ಅನಾಮತ್ತು 40ವರ್ಷಗಳ ಕಾಲ ಬಿಜೆಪಿಯಲ್ಲಿ ತಳಗಿ-ಬೆಳಗಿ ಅಧಿಕಾರಕ್ಕೆ ಬಂದಮೇಲೆ ಅಧಿಕಾರವನ್ನೂ ಅನುಭವಿಸಿ ಜೈಲಿಗೆ ಹೋಗುವ ದಿಸೆಯಲ್ಲಿ ಅಧಿಕಾರ ಕಳೆದುಕೊಂಡು ತಳಮಳಿಸುತ್ತಿದ್ದ ಬಿ ಎಸ್ ಯಡಿಯೂರಪ್ಪ ತಮ್ಮ ಆಟ ಬಿಜೆಪಿ ಯಲ್ಲಿ ಇನ್ನೂ ನಡೆಯದು ಎಂದು ಗೊತ್ತಾದ ದಿನ ರಾಜೀನಾಮೆ ಬಿಸುಟು ಕರ್ನಾಟಕ ಭಾರತೀಯ ಜನತಾ ಪಕ್ಷ (ಕೆಜೆಪಿ) ಕಟ್ಟಿದ್ದಾರೆ. ಭಾನುವಾರ ಪಕ್ಷದ ಮೊದಲ ಸಮಾವೇಶವೂ ನಡೆದಿದೆ. ಒಬ್ಬ ಹಿರಿಯ ಮುತ್ಸದ್ದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎತ್ತರಕ್ಕೆ ಬೆಳೆದು ರಾಜ್ಯದಲ್ಲಿ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿ ವರ್ಚಸ್ಸು ಇಟ್ಟುಕೊಂಡಿದ್ದ ಬಿಎಸ್ ವೈ ಈಗ ತಮ್ಮ ಪಥ ಬದಲಿಸಿದ್ದಾರೆ. ಬಿಜೆಪಿಗೆ ಪರ್ಯಾಯ ಪಕ್ಷವನ್ನು ರಾಜ್ಯದ ಮಟ್ಟಿಗೆ ಹುಟ್ಟುಹಾಕಿದ್ದಾರೆ. ಇದು ನಿಜಕ್ಕೂ ಪರ್ಯಾಯವೇ ? ಅವರೇನು ಕರ್ನಾಟಕದ ಕರುಣಾನಿಧಿಯೆ? ಸ್ವಾತಂತ್ರ್ಯ ನಂತರ ಇಂತಹ ಎಷ್ಟೋ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ ಆದರೆ ಅಸ್ಥಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಕೆಜೆಪಿ ಗತಿ ಏನಾಗಬಹುದು? ರಾಷ್ಟ್ರದಲ್ಲಿ ವಿವಿಧ ಆಯಾಮಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ ಅವುಗಳಲ್ಲಿ ಉಳಿದವೆಷ್ಟು? ಕಳೆದು ಹೋದದ್ದೆಷ್ಟು? ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿದೆಯೇ?ಹಾಗಾದರೆ ಅದು ಯಾವ ಮಾನದಂಡದಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜವೇ ಆಗಿದೆ.
ಭಾರತ ದೇಶ ಹೇಳಿ ಕೇಳಿ ಸಂಕೀರ್ಣವಾದ ಜಾತೀಯ ವ್ಯವಸ್ಥೆಯನ್ನೊಳಗೊಂಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಂದು ಜಾತಿಗೂ ತನ್ನದೇ ಆದ ಇತಿಹಾಸವಿದೆ, ಆ ಇತಿಹಾಸಕ್ಕೊಬ್ಬ ವಾರಸುದಾರ, ಅದೇ ನೆಲೆಗಟ್ಟಿನಲ್ಲಿ ದೇವರುಗಳು, ಸ್ವಾಮೀಜಿಗಳು ಇರುವಂತೆಯೇ ರಾಜಕೀಯ ಪುಡಾರಿಗಳು ಇದ್ದಾರೆ. ಅನುಕೂಲಕ್ಕೆ ತಕ್ಕಂತೆ ಬೇಯಿಸಿಕೊಳ್ಳಲು ಜನರ ಭಾವನೆಗಳು ಮಾರಾಟಕ್ಕಿವೆ! ಅಂದಾನುಕರಣೆ, ಮೌಢ್ಯ ಇವುಗಳನ್ನೆ ಬಂಡವಾಳ ಮಾಡಿಕೊಳ್ಳುವ ದುಷ್ಟ ಹಿತಾಸಕ್ತಿಗಳು ಸಮಾಜದ ವಿವಿಧ ಸ್ಥರದಲ್ಲಿ ಮನೆ ಮಾಡಿರುವುದರಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಜನರನ್ನು ಬಳಸಿಕೊಂಡು ಬಿಡುತ್ತಾರೆ. ಖಾವಿ-ಖಾದಿ ದೇಶವನ್ನು ಒಡೆದು ಆಳುವ ನಿಟ್ಟಿನಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಪ್ರಧಾನ ಸ್ಥಾನಕ್ಕೆ ಬಂದು ಕುಳಿತಿವೆ.ಜಗತ್ತಿನ ಸುಮಾರು 136 ರಾಷ್ಟ್ರಗಳಿಗೆ ಮಾದರಿಯಾದ ಶ್ರೇಷ್ಠ ಸಂವಿಧಾನವನ್ನು ಭಾರತ ದೇಶ ಹೊಂದಿದ್ದರೂ ಸಹಾ ಖಾವಿ ಮತ್ತು ಖಾದಿಗಳ ಅಂದಾ ದರ್ಬಾರು ಮಾತ್ರ ನಿರಂತರವಾಗಿ ಸಾಗಿದೆ. ದೇಶದ ಒಟ್ಟು ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯವನ್ನು ತಂದೊಡ್ಡಬಲ್ಲ ಜಾತೀಯ ಸಮಾಜದ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಿದೆ. ಇದಕ್ಕೆ ಆಗಿಂದ್ದಾಗ್ಯೆ ಬುನಾದಿ ಹಾಕುತ್ತ ತಮ್ಮ ಅಸ್ತಿತ್ವ ಜೀವಂತವಾಗಿರುವಂತೆ ಕಾದುಕೊಂಡವರು ರಾಜಕಾರಣಿಗಳು. ಧಾರ್ಮಿಕ ಬಾವನೆಗಳು, ಜಾತೀಯ ವ್ಯವಸ್ಥೆ, ಸ್ಥಳೀಯ ಸಮಸ್ಯೆಗಳು ಹೀಗೆ ಅನೇಕ ಕಾರಣಗಳು ರಾಜಕೀಯ ಪಕ್ಷಗಳ ಹುಟ್ಟಿಗೆ ಕಾರಣವಾಗುತ್ತವೆ. ಆದರೆ ವೈಯುಕ್ತಿಕ ಲಾಭಗಳಿಗಾಗಿ ಕಾಟಾಚಾರಕ್ಕೆ ಯಾವುದಾದರೊಂದ ಸಮಸ್ಯೆಯನ್ನು ಮುಂದು ಮಾಡಿಕೊಂಡು ಬೆಳೆದು ಬಿಡುವ ಹುನ್ನಾರವು ಇರುತ್ತದೆ. ಈ ದಿಸೆಯಲ್ಲಿ ಒಂದು ಸಣ್ಣ ಇಣುಕು ನೋಟವನ್ನು ಹಾಕಬಹುದು.
ಸ್ವಾತಂತ್ರ್ಯ ನಂತರ ಮೊದಲು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತನ್ನದೇ ಆದ ಧ್ಯೇಯ ಧೋರಣೆಗಳನ್ನಿಟ್ಟುಕೊಂಡು ಅಧಿಕಾರ ನಡೆಸಿತು. ಇದಕ್ಕೆ ಪರ್ಯಾಯವಾಗಿ ಅನೇಕ ಪಕ್ಷಗಳು ಹುಟ್ಟಿಕೊಂಡವು. ಜನತಾ ಪಕ್ಷ ಮತ್ತು ನ್ಯಾಷನಲ್ ಫ್ರಂಟ್ ಆ ಸಾಲಿನಲ್ಲಿ ಬಂದ ಪ್ರಮುಖ ರಾಷ್ಟ್ರೀಯ ಪಕ್ಷಗಳು. ಇದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳು ಸಹಾ ತಮ್ಮ ಛಾಪನ್ನು ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿವೆ. ಈ ಪೈಕಿ ಮೊದಲ ಸಾಲಿನಲ್ಲಿ ಕಾಣ ಬರುವುದು ತಮಿಳು ನಾಡು ರಾಜ್ಯದ ಡಿಎಂಕೆ ಪಕ್ಷ. ತಮಿಳುನಾಡಿನ ಇ ವಿ ರಾಮಸ್ವಾಮಿ ನಾಯ್ಕರ್ ರಿಂದ 1925ರಲ್ಲಿ ಪುರೋಹಿತಷಾಹಿ ವ್ಯವಸ್ಥೆಯ ವಿರುದ್ದ ನಡೆಸಿದ ಆಂಧೋಲನಕ್ಕೆ ಪ್ರಾದೇಶಿಕ ಪಕ್ಷದ ರೂಪು ಸಿಕ್ಕಿತ್ತು.ಮುಂದೆ ರೂಪಾಂತರಗೊಂಡು ಡಿಎಂಕೆ ಎಂದು ನಾಮಕರಣ ಗೊಂಡ ಪಕ್ಷ ಹಿಂದಿ ಭಾಷೆಯ ಹೇರಿಕೆ ವಿರುದ್ದ ನಡೆಸಿದ ಚಳುವಳಿಯಲ್ಲಿ ಯಶಸ್ಸು ಕಂಡಿತಲ್ಲದೇ 1967ರಲ್ಲಿ ತಮಿಳು ನಾಡಿನ ರಾಜಕಾರಣದಲ್ಲಿ ತನ್ನ ಅಸ್ಥಿಭಾರವನ್ನು ಸ್ಥಾಪಿಸಿತು. 1968ರಲ್ಲಿ ಕರುಣಾನಿಧಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದು ಈಗ ಇತಿಹಾಸ!
ಪಕ್ಕದ ಆಂಧ್ರ ಪ್ರದೇಶದಲ್ಲಿ ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡ ಎನ್ ಟಿ ರಾಮರಾವ್ ತೆಲುಗು ಸಿನಿಮಾಗಳಲ್ಲಿ ರಾಮ-ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ನಟಿಸುತ್ತಾ ಜನರ ಮನಸ್ಸನ್ನು ಆವರಿಸಿಕೊಂಡು ರಾಜಕೀಯ ಪ್ರವೇಶಿಸಿ ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದ್ದಲ್ಲದೇ 1983ರಲ್ಲಿ ಮುಖ್ಯ ಮಂತ್ರಿಯಾಗಿ ಆಳಿದ್ದು ಸಾಧನೆಯೇ ಸರಿ.ಪಂಜಾಬ್ ನಲ್ಲಿ ಗುರುಧ್ವಾರ ದ ನಿಯಂತ್ರಣದಲ್ಲಿ 1920ರಲ್ಲಿಯೇ ಸ್ಥಾಪನೆಗೊಂಡ ಅಕಾಲಿದಳ ಸಾಂಪ್ರದಾಯಿಕ ಸಿಖ್ ಪರಂಪರೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕತೆಗಾಗಿ ಹೋರಾಟ ನಡೆಸಿತಲ್ಲದೇ ಮುಂದೆ 1985ರಲ್ಲಿ ಅಧಿಕಾರಕ್ಕೂ ಬರುವಲ್ಲಿ ಯಶಸ್ವಿಯಾಗಿತ್ತು. ಜುಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ಥಿತ್ವದಲ್ಲಿದ್ದ ಆಲ್ ಇಂಡಿಯಾ ಮುಸ್ಲಿಂ ಲೀಗ್ ವಿರುದ್ಧ ಅಲೆಯಲ್ಲಿ ಜನ್ಮ ತಳೆದ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಶೇಕ್ ಮೊಹಮ್ಮದ್ ಅಬ್ದುಲ್ಲಾ ನೇತೃತ್ವದಲ್ಲಿ ಮಂಚೂಣಿಗೆ ಬಂತು. ಅಂದಿನ ಪ್ರಧಾನಿ ನೆಹರೂ ಜೊತೆ ನಿಕಟವಾಗಿದ್ದ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ 1980ರ ವೇಳೆಗೆ ಅಧಿಕಾರ ಹಿಡಿಯುವಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಯಶ ಕಂಡಿತ್ತು. ಈಗಲೂ ಅದೇ ಆಡಳಿತ ನಡೆಸುತ್ತಿದೆ. 1980ರಲ್ಲಿ ಅಸ್ಸಾಂ ರಾಜ್ಯದಲ್ಲಿ ಜನ್ಮತಳೆದ ಮತ್ತೊಂದು ಪ್ರಾದೇಶಿಕ ಪಕ್ಷ ಅಸ್ಸಾಂ ಗಣ ಪರಿಷತ್. ಅಸ್ಸಾಂ ಗೆ ಮುಸ್ಲಿಂ ಬೆಂಗಾಲಿಗಳು ಮತ್ತು ಬಾಂಗ್ಲಾದೇಶಿಯರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬಂದು ಅಸ್ಸಾಂ ಮಿಗಳೇ ಅಲ್ಪಸಂಖ್ಯಾತರಾಗುವ ಸಂಧರ್ಭ ಬಂದಾಗ ಜನ್ಮ ತಾಳಿದ್ದೇ ಅಸ್ಸಾಂ ಗಣಪರಿಷತ್ ಅಲ್ಲಿ ನೆಲೆ ಕಂಡಿದೆಯಷ್ಟೇ ಅಲ್ಲ ಇವತ್ತಿಗೂ ಅದೇ ಸಮಸ್ಯೆಯಲ್ಲೇ ಪರಿತಪಿಸುತ್ತಿದೆ.
ಇದೇ ರೀತಿ ಜಾತಿಯಾಧಾರದಲ್ಲಿ ರೂಪುಗೊಂಡ ಪಕ್ಷಗಳನ್ನು ಸಹಾ ದೇಶದಲ್ಲಿ ಕಾಣಬಹುದು. ದಲಿತರು-ಹಿಂದುಳಿದವರು-ಶೋಷಿತರನ್ನು ಸಂಘಟಿಸಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದ ಜನತಾದಳ, ಉತ್ತರ ಪ್ರದೇಶದಲ್ಲಿ ನೆಲೆ ಕಂಡುಕೊಂಡ ಮುಲಯಾಲಂ ಸಿಂಗ್ ಯಾದವ್ ರ ಸಮಾಜವಾದಿ ಪಕ್ಷ, ಕಾನ್ಷಿರಾಂ ಸ್ಥಾಪಿಸಿದ ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್ ಪಿ) ತನ್ನ ಸಿದ್ದಾಂತಗಳಲ್ಲಿ ಕೊಂಚ ರಾಜೀ ಮಾಡಿಕೊಂಡು ಬೆಳೆದ ಪರಿಣಾಮ ಇವತ್ತು ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಅನುಭವಿಸಿದ ಪ್ರಾದೇಶಿಕ ಪಕ್ಷಗಳಾಗಿವೆ.ಕರ್ನಾಟಕ ರಾಜ್ಯದಲ್ಲೂ ಅನೇಕ ಪ್ರಾದೇಶಿಕ ಪಕ್ಷಗಳನ್ನು ಅನೇಕ ಘಟಾನುಘಟಿಗಳು ಸ್ಥಾಪಿಸಿದ್ದಾರೆ ಆದರೆ ಅವುಗಳ ಪೈಕಿ ಅಧಿಕಾರ ಹಿಡಿದದ್ದು ಜಾತ್ಯಾತೀತ ಜನತಾ ದಳ ಒಂದೆ.
ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೊರತು ಪಡಿಸಿ 7ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಆಗಿ ಹೋಗಿವೆ. ಇವುಗಳ ಪೈಕಿ ಕೊಡಗು ರಾಜ್ಯದ ಪ್ರತ್ಯೇಕತೆಗಾಗಿ ಕೂರ್ಗ್ ನ್ಯಾಷನಲ್ ಕೌನ್ಸಿಲ್ ಅನ್ನು ಎನ್ ಯು ನಾಚಪ್ಪ ಸ್ಥಾಪಿಸಿದ್ದರೆ, ವಾಟಾಳ್ ನಾಗರಾಜ್ , ಕನ್ನಡ ಚಳುವಳಿ ವಾಟಾಳ್ ಪಕ್ಷ, 1994ರಲ್ಲಿ ಎಸ್ ಬಂಗಾರಪ್ಪ ಸ್ಥಾಪಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷ, 1978ರಲ್ಲಿ ಕಾಂಗ್ರೆಸ್ ಒಡಕಿನಿಂದ ಹುಟ್ಟಿಕೊಂಡ ಕರ್ನಾಟಕ ಕ್ರಾಂತಿ ರಂಗ ಪಕ್ಷದ ನೇತೃತ್ವ ವಹಿಸಿದ್ದು ಮಾಜಿ ಮುಖ್ಯ ಮಂತ್ರಿ ಡಿ ದೇವರಾಜ್ ಅರಸ್, 20ವರ್ಷಗಳ ಇವರ ರಾಜಕೀಯ ಬದುಕಿನಲ್ಲಿ ಕಡೆಗೆ ಉಳಿಸಿದ್ದು ಅರಸು ಕಾಂಗ್ರೆಸ್! ನಿಜಲಿಂಗಪ್ಪನವರ ಸಂಸ್ಥಾ ಕಾಂಗ್ರೆಸ್, ವಿಜಯಸಂಕೇಶ್ವರ್ ಸ್ಥಾಪಿಸಿದ ಕರ್ನಾಟಕ ವಿಕಾಸ ಪಕ್ಷ, ಅರಸು ಸಂಯುಕ್ತ ಪಕ್ಷ,ಗುಂಡೂರಾವ್ ನೇತೃತ್ವದ ಇಂದಿರಾ ಕಾಂಗ್ರೆಸ್ ಜನತಾ ಪಕ್ಷ ಚೂರಾಗಿ ರಾಮಕೃಷ್ಣ ಹೆಗಡೆ ನೇತೃತ್ವದ ಒಂದು ದಳ, ದೇವೆಗೌಡರ ಇನ್ನೊಂದು ದಳ, ಸಂಯುಕ್ತ ದಳ ಹೀಗೆ ಯಾವುವೂ ನೆಲೆ ಕಂಡು ಕೊಳ್ಳಲು ವಿಫಲವಾದವು. ವಿಶ್ವವೇ ನಿಬ್ಬೆರಗಾಗುವಂತಹ ವಿಧಾನಸೌಧವನ್ನು ಅಮೃತ ಶಿಲೆಯಿಂದ ನಿರ್ಮಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಕಟ್ಟಿದ ಸ್ವರಾಜ್ಯ ಪಕ್ಷ ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿದೆ.
ಹೀಗೆ ರಾಜ್ಯದ ಇತಿಹಾಸದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಇಲ್ಲದ ಸಂಧರ್ಭದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ರೆಡ್ಡಿ ಪಡೆಯ ಶ್ರೀರಾಮುಲು ನೇತೃತ್ವದಲ್ಲಿ ಬಿಎಸ್ ಆರ್ ಪಕ್ಷ ಮತ್ತು ಇದೀಗ ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದ್ದಾರೆ. ಇತರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಉಳಿಸಿಕೊಳ್ಳಲು ತನ್ನದೇ ಆದಂತಹ ಗಟ್ಟಿತನದ ಅಂಶಗಳು ಕಾರಣವಾಗಿದ್ದರೆ, ರಾಜ್ಯದಲ್ಲಿ ಬಹುತೇಕ ವಾಗಿ ಅಧಿಕಾರ ವಂಚಿತರು ಅಧಿಕಾರ ದಾಹದಿಂದ ಸ್ಥಾಪಿಸಿದ ಪ್ರಾದೇಶಿಕ ಪಕ್ಷಗಳಾಗಿದ್ದವು ಇವಕ್ಕೆ ನಿರ್ದಿಷ್ಟ ನೈತಿಕ ನೆಲೆಗಟ್ಟು ಇಲ್ಲವಾದ್ದರಿಂದ ಹಾಗೆಯೇ ಮರೆಗೆ ಸರಿದವು. ರೆಡ್ಡಿ ಪಾಳಯದ ಬಿಎಸ್ ಆರ್ ಪಕ್ಷ ಕೂಡ ಕಾಂಗ್ರೆಸ್ ಸಖ್ಯ ಹೊಂದಿ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಪರಿತಪಿಸುತ್ತಿದೆ. ಒಂದೊಮ್ಮೆ ಬಿಜೆಪಿ ಪಾಳಯದಲ್ಲಿ ಹಣದ ಹೊಳೆಯನ್ನೇ ಹರಿಸಿ ಅತ್ಯಂತ ಕೆಟ್ಟ ರಾಜಕೀಯ ಸನ್ನಿವೇಶಕ್ಕೆ ಕಾರಣವಾಗಿದ್ದ ಬಿಎಸ್ ಆರ್ ಪಕ್ಷ ಈಗ ಪಶ್ಚಾತ್ತಾಪದ ಹಾದಿಯಲ್ಲಿದ್ದು ಇನ್ನಷ್ಟೇ ತನ್ನ ಹಣೆ ಬರಹವನ್ನು ಪರೀಕ್ಷೆಗೆ ಒಡ್ಡಬೇಕಿದೆ. ದೇಶದಲ್ಲಿಯೇ ಅತ್ಯಂತ ಕೆಟ್ಟ ಆಡಳಿತ ಮತ್ತು ಭ್ರಷ್ಟಾಚಾರದಿಂದ ನಾಚಿಕೆ ಪಡುವಂತ ಸ್ಥಿತಿಯನ್ನು ರಾಜ್ಯಕ್ಕೆ ತಂದೊಡ್ಡಿದ್ದ ಬಿ ಎಸ್ ಯಡಿಯೂರಪ್ಪ ಇವತ್ತು ಪ್ರವರ್ಧಮಾನಕ್ಕೆ ಬರಲು ಮತ್ತು ಮಹತ್ವದ ಪ್ರಾದೇಶಿಕ ಪಕ್ಷ ಜನಿಸಲು ಕಾರಣ ಮತ್ತೊಂದು ಪ್ರಾದೇಶಿಕ ಪಕ್ಷದ ಅಪ್ಪ-ಮಕ್ಕಳ ಸ್ವಾರ್ಥದ ರಾಜಕೀಯ! ಕರ್ನಾಟಕ ಜನತಾ ಪಕ್ಷದ ಉದ್ದೇಶವೂ ಸಹಾ ರಾಜ್ಯದಲ್ಲಿ ಅಧಿಕಾರ ಹಿಡಿಯುವುದೇ ಆಗಿದೆ, ಮತ್ತು ಪ್ರಮುಖವಾಗಿ ಜಾತೀಯ ರಾಜಕಾರಣದ ದುರ್ಗಂಧ ಎಲ್ಲೆಡೆಯೂ ಆಘ್ರಾಣಿಸಲು ಸಿಗುತ್ತಿದೆ, ಇಲ್ಲಿಯೂ ಅಪ್ಪ-ಮಕ್ಕಳ ದರ್ಬಾರು, ಮತ್ತು ಬಿಜೆಪಿಯಲ್ಲಿ ಕಳಂಕಿತರಾಗಿದ್ದ ಅನೇಕ ಜನಪ್ರತಿನಿಧಿಗಳನ್ನು ಒಳಗೊಂಡಿರುವುದು ಪಕ್ಷದ ಉಳಿವನ್ನು ಚುನಾವಣೆಯಲ್ಲಿ ಅಗ್ನಿಪರೀಕ್ಷೆಗೆ ಒಡ್ಡಲಿದೆ. ಇವೆರೆಡೂ ಪಕ್ಷಗಳಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಮುಖ್ಯವಾಗಿರುವುದರಿಂದ ಮತ್ತು ಸೈದ್ದಾಂತಿಕ ನೆಲಗಟ್ಟು ಇಲ್ಲದಿರುವುದರಿಂದ ಭವಿಷ್ಯದಲ್ಲಿ ಇವು ನಶಿಸುವುದು ನಿಶ್ಚಿತ ಎಂದೆನಿಸುತ್ತಿದೆ, ನಿಮಗೆ ಏನನಿಸೀತೋ?

No comments:
Post a Comment