ಸೀಮೇ ಗೊಬ್ರ ಹಾಕೀ ಅಂತೀರಿ, ಅದ್ರೆ ಅದರ್ ಜೊತೆಗೆ ರಾಸಾಯನಿಕ ಗೊಬ್ಬರ ಹಾಕದಿದ್ರೆ ನಮ್ಗೆ ಬೆಳೇನೇ ಬರಲ್ಲ ನೋಡಿ ? ಅಂದ್ರೆ ನಮ್ಮ ಮಣ್ಣು ಕಾಂಪೋಸ್ಟ್ ಗೊಬ್ರಕ್ಕೆ ಒಕ್ಕೊಂಡು ಬಿಟ್ಟೈತೆ, ಏನ್ಮಾಡೋದು ? ಹೌದು ನೀವೇಳೋದು ಸರೀನೇ ಹೊಟ್ಟೆಗೆ ಮುದ್ದೆ ತಿನ್ನಿ,ಅನ್ನ ತಿನ್ನಿ ಅಂದ್ರೆ ಲಿಕ್ಕರ್ ಶರಾಬು ಕುಡಿದು ದೇಹಾನೆ ಹಾಳು ಮಾಡ್ಕೋತಾರಲ್ಲ ನಿಮ್ ಯಜಮಾನ್ರುಗಳು ಹಂಗೇಯಾ ಭೂಮೀಗೆ ಕಾಂಪೋಸ್ಟ್ ,ಗಿಂಪೋಸ್ಟ್ ಅಂತ ಹಾಕಿದ್ರೆ ಉಳಿಯುತ್ತಾ ಹೇಳಿ? ಅದೆಲ್ಲ ಒಂದು ಕ್ರಮವಷ್ಟೆ, ಯಾರ್ಯಾರೋ ಏನೇನೋ ಹೆಳ್ತಾರೆ ಅಂತ ಕೇಳ್ದೇ ನಿಮ್ಮ ಸ್ವಂತ ಬುದ್ದಿ ಉಪಯೋಗ್ಸಿ ಹಿಂದಿನಂಗೆ ಕೊಟ್ಟಿಗೆ ಗೊಬ್ಬರ ಹಾಕಿ ಸಹಜ/ಸಾವಯವ ಕೃಷಿ ಮಾಡಿ ಬೆಳೆ ಬೆಳೆದು ಯಾಕೆ ಉದ್ದಾರ ಆಗೋಕಾಗಲ್ಲ ಹೇಳಿ? ಇಂತಹದ್ದೊಂದು ಸಂಭಾಷಣೆ ನಡೆದಿದ್ದು ಹಳ್ಳಿಯೊಂದರಲ್ಲಿ ಏರ್ಪಾಡಾಗಿದ್ದ ಕೃಷಿ ಕಾರ್ಯಕ್ರಮದಲ್ಲಿ. ತುಂಬಾ ರೈತಾಪಿ ಜನ ಇವತ್ತು ಕೃಷಿ ಬಗ್ಗೆ ಅಲ್ಲಿ ಅನುಸರಿಸುವ ವಿದಾನದ ಬಗ್ಗೆ,ವ್ಯವಸಾಯದ ಕಷ್ಟ-ನಷ್ಟಗಳ ಬಗೆಗೆ ಮಾತಾನಾಡಿಕೊಳ್ಳೋಕಿಂತ ಜಾಗತಿಕ ಆರ್ಥಿಕ ಉದಾರೀಕರಣ ದನೀತಿಯ ಫಲವಾಗಿ ಕೃಷಿಯೇತರ ವಿಚಾರಗಳ ಬಗ್ಗೆ ಚರ್ಚಿಸಿಕೊಳ್ಳುವುದೇ ಹೆಚ್ಚು. ಬಹುಶ: ದೇಶದಲ್ಲಿ ಸಮರ್ಪಕ ಕೃಷಿ ನೀತಿಯ ಕೊರತೆ ರೈತರನ್ನು ಭ್ರಮನಿರಶನಕ್ಕೀಡು ಮಾಡಿರಬಹುದೇನೋ.
ಹೌದು ನಮ್ಮ ರೈತರ ಪರಿಸ್ಥಿತಿ ಇವತ್ತು ಟ್ರಾಫಿಕ್ ನಲ್ಲಿ ಸಿಕ್ಕ ಪಾದಚಾರಿಯ ಪರಿಸ್ಥಿತಿಯಂತಾಗಿದೆ. ದೇಶದ ಒಟ್ಟು ಆರ್ಥಿಕ ವ್ಯವಸ್ಥೆ ಕೃಷಿಯನ್ನೇ ಪ್ರದಾನವಾಗಿ ಅವಲಂಬಿಸಿದ್ದರೂ ಸಹಾ ಅತಿಯಾದ ನಗರೀಕರಣದ ಫಲವಾಗಿ ಕೃಷಿಯಿಂದ ರೈತರನ್ನು ವಿಮುಖರನ್ನಾಗಿಸುತ್ತಿದೆ. ಆದಾಗ್ಯೂ ಭೂಮಿಯನ್ನೇ ನಂಬಿಕೊಂಡ ಕೆಲ ರೈತರು ಕಷ್ಟವೋ ಸುಖವೋ ಪಟ್ಟು ಬಿಡದ ತ್ರಿವಿಕ್ರಮನಂತೆ ಅದರಲ್ಲೆ ತೊಡಗಿಕೊಂಡಿದ್ದಾರೆ, ಅದರಲ್ಲೇ ಬದುಕು ಕಾಣುತ್ತಿದ್ದಾರೆ. ಅಂದರೆ ಕೃಷಿ ಅವರ ಜೀವನ ಕ್ರಮದಲ್ಲಿ ಮಿಳಿತವಾಗಿದೆ.ದೇಶದ ರಾಜಕೀಯ ವ್ಯವಸ್ಥೆಯನ್ನು ಪ್ರವೇಶಿಸುವ ಬಹಳಷ್ಟು ಮಂದಿ ರೈತ ರಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬರುತ್ತಾರಾದರೂ ಅಧಿಕಾರಕ್ಕೆ ಬಂದ ತಕ್ಷಣ ರೈತರನ್ನೇ ಮರೆತು ಬಿಡುತ್ತಾರೆ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ರೈತರು ಅಸಹಾಯಕರಾಗುತ್ತಾರೆ.
ಮೊನ್ನೆ ಮೊನ್ನೆ ಕೃಷಿ ಸಚಿವ ಉಮೇಶ ಕತ್ತಿ ಹಾಸನಕ್ಕೆ ಬಂದ ಸಂಧರ್ಭ ಆಲೂಗಡ್ಡೆ ಕುರಿತಂತೆ ಸಾಕಷ್ಟು ಚರ್ಚೆ ಆಯ್ತು, ಅನೇ ಕ ವರ್ಷಗಳಿಂದ ಬಗ್ಗೆ ಚರ್ಚೆಯಾಗುತ್ತಲೇ ಇದೆ ಆದರೆ ಆಲೂ ಬೆಳೆಗಾರನ ಸ್ಥಿತಿ ಮಾತ್ರ ಬದಲಾಗಿಲ್ಲ. 2ವರ್ಷಗ ಳ ಹಿಂದೆ ಆಲೂ ಬೆಳೆಗೆ ತಗುಲಿದ ಅಂಗಮಾರಿ ರೋಗದಿಂದ 45000 ಹೆಕ್ಟೇರುಗಳಲ್ಲಿ ಬೆಳೆದಿದ್ದ 250ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ಸಂಪೂರ್ಣ ಹಾಳಾಗಿ ರೈತರು ಹತಾಷೆ ಅನುಭವಿಸುವಂತಾಯಿತು. ಆಲೂ ಬೆಳೆಯುವ ಪ್ರತೀ ಬೆಳೆಗಾರನಿಗೆ ಹೆಕ್ಟೇರೊಂದಕ್ಕೆ 25ಸಾವಿರ ವೆಚ್ಚವಾಗುತ್ತದೆ ಆದರೆ ನೈಸರ್ಗಿಕ ವಿಕೋಪ ನಿಧಿಯಿಂದ ನಮ್ಮ ಬೆಳೆಗಾರರಿಗೆ ಕೇಂದ್ರ ಸರ್ಕಾರ ಪ್ರತೀ ಹೆಕ್ಟೇರಿಗೆ ಕೇವಲ 2000ರೂಪಾಯಿಗಳ ಭಿಕ್ಷೆ ನೀಡಿದೆ. ಬಿಜೆಪಿ ಸರ್ಕಾರ ಮಾತ್ರ ನಯಾ ಪೈಸೆಯನ್ನೂ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದ ಆಲೂ ಉತ್ಪಾದನೆಯಾಗೋದು ಪಶ್ಚಿಮ ಬಂಗಾಳದಲ್ಲಿ (ಶೇ.45), ಉತ್ತರ ಪ್ರದೇಶದಲ್ಲಿ ಶೇ.40ರಷ್ಟು ಆಲೂ ಬೆಳೆಯಲಾಗುತ್ತದೆ, ರಾಜ್ಯದಲ್ಲಿ ಶೇ.3ರಷ್ಟು ಉಳಿದ ಭಾಗವನ್ನು ಪಂಜಾಬ್ ನಲ್ಲಿ ಉತ್ಪಾದಿಸಲಾಗುತ್ತದೆ. ಹಾಗೆಯೇ ರಾಜ್ಯದಲ್ಲಿ ಹಾಸನ, ಬೆಳಗಾಂ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಆಲೂ ಗಡ್ಡೆ ಬೆಳೆಯುವುದು ವಾಡಿಕೆ. ಕಳೆದ 150ವರ್ಷಗಳ ಹಿಂದೆ ಐರ್ಲೆಂಡ್ ನಲ್ಲಿ ಮೊದಲಭಾರಿಗೆ ಆಲೂ ಬೆಳೆಗೆ ಮಾರಕವೆನಿಸಿದ ಲೇಟ್ ಬ್ಲೈಟ್ ಕಾಣಿಸಿಕೊಂಡಿತ್ತು. ಈಗ್ಯೆ 2ವರ್ಷಗಳಿಂದ ಕರ್ನಾಟಕ ಹೊರತು ಪಡಿಸಿ ಇತರೆ ರಾಜ್ಯಗಳಲ್ಲಿ ಆಲೂ ಬೆಳೆಯನ್ನು ಅಂಗಮಾರಿ ನಾಮಾವಶೇಷ ಮಾಡಿಹಾಕಿತ್ತು.ಆದರೆ ಕಳೆದ ಡಿಸೆಂಬರ್-ಜನವರಿ ತಿಂಗಳಲ್ಲಿ ಉತ್ತರ ಪ್ರದೇಶ ಹಾಗೂ ಕಲ್ಕತ್ತಾದಲ್ಲಿ ಬಂಪರ್ ಬೆಳೆ ಬಂದಿದೆ. ಈ ಆಲೂಗಡ್ಡೆಗೆ ಶಿಲೀಂದ್ರ ನಿರೋಧಕ ಶಕ್ತಿ ಇಲ್ಲದಿರುವುದೇ ರೋಗಕ್ಕೆ ತುತ್ತಾಗಲು ಕಾರಣ.
ಸತತವಾಗಿ ಆಲೂ ಬೆಳೆಯನ್ನು ಮಾಡಿಕೊಂಡು ಬಂದಿರುವುದು ಮತ್ತು ಪರ್ಯಾಯ ಬೆಳೆಯನ್ನು ಬೆಳೆಯದಿರುವುದ ಅಂಗಮಾರಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ರೈತರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ಕೆಲಸ ಕಾಲದಿಂದ ಕಾಲಕ್ಕೆ ಸರಿಯಾಗಿ ಆಗುತ್ತಿಲ್ಲ. ಬೆಳೆ ಬೆಳೆಯುವ ಮುನ್ನ ಮತ್ತು ನಂತರ ಬೂಮಿಯನ್ನು ಉಪಚರಿಸುವ ವಿದಾನ/ಮಣ್ಣಿನ ಪರೀಕ್ಷೆ ನಡೆಯುತ್ತಿಲ್ಲ. 20-25ದಿನ ಸತತವಾಗಿ ಔಷದ ಹೊಡೆದು ಬೆಳೆಯನ್ನು ರಕ್ಷಿಸಬೇಕು,ಆದರೆ ಮಾರುಕಟ್ಟೆಯಲ್ಲಿ ರಸಾಯನಿಕ ಔಷದದ ಬೆಲೆ ರೈತರಿಗೆ ಕೈಗೆಟುಕುತ್ತಿಲ್ಲ, ರೈತರಿಗೆ ನೀಡುತ್ತಿರುವ ಬಿತ್ತನೆ ಬೀಜವನ್ನು ಪ್ರಮಾಣಿಕರಿಸುತ್ತಿಲ್ಲ, ಬೀಜ ಮಾರಾಟದಲ್ಲಿ ಮತ್ತು ಆಲೂಗಡ್ಡೆ ಮಾರಾಟ ಮಾಡುವಾಗ ಮದ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಆಲೂಗಡ್ಡೆ ಬೆಳೆಗಾರ ನಿಜವಾಗಲೂ ಉದ್ದಾರವಾದಾನೆಯೇ?
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಸಂಗ್ರಹಕ್ಕಾಗಿ 50ಲಕ್ಷ ರೂವೆಚ್ಚದ ಶೀತಲೀಕರಣಗಾರವನ್ನು ನಿರ್ಮಿಸಲಾಗಿದೆ ಆದರೆ ಅಲ್ಲಿನ ಯಂತ್ರಗಳ ಲೋಪ ದೋಷದಿಂ ದ ಅದು ಉಪಯೋಗಕ್ಕೆ ಲಭ್ಯವಿಲ್ಲದಂತಾಗಿದೆ. ಜಿಲ್ಲೆಯ ಖಾಸಗಿ ಶೀತಲೀಕರಣಗಾರದಲ್ಲಿ ಆಲೂ ಸಂಗ್ರಹಿಸುವ ಸಾಧ್ಯತೆ ಇದೆಯಾದರೂ ಅದರ ಪ್ರಯೋಜನ ಬಹಳಷ್ಟ ಮಂದಿಗೆ ಸಿಗುತ್ತಿಲ್ಲ. ಜಿಲ್ಲೆಯ ಕೆಬ್ಬೆ ಮಣ್ಣಿನಲ್ಲಿ ಬೆಳೆಯುವ ಆಲೂಗಡ್ಡೆ ಯನ್ನು ಮಲ್ಟಿನ್ಯಾಷನಲ್ ಕಂಪನಿಗಳು ಹೆಚ್ಚಾಗಿ ಆದ್ಯತೆಯ ಮೇಲೆ ಆಯ್ಕೆ ಮಾಡುತ್ತಿವೆ. ಇತರೆ ರಾಜ್ಯಗಳ ಆಲೂಗಡ್ಡೆಗಿಂತ Lay's , Pepsi ಯಂತಹ ಚಿಪ್ಸ್ ತಯಾರಿಕೆಗೆ ಜಿಲ್ಲೆಯ ಆಲೂಗಡ್ಡೆ ಯನ್ನೆ ಬಳಸಲಾಗುತ್ತಿದೆ. ಹಾಗಾಗಿ ಇಲ್ಲಿನ ಬೆಳೆಗೆ ಹೆಚ್ಚು ಬೇಡಿಕೆ ಇದೆ.ನಮ್ಮ ನೆಲಕ್ಕೆ ಜಲಂಧರ್ ನಲ್ಲಿ ಬೆಳೆಯುವ ಆಲೂಗಡ್ಡೆಯನ್ನೇ ಬಿತ್ತನೆ ಬೀಜವಾಗಿ ಉಪಯೋಗಿಸಲಾಗುತ್ತಿದೆ, ಈ ಸಂಧರ್ಭದಲ್ಲಿ ಜಿಲ್ಲೆ ಯರೈತರೇ ತಮಗೆ ಬೇಕಾದ ಉತ್ತಮ ಬಿತ್ತನೆ ಬೀಜಗಳನ್ನು ಪಂಜಾಬ್ ಗೆ ತೆರಳಿ ತಂದಲ್ಲಿ ಮತ್ತು ಸೂಕ್ತ ವಿಧಾನ ಗಳನ್ನು ಅನುಸರಿಸಿದರೆ ಅನುಕೂಲವಾಗಬಹುದೇನೋ.?ಮಾಜಿ ಸಚಿವ ರೇವಣ್ಣ ಸರ್ಕಾರಕ್ಕೆ ಮನವಿ ಮಾಡಿದಂತೆ ಅಂಗಮಾರಿ ತಡೆಯುವ ಕ್ರಮಿನಾಶಕಕ್ಕೆ ಶೇ.75ರ ಸಹಾಯ ಧನ, ಶೇ.50ರ ರಿಯಾಯ್ತಿ ದರದಲ್ಲಿ ಪ್ರಮಾಣಿತ ಬಿತ್ತನೆ ಬೀಜ ವಿತರಣೆ, ಬೀಜ ಖರೀದಿ ಮತ್ತು ಬೆಳೆಗೆ ಶೇ.3ರ ಬಡ್ಡಿ ದರದ ಸಾಲ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಆಲೂಗಡ್ಡೆ ಬೆಳೆಗೆ ಹವಾಮಾನಾಧಾರಿತ ವಿಮೆ ಯನ್ನ ನಿಗದಿ ಮಾಡದೇ ಬೆಳೆ ಇಳುವರಿ ಆಧಾರಿತ ವಿಮೆ ಮಾಡುವುದು, ಸ್ಥಳೀಯ ಮಾರುಕಟ್ಟೆ ಅಭಿವೃದ್ದಿ ಪಡಿಸುವುದು, ಕಾಲಾನುಕಾಲಕ್ಕೆ ಸೂಕ್ತ ಮಾಹಿತಿಯನ್ನು ರೈತರನ್ನೊಳಗೊಂಡ ಸಮಿತಿ ಯಮೂಲಕವೇ ತಜ್ಞರ ಮೂಲ ಕ ಕೊಡಿಸುವುದರಿಂದ ಪರಿಸ್ಥಿತಿಯನ್ನು ಸುಧಾರಿಸಬಹುದಲ್ಲವೇ? ಕಡೆಯಲ್ಲಿ ಮಿತ್ರ ಸತೀಶ್ ಹೇಳಿದ ಮಾತನ್ನು ನೆನಪಿಸಿ ಕೊಳ್ಳುತ್ತಿದ್ದೇನೆ ಒಂದು ಗುಂಡು ಸೂಜಿಯಿಂದ Horlics ವರೆಗೆ ತಾನು ಉತ್ಪಾದಿಸಿದ ುತ್ಪನ್ನಕ್ಕೆ ಒಬ್ಬ ಉದ್ಯಮಿ/ಬಂಡವಾಳ ಶಾಹಿ/ವ್ಯಾಪಾರಿ ತಾನೆ ಬೆಲೆಯನ್ನು ನಿರ್ದರಿಸಬಹುದಾದರೆ ವರ್ಷ-ಆರು ತಿಂಗಳು ಬೆವರು ಹರಿಸಿ ದುಡಿದ ರೈತ ತನ್ನ ಬೆಳೆಗೆ ತಾನೇ ಬೆಲೆ ನಿರ್ದರಿಸಲಾರ ಇದಲ್ಲವೇ ವಿಪರ್ಯಾಸ?

6 comments:
ಜಯರಾಂ ಸರ್
ನಿಮ್ಮ ಕಳಕಳಿ ಮೆಚ್ಚುವಂತಾದ್ದೆ
ಸದಾ ಹೊಸ ಹೊಸ ವಿಷಯಗಳ ಬಗೆಗೆ ಬೆಳಕು ಚೆಲ್ಲುವ ನಿಮ್ಮ
ಬ್ಲಾಗ್ ಸದಾ ನಳ ನಳಿಸುತ್ತಿರಲಿ
ಜಯ್
ಆಲೂ ಬೆಳೆಗಾರರ ಬಗ್ಗೆ ಕಾಳಜಿವಹಿಸಿ ಲೇಖನ ತುಂಬ ಚನ್ನಾಗಿ ಬರೆದಿದ್ದಿರಿ.
ಅರಕಲಗೂಡುಜಯಕುಮಾರ-
ಮಿತ್ರ ಸತೀಶರ ಮಾತು ಅದ್ಭುತ!!
ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/
@ಹೆಗಡೆ ಸರ್, ಕಳೆದ ಎರಡು ವಾರಗಳಿಂದ ಪ್ರತಿಕ್ರಿಯಿಸಲು ಆಗಲಿಲ್ಲ ಕ್ಷಮಿಸಿ :( ನಿಮ್ಮ ಪ್ರೋತ್ಸಾಹಾದಯಕ ಪ್ರತಿಕ್ರಿಯೆಗಳು ಹೀಗೇ ಇರಲಿ ಸಾರ್, ಎಡವಿದರೂ ತಿಳಿಹೇಳಿ.
@ರಂಗಸ್ವಾಮಿ, ದೀರ್ಘ ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸಾರ್.
@ಗುರು-ದೆಶೆ, ಅಯ್ಯೋ ಖಂಡಿತಾ ಬರುತ್ತಿದ್ದೇನೆ ಸಾರ್, ಆದರೆ ಕಾಲದ ಒತ್ತಡದಿಂದ ನಿಮ್ಮ ಬ್ಲಾಗ್ ನಲ್ಲಿ ಪ್ರತಿಕ್ರಿಯೆ ಬರೆಯಲಾಗುತ್ತಿಲ್ಲ, ಮುಂದೆ ಬರೆಯುತ್ತೇನೆ. ಪ್ರತಿಕ್ರಿಯೆಗಾಗಿ ಧನ್ಯವಾಗಳು ಸಾರ್, ಹೀಗೆ ಬರುತ್ತಿರಿ.
Post a Comment