//'ಪ್ರೀತಿ'ಯ ಬನದಲ್ಲಿ ಅರಳಿದ
ಬೊಗಸೆ ಕಂಗಳ ಮುದ್ದು ಕಂದ
ಕನಸು, ಬಯಕೆಗಳ ಗಮ್ಯ ತಲುಪುವ
ಮೊದಲೇ ಅನಿರೀಕ್ಷಿತವಾಗಿ
ಅಗಲಿಕೆ ಸರಿಯೇ?
//ಬೆಟ್ಟದಷ್ಟು ಆಸೆ
ದಕ್ಕಿಸಿಕೊಳ್ಳುವ ತವಕ
ಕುತೂಹಲದ ತುಂಟನಗೆ
ಕನಸು ತಣಿಯುವ ಮುನ್ನ
ವಿಧಿ ಕಸಿದದ್ದು ಸರೀನಾ?
//ಅವತ್ತು ಅಮ್ಮನ ದುಗುಡ ಧಾವಂತ
ಕಣ್ಣೀರ ಕಥೆಯ ಅನಾವರಣ
ಅಸಹಾಯಕತೆ, ಅಭದ್ರತೆಯ ಬೀತಿ
ಮದ್ಯೆ ಆಶಾಕಿರಣ,ನಂಬಿದ ದೇವನ
ನೆಮ್ಮದಿಯಲ್ಲಿ ಹೋದದ್ದೆಲ್ಲಿಗೆ?
//ಸಂಕಟದ ಸಂತೆಯಲ್ಲಿ
ಬದುಕಿನ ಜಂಜಡದಲ್ಲಿ
ನಂಬಿದ ಸಖನ ಸೇವೆಯಲ್ಲಿ
ಉದಿಸಿದ ಅಭದ್ರತೆಯ ಭಾವ
ವಿಧಿಯಾಟಕ್ಕೆ ಶರಣಾಗಿದ್ದು ಸರಿಯೇ?
(ವರ್ಷದ ಮೊದಲ ರೇವತಿ ಮಳೆ-ಗಾಳಿಗೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದ ರಸ್ತೆ ದುರಂತದಲ್ಲಿ ಪ್ರೀತಿ ಮತ್ತು ಪ್ರೀತಿಯ ಅಮ್ಮ ವಿಧಿವಶರಾದರು ತನಿಮಿತ್ತ ಈ ಅಕ್ಷರ ಕಂಬ
2 comments:
Hats up Jai..
ದುಃಖದ ಸಮಾದಿಯ ಮೇಲೆ ಹತಾಷೆಯ ಹೂಗಳು...., ಸಮಾದಿಯ ಕೆಳಗೆ ಒಂದಷ್ಟು ನೆನಪುಗಳು...,
ಎಲ್ಲವೂ ಅಳುತ್ತಾವೆ ಗೆಳೆಯ.....,
ನಿಟ್ಟುಸಿರಿನ ನಡುವೆ ಇರುವ ನಾವುಗಳು.....,
ಮರೆತು ಮರೆತಂತೆ ಇರುವ ಕೆಲಸಗಳು....,
ಎಚ್ಚರಿಸುತ್ತಿವೆ ನಾಳೆಯಾ....,
Post a Comment