Sunday, May 30, 2010

ಇದು ಪಧವೀಧರ ಕ್ಷೇತ್ರದ ಚುನಾವಣೆ ಸಮಯ!

ಸಾರ್ ನಂಗೆ ಅಪಾಯಿಂಟ್ಮೆಂಟ್ ಆಯ್ತು !, ಎಂಥಾ ಕೆಲ್ಸ ಮಾರಾಯಾ? ಅದೇ ಸಾರ್ ಯಾರೋ ಲಕ್ಷ್ಮಣ್ ಅಂತೆ, ಇಲ್ಲಿವರ್ಗೂ ಅವನ ಮುಖ ನೋಡಿಲ್ಲ, ಮನೆ ಮನೆಗೆ ಹೋಗೋದು ಪಧವೀಧರರನ್ನು ಬೇಟ ಆಗೋದು, ಅವರ ಅಡ್ರೆಸ್ ಮತ್ತು ಫೋನ್ ನಂಬರು ತಗೊಳ್ಳೋದು ಅಷ್ಟೆ. ತಿಂಗಳಿಗೆ 10ಸಾವಿರ ಪೇಮೆಂಟ್ ಅದರ ಮೇಲೆ ದಿನಭತ್ಯೆ 75ರೂಪಾಯಿ. ನಂದೇನೂ ಓಟಿಲ್ಲ ಬಿಡಿ ಸಾರ್,ಏನೋ ಸುಮ್ನೆ ಇದೀನಲ್ಲಾಂತ ಮಾಡ್ತಿದೀನಿ, ಅಂದ ಹಾಗೆ ವಿಷ್ಯ ಗೊತ್ತಾ ಸಾರ್ ಈ ಒದ್ದೋರು ಇದಾರಲ್ಲ ಟೀಚರುಗಳು, ಲೆಕ್ಚರರುಗಳು, ನೌಕರರುಗಳು, ಹೀಗೀಗೆ ನಮ್ಮತ್ರ ಇಷ್ಟು ಓಟೈತೆ ಎಷ್ಟು ಕೋಡ್ತೀರಿ? ನೈಟ್ ಗುಂಡು-ತುಂಡು ಪಾರ್ಟಿ ಎಲ್ಲಿರುತ್ತೆ? ಎಲ್ಲಿಗೆ ಬರ್ಬೇಕು ಹೇಳಿ? ಅಂತಾರೆ ಅಂತ ಬಡಬಡಿಸಿದವನು ಒಬ್ಬ ಪರಿಚಿತ ಪಧವೀಧರ ಯುವಕ. ಇದು ಪಧವೀಧರ ಕ್ಷೆತ್ರದ ಚುನಾವಣೆಯ ಸಂಧರ್ಭ. ವಿದಾನ ಪರಿಷತ್ ನಲ್ಲಿ ಪಧವೀಧರರನ್ನು ಪ್ರತಿನಿಧಿಸುವ ಅವರ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಗೆ ಚುನಾವಣೆ ಘೋಷಣೆಯಾಗಿದೆ. ಇಂಥಹ ಸನ್ನಿವೇಶದಲ್ಲಿ ಚುನಾವಣೆಯ ಭರಾಟೆಯೂ ಜೋರಾಗಿಯೇ ಸಾಗಿದೆ.
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷಗಳಿಂದಲೂ ಒಂದರ ಹಿಂದೊಂದು ಚುನಾವಣೆಗಳು ಬೆಂಬಿಡದಂತೆ ಬರುತ್ತಿವೆ. ವಿಧಾನ ಸಭೆಯ ಉಪ ಚುನಾವಣೆ, ಬಿಬಿಎಂಪಿ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಗ್ರಾಮಪಂಚಾಯ್ತಿ ಚುನಾವಣೆ ಈಗ ಪಧವೀಧ ರಕ್ಷೆತ್ರದ ವಿಧಾನ ಪರಿಷತ್ ಚುನಾವಣೆ. ಗಮನಿಸಿ ನೋಡಿ ಎಲ್ಲಾ ಚುನಾವಣೆಗಳಲ್ಲೂ ಹೆಂಡ-ಖಂಡ-ದುಡ್ಡು ಭರಾಟೆಯೇ ಜೋರು. ಬಹುತೇಕ ಪ್ರಜ್ಞಾವಂತ ಮನಸ್ಥಿತಿಯ ಜನರು ವಿಧಾನ ಸಭೆಗೆ ಬರುತ್ತಾರೆಂದೆ ಬಾವಿಸಲಾಗುತ್ತದೆ, ಆಪಾದಮಸ್ತಕವೆನಿಸುವಂತೆ ರಾಜಕೀ ಯವಿಭಾಗದಿಂದ, ಸಾಹಿತ್ಯ ಹಾಗೂ ಶೈಕ್ಷಣಿಕ ವಲಯದಿಂದಲೂ ಪುಡಾರಿಗಳನ್ನ ಓಲೈಸುವ ಬಾಲಬಡುಕ ಮಂದಿ ವಿಧಾನ ಪರಿಷತ್ ಗೆ ಆಯ್ಕೆಯಾಗುತ್ತಿರುವುದು ದುರಂತದ ಸಂಗತಿ. ಇಂಥಹ ಸನ್ನಿವೇಶದಲ್ಲಿ ಪಧವೀಧ ರಕ್ಷೆತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳು ತನ್ನ ಬಾಲ ಹಿಡಿಯುವ ಕೋಡಂಗಿಗಳನ್ನೇ ಚುನಾವಣೆಗೆ ನಿಲ್ಲಿಸುತ್ತಿದೆ, ಇಂಥಹವರಿಂದ ಯಾವ ಪ್ರಯೋಜನವೂ ಆಗದು. ರಾಜಕೀಯ ಪಕ್ಷಗಳ ಬೆಂಬಲ ಬೆನ್ನಿಗಿರುವುದರಿಂದ ಇಂತಹ ಮಂದಿ ಕೋಟಿ ಗಟ್ಟಲೆ ಹಣ ಸುರಿದು ಮತದಾರ ಮಾರುಕಟ್ಟೆಯಲ್ಲಿ ತನ್ನ ಮತವನ್ನು ಮಾರಿಕೊಳ್ಳುವಂತಹ ಪರಿಸ್ತಿತಿಯನ್ನು ಸೃಷ್ಟಿಸಿ ಬಿಟ್ಟಿದೆ. ಪರಿಣಾಮ ಪಧವೀಧರರನ್ನು-ನೌಕರರನ್ನು ಕಲೆ ಹಾಕಿ ಭರ್ಜರಿ ಪಾರ್ಟಿಗಳನ್ನು ಮಾಡಿ ಮತಗಳನ್ನು ಕೊಳ್ಳಲಾಗುತ್ತಿದೆ. ಪದವಿ-ಸ್ನಾತಕ ಪದವಿಗಳನ್ನು ಪಡೆದು ನಿರುದ್ಯೋಗಿಗಳಾಗಿರುವ, ನೌಕರಿಯಲ್ಲಿರುವವರು(ಕ್ಷಮಿಸಿ ಎಲ್ಲರೂ ಅಲ್ಲ!) ಯಾವ ನಾಚಿಕೆಯೂ ಇಲ್ಲದೇ ಎಲ್ಲಾ ಪಾರ್ಟಿಗಳಲ್ಲೂ ಭಾಗವಹಿಸುತ್ತಾ ಮಜಾ ಉಡಾಯಿಸಿ ಅಂತಿಮವಾಗಿ ತಮಗೆಬೇಕಾದವರಿಗೆ ಮತ ಚಲಾಯಿಸುತ್ತಾರೆ. ಇದು ಯಾವ ಸೀಮೆ ಚುನಾವಣೆ ಸ್ವಾಮಿ? ಇವತ್ತು ವಿದಾನಸಭೆ-ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಮತ ಹಾಕುವ ಸಾಮಾನ್ಯ ಮತದಾ ರ ಚುನಾವಣೆ ಆಮಿಷಕ್ಕೆ ಒಳಗಾದಾಗ ತಾವೇನೋ ಸಾಚಾ ಅನ್ನುವಂತೆ ಮಾತನಾಡಿಕೊಳ್ಳುವ ಇದೇ ಪಧವಿಧರರು ತಾವು ಕಿಸಿಯುವುದಾದರೂ ಏನು? ಮತ್ತೊಮ್ಮೆ ಕ್ಷಮಿಸಿಎಲ್ಲರಿಗೂ ಹೇಳುತ್ತಿಲ್ಲ ಶೈಕ್ಷಣಿಕ ವರ್ಗದಿಂದ ಅತ್ಯಂತ ಹೆಚ್ಚು ಮಂದಿ ಚುನಾವಣೆ ಭ್ರಷ್ಟತೆಗೆ ಕಾರಣರಾಗಿದ್ದಾರೆ. ಇವತ್ತು ಪ್ರತೀ ಊರುಗಳಲ್ಲಿ ಶೈಕ್ಷಣಿಕ ಕ್ಷೆತ್ರದ ಕೆಲವು ಜನರು ಗುಂಪುಗಾರಿಕೆ ಮಾಡುತ್ತಾ ವಿಧಾನ ಪರಿಷತ್ ಚುನಾವಣೆಯ ಭರಾಟೆಯನ್ನು ಹೆಚ್ಚಿಸಿದ್ದಾರೆ, ಚುನಾವಣೆಯ ಮೌಲ್ಯವನ್ನ ಹಾಳು ಗೆಡವಿದ್ದಾರೆ. ಚುನಾವಣೆಗೆ ನಿಂ ತಪಕ್ಷದ ಅಭ್ಯರ್ತಿಯೋರ್ವ (ಹಿಂದಿನ ಭಾರಿಯೂ ಈತನೆ ಪ್ರತಿನಿಧಿ) ವಿಧಾನ ಪರಿಷತ್ ನಲ್ಲಿ ಬಾಯಿ ಬಿಡದೇ ಸಿಕ್ಕಷ್ಟು ದೋಚಿಕೊಂಡು ದುಂಡಗಾಗಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ತನ್ನ ವ್ಯಾಪ್ತಿಯ ಪ್ರತೀ ಶಾಲೆಗಳಿಗೆ ಆಟದ ಸಾಮಾಗ್ರಿಗಳನ್ನು ಹಂಚುತ್ತಾನೆ, ಅದೇ ರೀತಿ ಪಾರ್ಟಿಗಳನ್ನ ಏರ್ಪಡಿಸುತ್ತಾನೆ ಆ ಮೂಲಕ ಕಲಿತವರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಾನೆಂದರೆ ಇದಿನ್ಯಾವ ರೀತಿಯ ಚುನಾವಣೆ ಊಹಿಸಿ. ಇಂತಹವರ ನಡುವೆ ಈ ಭಾರಿ ಚುನಾವಣೆಯ ಮೌಲ್ಯಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಇದೇ ಪ್ರಥಮ ಭಾರಿಗೆ ಜಿಲ್ಲೆಯಿಂದ ಪ್ರಜ್ಞಾವಂತ ಮನಸ್ಥಿತಿಯ ಆರ್ ಪಿ ವೆಂಕಟೇಶಮೂರ್ತಿ ಅಭ್ಯರ್ತಿಯಾಗಿ ಕಣಕ್ಕಿಳಿದಿದ್ದಾರೆ. ಒಂದು ಚುನಾವಣೆಯಲ್ಲಿ ಒಬ್ಬ ಪ್ರಜ್ಞಾವಂತನನ್ನ, ಮುಕ್ತ ಮನಸ್ಥಿತಿಯ ಹೋರಾಟಗಾರನನ್ನ ಜಿಲ್ಲೆಯ ಪಧವೀಧರರ ಸ್ವಾಭಿಮಾನದ ಸಂಕೇತವಾಗಿ ಬೆಂಬಲಿಸಬೇಕಾದ ಅಗತ್ಯವಿದೆ. 'ದುರ್ಜನರ ದುಷ್ಟತನಕ್ಕಿಂತ, ಸಜ್ಜನರ ಮೌನ ಅತ್ಯಂತ ಅಪಾಯಕಾರಿ' ಎಂಬ ಮಾತಿದೆ ಹಾಗಾಗಿ ಒಂದು ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕಾದರೆ ಒಳ್ಳೆಯ ಸಂಗತಿಗಳನ್ನ ಉತ್ತಮ ವಿಚಾರವಂತರನ್ನು ಬೆಂಬಲಿಸ ಬೇಕಾದ ಅಗತ್ಯವಿದೆ.

2 comments:

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ಸಮಯೋಚಿತ ಲೇಖನ
ಬಹಳ ಚೆನ್ನಾಗಿದೆ ವಿಚಾರ

ಅರಕಲಗೂಡುಜಯಕುಮಾರ್ said...

@ಗುರುಮೂರ್ತಿ ಸರ್, ಪ್ರತಿಕ್ರಿಯೆಗಹೆ ಧನ್ಯವಾದಗಳು:)
ಯಾವಾಗ ವಾಪಾಸಾದ್ರಿ? ಹೇಗಿತ್ತು ತಾಯ್ನಾಡಿನ ಪ್ರವಾಸ?ದೇಸಿ ನೆಲದ ಸಂತಸ-ಅಚ್ಚರಿ-ಅನೀರೀಕ್ಷಿತ ಎಲ್ಲವನ್ನೂ ಬ್ಲಾಗ್ನಲ್ಲಿ ಕಟ್ಟಿಕೊಡುತ್ತೀರಲ್ವಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...