ಶಾಂತಿಯುತ ಚುನಾವಣೆ ಮತ್ತು ಮತದಾನ ಖುಷಿ ಕೊಟ್ಟಂತೆಯೇ ಚುನಾವಣಾ ಪಲಿತಾಂಶವೂ ಸಹಾ ಖುಷಿ ನೀಡಿದೆ. ಹೆಮ್ಮೆಯಿಂದ ಬೀಗುತ್ತಿದ್ದ ಹಾಗೂ ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕಾಂಗ್ರೆಸ್,ಬಿಜೆಪಿ,ಕಮ್ಯುನಿಸ್ಟ್ ಪಕ್ಷಗಳು ಹೊರತು ಪಡಿಸಿದಂತೆ ಇತರೆ ಪಕ್ಷಗಳಿಗೆ ಸರಿಯಾದ ಪಾಠವಾಗಿದೆ. ಬಿಜೆಪಿ ನಾಯಕರು ರಾಷ್ಟ್ರೀಯ ವಿಚಾರಗಳಿಗೆ ಸಂಬಂದಿಸಿದಂತೆ ನಿರ್ದಿಷ್ಠ ನಿಲುವುಗಳನ್ನು ಇರಿಸಿ ಕೊಳ್ಳದೇ ಹೋಗಿದ್ದು ಇದಕ್ಕೆ ಕಾರಣವಿರ ಬಹುದೇನೊ. ಆ ಪೈಕಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆಂಬುದು ಬಿಜೆಪಿಯ ಸವಕಲು ಹೇಳಿಕೆ, ಇದಕ್ಕೆ ಸಂಬಂದಿಸಿದಂತೆ ಈ ಬಾರಿಯ ಚುನಾವಣೆ ಪ್ರಚಾರದ ಸಂಧರ್ಭದಲ್ಲೂ ಅಡ್ವಾಣಿಯವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಬಿಜೆಪಿಯೇತರರ ಸಲಹೆ ಪಡೆದು ಮುಂದುವರಿಯುವುದಾಗಿ ಹೇಳಿದರು. ಬಿಜೆಪಿ ಗೆ ಹೇಳಿಕೊಳ್ಳುವಂತಹ, ಶಕ್ತಿ ತುಂಬ ಬಲ್ಲಂತಹ ಇಶ್ಯೂಗಳು ಸಿಗದಿರುವುದು ಸಹಾ ಬಿಜೆಪಿ ಹಿನ್ನೆಡೆಗೆ ಕಾರಣ ಇರಬಹುದು. ಸದ್ಯದ ಪರಿಸ್ಥಿತಿಯಲ್ಲಿ ಕಿಚಡಿ ಪಕ್ಷಗಳ ಕೂಟದ ಸರ್ಕಾರ ರಚನೆಯಾದರೂ ಮುಂದಿನ ದಿನಗಳಲ್ಲಿ ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ನೀಡುವ ಬಗ್ಗೆ ಈ ಚುನಾವಣೆ ಮುನ್ಸೂಚನೆ ನೀಡಿದೆ. ಜಯಲಲಿತ, ಮಾಯಾವತಿ, ಪಾಸ್ವಾನ್, ಲಾಲೂ, ಕಮ್ಯೂನಿಸ್ಟರುಗಳಿಗೆ ಸರಿಯಾದ ಪಾಠವನ್ನು ಮತದಾರ ಕಲಿಸಿದ್ದಾನೆ, ಅಲ್ಪ ಸ್ವಲ್ಪ ಸ್ಥಾನ ಗಳಿಸಿ ಸರ್ಕಾರ ರಚಿಸುವ ಪಕ್ಷಗಳಿಗೆ ಬೆಂಬಲ ನೀಡಿ ತಮ್ಮ ತೀಟೆ ತೀರದಿದ್ದರೆ ಬೆಂಬಲ ವಾಪಾಸ್ ಪಡೆಯುವ ಹಾಗು ಅಲ್ಪ ಸ್ವಲ್ಪ ಬಲವಿಟ್ಟುಕೊಂಡೆ ಕಡಿಮೆ ಅವಧಿಗಾದರೂ ಅಧಿಕಾರ ಪಡೆಯುವ 'ತಿರುಕ' ಕನಸುಗಳಿಗೆ ತಿಲಾಂಜಲಿ ಬಿದ್ದಿದೆ, ಇದು ಸಮಾಧಾನಕರ ಅಂಶ. ಏಕೆಂದರೆ ಬಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಕನಿಷ್ಠ 5ವರ್ಷ ಅಧಿಕಾರ ನಡೆಸುವ ಯಾವುದೇ ಪಕ್ಷದ ಸರ್ಕಾರ ಅಂತರ ರಾಷ್ಟ್ರೀಯ ವಿಚಾರಗಳು ಬಂದಾಗ ವಿವೆಚನೆಯಿಂದ ನಿರ್ದಾರ ಕೈಗೊಳ್ಳಬೇಕಾಗುತ್ತದೆ, ದೇಶದ ಆಗುಹೋಗುಗಳ ಮೇಲೆ ನಿಖರವಾದ ನಿಲುವು ಹೊಂದಿರ ಬೇಕಾಗುತ್ತದೆ. ರಾಷ್ಟ್ರೀಯ ಪಕ್ಷಗಳ ನೇತಾರರಿಗೆ ಈ ಸಾಮರ್ತ್ಯವಿರುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳಿಗೆ ಆಧಿಕಾರದ ಸಡಗರ ಅನುಭವದ ಕೊರತೆ ಇರುತ್ತದೆ ಇದರಿಂದಾಗಿ ಹಿನ್ನೆಡೆ ಅನುಭವಿಸಬೇಕಾಗುತ್ತದೆ, ಕೆಲವೊಮ್ಮೆ ಆಂತರಿಕ ಭದ್ರತೆಯಂತಹ ವಿಚಾರಗಳಿಗೂ ತೊಂದರೆ ಯಾಗಬಹುದು.ಇರಲಿ ಈಗ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕಿಂತ ಗಾಂದಿ ಮನೆತನ ಅದಿಕಾರಕ್ಕೆ ಬರಬಹುದೆಂಬ ದೂರದ ನಿರೀಕ್ಷೆಯೂ ಯುಪಿಎ ಬೆಂಬಲಕ್ಕೆ ಕಾರಣವಿರಬಹುದೇನೊ? ದಕ್ಷಿಣದ ರಾಜ್ಯಗಳಲ್ಲಿ ಅಂತಹ ಗಾಂದಿ ಮನೆತನದ ಒಲವು ಕಾಣ ಬಾರದಿದ್ದರು ಉತ್ತರದ ರಾಜ್ಯಗಳಲ್ಲಿ ಇನ್ನೂ ಗಾಂಧಿ ಮನೆತನದ ಪ್ರಭಾವಳಿ ಇರುವಂತಿದೆ.ಇದು ಯುಪಿಎ ಯಶಸ್ಸಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿರುವ 10-12 ಸ್ಥಾನಗಳಿಗೆ ಪಕ್ಷೇತರರು ಹಾಗೂ ಜೆಡಿಎಸ್ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷಗಳ ಬೆಂಬಲ ದೊಂದಿಗೆ ಸರ್ಕಾರ ನಡೆಯುವುದು ಖಚಿತ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಜೆಡಿಎಸ್ ನ ಕುಮಾರಸ್ವಾಮಿ ಕೇಂದ್ರ ಸಚಿವ ಸ್ಥಾನ ಅಲಂಕರಿಸಬಹುದು. ಇನ್ನು ಕಾಂಗ್ರೆಸ್ ವಲಯದಲ್ಲಿ ಈಗಾಗಲೇ ಅಂದರೆ ಚುನಾವಣೆ ಪೂರ್ವದಲ್ಲಿಯೇ ರಾಹುಲ್ ಗಾಂದಿಯನ್ನು ಪ್ರದಾನಿ ಮಾಡುವ ಇಂಗಿತ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಧ್ಯ ಯುಪಿಎ 6ತಿಂಗಳು ಇಲ್ಲವೇ 1ವರ್ಷ ಅಧಿಕಾರ ನಡೆಸಿ ಮತ್ತೆ ಚುನಾವಣೆಗೆ ಹೋಗುವ ವಿಚಾರವನ್ನು ತಳ್ಳಿ ಹಾಕುವಂತಿಲ್ಲ. ಅಷ್ಟೇ ಅಲ್ಲ ಕರ್ನಾಟಕದ ರಾಜಕೀಯದಲ್ಲು ಬದಲಾವಣೆ ನಿರೀಕ್ಷಿಸಬಹುದು. ಮಾಜಿ ಪ್ರಧಾನಿ ಹಾಗೂ ಸಂಸತ್ ಸದಸ್ಯರಾಗಿರುವ ದೇವೇಗೌಡ ಕೇಂದ್ರದಲ್ಲಿ ಸೋನಿಯಾ ಗಾಂಧಿಗೆ ಹತ್ತಿರವಾದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿ ಅಧಿಕಾರ ಬದಲಾವಣೆಗೆ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ದೆಹಲಿ ರಾಜಕೀಯ ಬೆಳವಣಿಗೆಗಳು ಇಂತಹ ನಿರೀಕ್ಷೆಗೆ ಪುಷ್ಟಿ ನೀಡಬಹುದು. ಒಂದು ವೇಳೆ ಸರ್ಕಾರದ ಬದಲಾವಣೆಯಾಗದಿದ್ದರೂ ಅಧಿಕಾರದ ಚುಕ್ಕಾಣಿ ಬದಲಾವಣೆ ಖಚಿತವೇನೋ ಎನಿಸುತ್ತಿದೆ.
Subscribe to:
Post Comments (Atom)
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
ಮೊ ನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾ...
-
Interview: Arkalgud Jayakumar (ಬ್ಲಾಗ್ ನಲ್ಲಿ ಏಕತಾನತೆಯ ಬರಹಗಳಿಂದ ಸ್ವಲ್ಪಮಟ್ಟಿಗಿನ ರಿಲ್ಯಾಕ್ಸ್ ಗಾಗಿ ಇದನ್ನು ಇಲ್ಲಿ ನೀಡಲಾಗಿದೆ) Small screen is now f...
No comments:
Post a Comment