ಬೆಂಗಳೂರಿನಲ್ಲಿ ಜೂನೆ ೨೧ ೨೦೦೮ ರಂದು ನಡೆದ ಜೇ ಕನ್ನಡ ವಾಹಿನಿ ಮತ್ತು ಎಸ್ಸೆಲ್ ಸಮೂಹ ಸಂಸ್ಥೆಗಳು ಹಾಸನ ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕ ಾರ್ ಪಿ ವೆಂಕಟೇಶಮೂರ್ತಿ ಯವರಿಗೆ ಅವರ ಅನುಪಮ ಸೇವೆಗಾಗಿ ನೀಡಿದ ಮಾಧ್ಯಮ ಶ್ರೇಷ್ಠ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪತ್ರಿಕೆಯ ವರದಿಗಾರ ಸಿ ಜಯಕುಮಾರ್ ಪತ್ರಿಕೆಯ ಸಂಪಾದಕರೊಂದಿಗೆ ಸಂತಸ ಹಂಚಿಕೊಂಡ ಕ್ಷಣ.........
Sunday, June 29, 2008
ಆ ದಿನಗಳು.......
ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕಂಡು ಬರುತ್ತಿರುವ ಹಾಡುಗಳು ಯಾವುದೇ ಅರ್ಥ ಸಂಭಂದವಿಲ್ಲದ ಪದಗಳ ಮೂಲಕ ಸೃಷ್ಠಿಯಾಗುತ್ತಿವೆ. 80ರ ದಶಕದಲ್ಲಿ ಕನ್ನಡ ಹಾಡುಗಳಿಗೆ ಹೊಸತನ ತಂದುಕೊಟ್ಟಿದ್ದ ಹಂಸಲೇಖ ಕಳೆದು ಹೋಗಿದ್ದಾರೆ, ಹೊಸ ತುಡಿತದ ಹಾಡುಗಳಿಗೆ ಬರ ಬಂದಿದೆ. ಈ ನಡುವೆ ಜಯಂತ್ ಕಾಯ್ಕಿಣಿ ಯವರ ಪ್ರವೇಶದಿಂದ ಕನ್ನಡ ಹಾಡುಗಳಿಗೆ ಹೊಸ ಛಾರ್ಮ ಬಂದಿದೆ.
ಆ ದಿನಗಳು ಚಿತ್ರದ ಹಾಡುಗಳು ಹಳೆಯ ಹಾಡುಗಳ ನೆರಳಿನಲ್ಲಿ ಹೊಸ ಭಾಷ್ಯ ಬರೆದಂತಿದೆ... ....
ಆ ದಿನಗಳು ಚಿತ್ರದ ಹಾಡುಗಳು ಹಳೆಯ ಹಾಡುಗಳ ನೆರಳಿನಲ್ಲಿ ಹೊಸ ಭಾಷ್ಯ ಬರೆದಂತಿದೆ... ....
Thursday, June 26, 2008
Friday, June 20, 2008
ಜಾಗತೀಕರಣದ ಸುಳಿಯಲ್ಲಿ "ಮಾಧ್ಯಮಗಳ ಅನಿವಾರ್ಯತೆ ಮತ್ತು ಆದ್ಯತೆಗಳು"
ಸಮೂಹ ಸಂವಹನ ಮಾಧ್ಯಮಗಳು ಪ್ರಸಕ್ತ ಸಂಧರ್ಭಗಳಲ್ಲಿ ಸ್ಫರ್ಧಾತ್ಮಕವಾಗಿ ಕೆಲಸ ಮಾಡಬೇಕಾಗಿದೆ. ಈ ದಿಸೆಯಲ್ಲಿ ಮುದ್ರಣ, ದೃಶ್ಯ ಹಾಗೂ ಶೃವ್ಯ ಮಾಧ್ಯಮಗಳ ನಡುವೆ ಇತ್ತೀಚಿನ ದಿನಗಳಲ್ಲಿ ಏರ್ಪಡುತ್ತಿರುವ ಬಾಹ್ಯ ಮತ್ತು ಆಂತರಿಕ ಪೈಪೋಟಿ ಸಮೂಹ ಸಂವಹನ ಮಾಧ್ಯಮಗಳಿಗಿರಬೇಕಾದ ರಚನಾತ್ಮಕ ದ್ಯೇಯೋದ್ದೇಶಗಳಿಗೆ ತಿಲಾಂಜಲಿ ನೀಡಿದೆ. ಜಾಗತೀಕರಣದ ದಿಸೆಯಿಂದ ುಂಟಾಗಿರುವ ಪ್ರವೃತ್ತಿ ಮತ್ತು ಮೂಲ ಾಶಯಗಳಿಗೆ ವ್ಯತಿರಿಕ್ತವಾದ ಅನಿವಾರ್ಯ ನಿಲುವುಗಳಿಂದಾಗಿ ಮಾಧ್ಯಮಗಳ ಬದ್ಧತೆ ಮತ್ತು ಸ್ವಂತಿಕೆ ಕಳೆದು ಹೋಗುತ್ತಿದೆ. ಇದು ದೂರದ ಅಪಾಯವೂ ಹೌದು ಸಧ್ಯದ ಅನಿವಾರ್ಯತೆಯೂ ಹೌದು. ಈ ನಡುವೆ ಮಾಧ್ಯಮಗಳು ಪ್ರಚುರಪಡಿಸುವ ಸುದ್ದಿಯ ಗುಣಮಟ್ಟ, ವಿಚಾರವನ್ನು ಜನರಿಗೆ ತಲುಪಿಸುವ ವೈಖರಿ, ಭಾಷೆ, ಸೇವೆಗಾಗಿ ಪಡೆಯುವ ದರ ೆಲ್ಲವೂ ಮಾಧ್ಯಮಗಳ ಅಳಿವು ಮತ್ತು ಉಳಿವನ್ನೇ ಅವಲಂಬಿಸಿರುತ್ತದೆ. ಆದ್ದರಿಂದಲೇ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎಂಬ ನಾಣ್ಣುಡಿಯಂತೆ ಮಾದ್ಯಮಗಳು ಬದಲಾವಣೆ ಇಲ್ಲವೇ ಹೊಂದಾಣಿಕೆಯನ್ನು ಭಾಷೆ, ಮುದ್ರಣ, ವಿಷಯ ವಸ್ತುವಿನ ಗುಣಮಟ್ಟ ಮತ್ತು ಸೇವೆಗಾಗಿ ಪಡೆಯುವ ದರಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಯಾವುದೇ ಮಾದ್ಯಮದ ುಳಿವಿಗೆ ಈ ಮೇಲ್ಕಂಡ ಅಂಶಗಳಷ್ಟೇ ಜಾಹೀರಾತು ಸಹಾ ಪ್ರಧಾನ ಪಾತ್ರ ವಹಿಸುತ್ತದೆ. ಇಂದು ಜನರ ಾಸಕ್ತಿ ಮತ್ತು ಆದ್ಯತೆಗಳನ್ನು ಆಧರಿಸಿ ಕಾಲಮಾನಕ್ಕೆ ತಕ್ಕಂತೆ ಮಾಧ್ಯಮಗಳು ತಮ್ಮ ಆಧ್ಯತೆಗಳನ್ನು ಸಹಾ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.. ಒಂದು ಸಣ್ಣ ುದಾಹರಣೆಯನ್ನೇ ನೋಡುವುದಾದರೆ ಸರ್ಕಾರಿ ಒಡೆತನದಲ್ಲಿರುವ ದೂರದರ್ಶನ ೆಲ್ಲ ಜನರನ್ನು ತಲುಪುವಲ್ಲಿ ಅಗ್ರಸ್ಥಾನ ಪಡೆದಿದ್ದರೂ ಇತರೆ ಖಾಸಗಿ ವಾಹಿನಿಗಳಷ್ಟು ಜನಪ್ರಿಯತೆ ಗಳಿಸುವಲ್ಲಿ ಹಿಂದೆ ಬಿದ್ದಿದೆ. ಏಕೆಂದರೆ ಜನರ ನಿರೀಕ್ಷೆಗೆ ಅಭಿರುಚಿಗೆ ಹತ್ತಿರವಾಗಿ ಖಾಸಗಿ ವಾಹಿನಿಗಳು ಕಾರ್ಯಕ್ರಮ ರೂಪಿಸುತ್ತಿವೆ ಅದಕ್ಕೆ ಪೂರಕವಾಗಿ ಜಾಹಿರಾತುಗಳು ಹರಿದು ಬರುತ್ತಿವೆ ಹೀಗಾಗಿ ಒಂದು ನಿರ್ದಿಷ್ಠ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ದೂರದರ್ಶನ ಯಾರಿಗೆ ಬೇಕಾಗಿದೆ ಎನ್ನುವಂತಾಗಿದೆ, ಅದೇ ರೀತಿ ರಾಜ್ಯದ ಪ್ರಮುಖ ಪತ್ರಿಕೆಗಳೂ ಸುದ್ದಿಗಿಂತ ಜಾಹಿರಾತಿನ ಮೋಹಕ್ಕೆ ಬಿದ್ದು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ. ಪತ್ರಿಕೆಯ ಮೂಲ ಾಶಯಗಳಿಗೆ ವಿಭಿನ್ನವಾದ ರೀತಿಯ ಜಾಹಿರಾತುಗಳನ್ನು ಸೆಳೆಯುವ ಭರದಲ್ಲಿ ಸುದ್ದಿ ಸಮಾಚಾರಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಪತ್ರಿಕೆಯ ವಿನ್ಯಾಸ,ಮುದ್ರಣ ಗುಣಮಟ್ಟ,ಸೇವಾ ದರ, ಭಾಷೆಯ ಬಳಕೆ ಎಲ್ಲವೂ ಜಾಗತೀಕರಣದ ೊಳಸುಳಿಗಳೇ ಆಗಿವೆ. ಇನ್ನು ಆಕಾಶವಾಣಿಗೆ ಪ್ರತಿಸ್ಫರ್ಧಿಯಾಗಿಖಾಸಗಿ ಎಫ್ ಎಂ ಛಾನೆಲ್ಗಳು ಸಿನಿಮಾಗಳನ್ನೆ ಆಧಿರಿಸಿದ ಕಾರ್ಯಕ್ರಮಗಳನ್ನು ಮಾತ್ರ ನೀಡುತ್ತಿವೆ ಈ ಅಬ್ಬರದಲ್ಲಿ ಆಕಾಶವಾನಿಯ ಗುಣಾತ್ಮಕ ಕಾರ್ಯಕ್ರಮಗಳು ಯಾರಿಗೆ ಬೇಕಾಗಿವೆ?
Saturday, June 7, 2008
ಆರ್ ಪಿ ವಿ ಗೆ ಮಾಧ್ಯಮ ಶ್ರೇಷ್ಠ ಪ್ರಶಸ್ತಿ
ಜೀ ಕನ್ನಡ ವಾಹಿನಿ ಹಾಗೂ ಎಸ್ಸೆಲ್ ಅವಾರ್ಡ್ ಸಹಯೋಗದಲ್ಲಿ ನೀಡುವ ಮಾದ್ಯಮ ಶ್ರೇಷ್ಠ ಪ್ರಶಸ್ತಿ ಹಾಸನ ಜಿಲ್ಲೆಯ ಆರ್ ಪಿ ವೆಂಕಟೇಶಮೂರ್ತಿಯವರಿಗೆ ಲಭಿಸಿದೆ. ಜೀ ಕನ್ನಡ ವಾಹಿನಿಯು ವಿವಿಧ ಕ್ಷೆತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕೆಲಸವನ್ನು ಕಳೆದ ಒಂದು ವರ್ಷ ದಿಂದ ಮಾಡಿಕೊಂಡು ಬಂದಿದೆ. ಇಡೀ ದೇಶದಲ್ಲಿಯೇ ಟಿವಿ ವಾಹಿನಿಯೊಂದ ಇಂತಹದ್ದೊಂದು ಅಪರೂಪದ ಕಾರ್ಯದಲ್ಲಿ ತೊಡಗಿಕೊಂಡಿರುವುದು ಪ್ರಶಂಸನಾರ್ಹ ಸಂಗತಿಯಾಗಿದೆ. ಕರ್ನಾಟಕ ವಿಭಾಗದ ವಾಹಿನಿಯ ಮುಖ್ಯಸ್ಥರಾಗಿರುವ ಗೌತಮ್ ಮಾಚಯ್ಯ ನವರ ನೇತೃತ್ವದಲ್ಲಿ ಇಂತಹದ್ದೊಂದು ಸಾಧನೆಗೆ ಎಸ್ಸೆಲ್ ವಿಭಾಗದ ನಿರ್ವಾಹಕರಾಗಿರುವ ಮಧುಸೂಧನ್ ಕೂಡ ಜೊತೆಯಾಗಿದ್ದಾರೆ. ಮಾದ್ಯಮ ಶ್ರೇಷ್ಠ ಪ್ರಶಸ್ತಿಗೆ ಹಾಸನದ ಜನತಾ ಮಾದ್ಯಮ ಪತ್ರಿಕೆ ಸಂಪಾದಕರಾಗಿರುವ ಆರ್ ಪಿ ವೆಂಕಟೇಶ ಮೂರ್ತಿ ಯವರಿಗೆ ಲಭಿಸಿದೆ. ಜನತಾ ಮಾಧ್ಯಮ ಪತ್ರಿಕೆಯ ಮೂಲಕ ಭ್ರಷ್ಠ ವ್ಯವಸ್ಥೆಗೆ ಚುರುಕುಮುಟ್ಟಿಸಿ ಹತ್ತು ಹಲವು ಚಳುವಳಿಗೆ ಧ್ವನಿಯಾದವರು. ಅದು 70ರ ದಶಕ ತುರ್ತುಪರಿಸ್ಥಿತಿಯ ಕರಾಳ ದಿನಗಳು, ಬರದ ಬೇಗೆ, ಸಾಮಾಜಿಕ ಅಸಮಾನತೆ, ಭ್ರಷ್ಠಾಚಾರ, ಶೋಷಣೆ ಇದ್ದ ದಿನಗಳು. ಹಾಸನ , ಶಿವಮೊಗ್ಗ, ಚಿಕ್ಕಮಗಳೂರು, ಭಾಗದಲ್ಲಿ ಜೆಪಿ ಚಳುವಳಿ ಹಾಗೂ ಲೋಹಿಯಾ ವಾದದ ದಟ್ಟ ಅಲೆಯಿತ್ತು. ಇದರ ಪರಿಣಾಮ ನವ ನಿರ್ಮಾಣ ವೇದಿಕೆಯ ಅಡಿಯಲ್ಲಿ ಹೊಸ ಹುಮಸ್ಸಿನ ಯುವಕರ ಪಡೆಯೊಂದು ಜಾಗ್ರತ ಅರಿವಿನ ಬಗ್ಗೆ ಸಾರಲು ರಾಜ್ಯಾಧ್ಯಂತ ಪ್ರವಾಸ ಮಾಡಿತು. ಚಳುವಳಿಯನ್ನು ದಿಕ್ಕು ದಿಕ್ಕಿಗೆ ಕೊಂಡೊಯ್ದಿತು. ದೀನದಲಿತರ, ಶೋಷಿತರ ಹಕ್ಕುಗಳು, ರೈತರ ಸಂಕಷ್ಠಗಳ ಅರಿವು, ಸಮಾನತೆಯ ಅಂಶಗಳಿಗೆ ಬೆಂಬಲಿಸುವುದೇ ಈ ಚಳುವಳಿಯ ಉದ್ದೇಶವಾಗಿತ್ತು. ಇಂತಹ ಚಳುವಳಿಯ ಮುಖ್ಯ ವಾಹಿನಿಯಲ್ಲಿ ಒಬ್ಬರಾಗಿ ಬಂದವರು ಆರ್ ಪಿ ವೆಂಕಟೇಶಮೂರ್ತಿ. ಆಗಿನ್ನೂ ಹಾಸನದ ಲಾ ಕಾಲೇಜಿನಲ್ಲಿ ಕಲಿಯುತ್ತಿದ್ದ ಅವರಿಗೆ ಸಾಮಾಜಿಕ ತುಡಿತದ, ಸ್ಪಂದನೆಯ ಹಪಹಪಿಯಿತ್ತು, ಸುಂದರ ಸಮಾಜದ ಕನಸಿತ್ತು ಇವೆಲ್ಲ ಒಟ್ಟಾಗಿ ಅವರನ್ನು ಚಳುವಳಿಗೆ ಸೆಳೆದಿತ್ತು. ಈ ಸಂಧರ್ಭ ಹಲವಾರು ಭಾರಿ ಅವರು ಜೈಲು ಕಾಣಬೇಕಾಯಿತು. ಇಂತಹ ಸಂಧಿಗ್ದ ಸಂಧರ್ಬದಲ್ಲಿ ದಿಕ್ಕೆಟ್ಟ ವ್ಯವಸ್ಥೆಗೆ ಆಸರೆ ನೀಡಲು ಯೋಚಿಸಿದ ಆರ್ ಪಿ ವಿ ಮತ್ತು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿರುವ ಮಂಜುನಾಥ ದತ್ತ ,ಸಮಾನ ಮನಸ್ಕ ಸ್ನೇಹಿತರು ಜಿಲ್ಲೆಯಲ್ಲಿ ಜನತಾ ಮಾದ್ಯಮ ಪತ್ರಿಕೆಯನ್ನು 6ನೇ ನವೆಂಬರ್ 1977ರಂದು ಹುಟ್ಟು ಹಾಕಿದರು. ಅಲ್ಲಿಯವರೆಗೂ ಜಿಡ್ಡು ಗಟ್ಟಿದ್ದ ಜಿಲ್ಲೆಯ ಪತ್ರಿಕೆಗಳು ಒಂದು ಸಾಂಪ್ರದಾಯಿಕ ಕಟ್ಟಳಯೊಳಗೆ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಆರ್ ಪಿ ವಿ ನೇತೃತ್ವದಲ್ಲಿ ಜನತಾ ಮಾದ್ಯಮ ಪತ್ರಿಕೆ ಪ್ರಮುಖವಾಗಿ ಶೋಷಿತರ ದುರ್ಬಲರ ಧ್ವನಿಯಾಯಿತು. ಆರ್ ಪಿ ವಿ ಯವರ ದಿಟ್ಟತನದ ಬರಹಗಳು ಆಡಳಿತಷಾಹಿ ವ್ಯವಸ್ಥೆಗೆ ಚುರುಕು ಮುಟ್ಟಿಸಿದವು. ರಾಜ್ಯದಲ್ಲಿ ಗಮನಸೆಳೆದಿದ್ದ 90ರ ದಶಕದ ಬಾಗೂರು ನವಿಲೆ ರೈತಚಳುವಳಿಗೆ ಒಂದು ತೀವ್ರತೆ ತಂದುಕೊಟ್ಟದ್ದೇ ಆರ್ ಪಿ ವಿ ಯವರ ಬರವಣಿಗೆ, ಅಷ್ಟೇ ಅಲ್ಲ ಸ್ವತಹ ರೈತ ಚಳುವಳಿಯ ಹಿನ್ನೆಲೆಯಲ್ಲಿ ಬಂದ ಅವರು ಚಳುವಳಿಗೆ ಧುಮುಕಿ ದೊಡ್ಡ ಹೋರಾಟಕ್ಕೆ ಕಾರಣರಾದರು. ಹಾಸನದ ಚನ್ನಪಟ್ಟಣ ಕೆರೆ ಉಳಿಸುವ ಹೋರಾಟ, ಗಂಧದ ಕೋಠಿಯ ಮರಗಳ ಹನನ ತಡೆಯಲು ಹೋರಾಟ, ಬಿಸಲೆ ರಕ್ಷಿತಾರಣ್ಯ ಉಳಿಸುವ ಹೋರಾಟ ಹೀಗೆ ಲೆಕ್ಕವಿಲ್ಲದಷ್ಟು ಜನಪರ ಹೋರಾಟ ಹುಟ್ಟುಹಾಕಿದ ಪತ್ರಿಕೆ, ಚಳುವಳಿಗಳ ಮುಖವಾಣಿಯಾಯಿತು ಆ ಮೂಲಕ ವ್ಯಸಸ್ಥೆಯ ಸುಧಾರಣೆಗೆ ನಾಂದಿ ಹಾಡಿತು. ಅಧಿಕಾರಿಗಳು , ರಾಜಕಾರಣಿಗಳು ಎಷ್ಟೆ ದೊಡ್ಡವರಿರಲಿ ಟೀಕಿಸಲು ಹಿಂದೆ ಮುಂದೆ ನೋಡದ ಆರ್ ಪಿ ವಿ ವಿಶೇಷ ಸಂಧರ್ಭಗಳಲ್ಲಿ ನೇರ ಹಾಗು ದಿಟ್ಟನುಡಿಯ ಬರಹಗಳು ಹಲವಾರು ಭಾರಿ ಜನಮೆಚ್ಚುಗೆಗೂ ಪಾತ್ರವಾಗಿವೆ. ಜಿಲ್ಲೆ ಪತ್ರಕರ್ತ ಸಂಘದ ಅಧ್ಯಕ್ಷರಾಗಿದ್ದ ಸಂಧರ್ಭ ಹತ್ತು ಹಲವು ಬದಲಾವಣೆಗಳು ಹಾಗೂ ಹೊಸತನವನ್ನು ತಂದಿದ್ದಾರೆ. ಈ ಪೈಕಿ ಸಂಘದ ಕಛೇರಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಸುವಂತೆ ಮಾಡಿದ್ದು ಹಾಗು ಇತ್ತಿಚಗೆ ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕೊಡಿಸುವ ಕಾರ್ಯಕ್ಕೆ ಕೈ ಹಚ್ಚಿರುವುದು. ಜಿಲ್ಲೆಯಲ್ಲಿ ಜಿಲ್ಲಾಪಂಚಾಯತ್ ವತಿಯಿಂದ ಕಂಪ್ಯೂಟರ್ ಖರೀದಿಗೆ ಸಂಭಂಧಿಸಿದಂತೆ ನಡೆದ ಕೋಟ್ಯಾಂತರ ರೂ ಹಗರಣ ಬಯಲಿಗೆ, ಭ್ರಷ್ಠಚಾರದಲ್ಲಿ ತೊಡಗಿದ್ದ ಲೋಕಾಯುಕ್ತ ಎಸ್ ಪಿ ವಂಚನೆ ಬಯಲು, ಅರ್ಧ ಕೋಟಿಗೂ ಮಿಕ್ಕಿದ ಅರಕಲಗೂಡಿನ ಪಿಂಚಣಿ ವಂಚನೆ ಹಗರಣ, ಹಾಸನ ಮೆಡಿಕಲ್ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಹೀಗೆ ಒಂದೇ ಎರಡೇ ಪತ್ರಿಕೆಯ ಮೂಲಕ ಆರ್ ಪಿ ವಿ ಹೊರಜಗತ್ತಿಗೆ ತೆರೆದಿರಿಸಿದ್ದು ಬೇಕಾದಷ್ಠಿವೆ. ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿದ್ದಾರೆ, ಸಾರ್ವಜನಿಕರಿಗೆ ಅರಿವು ಮೂಡಿಸುವ 'ನಮ್ಮೂರ ಸೇವೆ' ಯಂತಹ ಸ್ವಯಂ ಸೇವಾ ಸಂಘಟನೆಯನ್ನು ಹುಟ್ಟುಹಾಕಿದ್ದಾರೆಅದನ್ನುಇಂದಿಗೂ ಕಾಣಬಹುದು, ಪತ್ರಿಕೆ ಆರಂಭವಾಗಿ ಇಂದಿಗೆ 31ವರ್ಷ ಕಳೆದಿವೆ, ಈ ಹಾದಿಯಲ್ಲಿ ಪತ್ರಿಕೆ ಯ ಮೂಲಕ ಸಾವಿರಾರು ಬರಹಗಾರರು,ಚಿಂತಕರು, ಹೋರಾಟಗಾರರಿಗೆ ಪತ್ರಿಕೆ ವೇದಿಕೆಯಾಗಿದೆ ಅವರನ್ನು ಬೆನ್ನು ತಟ್ಟಿ ಬೆಳೆಸಿದೆ, ಮೂಢನಂಬಿಕೆ ತೊರೆಯುವ ಸಾಮಾನತೆ ಬೆಸೆಯುವ, ನ್ಯಾಯದ ಪರ ಧ್ವನಿಯೆತ್ತುವ ಗುಣವನ್ನು ಪತ್ರಿಕೆ ಬೆಳೆಸಿದೆ. ಇಂತಹ ಸಾಧನೆಗೈದಿರುವ ಆರ್ ಪಿ ವಿ ಜೀ ಮಾಧ್ಯಮ ಶ್ರೇಷ್ಠ ಪ್ರಶಸ್ತಿಗೆ ನಿಜಕ್ಕೂ ಅರ್ಹರು. ಅವರನ್ನು ಆಯ್ಕೆ ಮಾಡಲು ಸಹೃದಯರು ೫೭೫೭೫ ಗೆ ಮೂರ್ತಿ ಎಂದು ಬರೆದು ಎಸ್ಸೆಂಎಸ್ ಮಾಡಬಹುದು.
Thursday, June 5, 2008
ಬೆಲೆ ಏರಿಕೆ ಸಾಧುವೇ....???
ಕೇಂದ್ರ ಸರ್ಕಾರದ ಅಸಮರ್ಪಕ ನೀತಿಯಿಂದಾಗಿ ಜನಸಾಮಾನ್ಯ ಸಂಕಟಕ್ಕೆ ಒಳಗಾಗುವಂತಾಗಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದ ಮೇಲೆ ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಇದು ಯುಪಿಎ ಸರ್ಕಾರದಲ್ಲಿ ಮಾತ್ರವಲ್ಲ ಈ ಹಿಂದೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವಿದ್ದಾಗಲೂ ಬೆಲೆ ಏರಿಕೆ ಆಗಿತ್ತು. ಜನಸಾಮಾನ್ಯರು ಬಳಸುವ ದಿನಬಳಕೆ ವಸ್ತುಗಳಾದ ಸೀಮೇಎಣ್ಣೆ, ಡೀಸೆಲ್, ಪೆಟ್ರೊಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಉಂಟಾಗಿದೆ, ಇದು ದೇಶದ ಮಧ್ಯದ ವರ್ಗದ ಜನರ ಮೇಲೆ ಪ್ರಮುಖವಾಗಿ ಪರಿಣಾಮ ಬೀರಲಿದೆ. ಸೂಕ್ರ ಕಾಲದಲ್ಲಿ ರಸಗೊಬ್ಬರಕ್ಕೆ ಸಬ್ಸಿಡಿ ನೀಡದ್ದರಿಂದ ಸಕಾಲದಲ್ಲಿ ರೈತರಿಗೆ ಗೊಬ್ಬರ ಪೂರೈಕೆಯಾಗುತ್ತಿಲ್ಲ ಈ ನಡುವೆಯೇ ಬೆಲೆ ಏರಿಕೆಯಂತಹ ವಿಷಯಗಳು ಶ್ರೀ ಸಾಮಾನ್ಯನನ್ನು ಆತಂಕ ಉಂಟುಮಾಡಿವೆ. ತೈಲ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಸಹಜವಾಗಿ ಬಸ್ ಮತ್ತು ರೈಲು ದರ ಏರಿಕೆಯಾಗುತ್ತದೆ. ಆದ್ದರಿಂದ ಜನಸಾಮಾನ್ಯರ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ಈ ಎಲ್ಲ ಬೆಳವಣಿಗೆಗೆ ಸರ್ಕಾರದ ನೀತಿ ಕಾರಣವಾಗಿದೆ. ಎಲ್ಲಿ ಜನರ ಹಿತಾಸಕ್ತಿಗನುಗುಣವಾಗಿ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಕೊರತೆ ಸರಿದೂಗಿಸಿಕೊಳ್ಳಲು ಪರ್ಯಾಯ ಮಾರ್ಗ ಕಂಡು ಕೊಳ್ಳುವುದಿಲ್ಲವೋ ಆಗ ಇಂತಹ ನಿರ್ಧಾರಗಳು ಜನರಿಗೆ ಹೊರೆಯಾಗಿ ಪರಿಣಮಿಸುತ್ತವೆ. ಮೊದಲೇ ದೇಶದ ಜನರ ಜೀವನ ಮಟ್ಟ ಮತ್ತು ಅವರ ಾರ್ಥಿಕ ಸ್ಥಿತಿಗತಿ ಶೇ.5 ಕ್ಕಿಂತ ಹೆಚ್ಚಿಲ್ಲ ಿದರಲ್ಲಿ ಹೊಟ್ಟೆ ಬಟ್ಟೆಗೆ ನೇರ ಮಾಡಿಕೊಳ್ಳುವಷ್ಟರಲ್ಲಿ ಸೋತು ಹೋಗುತ್ತಾನೆ, ಈ ನಡುವೆ ಸಂಪತ್ತು ಕ್ರೋಢೀಕರಣ ಮಾಡಿಕೊಂಡ ಮಂದಿ ಮತ್ತಷ್ಟು ಜನರನ್ನು ಸುಲಿಯಲು ಈ ಸರ್ಕಾರಗಳು ಅವಕಾಶ ಮಾಡಿಕೊಡುತ್ತಿವೆ ಇದು ಸಧ್ಯದ ಮಟ್ಟಿಗಂತೂ ಒಳ್ಳೆಯ ಬೆಳವಣಿಗೆಯಲ್ಲ... ರಾಜ್ಯಗಳ ವಿಷಯದಲ್ಲು ಅಷ್ಟೆ ಚುನಾವಣೆ ಗೆಲ್ಲುವ ಸಲುವಾಗಿ ಪ್ರಕಟಿಸುವ ಅಗ್ಗದ ಯೋಜನೆಗಳು ಉದಾಹರಣೆಗೆ ಬಿಜೆಪಿ ಸರ್ಕಾರ ಪ್ರಕಟಿಸಿರುವ ಶೆ.3 ರ ಕೃಷಿ ಸಾಲ, ಉಚಿತ ವಿದ್ಯುತ್ ಕಾಂಗ್ರೆಸ್ ಸರ್ಕಾರದ ಬಣ್ಣದ ಟೀವಿ ಯೋಜನೆ..... ಎವೆಲ್ಲ ಸಮಾಜದ ಅಭಿವೃದ್ದಿಗೆ ಬದಲಾಗಿ ವ್ಯವಸ್ಥೆಯಲ್ಲಿರುವ ಸಮತೋಲನವನ್ನು ಹಾಳು ಮಾಡುತ್ತವೆ ಹಾಗೂ ಹೆಚ್ಚುವರಿ ತೆರಿಗೆ ಮತ್ತು ಬೆಲೆ ಏರಿಕೆಗೆ ಪರೋಕ್ಷವಾಗಿ ಕಾಣಿಕೆ ನೀಡುತ್ತವೆನ್ನುವುದು ಸಹಾ ಸತ್ಯ.
ಯಡ್ಯೂರಪ್ಪ ಸರ್ಕಾರದ ನಿರೀಕ್ಷೆಗಳು.............
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕಾಲ ಮುಗಿದಿದೆ, ಇದೇ ಪ್ರಥಮ ಭಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸಕಾಱರ ರಚಿಸಿದೆ, ಈಗ ಸಕಾಱರಕ್ಕಿರುವ ಅಲ್ಪ ಬಹುಮತಕ್ಕೆ ಪಕ್ಷೇತರರು ಆಸರೆಯಾಗಿದ್ದಾರೆ. ಅದಕ್ಕೂ ಮಿಗಿಲಾಗಿ ಬಳ್ಳಾರಿಯ ಗಣಿದೊರೆಗಳ ಕಪಿ ಮುಷ್ಠಿಯಲ್ಲಿ ಸರ್ಕಾರ ನಡೆಯುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ . ಸಚಿವ ಸ್ಥಾನಗಳ ಹಂಚಿಕೆ ಯಲ್ಲೂ ಅಸಮಧಾನ ಬುಗಿಲೆದ್ದಿದೆ. 4ಭಾರಿ ಆಯ್ಕೆಯಾದವರು ಕೇವಲ ಶಾಸಕರಾಗಿ ಉಳಿದಿದ್ದಾರೆ. ನಿನ್ನೆ ಗೆದ್ದವರು ಹೊಸದಾಗಿ ಪಕ್ಷ ಸೇರಿದವರು ಮಂತ್ರಿಗಳಾಗಿದ್ದಾರೆ. ಇದರಿಂದ ಅಸಮಧಾನ ಹೊಗೆಯಾಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಇದು ನುಂಗಲಾರದ ತುತ್ತು. ಸದಾಶಯ ಇಟ್ಟುಕೊಂಡು ರಚನೆಯಾಗಿರುವ ಸರ್ಕಾರದಲ್ಲಿ ಮುಖ್ಯಮಂತ್ರಿ ಯವರು ರೈತರಿಗೆ ಶೇ.3ರ ದರದ ಕೃಷಿ ಸಾಲ, ಹೈನುಗಾರಿಕೆಯಲ್ಲಿ ತೊಡಗುವ ಮಹಿಳೆಯರಿಗೆ 2ರೂ ಪ್ರತಿ ಲೀ. ಹಾಲಿಗೆ ಪ್ರೋತ್ಸಾಹ ಧನ ನೀಡುವ ಮಾತನ್ನಾಡಿದ್ದಾರೆ. ಮತ್ತುರೈತರಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ಥಾವನೆಯನ್ನು ಮಾಡಿದ್ದಾರೆ. ಇವು ಸದುದ್ದೇಶಗಳೆ. ಮುಖ್ಯಮಂತ್ರಿಯವರ ಯೋಜನೆಗಳು ಫಲಪ್ರದವಾಗಬೇಕಾದರೆ ವಿಶ್ವಾಸಮತ ಸಾಬೀತು ಮಾಡುವ ಜೊತೆಗೆ ಸ್ಥಿರತೆಯನ್ನು ಕಾಯ್ದು ಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯಾಗ ಬೇಕಾದರೆ ಅಭಿವೃದ್ದಿಗೆ ಹಣ ತರಬೇಕಾದರೆ ಸ್ಥಿರ ಸರ್ಕಾರದ ಅವಶ್ಯಕತೆಯೂ ಸಹಾ ಇದೆ ಈ ನಿಟ್ಟಿನಲ್ಲಿ ವಿಶ್ವಾಸ ಮತ ಬೇಕು ಹಾಗು ಮತ್ತೊಂದು ಚುನಾವಣೆ ಅತಂತ್ರ ಸರ್ಕಾರ ಯಾರಿಗೂ ಬೇಕಿಲ್ಲ ಹಾಗಾಗಿ ಬಿಜೆಪಿ ಐದು ವರ್ಷಗಳ ಯಶಶ್ವಿ ಸರ್ಕಾರ ನೀಡುವುದೇ? ಸ್ಥಿರತೆ ಕಾಯ್ದು ಕೊಳ್ಳುವುದೇ ಕಾದು ನೋಡೋಣ.
Monday, June 2, 2008
ಒಲುಮೆಯ ಸ್ನೇಹಕ್ಕೆ ಉಳಿಗಾಲವುಂಟೆ.....
ಸ್ನೇಹ ಎಂದರೇನು? ಪರಸ್ಪರರ ನಡುವಿನ ನಂಬಿಕೆ ಮತ್ತು ಭಾಂಧ್ವ್ಯದ ಕೊಂಡಿಯೇ ಸ್ನೇಹ.... ಬಹುಷಹ ಭಾವನೆಗಳ ಪರಸ್ಪರ ಹಂಚಿಕೆಗೆ ಸನೇಹಿತರನ್ನು ಬಿಟ್ಟರೇ ಮತ್ತಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಬಾಲ್ಯದ ದಿನಗಳ ಸ್ನೇಹ ಒಂದು ರೀತಿಯದಾದರೆ, ವಯಸ್ಸಿಗೆ ಬಂದ ದಿನಗಳನಂತರದ್ದು ಮತ್ತೊಂದು ರೀತಿಯ ಸ್ನೇಹ. 2ನೇ ಹಂತದ ಸ್ನೇಹದಲ್ಲಿ ಇರುವ ಉದ್ದೇಶಗಳು ವಿವಿಧ ಅಯಾಮ ಹೊಂದಿರುತ್ತವೆ, ಸಂಸ್ಕಾರವಂತ ಮನಸ್ಸಿನ ಸ್ನೇಹ ಒಂದೆಡೆಯಾದರೆ, ಕೆಟ್ಟಮನಸ್ಸಿನ ಸ್ವಾಥಱ ಸ್ನೇಹವೂ ಇರುತ್ತದೆ. ಇಂತಹ ಮನಸ್ಸಿನ ಸ್ನೇಹಗಳು ಹೆಚ್ಚು ದಿನ ಉಳಿಯಲಾರವು. ಪುರಾಣದಲ್ಲಿ ಹೇಳುವಂತೆ ಸುಧಾಮ-ಕೃಷ್ಣನ ಸ್ನೇಹ, ದುಯೋಱಧನ-ಕಣಱ ರ ಸ್ನೇಹ ಇಂದಿನ ದಿನಗಳಲ್ಲಿ ಕಾಣ ಸಿಗುವುದು ಅಪರೂಪವೇ. ಸ್ನೇಹಕ್ಕೆ ಅದರದ್ದೇ ಆದ ಶಕ್ತಿ ಸಾಮಥಱವಿದೆ. ಪರಸ್ಪರರ ಹಿತಾಸಕ್ತಿಗಳನ್ನು ರಕ್ಷಿಸುವ ಗೌರವಿಸುವ ಗುಣವಿರುವ ಸ್ನೇಹವೇ ನಿಜವಾದ ಸ್ನೇಹ........ಇನ್ನೂ ಇದೆ.:-)
ಪುಣ್ಯಭೂಮಿಯಲ್ಲಿ ಕೆಲಹೊತ್ತು..............
ಶ್ರದ್ಧೆ, ಆಸಕ್ತಿ ಮತ್ತು ಕಾಯಕದಲ್ಲಿ ಅಪಿಱಸಿಕೊಳ್ಳುವಿಕೆ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಇಂತಹದ್ದೊಂದು ಸಾಧನೆಗೆ ಮುನ್ನುಡಿ ಬರೆದಿರುವುದೇ ಹಾಸನ ಜಿಲ್ಲೆಯ 'ಪುಣ್ಯಭೂಮಿ' ಎಂಬ ಕೃಷಿ ಕೇಂದ್ರ. ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕೃಷಿ ವಿಭಾಗದ ಮುಖ್ಯಸ್ಥರಾಗಿರುವ ವಿಜಯ್ ಅಂಗಡಿ ಮತ್ತು ಅವರ ಸಮಾನ ಆಸಕ್ತಿಯ ಹಲವಾರು ಮಿತ್ರರೊಡಗೂಡಿ ಹುಟ್ಟು ಹಾಕಿರುವ ಸಂಸ್ಥೆಯೇ ಪುಣ್ಯಭೂಮಿ. ಕೆಲವಷ ಗಳ ಹಿಂದೆ ಖಾಲಿ ಮೈದಾನವಾಗಿದ್ದ ಈ ಪ್ರದೇಶವೀಗ ಹಸಿರಿನಿಂದ ನಳನಳಿಸುತ್ತಿದೆ. ಇಲ್ಲಿ ವಿವಿಧ ಜಾತಿಯ ಗಿಡಗಳು, ವೈವಿಧ್ಯಮಯ ತರಕಾರಿ ಬೆಳೆ ಮಾಡುವುದರ ಜೊತೆಗೆ ಅಪರೂಪವೆನಿಸುವಂತಹ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆಯಲ್ಲದೇ ಬೀಜಗಳನ್ನು ಸಂರಕ್ಷಿಸಿ ಸಂಸ್ಥೆಯ ಸದಸ್ಯರಿಗೆ ಕೊಟ್ಟು ಕೊಳ್ಳುವ ವಿನಿಮಯ ಪದ್ಧತಿ ಇದೆ. ಅಪರೂಪದ ಭತ್ತದ ತಳಿಗಳು, ಮೆಣಸಿನಕಾಯಿ, ಮಾವು, ಬದನೇ, ಮೆಣಸು ಹೀಗೆ ಒಂದೇ ಎರಡೇ ನೋಡಲು ಮತ್ತು ಅನುಭವಿಸಲು ಸಾಲದು. ಅತಿ ಕಡಿಮೆ ಪ್ರದೇಶದಲ್ಲಿ ಸೃಷ್ಠಿಸಲಾಗಿರುವ ೀ ತೋಟದಲ್ಲಿ ಆಸ್ಟ್ರಲಿಯ ನಿಂಬೆ, ಇದೆ ವಿವಿಧ ಜಾತಿಯ ಔಷಧ ಸಸ್ಯಗಳು ಇವೆ. ಈಗ್ಯೆ 2ವಷಱಗಳ ಹಿಂದೆ ನನ್ನ ಸಂಬಂದಿ ಮಧುಸೂಧನ ಅವರು ನನ್ನನು ಅಲ್ಲಿಗೆ ಭೇಟಿ ನೀಡಿದ್ದ ನಾನು ಇವೆಲ್ಲ ಜಾಗತೀಕರಣದ ಬಿರುಗಾಳಿಯ ನಡುವೆ ವ್ಯಥ ಪ್ರಯತ್ನವೆಂದೆ ಭಾವಿಸಿದ್ದೆ, ಆದರೆ ಈ ಭಾರಿ ಮಧು ಜೊತೆ ಅಲ್ಲಿಗೆ ಭೇಟಿ ನೀಡಿದಾಗ ಕಂಡ ದೃಶ್ಯ ನನ್ನನ್ನು ದಂಗುಬಡಿಸಿತ್ತು, ಏಕೆಂದರೆ ನಂಬಿಕೆ ಮತ್ತು ಶ್ರದ್ಧೆ ನಮ್ಮನ್ನು ಗುರಿ ತಲುಪಿಸುತ್ತುದೆ ಎಂಬುದಕ್ಕೆ ವಿಜಯ್ ಅಂಗಡಿ ಸಾಕ್ಷಿಯಾಗಿದ್ದರು, ಇಡೀ ತೋಟವೇ ನನ್ನನ್ನು ಅಣಕಿಸುತ್ತಿದೆ ಏನೋ ಎಂದು ನನಗೆ ಅನಿಸುತ್ತಿತ್ತು. ಕಳೆದ ಭಾರಿ ನಾನು ಬಂದಾಗ ಪುಣ್ಯಭೂಮಿ ಯಲ್ಲಿದ್ದ ಚಿಕ್ಕ ಹುಡುಗರು ಇರಲಿಲ್ಲ, ಅವರು ಸುಳ್ಳು ಹೇಳಿದ್ದು , ಕಳ್ಳತನ ಕಲಿತದ್ದು ಅಂಗಡಿಯವರನ್ನು ಬೇಸರಕ್ಕೀಡು ಮಾಡಿ ಹೊರಹಾಕಿದ್ದರಂತೆ. ಆದರೇನು ತಾವೋಬ್ಬರೆ ತಮ್ಮ ಕೈಲಾದ ಕೆಲಸವನ್ನು ಬಿಡುವಿನ ವೇಳೆ ಮಾಡುತ್ತೇನೆ ಎಂದು ನಗುನಗುತ್ತಲೆ ನಮ್ಮನ್ನು ಬರಮಾಡಿಕೊಂಡ ವಿಜಯ್ ಅಂಗಡಿ ಒಂದು ಬನೀನು ಮತ್ತು ನಿಕ್ಕರ್ ಧರಿಸಿ ಹುಲ್ಲು ಕತ್ತರಿಸುತ್ತಿದ್ದರು. ನಂತರ ಬಿಡುವು ಮಾಡಿಕೊಂಡ ಅವರು ತಾವೇ ಶ್ರಮವಹಿಸಿ ಬೆಳೆದ ಬೆಳೆಗಳ ಬಗ್ಗೆ ನಮಗೆ ಪರಿಚಯ ಮಾಡಿ ಕೊಡುತ್ತಾ ಹೋದರು, ಜೀ ಕನ್ನಡ ವಾಹಿನಿಗೆ ಸುದ್ದಿ ಮಾಡಲು ಬಂದಿದ್ದ ಮಧು ಅದನ್ನು ಚಿತ್ರೀಕರಿಸಿಕೊಳ್ಳುವಂತೆ ಕ್ಯಾಮೆರಾಮನ್ ರಾಮ್ಕಿ ಗೆ ಸೂಚಿಸುತ್ತಿದ್ದಂತೆ ನಮಗೆ ಅರಿವಿಗೆ ಬಾರದಂತೆ ಅವರು ಚಿತ್ರಿಸುತ್ತಿದ್ದರು. ತಮ್ಮ ಬೆಳೆಗಳ ಬಗ್ಗೆ ಮಾತನಾಡುತ್ತಿದ್ದ ವಿಜಯ್ ಅಂಗಡಿ ಇದ್ದಕಿದ್ದಂತೆ ಕಾಯಿಯ ಕಂಠದಂತಿದ್ದವನ್ನು ಬಿಚ್ಚಿ ನೋಡಿ ಇಲ್ಲಿ ಕಡಜ ಗೂಡು ಕಟ್ಟಿದೆ, ಇಲ್ಲೊಂದು ಪಕ್ಷಿ ಗೂಡು ಮಾಡಿದೆ, ಜೇನು ಸಾಕಿದ್ದೇನೆ, ಎಂದು ತೋರಿಸಲಾರಂಭಿಸಿದಾಗ ಇನ್ನೂ ಏನೇನು ಕೌತುಕಗಳಿವೆಯೋ ಎಂದು ಕಾಯುವಂತೆ ಮಾಡಿತು, ಒಂದು ತೊಟ್ಟಿಯೊಂದರ ಬಳಿಗೆ ಕರೆದೊಯ್ದ ಅವರು ಕಸದಂತಿದ್ದದನ್ನು ಕೆದಕುತ್ತಾ ನೋಡಿ ಇದು ಇರುವೆ ಎಂದರು, ಅಲ್ಲಿ ಲಕ್ಷಗಟ್ಟಲೇ ಇರುವೆಗಳ ಸಾಮ್ರಾಜ್ಯವೇ ನಮಗೆ ಕಾಣಸಿಕ್ಕಿತು, ಅವುಗಳನ್ನು ಬರಿ ಕೈಯಿಂದ ಹಿಡಿದ ಅಂಗಡಿ ಅವು ಏನೂ ಮಾಡುವುದಿಲ್ಲ ಬದಲಾಗಿ ಕಚ್ಚುವ ಕೆಂಪಿರುವೆಗಳನ್ನು ಓಡಿಸುತ್ತವೇ ಮತ್ತು ನನಗೆ ಗೊಬ್ಬರವನ್ನು ತಯಾರು ಮಾಡುತ್ತಿವೆ ಎಂದರು. ನಿಮಗೆ ಚಕ್ರಮುನ್ನಿ ಸೊಪ್ಪು ಗೊತ್ತಾ? ಎಂದು ಪ್ರಶ್ನಿಸಿದ ಅಂಗಡಿ ನಾನು ಅದರಲ್ಲಿ ಹೊಸಬಗೆಯ ಕೋಸಂಬರಿ ಮಾಡುವುದನ್ನು ಕಲಿತ್ತೇದ್ದೇನೆ ನೀವು ಅದನ್ನು ತಿನ್ನಬೇಕು ಎನ್ನುತ್ತಲೇ ಅದರ ಸಿದ್ಧತೆಗೆ ತೊಡಗಿದರು, ಈ ನಡುವೆ ತಾವು ಸಾಕಿದ ಕಂಬಳಿ ಹುಳು ವಿವಿಧ ಬಗೆಯ ತರಕಾರಿ ಸೊಪ್ಪು ತೋರಿಸಿದ ಅವರು ಕೆಲವೇ ನಿಮಿಷಗಳಲ್ಲಿ ಚಕ್ರಮುನ್ನಿ ಸೊಪ್ಪು, ವೀಳ್ಯದ ಎಲೆ ಕಾಯಿತುರಿ ಸೌತೆ ಹಾಕಿ ಸೊಪ್ಪಿನ ಕೊತ್ತಂಬುರಿ ಸೊಪ್ಪು ತಯಾರಿಸಿ ಬಿಟ್ಟರು ಅದರ ಜೊತೆ ನೆಂಜಿಕೊಳ್ಲಲು ಮಂಡ್ಯದಿಂದ ತರಿಸಿದ್ದ ಆಗಾನಿಕ್ ಬೆಲ್ಲ ಕೊಟ್ಟರೆ ನನಗೋ ಸವಿಯುವ ಹಂಬಲ ಆದರೆ ನನ್ನ ಜೊತೆ ಬಂದಿದ್ದವರಿಗೆ ಅದನ್ನು ತಿಂದರೆ ಏನಾಗುವುದೋ ಎಂಬ ತಳಮಳ, ಅಂತೂ ಎಲ್ಲ ಮುಗಿಯುವ ಹೊತ್ತಿಗೆ ಊಟಕ್ಕೆ ಒತ್ತಾಯಿಸಿದ ಅಂಗಡಿ ಅಡುಗೆ ತಯಾರಿಗೆ ಮುಂದಾದಾಗ ಇನ್ನು ಏನೇನು ಕಾದಿದೆಯೋ ಎಂದು ಅನಿಸಿತ್ತು ನನಗೆ . ಆಗಲೆ ತಯಾರಿ ಮುಂದುವರಿಸಿದ ಅಂಗಡಿ ರೆಷ್ಮೇ ಸೊಪ್ಪು, ದಂಟಿನ ಸೊಪ್ಪು, ವೀಳ್ಯದ ಎಲೆ, ಚಕ್ರಮುನ್ನಿ ಸೊಪ್ಪು ಸದೆ ಇನ್ನು ಏನೇನೋ ಹಾಕಿ ರಸಾಯನ ತಯಾರು ಮಾಡಿದ್ದರು, ಬಿಸಿ ಬಿಸಿ ಹಬೆಯಾಡುವ ಅನ್ನ ತಟ್ಟೆಯಲ್ಲಿ ಹಾಕುತ್ತಲೇ ಇದು ಸೋನಾ ಮಸ್ಸೂರಿ ಅಕ್ಕಿ ಪಾಲಿಷ್ ಮಾಡಿಲ್ಲ ಅರಕಲಗೂಡು ಬಳಿಯ ಮಲ್ಲಿನಾಥಪುರದ್ದು ಎಂದರು. ನಿಜವಾಗಿಯೂ ಊಟ ಅದ್ಭುತವಾಗಿಯೇ ಇತ್ತು. ನಂತರ ತಮ್ಮ ಪುಸ್ತಕಗಳು ಕೃಷಿ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅಂಗಡಿಯವರು ಬಿಡುವು ದೊರೆತರೆ ಸಾಕು ನಾನು ಇಲ್ಲಿಯೇ ಇರುತ್ತೇನೆ. ಕೃಷಿಯನ್ನು ನಂಬಿ ಯಾರು ಹಾಳಾಗಿಲ್ಲ, ದುಡಿಯದೇ ಹಾಳಾಗುತ್ತಿದ್ದಾರೆ ಕೃಷಿ ಬದುಕು ಕಟ್ಟಿ ಕೊಡುತ್ತದೆ ಎಂದರು. ಅಂಗಡಿಯವರ ಕಾರ್ಯ ವೈಖರಿ ಮತ್ತು ವ್ಯಕ್ತಿತ್ವನ್ನು ನೋಡಿದ ನಿಜಕ್ಕೂ ಇಂತಹವರು ಸಮಾಜಕ್ಕೆ ಮಾದರಿ ಎನಿಸಿತು. ಮತ್ತೊಮ್ಮೆ ಅಲ್ಲಿಗೆ ಭೇಟಿನೀಡುವ ವಿಶ್ವಾಸ ಇಟ್ಟುಕೊಂಡು ಹಾಸನಕ್ಕೆ ವಾಪಾಸಾದೆವು.
Subscribe to:
Posts (Atom)
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
ಮೊ ನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾ...
-
Interview: Arkalgud Jayakumar (ಬ್ಲಾಗ್ ನಲ್ಲಿ ಏಕತಾನತೆಯ ಬರಹಗಳಿಂದ ಸ್ವಲ್ಪಮಟ್ಟಿಗಿನ ರಿಲ್ಯಾಕ್ಸ್ ಗಾಗಿ ಇದನ್ನು ಇಲ್ಲಿ ನೀಡಲಾಗಿದೆ) Small screen is now f...