ಇದು ಶಿಕ್ಷಕರ ದಿನಾಚರಣೆಯ ಸುವರ್ಣ ಸಂಭ್ರಮದ ಆಚರಣೆ ಅಂದರೆ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಗಿ 50ವರ್ಷಗಳು ಸಂದಿವೆ. ಮೊದಲ
ಶಿಕ್ಷಕರ ದಿನಾಚರಣೆ ನಡೆದದ್ದು ಸೆ.5, 1962. ಅದು ಸರ್ವೆಪಲ್ಲಿ ರಾಧಾಕೃಷ್ಣನ್ ಭಾರತದ ಉಪ
ರಾಷ್ಟ್ರಪತಿಯಾಗಿ ನೇಮಕವಾದ ವರ್ಷ ಅಷ್ಟೇ
ಅಲ್ಲ ರಾಧಾಕೃಷ್ಣನ್ ಜನಿಸಿದ ದಿನಾಂಕವೂ ಹೌದು. ಆದರೆ ಈ
ಕುರಿತು ಜಿಜ್ಞಾಸೆ ಇರುವುದನ್ನು ಅವರ ಜೀವನ
ಕುರಿತ ಪುಸ್ತಕದಲ್ಲಿ ಡಾ ಸರ್ವೆಪಲ್ಲಿ ಗೋಪಾಲ್ ಉಲ್ಲೇಖಿಸಿದ್ದಾರೆ. ಹಾಗಾಗಿ ಯುನೆಸ್ಕೋ ಘೋಷಿಸಿರುವಂತೆ ಅಕ್ಟೋಬ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಬೇಕೆಂಬ ಕೂಗು ಕೇಳಿ
ಬರುತ್ತಿದೆ. ಏನೇ ವೈರುಧ್ಯಗಳಿದ್ದರೂ ಈ
ದಿನಕ್ಕೆ 50ವರ್ಷ ಸಂದಿರುವುದರಿಂದ ಇದನ್ನೆ
ಶಿಕ್ಷಕರ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಧರ್ಭದಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ವಾತಾವರಣದ ಕುರಿತು ಮಾತನಾಡಬೇಕಾದ ಅಗತ್ಯವಿದೆ.
ಅದಕ್ಕೂ
ಮುನ್ನ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ಕುರಿತ ಪುಟ್ಟ
ಮಾಹಿತಿ ನಿಮಗಾಗಿ. ಸರ್ವೆಪಲ್ಲಿ ರಾಧಾಕೃಷ್ಣನ್ ತೆಲುಗು
ಬ್ರಾಹ್ಮಣ ಬಡ ಕುಟುಂಬದಲ್ಲಿ ಹುಟ್ಟಿದ್ದು ತಮಿಳುನಾಡಿನ ತಿರುತ್ತಾನಿ ಎಂಬ ಗ್ರಾಮದಲ್ಲಿ. ಒಬ್ಬ ತತ್ವಜ್ಞಾನಿಯಾಗಿ ಆದರ್ಶ ಪ್ರಾಧ್ಯಾಪಕನಾಗಿ ಬೆಳೆದ
ಸರ್ವಪಲ್ಲಿ ರಾಧಾಕೃಷ್ಣನ್ ಸಾಧನೆಯ ಶೃಂಗಕ್ಕೇರಿ ಅಂತಿಮವಾಗಿ ಭಾರತದ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಪದವಿಗೇರಿದರು. ಆ ಮೂಲಕ
ಒಬ್ಬ ಸಾಮಾನ್ಯ ಶಿಕ್ಷಕ ವ್ಯಕ್ತಿಯ ನಿರ್ಮಾಣ ಮಾತ್ರವಲ್ಲದೇ ರಾಷ್ಟ್ರದ ಆಡಳಿತವನ್ನು ನಿಭಾಯಿಸುವ ಪರಮೋಚ್ಚ ಪದವಿಗೇರಬಹುದು ಎಂಬುದನ್ನು ಸಾಬಿತು ಪಡಿಸಿದರು.1909ರಲ್ಲಿ
ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವೃತ್ತಿ ಜೀವನ
ಆರಂಭಿಸಿದರು. 1918ರಲ್ಲಿ ಮೈಸೂರು
ವಿವಿಯಲ್ಲಿ ಪ್ರೋಫೆಸರ್ ಆದರು. ನಂತರ
ದೇಶ ಮತ್ತು ವಿದೇಶಗಳ ಹಲವು ವಿವಿ ಗಳಲ್ಲಿ
ಅವಕಾಶ ಗಿಟ್ಟಿಸುವ ಮೂಲಕ ಸಾಧನೆ
ಗೈದರು. ಪೌರಾತ್ಯ ಮತ್ತು ಪಾಶ್ಚಿಮಾತ್ಯ ತತ್ವ ಜ್ಞಾನದ ಪದ್ದತಿಗಳನ್ನು ವಿವರವಾಗಿ ರಚಿಸಿದ ರಾಧಾಕೃಷ್ಣನ್ ತನ್ನ ವಿದ್ವತ್ ನಿಂದಾಗಿ ಕಲ್ಕತ್ತಾ ಮತ್ತು ಆಕ್ಸ್
ಫರ್ಡ್ ವಿವಿಗಳಲ್ಲಿ ಅವಕಾಶ ಪಡೆದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಿಟ್ರೀಷ್ ಸಂಸ್ಥಾನ ನೀಡುತ್ತಿದ್ದ ಸರ್ ಪದವಿ
ಪಡೆದಿದ್ದರು. 1954ರಲ್ಲಿ ಅವರಿಗೆ
ಭಾರತ ಸರ್ಕಾರ ಜೀವಿತಾವಧಿಯಲ್ಲೇ ಭಾರತ
ರತ್ನ ಪ್ರಶಸ್ತಿಯನ್ನೂ ಸಹಾ ನೀಡಿ
ಗೌರವಿಸಿದೆ. ಬರಿಟೀಷ್ ಅಕಾಡೆಮಿ ಫೆಲೋಶಿಪ್ ನೀಡಿದೆಯಲ್ಲದೇ ಜರ್ಮನಿಯ ಪ್ರತಿಷ್ಟಿತ ಟೆಂಪ್ಲೆಟಾನ್ ಪ್ರಶಸ್ತಿ ಅವರ ಮುಡಿಗೇರಿದೆ. ತತ್ವಶಾಸ್ತ್ರದಲ್ಲಿನ ಅವರ ಅನುಪಮ
ಸೇವೆಗಾಗಿ ಸತತವಾಗಿ 5ರವರ್ಸಗಳ ಕಾಲ ಅವರ
ಹೆಸರು ನೋಬೆಲ್ ಪ್ರಶಸ್ತಿಗಾಗಿ ಶಿಫಾರಸ್ಸಾಗಿತ್ತು ಎಂಬುದು ಗಮನಾರ್ಹ. ಅವರು ರಾಷ್ಟ್ರಪತಿ ಹುದ್ದೆಗೇರುವ ಮುನ್ನ ಯುನೆಸ್ಕೋ ದಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ
ನಿರ್ವಹಿಸಿದರಲ್ಲದೇ ಸೋವಿಯತ್ ಯೂನಿಯನ್ ನಲ್ಲಿ ಭಾರತದ
ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದರು.ರಾಷ್ರ್ಟಪತಿಯಾಗಿದ್ದಾಗ ಅವರ ಹುಟ್ಟಿದ ಹಬ್ಬವನ್ನು ಆಚರಿಸಲು ಬಂಧುಗಳು ಮತ್ತು ಸ್ನೇಹಿತರು ಮುಂದಾದಾಗ ಅದನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಅವರು ಸೂಚಿಸಿದ್ದರಲ್ಲದೇ ಆ
ಮೂಲಕ ಸಮಸ್ತ ಶಿಕ್ಷಕ
ಸಮುದಾಯಕ್ಕೆ ಗೌರವವನ್ನು ಅರ್ಪಣೆ ಮಾಡಿದ್ದಾರೆ.
ಈ
ನಡುವೆ ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದರ ಕುರಿತು ಹಲವು
ಆಕ್ಷೇಪಣೆಗಳು ಕೇಳಿ ಬಂದಿವೆ.
ನೇರ ನಡೆ ನುಡಿಯ
ದಿಟ್ಟ ವಿಮರ್ಶಕ ಪ್ರೊ. ಜಿ
ಎಚ್ ನಾಯಕ ಈ
ಕುರಿತ ಪ್ರಸ್ತಾವಗಳನ್ನು ಪತ್ರಿಕೆಯೊಂದರ ಮೂಲಕ ಹೊರಗೆಡವಿದ್ದಾರೆ. ರಾಧಾಕೃಷ್ಣನ್ ರ ಪುತ್ರ ಇತಿಹಾಸಕಾರ,ಇತಿಹಾಸ ಪ್ರಾಧ್ಯಾಪಕ,ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಡಾ
ಸರ್ವೆಪಲ್ಲಿ ಗೋಪಾಲ್
ಬರೆದಿರುವ "ರಾಧಾಕೃಷ್ಣನ್ -ಎ ಭಯಾಗ್ರಫಿ" ಪುಸ್ತಕದಲ್ಲಿ ಜನ್ಮ ದಿನದ
ಗೋಂದಲ, ರಾಧಾಕೃಷ್ಣನ್ ಜನ್ಮದ ಕುರಿತ
ಅಶ್ಲೀಲ ಕಥೆ, ಅದೇ
ಕಾರಣಕ್ಕಾಗಿ ತಾಯಿಯನ್ನು ದೂರವಿರಿಸಿದ್ದು, ಅವರು ಪ್ರಾಧ್ಯಾಪಕರಾಗಿದ್ದಾಗ ಮೈಸೂರಿನಲ್ಲಿ ಪಕ್ಕದ ಮನೆಯವನ ಹೆಂಡತಿಯೊಂದಿಗೆ ಅನೈತಿಕ
ಸಂಬಂಧ ಹೊಂದಿದ್ದು ಅದೇ ಆರಂಭವಾಗಿ ಮುಂದೆ ಹಲವು ಹೆಂಗೆಳೆಯರ ಸಹವಾಸ ಮಾಡಿದ್ದು, ಅವರ ಭಾಷಣಗಳಲ್ಲಿ ಆತ್ಮವಂಚನೆಯ ಭಾಷಣಗಳನ್ನು ಮಾಡುತ್ತಿದ್ದುದು, ತನ್ನ ಐವರು
ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ
ಮಾಡಿದ್ದು, ವೃತ್ತಿಯ ಬಗೆಗಿನ ಪ್ರೇಮದಿಂದ ಅಧಿಕಾರಕ್ಕೆ ಅಂಟಿಕೊಳ್ಳುವ ನೀತಿಯನ್ನು ಪ್ರದರ್ಶಿಸಿದ್ದು ಒಂದೇ ಎರಡೇ
ಹೀಗೆ ರಾಧಾಕೃಷ್ಣನ್ ರ ನೆಗೆಟೀವ್ ಅಂಶಗಳನ್ನು ಪ್ರಸ್ಥಾಪಿಸುವ ಮೂಲಕ ಇಂತಹವರ
ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದು ಎಷ್ಟು ಸರಿ
ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಅದು ಸಮಂಜಸವೂ ಇರಬಹುದು ಆದರೆ ಅದೇ
ಅಂತಿಮವೂ ಆಗಬೇಕಿಲ್ಲ. ಈ ಹಿಂದೆಸ್ವಾಮಿ ವಿವೇಕಾನಂದರ ಕುರಿತು ಇಂತಹುದ್ದೇ ಸತ್ಯಗಳು ಅನಾವರಣಗೊಂಡಿದ್ದವು ಅವರೊಬ್ಬ ದಡ್ಡ ಮತ್ತು
ಮೂರ್ಖ, ವಾಸಿಯಾಗದ ಕಾಯಿಲೆಗಳಿದ್ದವು ಮತ್ತು ಆತ
ಶುದ್ದ ಮಾಂಸಹಾರಿ ಇತ್ಯಾದಿ.ಆದರೆ ಸಮಾಜದಲ್ಲಿ ಉನ್ನತ ಧ್ಯೇಯ ಮತ್ತು
ಆದರ್ಶ ಪುರುಷರಂತೆ ಕಾಣಿಸುವ ವ್ಯಕ್ತಿಗಳ ವೈಯುಕ್ತಿಕ ಬದುಕು ಏನೇ
ಆಗಿದ್ದರೂ ಸಹಾ ಸಮಾಜ
ಮುಖಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿತ್ವಗಳು ಮತ್ತು ವಿಚಾರಗಳು ಹೆಚ್ಚು ಆಧ್ಯತೆ ಪಡೆಯುತ್ತವೆ.
ಇನ್ನು
ಪ್ರಸಕ್ತ ವಿಷಯಕ್ಕೆ ಬರುವುದಾದರೆ ಶಿಕ್ಷಕ ದಿನಾಚರಣೆ ಶಿಕ್ಷಕ ಸ್ಥಾನದ ಪಾವಿತ್ರ್ಯತೆಯನ್ನು ಎತ್ತಿ
ಹಿಡಿಯುವ ಗೌರವವನ್ನು ಸಾರಿ ಹೇಳುವ
ದಿನ. ಹಿಂದಿನ ದಶಕಗಳಲ್ಲಿ ಗುರು ಮತ್ತು ಶಿಷ್ಯರ
ನಡುವೆ ಇದ್ದ ಬಾಂಧವ್ಯಗಳು ಈಗ ಇಲ್ಲ. ಆಧುನೀಕರಣದ ಪ್ರವಾಹದಲ್ಲಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯೂ ಈಗ ಉಳಿದಿಲ್ಲ, ಶಿಕ್ಷಣ ವ್ಯಾಪಾರೀಕರಣವಾಗಿದೆ ಶಾಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಲಭ್ಯಗಳು ಬಂದಿವೆ, ಸಂಬಳ-ವಗೈರೆಗಳು ಹೆಚ್ಚಿವೆ. ಜೊತೆಗೆ ಶಿಕ್ಷಕರ ಕಾರ್ಯಗಳು ವಿಸ್ತೃತವಾಗಿವೆ. ಶಿಕ್ಷಕರು ಈಗ ಮಕ್ಕಳಿಗೆ ಪಾಠ ಹೇಳುವ ಗುರುಗಳಾಗಿ ಮಾತ್ರ ಉಳಿಯದೇ ಬೇರೆ
ಚಟುವಟಿಕೆಗಳು ಅವರ ಹೆಗಲೇರಿವೆ. ಕಲಿಸುವ ಉತ್ಸಾಹ ಕುಂದಿದೆ, ವಿದ್ಯಾರ್ಥಿಗಳೂ ಈಗ ಹಿಂದಿನಂತೆ ಉಳಿದಿಲ್ಲ ಶಿಕ್ಷಕರನ್ನೆ ನಿಯಂತ್ರಿಸುವ ಅಗೌರವ ತೋರುವ
ಪ್ರವೃತ್ತಿಯೂ ಬೆಳೆದಿದೆ. ಇದಕ್ಕೆ ಶಿಕ್ಷಕರು ಪರೋಕ್ಷವಾಗಿ ಕಾರಣ ಎಂಬ
ಮಾತನ್ನು ಅಲ್ಲಗೆಳೆಯುವಂತಿಲ್ಲ. ಶಿಕ್ಷಕರು ತಮ್ಮ ವೃತ್ತಿಯ ಗಾಂಭಿರ್ಯತೆಯನ್ನು ಅರಿಯದೇ ತೋರುವ
ನಡವಳಿಕೆಗಳು, ಬಾಹ್ಯ ಚಟುವಟಿಕೆಗಳು, ಅಭಿರುಚಿಗಳು ಆ ಸ್ಥಾನದ
ಪಾವಿತ್ಯತೆಯನ್ನು ಕಳೆದಿವೆ.ಪ್ರಾಮಾಣಿಕವಾಗಿ ವೃತ್ತಿಯನ್ನು ನಿರ್ವಹಿಸುವ ಪ್ರಜ್ಞೆಯನ್ನು ತೋರದೇ ರಾಜಕೀಯ,
ಪುಡಾರಿತನ, ವ್ಯವಹಾರ ಮತ್ತು ಸಮಾಜ
ಹೇಸಿಗೆ ಪಟ್ಟುಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾದ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ದುರಂತದ ಸಂಗತಿ.
ಹತ್ತು ಶಿಕ್ಷಕರಲ್ಲಿ ಒಬ್ಬಿಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಲು
ಮುಂದಾಗುತ್ತಾರಾದರೂ ಇತರ ಶಿಕ್ಷಕರು ಅಡ್ಡಗಾಲು ಹಾಕುವ ಪ್ರವೃತ್ತಿಯಿಂದಾಗಿ ಅವರು
ತಟಸ್ಥರಾಗಿ ಉಳಿಯುವ ಸಂಭವವೇ
ಹೆಚ್ಚು ಇಂತಹದ್ದನ್ನು ಪ್ರತೀ ಶಾಲೆ
ಮತ್ತು ಕಾಲೇಜುಗಳಲ್ಲೂ ಕಾಣಬಹುದು. ಕಲಿಕೆಯಲ್ಲೂ ಅಂತಹ ಗುಣಾತ್ಮಕ ಅಂಶಗಳನ್ನು ಕಾಣಲಾಗುತ್ತಿಲ್ಲ, ಅಧ್ಯಯನದ ಕೊರತೆ, ಅನುಭವದ ಕೊರತೆ
ಎದ್ದು ಕಾಣುತ್ತಿದ್ದು ವೈಯುಕ್ತಿಕ ಹಿತಾಸಕ್ತಿಗಳೂ ಕೂಡಾ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಜಾಗೃತರಾಗಬೇಕಿದೆ. ತಮ್ಮ ಸ್ತಾನದ
ಘನತೆ ಗೌರವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
4 comments:
ತುಂಬಾ ಒಳ್ಳೆಯ ಲೇಖನ ಜಯಕುಮಾರ್
-ಹರೀಶ್, ಉಪಾಧ್ಯಕ್ಷರು ಜಿಲ್ಲಾ ಕಸಾಪ, ಹಾಸನ ಜಿಲ್ಲೆ
@ Jayakumar,
When I came across his writings, I gave up respecting Mr. Radhakrishnan long back. Through his philosophical arguments, he supports vaidika values like child marriage, caste system, untouchability. He was glorified systematically. He was against modern science.
K S Ravikumar, Hasssan
ಅರಕಲಗೂಡು ಜಯಕುಮಾರ್,
ಲೇಖನ ಸಮಯೋಚಿತವಾಗಿದೆ, ವಿಚಾರದ ಹರವು ಚೆನ್ನಾಗಿದೆ ನನಗೆ ತಿಳಿಯದ ಎಷ್ಟೋ ಸಂಗತಿಗಳನ್ನು ಲೇಖನದಲ್ಲಿ ತಿಳಿದೆ. ಉತ್ತಮ ಲೇಖನ ಧನ್ಯವಾದಗಳು.
*ಕೆ ಟಿ ಜಯಶ್ರೀ, ಹಾಸನ
ಲೇಖನದಲ್ಲಿ ರಾಧಾಕೃಷ್ಣನ್ ರ ಜನ್ಮ ದಿನಾಂಕವನ್ನು 1988 ಸೆ.5 ಎಂದು ಹೇಳಲಾಗಿದೆ ಆದರೆ ಅದು 1888, ಸೆ.5 ಎಂದಾಗಬೇಕಿತ್ತಲ್ಲವೇ?
ಕಾವ್ಯ, ಹಾಸನ
Post a Comment