂ ವಿಷಾದವಿದೆ.ಸಂಸ್ಕೃತಿ ರಕ್ಷಣೆ ಅಂದರೆ ಪ್ರೇಮಿಗಳ ದಿನ ವಿರೋಧಿಸುವುದಲ್ಲ, ಸಾಂಸ್ಕೃತಿಕ ಧಕ್ಕೆ ಆಗುವ ಸ್ವೇಚ್ಚಾಚಾರದ ಬಗೆ ಅರಿವು ಮೂಡಿಸುವು. ಆದರೆ ಮುತಾಲಿಕ್ ಹಿಂದೂ ಧರ್ಮದ ಗುತ್ತಿಗೆದಾರರಂತೆ ವರ್ತಿಸುತ್ತಾ ತನ್ನ ಒಡಲಲ್ಲೇ ಅಸಹ್ಯವನ್ನಿಟ್ಟುಕೊಂಡು ಶಾಂತಿ ಕದಡುವ ಕ್ರಿಯೆ ನಡೆಸಬೇಕೆ? ಇವತ್ತಿನ ಅಹಿತಕರ ಘಟನೆಗಳಿಗೆ ಕಾರಣರಾದ ಶ್ರೀರಾಮ ಸೇನೆ ಮತ್ತು ಕಾಂಗ್ರೆಸ್ ನವರೆಂದು ಹೇಳಿಕೊಂಡ ಜನರಿಗೆ ಬಡಿದಾಡಲು ಬೇರೆ ವಿಚಾರಗಳು ಸಿಗಲಿಲ್ಲವೇ? ನಮ್ಮ ಬದುಕನ್ನೇ ಕುಂಠಿತಗೊಳಿಸುವ ಬಿಟಿ ಬದನೆ ಕುರಿತು ಸಾರ್ವಜನಿಕವಾಗಿ ಒಂದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿಲ್ಲ, ಪ್ರತಿಭಟನೆ ಹಮ್ಮಿಕೊಳ್ಳಲಿಲ್ಲ, ಎಸ್ ಇ ಜೆಡ್ ಗೆ ರೈತರ ಭೂಮಿ ಕಸಿಯುವ ಪ್ರಕ್ರಿಯೆಗೆ ಅಡ್ಡಿ ಪಡಿಸುವ ಪ್ರಯತ್ನ ವಾಗಲಿಲ್ಲ,ಅರಣ್ಯ ಮತ್ತು ಅಲ್ಲಿನ ಜೀವಜಾಲದ ನಾಶದ ಬಗೆಗಿನ ಹೋರಾಟ ತೀವ್ರಗೊಳ್ಳಲಿಲ್ಲ, ರೈತರ ಸಂಕಷ್ಟಗಳ ಬಗೆಗೆ ಆಂಧೋಲನ ನಡೆಯಲಿಲ್ಲ, ದೇಶದ ಬಡಜನರ ಸಂಕಷ್ಟಗಳ ಬಗ್ಗೆ ಚರ್ಚೆ ಯಾಗಲಿಲ್ಲ, ನಿರುದ್ಯೋಗದ ಬಗ್ಗೆ ಚರ್ಚಯಾಗಲಿಲ್ಲ, ದೇಶದಲ್ಲಿ ಇನ್ನೂ ಜಾಗೃತವಾಗಿರುವ ಸಾಮಾಜಿಕ ಪಿಡುಗುಗಳ ಬಗೆಗೆ ಹೋರಾಟ ನಡೆಯುತ್ತಿಲ್ಲ ಆದರೆ ಪ್ರೇಮಿಗಳ ದಿನದ ಬಗೆಗೆ ಕ್ಷುಲ್ಲುಕವಾಗಿ ಹೊಡೆದಾಡಿಕೊಂಡು ನೆಮ್ಮದಿ ಹಾಳುಮಾಡಲಾಗುತ್ತಿದೆ. ಈ ಮೂರ್ಖ ಮಂದಿಗೆ ಬುದ್ದಿ ಯಾವಾಗ ಬರುತ್ತೋ ? ಎಲ್ಲಿಯವರೆಗೂ ಫ್ಯಾಸಿಸ್ಟ್ ಧೋರಣೆ ಜಾರಿಯಲ್ಲಿರುತ್ತೋ ಅಲ್ಲಿಯವರೆಗೆ ಇಂತಹದ್ದೆಲ್ಲ ಇದ್ದೇ ಇರುತ್ತೆ ಅಂತಹ ಶಕ್ತಿಗಳನ್ನು ಮಟ್ಟಹಾಕುವ ಕೆಲಸವಾಗಬೇಕು , ಸಮಾಜವಾದದ ಹೊಸ ಅಲೆ ಬರಬೇಕು ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಅಲ್ಲವೇ?

Sunday, February 7, 2010

ಬದ್ನೇಕಾಯ್... ಬೇಕಾ? ಬಿ ಟಿ ಬದನೇಕಾಯಿ?


ಈಗ್ಯೆ ಒಂದೆರೆಡು ತಿಂಗಳ ಹಿಂದೆ ಮಂಡ್ಯದ ಕೃಷಿ ಉತ್ಪನ್ನ ಪ್ರದರ್ಶನ ಮೇಳಕ್ಕೆ ಹೋಗಿದ್ದೆ, ಮೇಳ ಎಲ್ಲ ಸುತ್ತಾಡಿ ಕಡೆಗೆ ಸಿಕ್ಕೇ ಬಿಡ್ತು ತರಕಾರಿ ಸ್ಟಾಲ್, ಅಲ್ಲಿನ ತಾಜಾ ತರಕಾರಿಗಳ ಮಧ್ಯದಲ್ಲಿ ಕಾಣ ಸಿಕ್ಕಿದ್ದು ದಪ್ಪ ಟೊಮ್ಯಾಟೋ ಗಾತ್ರದ ಫಳ ಫಳಿಸುತ್ತಿದ್ದ ಬದ್ನೇಕಾಯ್. ಇದೇನಪ್ಪ ಇದು ಎಂದು ಕೊಂಡು ಹೋದ್ರೆ ಇದು ಬಿ ಟಿ ತಳಿ ಅಂತ ಬೋರ್ಡು ಹಾಕಿದ್ರು. ಆಗಲೇ ಅಂದುಕೊಂಡೆ ಸರ್ಕಾರದೋರು ಬೀಜ ಕಂಪನೆಗಳ ಜೊತೆ ಸೇರ್ಕೊಂಡು ಏನೋ ಹುನ್ನಾರ ನಡೆಸ್ತಿದ್ದಾರೆ ಅದಕ್ಕೆ ಎಷ್ಟೆಲ್ಲ ಪ್ರಚಾರ ಅಂತ. ಕುಲಾಂತರಿ ತಳಿಗಳು ನಮ್ಮ ನೆಲಕ್ಕೆ ಪರಿಚಯವಾಗಿದ್ದು ನಿನ್ನೆ ಮೊನ್ನೆ ಏನಲ್ಲಾ ಕಳೆದ 3-4 ದಶಕದಿಂದಲೂ ಈ ಬಗ್ಗೆ ತೀವ್ರವಾಗಿ ಸಂಶೋಧನೆಗಳು ನಡೀತಾನೆ ಇದೆ. ಕಮರ್ಷಿಯಲ್ ಬೆಳೆ ಹತ್ತಿಗೆ ಮೊದಲ ಕುಲಾಂತರಿ ಬಂತು, ಈಗ ಮೊದಲ ಬಾರಿಗೆ ನಮ್ಮ ಸಾಂಪ್ರದಾಯಿಕ ತರಕಾರಿ ಆಹಾರದ ಮೇಲೆ ಕುಲಾಂತರಿ ಬೀಜದ ಪ್ರಹಾರವಾಗಿದೆ..! ಅಷ್ಟಕ್ಕೂ ಈ ಬದ್ನೇಕಾಯ್ ಬಗ್ಗೆ ಯಾಕೆ ತಲೆ ಕೆಡಿಸ್ಕೋಬೇಕು? ಪ್ರತಿಭಟನೆ,ರಂಪಾಟ ಯಾಕೆ ಮಾಡಬೇಕು? ಅದು ಬರೋದ್ರಿಂದ ತೊಂದ್ರೆ ಏನು? ಬರದಿದ್ರೆ ಏನು ಅನುಕೂಲ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿ ಕಾಡುವಂತಹವು? ಜಗತ್ತಿನಾಧ್ಯಂತ ಈ ಬಿ ಟಿ ತಳಿ ಬಗ್ಗೆ ಚರ್ಚೆ ಗಳು ಚಾಲ್ತಿಯಲ್ಲಿದ್ದರೂ ನಮ್ಮಲ್ಲಿ ಮಾತ್ರ ಸಾಮಾನ್ಯ ಜನರಿಗೆ ಈ ಕುಲಾಂತರಿ ತಳಿಗಳ ಬಗ್ಗೆ, ಅವುಗಳ ಸಾಧಕ-ಭಾಧಕಗಳ ಬಗ್ಗೆ ತಿಳಿ ಹೇಳುವ ಪ್ರಯತ್ನವಾದಂತಿಲ್ಲ ಹಾಗಾಗಿ ಈ ವಿಚಾರದ ತೀವ್ರತೆ ಒಂದು ವರ್ಗದ ಜನರಿಗಷ್ಟೇ ಸೀಮಿತವಾಗಿದೆ ಇದು ದುರಂತವೇ ಸರಿ.
ಕುಲಾಂತರಿ ತಳಿಗಳನ್ನು ಒಪ್ಪಿಕೊಳ್ಳುವುದು ಎಂದರೆ ನಮ್ಮ ಸ್ವಾಭಿಮಾನವನ್ನು ಬೇರೆಯವರಿಗೆ ಅಡವಿಟ್ಟಂತೆ ಆಗುತ್ತೆ.ನಮ್ಮ ದೇಶದ ಪ್ರಮುಖ ಆರ್ಥಿಕ ಶಕ್ತಿ ಎಂದರೆ ಕೃಷಿ. ರೈತರ ದುಡಿಮೆ ದೇಶವನ್ನು ಸುಸ್ಥಿತಿಯಲ್ಲಿರಿಸಿದೆ, ನಿಮಗೆ ತಿಳೀದಿರಲಾರದು ಈಗ್ಯೆ ಕೆಲ ತಿಂಗಳುಗಳ ಹಿಂದೆ ಜಾಗತಿಕ ಆರ್ಥಿಕ ಕುಸಿತದಿಂದ ಜಗತ್ತಿನ ಅನೇಕ ಪ್ರಮುಖ ರಾಷ್ಟ್ವಗಳು ತತ್ತರಿಸಿ ಚೇತರಿಸಿಕೊಳ್ಳಲು ಪರದಾಡಿ ಹೋದವು. ಆದರೆ ಭಾರತ ದಂತಹ ಕೃಷಿ ಪ್ರದಾನ ದೇಶದಲ್ಲಿ ಮಾತ್ರ ಜಾಗತಿಕ ಕುಸಿತ ಯಾವ ಪರಿಣಾಮವನ್ನು ಬೀರಲಿಲ್ಲ, ಅದಕ್ಕೆ ಕಾರಣ ಕೃಷಿ. ಇಂತಹ ಕೃಷಿ ಕ್ಷೇತ್ರಕ್ಕೆ ಸರ್ಕಾರ ಪ್ರೋತ್ಸಾಹ ನೀಡುವ ಬದಲಿಗೆ ಜಾಗತಿಕ ಆರ್ಥಿಕ ಉದಾರೀಕರಣದ ನೆಪದಲ್ಲಿ ಕೃಷಿ ಭೂಮಿಯನ್ನು ವಿಶೇಷ ಆರ್ಥಿಕ ವಲಯಗಳಿಗೆ ಉದಾರವಾಗಿ ನೀಡುವ ಮೂಲಕ ರೈತನ ಕತ್ತನ್ನು ಹಿಸುಕಿ ಹಾಕಿದೆ, ಇನ್ನೂ ಕೂಡ ರೈತರನ್ನು ಬಲಿಕೊಡುವ ಪ್ರಕ್ರಿಯೆಗಳು ಜಾರಿಯಲ್ಲಿವೆ. ಅಂತಹ ಕ್ರಿಯೆಗಳಲ್ಲಿ ಈ ಬಿ ಟಿ ಬದನೆಯೂ ಒಂದು. ಇವತ್ತು ಏನಿಲ್ಲವೆಂದರೂ ಒಂದು ಕೇಜಿ ಬದ್ನೇಕಾಯಿಗೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಎಂದರೆ ರೂ. 5 ಜಾಸ್ತಿ ಅಂದರೆ ರೂ.10ರವರೆಗೆ ಬೆಲೆ ಇದೆ.ಹೀಗಿರುವಾಗ ಬದನೇಕಾಯಿಯನ್ನೆ ಯಾಕೆ ಮೊದಲ ಕುಲಾಂತರಿಗೆ ಆಯ್ಕೆ ಮಾಡಿಕೊಂಡರು ಎಂಬುದನ್ನು ಅರ್ಥ ಮಾಡಿಕೊಂಡರೆ ನಿಮಗೆ ಬಿಸಿ ಗೊತ್ತಾಗಬಹುದು. ಇವತ್ತು ನಮ್ಮ ರಾಜ್ಯದ 15ಸಾವಿರ ಹೆಕ್ಟೇರುಗಳಲ್ಲಿ 6.5ಕೋಟಿ ಟನ್ ಬದನೆ ಬೆಳೆಯಲಾಗುತ್ತಿದೆ. ಅತೀ ಹೆಚ್ಚು ಮಂದಿ ದಿನ ನಿತ್ಯದ ಊಟದಲ್ಲಿ ಬದನೆ ಬಳಸುತ್ತಾರೆ. ನಮ್ಮಲ್ಲಿ ಏನಿಲ್ಲವೆಂದರೂ 40 ರಿಂದ 50 ವಿವಿಧ ಮಾದರಿಯ ಬದನೆ ಬೆಳೆಯಲಾಗುತ್ತಿದೆ. ಜಗತ್ತಿನಾಧ್ಯಂತ 200ಕ್ಕೂ ಹೆಚ್ಚು ಮಾದರಿಯ ದೇಸಿ ತಳಿ ಬದನೆಗಳಿವೆ ಹೀಗಿರುವಾಗ ಬದನೆಕಾಯಿಯನ್ನು ಕುಲಾಂತರಿ ಮಾಡುವ ಅಗತ್ಯವಿತ್ತೇ ? ಒಂದು ವೇಳೆ ಕುಲಾಂತರಿ ಮಾಡುವುದಿದ್ದರೆ ಆಲೂಗಡ್ಡೆ, ಈರುಳ್ಳಿ, ಶೇಂಗಾ ಇಂತಹ ವಾಣಿಜ್ಯ ಬೆಳೆಗಳನ್ನು ಯಾಕೆ ಮೊದಲು ಕುಲಾಂತರಿ ಮಾಡಲಿಲ್ಲ? ಎಂಬ ಪ್ರಶ್ನೆಗೆ ಉತ್ತರ ಒಂದೇ ಅವು ಸೀಮಿತ ಪ್ರದೇಶದ ಬೆಳೆಗಳಾಗಿದ್ದರೆ ಬದನೆ ಹಾಗೂ ಇದೇ ರೀತಿಯ ತರಕಾರಿಗಳು ಮತ್ತು ಅಕ್ಕಿ ಮುಕ್ತವಾಗಿ ಎಲ್ಲೆಡೆಯೂ ಬೆಳೆಯುವಂತಹದ್ದು. ಅವುಗಳಿಗೆ ಸದಾ ಕಾಲ ಎಲ್ಲಡೆಯೂ ಮಾರುಕಟ್ಟೆ ಇದ್ದೇ ಇರುತ್ತದೆ. ಹಾಗಾಗಿ ಆಹಾರ ಬೆಳೆಗಳಲ್ಲಿ ಸುಲಭವಾಗಿ ಬೆಳೆಯುವ ಮತ್ತು ಸುಲಭವಾಗಿ ಸಿಗುವ ಬದನೆಕಾಯಿಯನ್ನೇ ಆರಿಸಿಕೊಳ್ಳಲಾಗಿದೆ. ಬಿ ಟಿ ಅಂದರೆ ಬ್ಯಾಸಿಲಸ್ ಥುರನ್ಜೆಸಿಸ್ ಎಂಬ ಬ್ಯಾಕ್ಟೀರಿಯಾ. ಇದು ಬೆಳೆಗೆ ತಗುಲುವ ಹಾಗೂ ಕಾಂಡ ಕೊರಕ ಕೀಟಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ವಿಷವನ್ನು ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಹೊಂದಿದ ಬಿ ಟಿ ಬದನೇಕಾಯಿ ತಳಿ ಮಾನವನ ದೇಹದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಬಿ ಟಿ ಬದನೇ ಕಾಯಿ ತಳಿ ಬಗ್ಗೆ ಶೇ.50ರಷ್ಟು ಪ್ರಯೋಗವನ್ನು ಸಣ್ಣಪುಟ್ಟ ಜೀವಿಗಳ ಮೇಲೆ ಮಾಡಲಾಗಿದೆಯಾದರೂ ಮಾನವನ ದೈಹಿಕ ರಚನೆಗೆ ಪೂರಕವಾಗಿ ವರ್ತಿಸುವ ಯಾವ ಸಂಶೋಧನೆಗಳು ನಡೆದಿಲ್ಲ. ಅಂದರೆ ಪ್ರಾಯೋಗಿಕವಾಗಿ ಕುಲಾಂತರಿ ಬದನೆಯನ್ನು ಮಾನವರ ಮೇಲೆ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅವರ ಮೇಲೇ ಆಗುವ ವ್ಯತಿರಿಕ್ತ ಅಂಶಗಳನ್ನು ಪತ್ತೆ ಹಚ್ಚುವ ವೇಳೆಗೆ ಇವು ಬಿ ಟಿ ಬದನೆ ಎಲ್ಲೆಡೆ ವ್ಯಾಪಿಸಿದ್ದರೆ ಅದರ ಪ್ರತಿಕೂಲ ಪರಿಣಾಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಿರುವಾಗ ಬಿಟಿ ಬದನೆ ಬೇಕೆ?
ಇಲ್ಲಿ ಕುಲಾಂತರಿ ಬದನೇಕಾಯಿಯದೊಂದೆ ಪ್ರಶ್ನೆಯಲ್ಲ, ಅದರ ಬೆನ್ನಲ್ಲೇ 20ಕ್ಕೂ ಹೆಚ್ಚು ಕುಲಾಂತರಿ ತಳಿಗಳು ಬರಲು ಸಜ್ಜಾಗಿ ಕುಳಿತಿವೆ.
ಅವುಗಳ ಪೈಕಿ ಗೋಲ್ಡನ್ ರೈಸ್, ಬೂಸ್ಟು ಹಿಡಿಯದ ಅಕ್ಕಿ, ತೊಗರಿ, ಹೂಕೋಸು, ಕ್ಯಾರೆಟ್, ಪರಂಗಿ, ಟೋಮೇಟೋ, ಮೆಕ್ಕೇಜೋಳ, ಮೂಲಂಗಿ, ಎಲೆಕೋಸು, ಮೆಣಸಿನಕಾಯಿ, ನೆಲಗಡಲೆ, ಈರುಳ್ಳಿ, ಕಾಫಿ, ನಿಂಬೆ ಅರಿಶಿಣ, ಯೀಸ್ಟ್ ಇತ್ಯಾದಿಗಳು ಪ್ರಮುಖವಾಗಿವೆ. ಒಮ್ಮೆ ನಮ್ಮ ಆಹಾರದ ವಿಚಾರದಲ್ಲಿ ಈ ಕುಲಾಂತರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟವೆಂದರೆ ನಮ್ಮ ಸಾವಿನ ಮನೆಗೆ ನಾವೆ ರಹದಾರಿ ಒದಗಿಸಿದಂತಾಗುತ್ತದೆ. ಕುಲಾಂತರಿ ತಳಿಗಳ ಪರವಾಗಿ ಮಾತನಾಡುತ್ತಿರುವ ಕೆಲವು ಮೂರ್ಖರು ಮಂಡಿಸುತ್ತಿರುವ ವಾದ ಪ್ರಕಾರ ಈಗಾಗಲೇ ನಾವು ಬೆಳೆಯುತ್ತಿರುವ ವಾಣಿಜ್ಯ ಬೆಳೆಗಳಿಗೆ ಬೇಕಾಬಿಟ್ಟಿಯಾಗಿ ಕ್ರಿಮಿನಾಶಕ ಬಳಸುತ್ತಿಲ್ಲವೆ? ಉತ್ತಮ ಇಳುವರಿ ಬರುತ್ತದೆಂದರೆ ಯಾಕೆ ಕುಲಾಂತರಿ ತಳಿ ಒಪ್ಪಿಕೊಳ್ಳಬಾರದು? ಹಿಂದೆ ಮೊಬೈಲು, ಇತ್ಯಾದಿ ತಂತ್ರಜ್ಞಾನ ಬಂದಾಗಲೂ ವಿರೋಧಿಸಿದ್ದವರೆಲ್ಲಾ ಈಗೇಕೆ ಅವನ್ನೆ ಬಳಸುತ್ತಿದ್ದಾರೆ? ಎನ್ನುತ್ತಾರೆ. ಆ ಮೂರ್ಖರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು,ವಿರೋಧಿಗಳು ಆಧುನೀಕರಣವನ್ನು ವಿರೋಧಿಸುವುದಿಲ್ಲ, ಆದರೆ ಆಧುನೀಕರಣದ ಬಿರುಗಾಳಿಯಲ್ಲಿ ಸಿಲುಕಿ ತಮ್ಮತನವನ್ನು ಕಳೆದು ಕೊಳ್ಳುವುದನ್ನು, ಬದುಕಿಗೆ ಅಪಾಯವನ್ನು ಅಹ್ವಾನಿಸಿಕೊಳ್ಳುವುದನ್ನು ಮಾತ್ರ ವಿರೋಧಿಸುತ್ತಾರೆ. ತರ್ಕ ಹೀನ ಶಕ್ತಿ ಕಳೆದು ಕೊಂಡವರು ಎಂದರೆ ಸ್ವಂತಿಕೆಯ ನಾಶ, ಸ್ವಾವಲಂಬನೆಯ ಬಲಿಕೊಟ್ಟವರು ಎಂದೇ ಅರ್ಥೈಸಬೇಕಾಗುತ್ತದೆ. ಇವತ್ತು ಜಗತ್ತಿನ 80ಕ್ಕೂ ಹೆಚ್ಚುರಾಷ್ಟ್ರಗಳು ಕುಲಾಂತರಿ ಆಹಾರ ತಳಿಗಳನ್ನು ವಿರೊಧಿಸಿವೆ, ದೇಶದ 10ಕ್ಕೂ ಹೆಚ್ಚು ರಾಜ್ಯಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವು ತನ್ನ ನಿಲುವನ್ನು ಕುಲಾಂತರಿ ವಿರುದ್ದವಾಗಿ ವ್ಯಕ್ತಪಡಿಸಿದೆ.ಬಿ ಟಿ ತಳಿ ಹತ್ತಿ ಬಂದಾಗ ಬಂಪರ್ ಇಳುವರಿ ಏನೋ ಬಂತು ಆದರೆ ಮಣ್ಣಿನ ಗುಣಮಟ್ಟ ಹಾಳಾಯ್ತು, ಹತ್ತಿ ಬಿಡಿಸುವವರು ಸುಧಾರಿಸಲಾಗದ ಕಾಯಿಲೆಗಳಿಂದ ಬಳಲುವ ಪರಿಸ್ಥಿತಿ ಎದುರಾಗಿದೆ. ಹೀಗಾದಾಗಲಾದರೂ ನಮ್ಮ ಜನರಿಗೆ ಬುದ್ದಿ ಬರಬೇಡವೇ?
ಅತೀ ಹೆಚ್ಚು ಪ್ರಮಾಣದಲ್ಲಿ ಕುಲಾಂತರಿ ತಳಿಗಳನ್ನು ಬಳಸುವ (ಶೇ.65) ಅರ್ಜೈಂಟಿನಾ ಮತ್ತು ಪೆರುಗ್ವೆ ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆ ತೀವ್ರಗತಿಯಲ್ಲಿ ಇಳಿಮುಖವಾಗಿರುವುದನ್ನು ಗಮನಿಸಬಹುದು. ಯಾವುದೇ ರಾಷ್ರ್ರ ಆಹಾರದ ಅಭದ್ರತೆ ಎದುರಿಸಿದಲ್ಲಿ ಆ ದೇಶದ ಕಥೆ ಮುಗಿಯಿತು ಎಂತಲೇ ಅರ್ಥ. ನಾವು ಕುಲಾಂತರಿ ಬದನೇ ಒಪ್ಪಿಕೊಳ್ಳುವಲ್ಲಿಯೂ ನಮ್ಮ ಆಹಾರ ಭದ್ರತೆಯನ್ನು, ಬೀಜ ಸ್ವಾವಲಂಬನೆಯನ್ನು ಬಲಿಕೊಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ಜಾಗತೀಕರಣದ ಕಬಂಧ ಬಾಹು ಕ್ಯಾನ್ಸರ್ ನಂತೆ ವ್ಯಾಪಕವಾಗಿ ನಮ್ಮನ್ನು ಅತಿಕ್ರಮಿಸುವುದು ಆಹಾರದ ತಳಿಗಳನ್ನು ಕುಲಾಂತರಿ ಮಾಡುವ ಮೂಲಕ ಎಂಬುದು ಅರಿವಾಗಬೇಕು. ಕುಲಾಂತರಿ ತಳಿ ವಿರೋಧ ಕೇವಲ ರೈತರಿಗೆ ಮಾತ್ರ ಸಂಭಂದಿಸುದುದಲ್ಲ,ಪ್ರತಿಯೊಬ್ಬ ಪ್ರಜೆಯೂ ಕುಲಾಂತರಿ ತಳಿಯನ್ನು ವಿರೋಧಿಸಿದಾಗಲೇ ಅದಕ್ಕೊಂದು ಗಟ್ಟಿತನ ಸಿಕ್ಕೀತು. ಈ ಸಂಧರ್ಭ ಒಂದು ವರ್ಷಗಳ ಹಿಂದೆ ಹಿರಿಯ ವಿಜ್ಞಾನಿ, ಪತ್ರಕರ್ತ ನಾಗೇಶ್ ಹೆಗಡೆ ಪ್ರಜಾವಾಣಿ ಪತ್ರಿಕೆಗೆ ಬರೆದ ಲೇಖನವೊಂದರ ಸಾರವನ್ನು ಇಲ್ಲಿ ಹೇಳಲೇ ಬೇಕು. ದಶಕಗಳ ಹಿಂದೆ ಜಾಗತೀಕರಣ ದೇಶಕ್ಕೆ ಕಾಲಿರಿಸಿದಾಗ ಪಂಜಾಬ್ ನ ಹಳ್ಳಿಯೊಂದರಲ್ಲಿ ಆಧುನೀಕರಣದ ಗಾಳಿ ಬೀಸಲಾರಂಭಿಸಿತಂತೆ. ರೈತರು ಬೆಳೆಗಳ ಉತ್ತಮ ,ಇಳುವರಿಗಾಗಿ ಸಾಂಪ್ರಾದಾಯಿಕ ಕ್ರಮಗಳನ್ನು ಮರೆತು ರಾಸಾಯನಿಕಗಳನ್ನು ಮತ್ತು ಗೊಬ್ಬರಗಳನ್ನು ವ್ಯಾಪಕವಾಗಿ ಬಳಸಲಾರಂಭಿಸದರು. ಉಳುಮೆಗೆ ಟ್ರ್ಯಾಕ್ಟರುಗಳನ್ನು, ಆದುನಿಕ ತಂತ್ರಜ್ಞಾನದ ಉಪಕರಣಗಳನ್ನು ಉಪಯೋಗಿಸಿದರು, ಲಕ್ಷ ಲಕ್ಷ ಹಣ ನೋಡಿದರು, ಹಳೇ ಕಾಲದ ಮನೆಗಳು ಹೋಗಿ ಕಾಂಕ್ರೀಟು ಮನೆಗಳು ಬಂದವು. ಆದರೆ ಕೇವಲ 10ವರ್ಷಗಳಲ್ಲಿ ಆ ಗ್ರಾಮದ ಕೃಷಿ ಬೂಮಿ ಯಾತಕ್ಕೂ ಉಪಯೋಗವಿಲ್ಲದಂತಾಗಿ ಹೋಯ್ತು, ಸಂಪೂರ್ಣ ಬರಡಾಗಿ ಹೋಗಿತ್ತು ಅಂದರೆ ಎಷ್ಟರ ಮಟ್ಟಿಗೆ ಅವರು ಕ್ರಿಮಿನಾಶಕಗಳನ್ನು ಬಳಸಿದ್ದರು ಎಂದು ಊಹಿಸಬಹುದು. ಕಡೆಗೆ ಬರಡು ಭೂಮಿಯನ್ನು ಹರಾಜಿಗಿಟ್ಟು ಹೊಟ್ಟೆಗಿಲ್ಲದೇ ವಲಸೆ ಹೋಗಲು ನಿಂತರಂತೆ. ಇದು ಪಂಜಾಬ್ ನ ಗ್ರಾಮ ಒಂದರ ಕಥೆಯಲ್ಲ. ಕುಲಾಂತರಿ ಒಪ್ಪಿಕೊಳ್ಳುವ ಹುನ್ನಾರದ ಹಿಂದೆ ದೇಶದ ಪ್ರತೀ ಹಳ್ಳಿಯೂ ನಾಶವೂ ಜನರ ಬದುಕಿನ ಅಂತ್ಯವೂ ಇದೆ ಎಂಬುದನ್ನು ಅರಿಯಬೇಕು. ಇವತ್ತು ಕುಲಾಂತರಿ ತಳಿ ಉತ್ಪಾದಿಸುವ 10ಕ್ಕೂ ಹೆಚ್ಚು ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿದೆ, ಇವು ನಮ್ಮ ರೈತರ ಬೀಜ ಸ್ವಾಲಂಬನೆಯನ್ನು ಕಸಿದುಕೊಂಡವೆಂದರೆ ಅದಕ್ಕಿಂತ ದೊಡ್ಡ ಹೊಡೆತ ಮತ್ತೇ ಯಾವುದೂ ಇರಲಾರದು. ಆದ್ದರಿಂದ ಶತಾಯಗತಾಯ ಬಿ ಟಿ ಬದನೆಕಾಯಿಯನ್ನು ವಿರೋಧಿಸುವವರಲ್ಲಿ ನೀವೂ ಒಬ್ಬರಾಗಿ ಅಪಾಯವನ್ನು ತಡೆಯಿರಿ ಎಂಬುದೇ ಅರಿಕೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...