Sunday, February 28, 2010

ಬಜೆಟ್ ಬಂಡಲ್ ಯಾಕ್ರೀ ಬೇಕು?

ನಿರೀಕ್ಷೆಗಳು ಬೇಕು ಆದರೆ ಅತಿಯಾದ ನಿರೀಕ್ಷೆಗಳು ಭ್ರಮನಿರಸನ ಉಂಟುಮಾಡಿಬಿಡುತ್ತವೆ, ಅಷ್ಟೇ ಏಕೆ ದುಖವನ್ನು ತಂದುಬಿಡುತ್ತವೆ. ಆದ್ದರಿಂದಲೇ ಆಸೆಗಳು ಇರಬೇಕು ಆಸೆಯ ಜೊತೆಗೆ ಸಾಧ್ಯತೆಗಳ ದಿಕ್ಕನ್ನು ಕೈಗೆಟುಕುವಂತೆ ಮಾಡಿ ಕಸಿದುಕೊಳ್ಳುವ ಧೋರಣೆ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಳ್ಳಬೇಕು ಮತ್ತು ಅದನ್ನು ಪಡೆಯುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು. ಈ ಮಾತು ಯಾಕೀಗ ಅಂತೀರಾ? ಕೇಂದ್ರ ಸರ್ಕಾರ ತನ್ನ ವಿತ್ತೀಯ ಬಜೆಟ್ ಅನ್ನು ಮಂಡಿಸಿದೆ, ಅದರ ಸಾಧಕ ಬಾಧಕಗಳೇನೇ ಇರಲಿ, ಜನಸಾಮಾನ್ಯರ ದೃಷ್ಟಿಯಿಂದ ಮಾತ್ರ ಇದೊಂದು ನಿರಾಶಾದಾಯಕ ಬಜೆಟ್ಟೆ ಸರಿ.ಅದಕ್ಕೆ ಈ ಮಾತು ಹೇಳಬೇಕಾಯಿತು.
ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಉದ್ದೇಶದಿಂದ ರಾಜಕೀಯ ಪಕ್ಷಗಳು ತಂತಮ್ಮ ಹಿತಾಸಕ್ತಿಗಳಿಗನುಗುಣವಾಗಿ ಬಜೆಟ್ ನಲ್ಲಿ ಆಕರ್ಷಕವಾದ ಯೋಜನೆಗಳನ್ನು ಪ್ರಕಟಿಸಿ ಜನ ಸಾಮಾನ್ಯರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತವೆ. ಇದು ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿ. ದೇಶದ ಆರ್ಥಿಕತೆ ಮತ್ತು ಅಭಿವೃದ್ದಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರ ಕಣ್ಣೊರೆಸುವ ನಾಟಕ ಮಾಡುವ ಸರ್ಕಾರಗಳು ಬಂಡವಾಳ ಶಾಹಿಗಳ ಮತ್ತು ಮೇಲ್ವರ್ಗದವರ ಹಿತಕಾಯಲು ನಿಂತು ಬಿಡುತ್ತವೆ. ಹಾಗಾಗಿ ದೇಶದ ಜನ ಸಾಮಾನ್ಯರ ಸಂಕಷ್ಟಗಳು ಪರಿಹಾರವಾಗದೇ ಉಳಿದು ಬಿಡುತ್ತವೆ. ಇದು ನಮ್ಮ ದೇಶದ ಜನರಿಗೊದಗಿದ ದುರ್ಗತಿ.
ಇಲ್ಲಿ ಕೇಂದ್ರದ ವಿತ್ತೀಯ ಬಜೆಟ್ ಕುರಿತು ನಾನು ಪ್ರಸ್ತಾಪಿಸಲು ಹೊರಟದ್ದು ಪ್ರಮುಖವಾಗಿ ತೆರಿಗೆ ವಿಚಾರದ ಬಗೆಗೆ. ಅದಕ್ಕೂ ಮುನ್ನ ಕಳೆದ ಸಾಲಿನ ಬಜೆಟ್ ನಲ್ಲಿ ಏನಾಗಿತ್ತು ಗೊತ್ತಾ? ಕಳೆದ ಬಾರಿ ಲೋಕಸಭಾ ಚುನಾವಣೆ ಎದುರಾಗಿತ್ತು ಈ ಹಿನ್ನೆಲೆಯಲ್ಲಿ ಕೇಂದ್ರದ ಯುಪಿಎ ಸರ್ಕಾರ ಪ್ರಕಟಿಸಿದ ವಿತ್ತೀಯ ಬಜೆಟ್ ನಲ್ಲಿ ಜನಸಾಮಾನ್ಯರನ್ನು ಮೆಚ್ಚುಸುವಂತಹ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು. ಅದು ಆಡಳಿತಾರೂಡ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಲಾಭವನ್ನು ತಂದು ಕೊಟ್ಟಿತ್ತು. ಆದರೆ ಈ ಭಾರಿ ಅಂತಹ ಘೋಷಣೆಗಳಿಲ್ಲವಾದರೂ ಪರೋಕ್ಷವಾಗಿ ಭಾರಿ ಹೊಡೆತವನ್ನು ದೇಶದ ಬಡವರಿಗೆ ಮತ್ತು ಮದ್ಯಮ ವರ್ಗದವರಿಗೆ ನೀಡಲಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಆಹಾರ ಪದಾರ್ಥಗಳ ಬೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಾರೀ ಏರಿಕೆ ಆಗಿರುವುದನ್ನು ಗಮನಿಸಬಹುದು. ಸಕ್ಕರೆ, ತೊಗರಿಬೇಳೆ, ಆಹಾರ ತಯಾರಿಕೆಗೆ ಬಳಸಲ್ಪಡುವ ಇತ್ಯಾದಿ ಪದಾರ್ಥಗಳು ತುಟ್ಟಿಯಾಗಿವೆ. ಚಿನ್ನದ ಬೆಲೆಯಲ್ಲಿ ಸಮತೋಲನವಿಲ್ಲ , ಇಂಧನ-ತೈಲಗಳ ಬೆಲೆ ಗಗನಕ್ಕೇರಿದೆ. ಕೇಂದ್ರ ಸರ್ಕಾರ ರೈತರಿಗೆ ಸಬ್ಸಿಡಿ ರಸಗೊಬ್ಬರಕ್ಕೆ ಘೋಷಿಸಿದ್ದ 50ಕೋಟಿ ಅನುದಾನ ಬರಲೇ ಇಲ್ಲ. ಜ್ಞಾನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ನಿರೀಕ್ಷಿತ ಹಣಕಾಸು ಲಭ್ಯವಾಗಿಲ್ಲ. ಮಾನವ ಸಂಪನ್ಮೂಲ ಉತ್ತೇಜಿಸು ವವಿಭಾಗಗಳಿಗೆ ಪ್ರೋತ್ಸಾಹವಿಲ್ಲ.ಆದರೆ ಕಾರ್ಪೋರೇಟ್ ವಲಯಕ್ಕೆ ಕುಮ್ಮಕ್ಕು ನೀಡುವ ಅಂಶಗಳಿಗೆ ಭಾರೀ ಮಹತ್ವ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಂತೂ ರೈತರಿಗೆ ಶೇ.3ರ ಬಡ್ಡಿದರದ ಸಾಲ ನೀಡುವ ಆಸೆ ತೋರಿಸಲಾಗಿದೆ. ಆದರೆ ಆಹಾರೋತ್ಪಾದನೆಗೆ ಪೂರಕವಾದ ವಿಚಾರಗಳ ಪ್ರಸ್ತಾಪವಿಲ್ಲ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ, ಮಾರುಕಟ್ಟೆ ಸುಧಾರಿಸುವ ಯೋಜನೆಗಳ ಪ್ರಸ್ತಾಪವಿಲ್ಲದಿರುವುದು ದುರಂತ. ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಇಂಧನ ಬೆಲೆ ಏರಿಕೆ ಯಲ್ಲದೇ ದೈನಂದಿನ ಜೀವನದಲ್ಲಿ ಜನರಿಗೆ ತಲುಪುವ ಹಲವು ಉತ್ಪನ್ನಗಳ ಮೇಲೆ ಪರೋಕ್ಷ ತೆರಿಗೆಯನ್ನು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವಿಧಿಸಿರುವುದು ದೊಡ್ಡ ಹೊಡೆತ. ಆದರೆ ಕಾರ್ಪೊರೇಟ್ ವಲಯದವರಿಗೆ ಶೇ.50ಕ್ಕಿಂತ ಕಡಿಮೆ ಪ್ರಮಾಣದ ನೇರ ತೆರಿಗೆ ವಿಧಿಸಲಾಗಿದೆ. ಆರ್ಥಿಕ ಸಲಹೆಗಾರ ಮಿತ್ರ ಮಧುಸೂಧನ್ ಹೇಳುವ ಪ್ರಕಾರ ಈ ಪ್ರಮಾಣದ ತೆರಿಗೆಯನ್ನು ಅಂದರೆ ಶೇ.50ಮೀರಿದ ತೆರಿಗೆಯನ್ನು ಜನರ ಮೇಲೆ ವಿಧಿಸುವಂತಹ ಪ್ರಕ್ರಿಯೆಗಳು ಜಗತ್ತಿನ ಯಾವುದೇ ದೇಶದಲ್ಲೂ ಕಾಣುವುದು ಸಾಧ್ಯವಿಲ್ಲವಂತೆ, ಆದರೆ ಭಾರತದಲ್ಲಿ ಇದು ಸಾಧ್ಯವಾಗಿದೆ. ಇದು ಜನಪರ ನೀತಿಯೇ? ಇಲ್ಲಿ ಕೇಂದ್ರ ಸರ್ಕಾರದ ನೀತಿ ಹಲವು ರೀತಿಯಲ್ಲಿ ಪ್ರಶ್ನಾರ್ಹವಾಗುತ್ತದೆ. ಜನರ ಪರ ಎಂದು ಬಿಂಬಿಸಿಕೊಳ್ಳಲು ಉದ್ಯೋಗ ಖಾತ್ರಿ, ಹಂ ಆದ್ಮಿ ಇತ್ಯಾಧಿ ಕಾರ್ಯಕ್ರಮಗಳನ್ನು ಘೋಷಿಸುವ ಯುಪಿಎ ಸರ್ಕಾರ ಬಜೆಟ್ ಹೊರೆಯನ್ನೇಕೆ ಹೊರಿಸಿದೆಯೋ ತಿಳಿಯುತ್ತಿಲ್ಲ.ಅವರಿಗೆ ಬಂಡವಾಳ ಶಾಹಿಗಳ ಹಿತ ಬೇಕಾಗಿದಯೇ ವಿನಹ ಜನಸಾಮನ್ಯರ ಹಿತವಲ್ಲ ಎಂಬುದು ತಿಳಿಯುತ್ತಿದೆ.
ಇನ್ನು ರಾಜ್ಯ ಬಜೆಟ್ ವಿಚಾರಕ್ಕೆ ಬರುವುದಾದರೆ ಕಳೆದ ಬಿಜೆಪಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜನಪರವಾಗಿ ಪ್ರಕಟಿಸಿತ್ತು. ಆದರೆ ಅವುಗಳಾವುವು ಅನುಷ್ಠಾನಕ್ಕೆ ಬರದಿದ್ದುದು ದುರಂತವೇ ಸರಿ. ರಾಜ್ಯ ಸರ್ಕಾ ರನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಬದಲಿಗೆ ಅದಿರು ಮತ್ತು ಅದಿರು ಉತ್ಪನ್ನದ ಲೂಟಿಗೆ ಒತ್ತು ಕೊಡು ವಮೂಲಕ ರೆಡ್ಡಿ ಗಳ ಹಿತ ಕಾಯಲು ಕಂಕಣ ಬದ್ದವಾಗಿದೆ. ಪರಿಣಾಮ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಉತ್ತರ ಕರ್ನಾಟಕದ ಬಹುತೇಕ ಮಂದಿ ದಕ್ಷಿಣದೆಡೆಗೆ ಕೂಲಿ ಕಾರ್ಮಿಕರಾಗಿ ವಲಸೆ ಬರುವ ಪ್ರಮಾಣ ಹೆಚ್ಚುತ್ಗಿದೆ. ನೀರಾವರಿಗೆ ಆದ್ಯತೆ ನೀಡಿದಲ್ಲಿ ಉದ್ಯೋಗಾವಕಾಶದ ಜೊತೆಗೆ ಆಹಾರ ಸ್ವಾವಲಂಬನೆ ಸುಧಾರಿಸುತ್ತದಲ್ಲವೇ?
ರಾಜ್ಯ ಸರ್ಕಾರ ನಕ್ಸಲ್ ಸಮಸ್ಯೆ ಸುದಾರಣೆಗೆ ವಿಶೇಷ ಪ್ಯಾಕೇಜ್ ಘೋಷಿಸಿತ್ತು ಆದರೆ ಆಗಿದ್ದೇನು? ಪ್ಯಾಕೇಜ್ ರೂಪ ದ635ಕೋಟಿ ಇನ್ನೂವರೆಗೆ ಬಂದಿಲ್ಲ. ಹೀಗಿರುವಾಗ ಸಮಸ್ಯೆ ಸುಧಾರಣೆ ಹೇಗಾದೀತು? ಮಠ-ಮಾನ್ಯಗಳಿಗೆ ಲೆಕ್ಕಾಚಾರವಿಲ್ಲದಂತೆ ಕೋಟಿ ಕೋಟ ಿದುಡ್ಡು ಕೊಟ್ಟ ಬಿಜೆ ಸರ್ಕಾರ ಜನಸಾಮಾನ್ಯರಿಗೆ ಪೂರಕವಾ ದಯೋಜನೆಗಳಿಗೆ ಹಣವನ್ನೇ ಸರಿಯಾಗಿ ನೀಡಲಿಲ್ಲ ಇದು ಏನ್ನನು ಸೂಚಿಸುತ್ತದೆ? 2ರೂ.ಗೆ 25ಕೇಜಿ ಅಕ್ಕಿ ನೀಡುತ್ತೇವೆ ಎಂದರು, ನಿರುಧ್ಯೋಗ ಭತ್ಯೆ ಕೊಡುತ್ತೇವೆ ಅಂದ್ರು, ರೈತರಿಗೆ ಬೀಜ ಕೊಳ್ಳಲು 1000ಕೋಟ ಿಸಹಾಯ ಧನ ನೀಡುತ್ತೇವೆಂದರು, ವಿಶೇಷ ಘಟಕ ಯೋಜನೆಯಡಿ 835ಕೋಟಿ ಕೊಡುತ್ತೇವೆಂದು ಹೇಳಿ ಕೇವಲ 312 ಕೋಟಿ ಕೊಟ್ಟರು, ನಿರಂತರ ಜ್ಯೋತಿ ನೀಡುತ್ತೇವೆಂದು ಬಡಾಯಿ ಕೊಚ್ಚಿದರು ಎಲ್ಲಿ ಸ್ವಾಮಿ ? ಯಾವ ವುದು ಅನುಷ್ಟಾನವಾಗಿದೆ ಹೇಳಿ? ರಾಜ್ಯದ ದಲಿತರು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 1ವರ್ಷದಿಂ ದ ಸುಮಾರು 50ಕೋಟಿಯಷ್ಟು ಸ್ಕಾಲರ ಶಿಪ್ ನೀಡಿಲ್ಲ ಯಾಕೆ? 3ರ ಬಡ್ಡಿ ಸಾಲ ಕೈಗೆಟುಕ ದದ್ರಾಕ್ಷಿಯಂತಾಗಿದೆ ಏನ್ರಿ ಇದೆಲ್ಲಾ ? ಬಜೆಟ್ ಬಂಡಲ್ ಬಿಡೋದು ಯಾಕ್ರಿ ? ಜನರೇನು ದಡ್ಡರಲ್ಲ ಅಧಿಕಾರಸ್ಥರು ಏನು ಮಾಡ್ರೀರಿ ?ಅನ್ನೋದು ತಿಳಿಯುತ್ತೆ. ಈ ಸಲದ ಬಜೆಟ್ ನಲ್ಲಾದರೂ ಬಂಡಲ್ ಬಿಡೋದು ನಿಲ್ಲಿಸಿ ಜನಸಾಮಾನ್ಯರ ಹಿತಕಾಯಲು ಯೋಗ್ಯ ಬಜೆಟ್ ನೀಡಬೇಕಾಗಿದೆ. ನೀವೇನಂತೀರಾ ಸ್ವಾಮಿ?

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...