ಮುಸ್ಲಿಂ ಎಂದರೆ 'ದೇವರಿಗೆ ಅರ್ಪಿತವಾದವರು' ಎಂದು ಅರ್ಥೈಸಲಾಗಿದೆ. ಮುಸ್ಲಿಂ ಪದದ ಜೊತೆಯಲ್ಲೇ ಥಳುಕು ಹಾಕಿಕೊಂಡಿರುವುದು 'ಜಿಹಾದ್' ಪದ . ಜಿಹಾದ್ ಎಂದರೆ ಹೋರಾಟ. ಧರ್ಮರಕ್ಷಣೆಗೆ ಹೋರಾಟದಲ್ಲಿ ನಿರತನಾದವನು ಮುಜಾಹಿದ್ದೀನ್ ಎಂಬ ಅರ್ಥವಿದೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ.೨೩ ರಷ್ಟು ಅಂದರೆ ೧.5ಬಿಲಿಯನ್ ಮುಸ್ಲಿಂರಿದ್ದಾರೆ, ಕ್ರೈಸ್ತರ ನಂತರದ ಸ್ಥಾನ ಮುಸ್ಲಿಂ ಜನಸಂಖ್ಯೆಗಿದೆ. ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮುಸ್ಲಿಂ ಪಾರುಪತ್ಯವಿದೆ, ಇಂಡೋನೇಷಿಯಾದಲ್ಲಿ ಪ್ರಪಂಚದೆಲ್ಲೆಡೆಗಿಂತ ಹೆಚ್ಚು ಮುಸಲ್ಮಾನರಿದ್ದಾರೆ, ಏಷ್ಯಾ ಖಂಡದಲ್ಲೇ ಶೇ.೬೩ ರಷ್ಟು ಮುಸ್ಲಿಂ ರಿದ್ದು 50ಕ್ಕೂ ಹೆಚ್ಚು ವಿಧದ ಭಾಷೆ ಬಳಸುತ್ತಾರೆ. ಹಿಂದೂಗಳಲ್ಲಿರುವಂತೆ ಇಲ್ಲಿಯೂ 2000ಕ್ಕೂ ಹೆಚ್ಚು ಪ್ರಮುಖ ಜಾತಿ, ಉಪಜಾತಿ ಧಾರ್ಮಿಕ ಪದ್ದತಿಗಳಿವೆ. 7ನೇ ಶತಮಾನದ ಸುಮಾರಿಗೆ ಅರೇಬಿಯಾದಿಂದ ವ್ಯಾಪಾರದ ಸಲುವಾಗಿ ಬಂದು ಬೀಡುಬಿಟ್ಟ ಮುಸಲ್ಮಾನರು ಮೊದಲ ಪ್ರಾರ್ಥನಾ ಮಂದಿರ ಕಟ್ಟಿದ್ದು ಕೇರಳದ ಕೂಡುಂಗಲೂರು ಎಂಬ ಸ್ಥಳದಲ್ಲಿ. ಸಧ್ಯ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೧/೬ ರಷ್ಟಿರುವ ಇವರು ಕಳೆದ ಜುಲೈ 2009ರ ಅಂಕಿ-ಅಂಶಗಳ ಪ್ರಕಾರ ೧೬೦.9ಮಿಲಿಯನ್ ಇದ್ದಾರೆ, ಇದೇ ಜನಸಂಖ್ಯೆ 2001ರಅಂತ್ಯಕ್ಕೆ 138ಮಿಲಿಯನ್ ಇತ್ತು. ಈ ಕಾರಣಗಳಿಂದಾಗಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ್ದು 3ನೇ ಸ್ಥಾನ. ಮೊದಲ ಹಾಗು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇಂಡೋನೇಷಿಯಾ ಮತ್ತು ಪಾಕೀಸ್ಥಾನಗಳಿವೆ. ದೇಶದ 2ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಲಕ್ಷ್ಯದ್ವೀಪಗಳಲ್ಲಿ ಇವರ ಸಂಖ್ಯೆ ಹೆಚ್ಚಿದೆ, ಸಾಕ್ಷರತೆ ಪ್ರಮಾಣ ಶೇ.೭೫.೫ ರಷ್ಟಿದೆ.
Sunday, December 27, 2009
'ಮುಸ್ಲಿಂ' ಮನೋಧರ್ಮ ಬದಲಾಗ ಬೇಕಲ್ಲವೇ?
ಮುಸ್ಲಿಂ ಎಂದರೆ 'ದೇವರಿಗೆ ಅರ್ಪಿತವಾದವರು' ಎಂದು ಅರ್ಥೈಸಲಾಗಿದೆ. ಮುಸ್ಲಿಂ ಪದದ ಜೊತೆಯಲ್ಲೇ ಥಳುಕು ಹಾಕಿಕೊಂಡಿರುವುದು 'ಜಿಹಾದ್' ಪದ . ಜಿಹಾದ್ ಎಂದರೆ ಹೋರಾಟ. ಧರ್ಮರಕ್ಷಣೆಗೆ ಹೋರಾಟದಲ್ಲಿ ನಿರತನಾದವನು ಮುಜಾಹಿದ್ದೀನ್ ಎಂಬ ಅರ್ಥವಿದೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ.೨೩ ರಷ್ಟು ಅಂದರೆ ೧.5ಬಿಲಿಯನ್ ಮುಸ್ಲಿಂರಿದ್ದಾರೆ, ಕ್ರೈಸ್ತರ ನಂತರದ ಸ್ಥಾನ ಮುಸ್ಲಿಂ ಜನಸಂಖ್ಯೆಗಿದೆ. ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮುಸ್ಲಿಂ ಪಾರುಪತ್ಯವಿದೆ, ಇಂಡೋನೇಷಿಯಾದಲ್ಲಿ ಪ್ರಪಂಚದೆಲ್ಲೆಡೆಗಿಂತ ಹೆಚ್ಚು ಮುಸಲ್ಮಾನರಿದ್ದಾರೆ, ಏಷ್ಯಾ ಖಂಡದಲ್ಲೇ ಶೇ.೬೩ ರಷ್ಟು ಮುಸ್ಲಿಂ ರಿದ್ದು 50ಕ್ಕೂ ಹೆಚ್ಚು ವಿಧದ ಭಾಷೆ ಬಳಸುತ್ತಾರೆ. ಹಿಂದೂಗಳಲ್ಲಿರುವಂತೆ ಇಲ್ಲಿಯೂ 2000ಕ್ಕೂ ಹೆಚ್ಚು ಪ್ರಮುಖ ಜಾತಿ, ಉಪಜಾತಿ ಧಾರ್ಮಿಕ ಪದ್ದತಿಗಳಿವೆ. 7ನೇ ಶತಮಾನದ ಸುಮಾರಿಗೆ ಅರೇಬಿಯಾದಿಂದ ವ್ಯಾಪಾರದ ಸಲುವಾಗಿ ಬಂದು ಬೀಡುಬಿಟ್ಟ ಮುಸಲ್ಮಾನರು ಮೊದಲ ಪ್ರಾರ್ಥನಾ ಮಂದಿರ ಕಟ್ಟಿದ್ದು ಕೇರಳದ ಕೂಡುಂಗಲೂರು ಎಂಬ ಸ್ಥಳದಲ್ಲಿ. ಸಧ್ಯ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೧/೬ ರಷ್ಟಿರುವ ಇವರು ಕಳೆದ ಜುಲೈ 2009ರ ಅಂಕಿ-ಅಂಶಗಳ ಪ್ರಕಾರ ೧೬೦.9ಮಿಲಿಯನ್ ಇದ್ದಾರೆ, ಇದೇ ಜನಸಂಖ್ಯೆ 2001ರಅಂತ್ಯಕ್ಕೆ 138ಮಿಲಿಯನ್ ಇತ್ತು. ಈ ಕಾರಣಗಳಿಂದಾಗಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ್ದು 3ನೇ ಸ್ಥಾನ. ಮೊದಲ ಹಾಗು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇಂಡೋನೇಷಿಯಾ ಮತ್ತು ಪಾಕೀಸ್ಥಾನಗಳಿವೆ. ದೇಶದ 2ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಲಕ್ಷ್ಯದ್ವೀಪಗಳಲ್ಲಿ ಇವರ ಸಂಖ್ಯೆ ಹೆಚ್ಚಿದೆ, ಸಾಕ್ಷರತೆ ಪ್ರಮಾಣ ಶೇ.೭೫.೫ ರಷ್ಟಿದೆ.
Sunday, December 20, 2009
ಎಟಿಆರ್ ವರದಿ ಜಾರಿಗೂ ಬದ್ದತೆ ಇರಬೇಕಲ್ಲವೇ?
Sunday, December 13, 2009
ನೂರು ಜನ್ಮಕೂ ಮರೆಯಲಾದಿತೆ?
ಹೇಳಿ ಕೇಳಿ ನಾಗತ್ತಿಹಳ್ಳಿ ಚಂದ್ರಶೇಖರ್ ಸೂಕ್ಷ್ಮ ಗ್ರಹಿಕೆಯ ಸಂವೇದನಾಶೀಲ ಮನಸ್ಥಿತಿಯ ಪ್ರಬುದ್ದ ಸಾಹಿತಿ ಮತ್ತು ನಿರ್ದೇಶಕರು. ಭಾವನಾತ್ಮಕವಾದ ಸಂಬಂಧಗಳನ್ನು ಅತ್ಯುತ್ತಮವಾಗಿ ಸೆಲ್ಯೂಲಾಯ್ಡ್ ಮಾಧ್ಯಮದಲ್ಲಿ ಬಿಂಬಿಸಬಲ್ಲ ಛಾತಿಯ ಮನುಷ್ಯ. ಇವರು ನಿರ್ದೇಶಿಸಿದ ಸಾಧಾರಣ ಕಥೆಯ 'ಉಂಡೂ ಹೋದ ಕೊಂಡು ಹೋದ' ಸಿನಿಮಾದ ಯಶಸ್ಸು ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ, ಭಾ ನಲ್ಲೆ ಮಧುಚಂದ್ರಕೆ, ಹೂಮಳೆ ಇತ್ತೀಚೆಗಿನ ಒಲವೇಜೀವನ ಲೆಕ್ಕಾಚಾರದಂತಹ ಸೂಪರ್ ಚಿತ್ರಗಳನ್ನು ತೆರೆಗೆ ನೀಡಿದ್ದಾರೆ. ಕಾಡಿನ ಬೆಂಕಿ ಚತ್ರದ ಮೂಲಕ ಸಿನಿ ಬದುಕು ಆರಂಬಿಸಿದರು. ಸಂಗೀತವೇ ಪ್ರಧಾನವಾಗಿದ್ದ ಹೊಸ ಮುಖಗಳನ್ನ ಹೊಂದಿದ 'ಪ್ಯಾರಿಸ್ ಪ್ರಣಯ" ವಿದೇಶದಲ್ಲಿ ಚಿತ್ರೀಕರಣ ಗೊಂಡ ಚಿತ್ರವಾಗಿದ್ದು ವಿಭಿನ್ನ ಅನುಭವ ನೀಡಿತ್ತು. 100ಕ್ಕ ಹೆಚ್ಚು ಹಾಡುಗಳನ್ನು ರಚಿಸಿರು ವ ನಾಗತ್ತಿಹಳ್ಳಿ ಉತ್ತಮ ಗೀತ ರಚನೆಕಾರರು ಹೌದು. ಇದುವರೆಗೂ 15ಕನ್ನ ಡಸಿನಿಮಾಗಳನ್ನ ನಿರ್ದೇಶಿಸಿರು ವನಾಗತ್ತಿಹಳ್ಳಿ 10ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ಯಾನೆ ಸಿನಿಮಾ ಫೆಸ್ಟಿವಲ್ ನಲ್ಲಿಯೂ ಪ್ರಂಶಶೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿ ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಮುಗಿಸಿದ ನಾಗತ್ತಿಹಳ್ಳಿ 8ಚಿನ್ನದ ಪದಕ ಮತ್ತು 2ನಗದು ಬಹುಮಾನ ಪಡೆ ದ ಪ್ರತಿಭಾವಂತ. ಬೆಂಗಳೂರು ವಿವಿ ಯಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದ ನಾಗತ್ತಿಹಳ್ಳಿ, ಸಾಪ್ಟ್ ವೇರ್ ಇಂಜಿನಯರ್ ಶೋಭಾರನ್ನು ಅಂತರ್ ಜಾತೀಯ ವಿವಾಹವಾಗಿದ್ದಾರೆ. ಸಿಹಿ ಮತ್ತು ಕನಸು ಎಂಬ ಇಬ್ಬರು ಮಕ್ಕಳು ಇವರಿಗುಂಟು. ಸಧ್ಯ ಅವರು ಅಮೇರಿಕಾದಲ್ಲ ನೆಲೆಸಿದ್ದಾರೆ! ಸಿನಿಮಾವನ್ನು ವೃತ್ತಿ ಬದುಕಾಗಿಸಿಕೊಂಡ ನಾಗತ್ತಿಹಳ್ಳಿ ಮಾತ್ರ ಇಲ್ಲಿಯೇ ಇದ್ದಾರೆ.
ಇನ್ನು ಅಂದ್ರಿತಾ ರೇ ವಿಷಯಕ್ಕೆ ಬರೋಣ. ಈಕ ಮೂಲತಹ ಬಂಗಾಳಿ, ಹುಟ್ಟಿದ್ದು ರಾಜಸ್ಥಾನದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕಳೆ ದ18ವರ್ಷಗಳಿಂ ದ ಅವರ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ತಂದೆ ಎ ಕೆ ರೇ ಭಾರತೀ ಯ ವಾಯುಪಡೆಯಲ್ಲಿ ಡೆಂಟಿಸ್ಟ್ ಆಗಿ ನಿವೃತ್ತರಾಗಿದ್ದಾರೆ, ಆದರೂ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿ ಇವತ್ತಿಗೂ ಸ್ವಂತ ಕ್ಲಿನಿಕ್ ನಲ್ಲಿ ಪ್ರಾಕ್ಟೀಸ್ ನಡೆಸುತ್ತಾರೆ. ತಾಯಿ ಸುನೀತಾ ರೇ ಮಕ್ಕಳ ಸೈಕಾಲಜಿಸ್ಟ್ ಆಗಿದ್ದಾರೆ. ಐಂದ್ರಿತಾ ಬಾಲ್ಯ ಮತ್ತು ಪ್ರಾಥಮಿಕ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಾಲ್ಡ್ ವಿನ್ ಪ್ರೌಢಶಾಲೆಯಲ್ಲಿ. ಈಗ ತಂದೆಯಂತಯೇ ಡೆಂಟಿಸ್ಟ್ ಆಗುವ ಕನಸು ಕಾಣುತ್ತಿರುವ ಅಂದ್ರಿ ತ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಈ ನಡುವ ಮುಂಬೈಗೆ ತೆರಳ ಸಣ್ಣಪುಟ್ಟ ಜಾಹಿರಾತು ಮತ್ತು ಮಾಡೆಲಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಅಂದ್ರಿತಾ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು ಮಹೇಶಬಾಬು ನಿರ್ದೆಶನ ದ ಮೆರವಣಿಗೆ ಚಿತ್ರದ ಮೂಲ ಕ. ಇಲ್ಲಿಯವರೆಗೆ ಆಕೆ ಕನ್ನಡದಲ್ಲಿ ಅಭಿನಯಿಸಿದ್ದು 7ಚಿತ್ರಗಳು, ತೆಲುಗಿನಲ್ಲಿ ಒಂದು ಮತ್ತು ಹಿಂದಿಯಲ್ಲ ಒಂದು. ಇಂತಹ ಅಂದ್ರಿತಾ ನಾಗತ್ತಿಹಳ್ಳಿ ನಿರ್ದೇಶನದ "ನೂರು ಜನ್ಮಕೂ " ಚಿತ್ರದಲ್ಲಿ ಅಭಿನಯಿಸಲು ಹಾಕಾಂಗ್ ಗೆ ತೆರಳಿದ್ದರು.
ಡಿಸೆಂಬರ್ 10ರಂದು ತಂಡ ಭಾರತಕ್ಕೆ ವಾಪಾಸ್ ಆದಾಗ ಆದ ರಂಪ ರಾಮಾಯ ಣ ನಿಮಗೆಲ್ಲರಿಗೂ ತಿಳಿದದ್ದೇ. ಇಡೀ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿರ್ದೇಶ ಕನಾಗತ್ತಿಹಳ್ಳಿ ಚಂದ್ರಶೇಖರ್ ತಪ್ಪಿತಸ್ಥರಂತೆ ಕಾಣಿಸುತ್ತಿದ್ದರಾದರೂ, ಅವರ ಪರ ವಕಾಲತ್ತು ವಹಿಸಿದವರೇ ಹೆಚ್ಚು. ಮೇಷ್ಟ್ರು ನಮ್ಮವರು ಎಂಬ ಕಾರಣಕ್ಕೋ ಏನೋ. ಇಡೀ ಘಟನೆಗೆ ಸಂಬಂಧಿಸಿದಂತೆ ಐಂದ್ರಿತಾ ರೇ ಮಾಹಿತಿ ನೀಡಿ ಮೇಷ್ಟ್ರು ವುಮನೈಸರ್ ಎಂದು ಸ್ಪಷ್ಟ ಮಾತುಗಳಲ್ಲಿ ಆರೋಪಿಸಿದರು. ಆದರೆ ನಾಗತ್ತಿಹಳ್ಳಿ ಮತ್ತು ಮಾಧ್ಯಮಗಳು ಕಪಾಳ ಮೋಕ್ಷ ಪ್ರಕರಣವನ್ನೇ ಮುಖ್ಯ ವಾಹಿನಿಗೆ ತಂದರಲ್ಲದೇ ಅಸಲಿ ಆರೋಪವನ್ನು ಮರೆಮಾಚಿದರು. ಇಲ್ಲಿ ನಾಗತ್ತಿಹಳ್ಳಿ ತಪ್ಪಿತಸ್ಥರು ಎಂದು ಹೇಳುತ್ತಿಲ್ಲವಾದರೂ ಆರೋಪದ ವಾಸ್ತವ ನೆಲೆಗಟ್ಟಿನ್ಲಲಿ ಸಮರ್ಪಕ ಚರ್ಚೆ ಯಾಗಿದ್ದರೆ. ಸಿನಿಮಾ ಮಂದಿಗೆ ಸರಿಯಾದ ಸಂದೇಶ ರವಾನೆಯಾಗುತ್ತಿತ್ತು, ಆದರೆ ಆದದ್ದೇ ಬೇರೆ.
ಅಷ್ಟಕ್ಕೂ ಸದರಿ ವಿಚಾರದ ಚರ್ಚೆ ಏಕೆಂದರೆ ನಾಗತ್ತಿಹಳ್ಳಿ ಮತ್ತು ಐಂದ್ರಿತಾ ಇಬ್ಬರೂ ಸಾರ್ವಜನಿಕ ವ್ಯಕ್ತಿಗಳು. ಅವರ ನಡವಳಿಕೆಗಳು ಮತ್ತು ನಿಲುವುಗಳು ಸಾರ್ವಜನಿಕವಾಗಿ ಸಭ್ಯವಾಗಿರಬೇಕಾಗುತ್ತದೆ. ಅದರಲ್ಲೂ ಸಿನಿಮಾ ಮಾಧ್ಯಮ ಇತರ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಅವರ ಕ್ರಿಯೆಗಳನ್ನು ಜನ ಗಮನಿಸುತ್ತಾರೆ ಮತ್ತು ಅವಿವೇಕಿಗಳೂ ಅದನ್ನು ಅನುಕರಿಸುತ್ತಾರೆ. ಈಪೈಕಿ ಎರಡನೇ ಕೆಟಗರಿಯ ಜನರೇ ಹೆಚ್ಚು! ಹಾಗಾಗಿ ವಾಸ್ತವಾಂಶಗಳು ಚರ್ಚಾರ್ಹ ಹಾಗೂ ತಪ್ಪ-ಒಪ್ಪುಗಳು ತಿಳಿಯುತ್ತವೆ. ಸಿನಿಮಾ ಮಂದಿಯೆಂದರೆ ಮೊದಲೇ ಜನರಿಗೆ ಅಸಡ್ಡೆ 'ಶೀಲ' ಕಳೆದುಕೊಂಡವರು, ಮಜಾ ಮಾಡುವವರು ಎಂಬಿತ್ಯಾದಿ ಕಲ್ಪನೆಗಳು ಇವೆ. ಇವುಗಳಲ್ಲಿ ಕೆಲವು ನಿಜವಾದರೂ ಕೆಲವಕ್ಕೆ ರೆಕ್ಕೆ ಪುಕ್ಕ ಎರಡೂ ಇರುವುದಿಲ್ಲ. ಅಷ್ಟಕ್ಕೂ ಸಿನಿಮಾ ಲೋಕದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ, ಹಿಂದೆ ಪುಟ್ಟಣ್ಣ ಕಣಗಾಲ್ ರಂತ ಹ ನಿರ್ಧೇಶಕರು ಅಂದು ಕೊಂಡ ನಟನೆ ಬಾರದಿದ್ದಾಗ ಕಪಾಳ ಮೋಕ್ಷ ಮಾಡಿದ ಉದಾಹರಣೆಯಿದೆ. ರವಿಚಂದ್ರನ್ ಹಳ್ಳಿಮೇಷ್ಟ್ರು ಚಿತ್ರಕ್ಕೆ ಕರೆತಂದ ನಾಯಕಿ ರವಿಚಂದ್ರನ್ ಮೇಲೆ ರೇಪ್ ಕೇಸು ದಾಖಲಿಸಿದ ಘಟನೆಯಿದೆ.ಮೊನ್ನೆ ಮೊನ್ನೆಯಷ್ಟೇ ಮೈಸೂರು ಲೋಕೇಶ್ ಮಗ ಆದಿಲೋಕೇಶನ ಅವಾಂತರ ಬಯಲಿಗೆ ಬಂದಿದೆ. ಶೃತಿಯ ಸಹೋದರ ಶರಣ್ ಪ್ರೀತಿಸಿ ವಂಚಿಸಿ ಮದುವೆಯಾದ ನಿದರ್ಶನವಿದೆ, ಸಾಯಿ ಪ್ರಕಾಶ್ ಸೆಟ್ ನಲ್ಲಿ ನಟಿಯರೊಂದಿಗೆ ಅಸಹ್ಯವಾಗಿ ನಡೆದುಕೊಂಡ ಪ್ರಕರಣ, ನಟಿ ಮಹಾಲಕ್ಷ್ಮಿಯೊಂದಿಗೆ ನಟ ಜೈಜಗದೀಶ್ ಅಸಭ್ಯವಾಗಿ ವರ್ತಿಸಿ ತಪರಾಕಿ ಪಡೆದ ಘಟನೆ, ಪ್ರಭಾಕರ್ ಬಗೆಗೆ ಅಸಹ್ಯದ ಕಥೆಗಳಿವೆ ಹೀಗೆ ಹಲವು. ಇವು ವಾಸ್ತವ ಜಗತ್ತಿನಲ್ಲಿ ಸಿನಿಮಾ ಮಂದಿಯ ಬಗ್ಗೆ ಅಸಹ್ಯವನ್ನು ಹುಟ್ಟುಹಾಕುತ್ತವೆ. ಸಿನಿಮಾ ಜಗತ್ತಿನ ಕೆಲವು ಮಂದಿ ನಿರ್ಧೇಶಕರು,.ನಿರ್ಮಾಪಕರು, ಸಹ ನಿರ್ಧೇಶಕರು , ನಟರು ತೆರೆಯ ಹಿಂದೆ ಎಷ್ಟೋ ಮಂದಿ ಹೆಣ್ಣು ಮಕ್ಕಳ ಬದುಕು ಹಾಳುಮಾಡಿದ ನಿದರ್ಶನವಿದೆ. ಇಂದಿಗೂ ಅದು ಜಾರಿಯಲ್ಲಿದೆ ತೆರೆ ಯಮರೆಯಲ್ಲಿ! ಆದರೆ ವೃತ್ತಿ ಬದುಕು ಕಂಡು ಕೊಳ್ಳುವ ಮಂದಿ ಇದನ್ನೆಲ್ಲಾ ಸಹಿಸಿಕೊಂಡು ಸಿಕ್ಕ ಅವಕಾಶಗಳನ್ನು ಪಡೆದುಕೊಂಡು ಇಂದಿಗೂ ಅತಂತ್ರ ಬದುಕು ಸವೆಸುತ್ತಿದ್ದಾರೆ. ಸಿನಿಮಾ-ನಾಟಕ ನಮ್ಮ ಸಂಸ್ಕೃತಿಯ ಭಾಗ ಅವು ಸಧಭಿರುಚಿಯ ವಿಚಾರಗಳನ್ನು ನಮ್ಮ ನಡುವೆ ಉಳಿಸಬೇಕು, ತರಬೇಕು ಆದರೆ ಇದಕ್ಕೆಲ್ಲಾ ವ್ಯತಿರಿಕ್ತವಾದ ಕ್ರಿಯೆಗಳು ಜಾರಿಯಲ್ಲಿವೆ. ಸಹ್ಯವೆನಿಸುವಂತಹ ವಾತಾವರಣ ಕಣ್ಮರೆಯಾಗಿದೆ ಇದು ಆರೋಗ್ಯವಂತ ಸಮಾಜ ದಲಕ್ಷಣಗಳಲ್ಲ. ಹೇಳೋದು ವೇದಾಂತ ಮಾಡೋದು ಅನಾಚಾರ, ಸಮಾಜಕ್ಕೊಂದು ಮುಖ ಅಂತರಂಗಕ್ಕೆ ಮತ್ತೊಂದು ಮುಖ ಎಂಬಂತಿದೆ ಸಧ್ಯದ ಸ್ಥಿತಿ. ಇಂತಹವೆಲ್ಲಾ ಸಮಾಜದ ಸ್ವಾಸ್ಥ್ಯ ಕೆಡಿಸದೇ ಇರಬಲ್ಲವೇ. ಒಳ್ಳೆಯ ಸಂಗತಿಗಳನ್ನು ಕಾಮಾಲೆ ಕಣ್ಣಿನಿಂದ ನೋಡುವಂತೆ ಇಂತಹ ಸಂಗತಿಗಳು ಮಾಡಬಲ್ಲವಲ್ಲವೇ? ನೀವೇನು ಹೇಳ್ತೀರಿ?
ಈ ಲೇಖನವನ್ನು ಯಥಾವತ್ತಾಗಿ ದಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮ್ ಸುಂದರ್ ಅವರಿಗೆ ಧನ್ಯವಾದಗಳು. ಸದರಿ ಲೇಖನದ ಲಿಂಕ್ ಹೀಗಿದೆ
Sunday, December 6, 2009
ಹಿಂಬಾಗಿಲು ಪ್ರವೇಶದ ಗಂಜಿ ಕೇಂದ್ರಗಳು ಬೇಕಾ??
Sunday, November 29, 2009
ಜಾಗತೀಕರಣದ ಬಿಸಿಯಲ್ಲಿ ಬದುಕುಗಳಅವಸಾನ!
ನಿಮಗೆ ತಿಳಿದಿರಲಿ ಮುಕ್ತ ಆರ್ಥಿಕ ಉದಾರೀಕರಣ ನೀತಿ ಎಂದರೆ ಜಗತ್ತಿನ ಬಲಾಡ್ಯ ರಾಷ್ಟ್ರಗಳು ಅಭಿವೃದ್ದಿ ಯನೆಪದಲ್ಲಿ ಇತರೆ ರಾಷ್ಟ್ರಗಳ ಮೇಲೆ ಬಲವಂತವಾಗಿ ಹೇರಲ್ಪಡುವ ನೀತಿ. ಇದರನುಸಾರ ಸದರಿ ಗುಂಪಿನಲ್ಲಿರುವ ಯಾವುದೇ ರಾಷ್ಟ್ರ ನಮ್ಮ ದೇಶದಲ್ಲಿ ಬಂಡವಾಳ ಹೂಡಬಹುದು. ಅದೂ ಶಾಶ್ವತವಾಗ ಉಳಿಯುವಂತಹ ವ್ಯವಹಾರಗಳ ಮೇಲಲ್ಲ ತಾತ್ಕಾಲಿಕ ಗುತ್ತಿಗೆ ಅವಧಿಯವರೆಗೆ ಮಾತ್ರ. ಹೀಗೆ ಬಂಡವಾ ಳಹೂಡುವವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ , ರಕ್ಷಣೆ ಹಾಗೂ ತೆರಿಗೆ ರಹಿತ ವಾದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕು. ಅಲ್ಲಿ ಉತ್ಪಾದನೆಯಾಗುವ ಉತ್ತಮಗುಣಮಟ್ಟದ ಪದಾರ್ಥಗಳು ನಮ್ಮವರಿಗೆ ಸಿಗಲಾರದು, ದೇಶೀಯ ಉದ್ಯೋಗ ನೀತಿ ಅವರಿಗೆ ಅನ್ವಯಿಸಲಾರದು, ನಮ್ಮ ದೇಶದ ಕಾನೂನು ಕಟ್ಟಳೆಯಲ್ಲೂ ಅವರಿಗೆ ಸಡಿಲತ ಇರುತ್ತದೆ ಸರ್ಕಾರವೇ ಅವ ರರಕ್ಷಣೆಗೆ ಮುಂದಾಗಿ ನಿಲ್ಲುತ್ತವೆ. ದೇಶದ ಪ್ರಜಾಸತ್ತೆ ವ್ಯವಸ್ಥೆಗೆ ಇದು ಸಂಪೂರ್ಣ ವಿರುದ್ದ.
ಹೀಗೆ ಜಾಗತೀಕರಣದ ನೆರಳಿನಲ್ಲಿ ನಮ್ಮ ದೇಶಕ್ಕೆ ಕಾಲಿರಿಸಿದ್ದು ಟೆಕ್ಸ್ ಟೈಲ್ಸ್ ಅಂಡ್ ಗಾರ್ಮೆಂಟ್ ಇಂಡಸ್ಟ್ರಿ, ಮೆಟಲ್ ಅಂಡ್ ಮೆಟಲ್ ಉತ್ಪಾದನೆಗಳು, ಮಾಹಿತಿ ತಂತ್ರಜ್ಞಾನ ಪಾರ್ಕುಗಳು, ಹೊರಗುತ್ತಿಗೆ ಉದ್ದಿಮೆಗಳು, ಜೆಮ್ಸ್ ಅಂಡ್ ಜ್ಯೂಯಲರಿ, ಕಟ್ಟಡ ನಿರ್ಮಾಣ, ಸಾರಿಗೆ, ಅದಿರು, ಕಲಿದ್ದಲು, ತೈಲ ಉದ್ದಿಮೆಗಳು ಪ್ರಮುಖವಾದವುಗಳು . ಕಳೆದ ವರ್ಷಅಮೇರಿಕಾ ಆರಂಭಿಸಿದ ಬಂಡವಾಳ ಹಿಂತೆಗೆತದ ಪರಿಣಾಮ ದೇಶದ ೧.5ಮಿಲಿಯನ್ ನಷ್ಟು ಜನರು ಉದ್ಯೋಗ ಕಳೆದುಕೊಂಡರು. ದೇಶದ ಕಾರ್ಮಿಕ ಇಲಾಖೆಯ ಸರ್ವೆ ಅನುಸಾರ ದೇಶದ 11ರಾಜ್ಯಗಳಲ್ಲಿರುವ ೨೦ ಪ್ರಮು ಖವಾಣಿಜ್ಯ ಕೇಂದ್ರಗಳಲ್ಲಿ 2581ಘಟಕಗಳು ಕಣ್ಮುಚ್ಚಿದವು. ಈಗ ಉದ್ಯೋಗ ವಂಚಿತ ಭಾರತೀಯರ ಸಂಖ್ಯೆ ಏರುಗತಿಯಲ್ಲಿದ್ದು ಅದು ೧೬.2ಮಿಲಿಯನ ್ಆಗಿದೆ. ಈಗ ದುಬೈನಲ್ಲಿ ಸಂಭವಿಸಿರುವ ಆರ್ಥಿಕ ಕುಸಿತ ನಮ್ಮ ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿದೆ. ದುಬೈನಲ್ಲಿರು ವಭಾರತೀಯರು ಅಲ್ಲಿ ನಜನಸಂಖ್ಯೆಯ ಶೇ.43ರಷ್ಟಿದ್ದಾರೆ. ಅಲ್ಲಿ ಉದ್ದಿಮೆ ನಡೆಸುವವರು, ನೌಕರರಾಗಿ, ಕಾರ್ಮಿಕರಾಗಿ ಕೆಲಸ ಮಾಡುವವರು ಬಹುತೇಕ ನಮ್ಮವರೇ ಆಗಿದ್ದಾರೆ. ನಮ್ಮ ದೇಶದ ಹಲವ ಉತ್ಪನ್ನಗಳ ಗ್ರಾಹಕರು ಆಗಿರುವುದರಿಂ ದ ದೇಶದ ಆರ್ಥಿಕತೆಗೂ ಬಾರೀ ಪೆಟ್ಟು ಬೀಳಲಿದೆ.
ಜಾಗತೀಕರಣ ಕಾಲಿರಿಸುತ್ತಿದ್ದಂತೆ ನಮ್ಮ ಕೃಷಿ ಭೂಮಿಗಳು ಆರ್ಥಿಕವಲಯದ ಪಾಲಾಗುತ್ತಿವೆ, ದೇಶೀಯ ಉತ್ಪನ್ನಗಳು ಮೂಲೆಗುಂಪಾಗಿವೆ, ಆಧುನೀಕರಣದ ಪ್ರಭಾವದಿಂದಾಗಿ ಇರುವ ಕೃಷಿ ಭೂಮಿಗಳು ಬರಡಾಗುತ್ತಿವೆ, ಶಿಕ್ಷಣದ ಆದ್ಯತೆಗಳು ಬದಲಾಗಿವೆ, ಸಂಬಂಧಗಳು ಯಾತ್ರಿಕವಾಗಿವೆ, ಅಭಿರುಚಿ-ಸಂಸ್ಕೃತಿ ಬದಲಾಗಿದೆ, ಭಾಷಾ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ, ಪ್ರಗತಿ ಪರ ಚಳುವಳಿಗಳನ್ನು ವ್ಯವಸ್ಥಿತವಾಗಿ ಕೆಡವಲಾಗಿದೆ, ಅಪರಾಧಗಳು ಹೆಚ್ಚಿವೆ, ಸಾಮಾಜಿಕ ನ್ಯಾಯ ದಿಕ್ಕಾಪಾಲಾಗಿದೆ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಎಂಎನ್ ಸಿಗಳಲ್ಲಿ ಕೆಲಸ ಕಳೆದುಕೊಂಡು ಬದುಕಿನ ಭರವಸೆಯನ್ನು ಕಳೆದುಕೊಂಡವರೆಷ್ಟ ಜನರೋ. ಇವತ್ತು ನಾವು ದೈನಂದಿ ನಜೀವನದಲ್ಲಿ ಬಳಸುವ ಪ್ರತೀ ವಸ್ತುವೂ ಚಡ್ಡಿ-ಬನೀನು ಸೇರಿದಂತೆ ಎಲ್ಲ ಪದಾರ್ಥಗಳು ವಿದೇಶಿ ಸಹಯೋಗದ ಕಂಪನೆಗಳ ಬಳುವಳಿಯೇ. ಅದ ನಮ್ಮನ್ನು ಎಷ್ಟು ಆವರಿಸಿಕೊಂಡಿದೆಯಂದರೆ ನೀರಿನ ಮಡುವಿನಿಂ ದಹೊರಬರಲಾರದಷ್ಟು. ನಮಗೆ ಅಧುನೀಕರಣ ಬೇಕು, ಉದ್ಯೋಗ ಬೇಕು, ಅಭಿವೃದ್ದಿ ಬೇಕು ಆದರೆ ನಮ್ಮ ತನವನ್ನು ಹರಾಜಿಗಿಟ್ಟುಕೊಳ್ಳುವ ವ್ಯವಸ್ಥೆಯಲ್ಲ.ಎಲ್ಲಿ ದೇಸೀ ಜೀವನ ಪ್ರೀತಿ ಇಲ್ಲವೋ , ಬದ್ದತೆ, ಸಿದ್ದಾಂತಗಳಿರುವುದಿಲ್ಲವೋ ಅಲ್ಲಿಯವರೆಗೂ ಜಾಗತೀಕರಣದ ಭೂತ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.
Friday, November 20, 2009
ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ??
Sunday, November 15, 2009
ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಎಂಬ ಅನುಮಾನ!
Tuesday, November 10, 2009
ಶಂಕರ್ ನಾಗ್ ನೆನಪಿಗೊಂದು ವೆಬ್ ಸೈಟು!
Sunday, November 1, 2009
ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ ಗೊತ್ತಾ???
Sunday, October 25, 2009
2012ಕ್ಕೆ ಪ್ರಳಯ ನಿಜಾನಾ ? ಎನಿದೆಲ್ಲಾ?
Wednesday, October 14, 2009
ಕ್ಯಾಂಪಸ್ ನತ್ತ ಭಟ್ಟರ "ಮನಸಾರೆ" ಸವಾರಿ
- ಮನಸಾರೆ ಪ್ರದರ್ಶನ ರಾಜ್ಯಾಧ್ಯಂತ ಹೇಗಿದೆ?
-ಅದ್ಭುತವಾಗಿದೆ... ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಉತ್ತರಕರ್ನಾಟಕದ ಜನ ನೆರೆಯಲ್ಲೂ ಚಿತ್ರ ನೋಡ್ತೀದಾರೆ ಇದು ಅಚ್ಚರಿಯ ಸಂಗತಿ. ಮಳೆ ಬಂದಾಗ ಸ್ವಲ್ಪ ಕಡಿಮೆಯಾಗಿತ್ತಾದರೂ ನಂತರದ ಫಲಿತಾಂಶ ನನ್ನ ನಿರೀಕ್ಷೆ ಮೀರಿದ್ದು.
- ಕಾಲೇಜು ಕ್ಯಾಂಪಸ್ ಕಡೆ ಮೊದಲ ಸಲ ಹೋಗ್ತದೀರಿ, ಪ್ರತಿಕ್ರಿಯೆ ಹೇಗಿದೆ?
- ಕ್ಯಾಂಪಸ್ ಕಡೆ ಹೋಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಂದಾಗ ನಾನು, ಗಣೇಶ
ಇಬ್ರೂ ಹೋಗಿದ್ವಿ, ನಂತರದಲ್ಲಿ ನಾನೊಬ್ಬನೇ ತಾಲ್ಲೂಕು ಕೇಂದ್ರಗಳಿಗೂ ಹೋಗಿದ್ದೇನೆ. ಅವಾಗಿನ ಕ್ರೌಡು ಬೇರೆ, ಈಗಿನದ್ದೇ ಬೇರೆ. ಯುವ ಸಮೂಹದ ಪ್ರತಿಕ್ರಿಯೆ ಸಖತ್ತಾಗಿದೆ. ಯೂತ್ಸ್ ಇಷ್ಟೊಂದು ರೆಸ್ಪಾನ್ಸ್ ಮಾಡ್ತಾರೆ ಅಂದಕೊಂಡಿರಲಿಲ್ಲ. ಹೊದಕಡೆಯೆಲ್ಲ ಹುಡುಗೀರು ದಿಗಂತ ನನ್ನು ಮುತ್ತಿಗೆ ಹಾಕಿದ್ರೆ ಐಂದ್ರಿತಾ ರನ್ನು ಹುಡುಗರು ಮುತ್ತಿಕೊಳ್ತಾರೆ , ಅವರ ಅಭಿನಯವನ್ನು ಮತ್ತು ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ.ಮನಸಾರೆ ಗೆ ಹುಡುಗ-ಹುಡುಗಿಯರ ದೊಡ್ಡ ಆಶೀರ್ವಾದವಿದೆ.
- ಮಾಸ್ ಪ್ರತಿಕ್ರಿಯೆ ಹೇಗಿದೆ?
-ನೋಡಿ ನನ್ನ ಪ್ರಕಾರ ಮಾಸ್ ಅಂತೇನಿಲ್ಲ, ಅದು ಅವತ್ತಿಗೂ ಇಲ್ಲ, ಇವತ್ತಿಗೂ ಇಲ್ಲ. ನನ್ನ ಕನ್ನಡದ ಜನರು ಮತ್ತು ಇತರರು ಅವರ ಪ್ರತಿಕ್ರಿಯೆ ಚೆನ್ನಾಗಿದೆ ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನಮ್ಮ ಜನ ನೋಡ್ತೀದಾರೆ ಅನ್ನೊದೆ ಒಂದು ಖುಷಿ. ಇದನ್ನೆಲ್ಲ ನೋಡ್ತಾ ನಾವು ಮಜಾ ತಗೋತೀದೀವಿ.
- ಎಲ್ಲೆಲ್ಲಿ ಭೇಟಿ ನೀಡಿದ್ದೀರಿ? ಕಲೆಕ್ಷನ್ ಹೇಗಿದೆ ?
ಈ ಗಾಗಲೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೇವೆ ಇನ್ನೂ ಪ್ರವಾಸ ಮಾಡಬೇಕಿದೆ. ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ತಿದೆ. ನನ್ನ ಹಿಂದಿನ ಚಿತ್ರಗಳು ಸಹಾ ಹಾಗೆಯೇ ನಿಧಾನವಾಗಿ ಮೇಲೆ ಬಂದವು. ಆದರೆ ಮನಸಾರೆ ಸ್ಪೀಡ್ ಜಾಸ್ತಿಯಾಗಿದೆ. ಒಳ್ಲೇ ಪವರ್ ಫುಲ್ ನಿರ್ಮಾಪಕರು ಇದ್ದಾರೆ ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಚಿತ್ರ 50ದಿನ, 100ದಿನ ಓಡುವ ಸಂಧರ್ಭಕ್ಕೆ ನಿರ್ಮಾಪಕರು ಬಿಡುವು ಮಾಡಿಕೊಂಡು ಜೊತೆಯಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲು ಕಲೆಕ್ಷನ್ ಚೆನ್ನಾಗಿದೆ.
- ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆ ಏನು?
-ಇನಿಷಿಯಲ್ ಗೆ ಇಷ್ಟೊಂದು ಯಶಸ್ಸು ಆಗುತ್ತೇ ಅಂತಾ ಖಂಡಿತಾ ಗೊತ್ತಿರಲಿಲ್ಲ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಜನರ ಹಾರೈಕೆ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಮಾತು ಮುಗಿಸಿದರು ಭಟ್ಟರು.
Thursday, October 8, 2009
ಮಳೆ ನಿಂತು ಹೋದ ಮೇಲೆ.... ಬದುಕು ಬಾಡಿ ಹೋಗಿದೆ.
Friday, October 2, 2009
ನಮ್ಮ "ಶಂಕರ"ನ ನೆನಪು.. ರಂಗನಮನ,ಸಿನಿಮಾ ಇತ್ಯಾದಿ
Thursday, September 24, 2009
ಮನಸಿಟ್ಟು "ಮನಸಾರೆ" ಮಾಡಿದ್ದೀನಿ: ಯೋಗರಾಜ್ ಭಟ್
- ಹೌದು ನಿರ್ದೇಶಕನಾದ ನನಗೆ ಅಂತಹದ್ದೊಂದು ಗ್ಯಾಪ್ ಬೇಕಾಗುತ್ತೆ, ಎಲ್ಲ ಹಂತದಲ್ಲೂ ಎಚ್ಚರವಹಿಸಿ ಕೆಲಸ ಮಾಡಬೇಕಲ್ವಾ?
- ಮನಸಾರೆ ಪ್ರೆಶ್ ಆಗಿದೆ, ನಾನಂದು ಕೊಂಡಂತೆ ಚಿತ್ರಕ್ಕೆ ಎಲ್ಲವೂ ಕೂಡಿ ಬಂದಿದೆ. ನನ್ನ ಇತರೆ ಚಿತ್ರಗಳಿಗಿಂತ ಭಿನ್ನವಾಗಿದೆ. ಯಂಗ್ ಫೀಲ್ ಇದೆ, ಸಂಭಾಷಣೆ ಗಮನ ಸೆಳೆಯುವಂತಿದೆ. ಚಿತ್ರಕ್ಕೆ ಪೂರಕವದ ಪರಿಸರದಲ್ಲೂ ಹೊಸತನವಿದೆ. ಥೀಮ್ ಚಿತ್ರ ನೋಡಿ ತಿಳ್ಕೊಳ್ಳಿ.
- ಹೌದು ಪ್ರೇಮ ಕಥೇನೇ.. ಈ ಚಿತ್ರ ಪ್ರೇಕ್ಷಕರನ್ನು ವಿಪರೀತ ನಗಿಸುತ್ತೆ ಮತ್ತೆ ವಿಪರೀತ ಅಳಿಸುತ್ತೆ. ಆದರೆ ಕಥೆ ಬಗ್ಗೆ ಹೇಳಲ್ಲ, ಸಿನಿಮಾ ನೋಡಿ.
- ಮನಸಾರೆ ಚಿತ್ರದ ಪಾತ್ರಕ್ಕೆ ದಿಗಂತ್ ಸೂಟಬಲ್ ಬಾಯ್ ಅನಿಸ್ತು. ಇದು ಗಣೇಶ್ ಗೆ ಹೊಂದುವಂತಹ ಪಾತ್ರವಲ್ಲ, ನನ್ನ ಎರಡು ಸಿನಿಮಾಗಳಲ್ಲಿ ದಿಗಂತ್ ನಟಿಸಿದ್ದ, ಇಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾನೆ ಪಾತ್ರ ನಿರ್ವಹಣೆ ಚೆನ್ನಾಗಿ ಮಾಡಿದ್ದಾನೆ.
- ಉತ್ತರ ಕರ್ನಾಟಕದ ಬಯಲು ಸೀಮೆ, ಗಂಗಾವತಿ, ಸಂಡೂರು ಗಳಲ್ಲಿ ಹಾಡಿನ ಚಿತ್ರೀಕರಣವಾಗಿದೆ. ಉಳಿದ ಮಾತಿನ ಭಾಗವನ್ನು ಮೈಸೂರು, ಮಡಿಕೇರಿ, ಮಂಡ್ಯ, ಕಾರಾವಾರ ಮತ್ತು ಬೆಂಗಳೂರಿನ ಸ್ಟುಡಿಯೋಗಳಲ್ಲಿ ಮಾಡಿದ್ದೇನೆ ಎಲ್ಲವೂ ಚೆನ್ನಾಗಿ ಒಡಮೂಡಿದೆ, ಪ್ರೇಕ್ಷಕರಿಗೂ ಇಷ್ಟವಾಗಬಹುದು.
- ನನ್ನ ಹುಟ್ಟೂರು ಹಾನಗಲ್, ಅಲ್ಲಿನ ಪರಿಸರದಲ್ಲಿ ನಾನು ಕಂಡ ಕನಸು ಅಂದುಕೊಂಡ ಸಾಧ್ಯತೆಗಳನ್ನು ಈ ಚಿತ್ರದಲ್ಲಿ ಸಾಕಾರ ಮಾಡಿಕೊಂಡಿದ್ದೇನೆ. ಈ ಪೈಕಿ ನಾನು ಪದವಿ ವಿದ್ಯಾರ್ತಿಯಾಗಿದ್ದಾಗ ಮಾಡಿದ್ದ ಒಂದು ಪ್ರಾಜೆಕ್ಟ್ ಅನ್ನು ಇಲ್ಲಿ ಸಾಕ್ಷಿಕರಿಸಿದ್ದೇನೆ, ಹೆಚ್ಚು ವಾಹನಗಳು ಓಡಾಡುವ ರಸ್ತೆಯಲ್ಲಿ ಡುಬ್ಬು ನಿರ್ಮಿಸಿ ಅಲ್ಲಿ ಬೀಳುವ ಒತ್ತಡದಿಂದ ವಿದ್ಯುತ್ ಚ್ಚಕ್ತಿ ನಿರ್ಮಿಸಬಹುದೆಂಬ ಕಲ್ಪನೆಯಿತ್ತು. ಅದು ಈಗ ವಾಸ್ತವದಲ್ಲೂ ಸಾಧ್ಯವಿದೆ ಅದರ ಒಂದು ತುಣುಕನ್ನು ಮನಸಾರೆ ಹಾಡಿನ ಸನ್ನಿವೇಶದಲ್ಲಿ ಬಳಸಿದ್ದೇನೆ. ಮತ್ತೆ specific ಆಗಿ ಚಿತ್ರದಲ್ಲಿ ಬರುವ ತಿರುವುಗಳು shocking ಆಗಿವೆ, ಮನಸ್ಸನ್ನು ಆವರಿಸುವಂತಹ ಎಷ್ಟೋ ಸಂಗತಿಗಳಿವೆ.
- ಮನಸಾರೆಯಲ್ಲಿ ಸರಳ ಸಾಹಿತ್ಯ ಮತ್ತು ಸಂಗೀತವಿದೆ, ಇಲ್ಲಿ ಸಂಪೂರ್ಣ ತಾಕತ್ತು ಬಳಕೆಯಾಗಿದೆ. ಸಿಂಪಲ್ ಮೆಲೋಡಿಯಿದೆ. ಮೊದಲು ನನಗೆ ತುಂಬಾ ಹೆದರಿಕೆಯಾಗಿತ್ತು, ಆದರೆ ಧ್ವನಿ ಸುರುಳಿ ಬಿಡುಗಡೆಯಾಗಿ ಮಾರ್ಕೆಟ್ ಹಿಟ್ ಆಗಿದೆ. ಜನ ಹಾಡುಗಳನ್ನು ಸಂಗೀತವನ್ನು ಇಷ್ಟ ಪಟ್ಟಿದ್ದಾರೆ, ಜಯಂತ್ ಕಾಯ್ಕಿಣಿ ಸಾಹಿತ್ಯ ಮನೋಮೂರ್ತಿ ಸಂಗೀತ ಫೈನ್. ಎಲ್ಲೋ ಮಳೆಯಾಗಿದೆ..... ಎಂಬ ಟ್ರಾಕ್ ತುಂಬಾ ಇಷ್ಟ.
- ನಾಯಕಿ ಅಂದ್ರಿತಾ ರೇ ನನ್ನ ನಿರೀಕ್ಷೆಗೂ ಮೀರಿ ಅಭಿನಯ ಮಾಡಿದ್ದಾಳೆ. ಆ ಹುಡುಗಿ ಅಭಿನಯದಲ್ಲಿ ತುಂಬಾ Involvement ತಗೊಂಡಿದ್ದಾಳೆ.ರೋಮ್ಯಾಂಟಿಕ್ ಸೀನ್ ನಲ್ಲಂತೂ ಸೂಪರ್ ಒಳ್ಳೆ Glamorous ಗೊಂಬೆ ಅವಳು. ಅವಳ ಅಭಿನಯವನ್ನ ನೋಡೀನೇ ಆನಂದಿಸಬೇಕು. ದಿಗಂತ್ ಕೂಡ ವಿಶಿಷ್ಠವಾಗಿ ಅಭಿನಯಿಸಿದ್ದಾನೆ. ಅಂದ್ರಿತಾ ಹಾಗೂ ದಿಗಂತ್ ಕೆಮಿಸ್ಟ್ರಿ ಚೆನ್ನಾಗಿ workout ಆಗಿದೆ.ಎಲ್ಲರೂ ಶ್ರಮವಹಿಸಿ ಚಿತ್ರ ಮಾಡಿದ್ದೇವೆ, ಚಿತ್ರೀಕರಣ ಸಂಧರ್ಭ ೆಲ್ರೂ Normal ಆಗಿದ್ದೆವು. ಕ್ರಿಕೆಟ್ ಆಡಿಕೊಂಡು, ತಮಾಷೆಯಾಗಿ ಕೆಲಸ ಮಾಡಿದ್ವಿ. ನಿರ್ಮಾಪಕರು ನಮಗೆ ಒತ್ತಾಸೆಯಾಗಿ ಇದ್ರು.
- ಹೌದು, ಮನಸಾರೆ ಸಂದೇಶ ನೀಡುವ ಚಿತ್ರ. ತುಂಬಾ ಪವರ್ ಫುಲ್ ಆಗಿದೆ... ಚಿತ್ರ ನೋಡಿ. ಮನಸಾರೆ ಚಿತ್ರವನ್ನು ಮನಸಿಟ್ಟು ಮಾಡಿದ್ದೇನೆ, ಸಹೃದಯ ಪ್ರೇಕ್ಷಕರಿಗೆ ಅರ್ಪಿಸುತ್ತಿದ್ದೇನೆ. ಇದು ಮೂರುವರೆ ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತೆ.
- ಹಾಗೇನಿಲ್ಲ, ಸಹಜವಾಗಿ ಕೆಲವು ಟಿವಿ ಮಾಧ್ಯಮಗಳಲ್ಲಿ ಸಂದರ್ಶನ ಇರುತ್ತೆ. ಆದರೆ ಚಿತ್ರ ಓಡಬೇಕು ಎಲ್ಲರಿಗು ಇಷ್ಟವಾಗಬೇಕು... ಆಮೇಲೆ ಅವೆಲ್ಲಾ....
- ಹೌದು, ಮನಸಾರೆ ಬಿಡುಗಡೆಯಾದ ಮೇಲೆ ಮುಂದಿನ ಚಿತ್ರದ ಸಿದ್ದತೆ ಆಗಲಿದೆ. ಪುನೀತ್ ನನ್ನ ಹೊಸಚಿತ್ರದ ನಾಯಕ ನಾಯಕರಾಗ್ತಾರೆ. ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ಕಡೆಯ ಬಾರಿ ಕೇಳ್ಕೋಳೋದು ಇಷ್ಟೆ, ಮನಸಾರೆ Good Feel ಇರುವ, Fresh Young Team ಇರೋ ವಿಭಿನ್ನ ಅಭಿರುಚಿಯ ಸಿನಿಮಾ, ನೋಡಿ ಆನಂದಿಸಿ ಎಂದು ಮಾತು ಮುಗಿಸಿದರು ಯೋಗರಾಜ್ ಭಟ್
This featured article published in thatskannada.com, I thank to Web Editor Sham Sundar. If you want read web article plz click on this link
http://thatskannada.oneindia.in/movies/headlines/2009/09/25-an-interview-with-yograj-bhat.html
Saturday, September 12, 2009
ಆಧುನೀಕರಣದ ಭರಾಟೆಯಲ್ಲಿ ಸಿದ್ದಾಂತ ಬರೀ ಓಳಾ..?
Friday, September 4, 2009
ಶಿಕ್ಷಕರ ಸ್ಥಿತಿ ಏನಾಗಿದೆ ಗೊತ್ತಾ ???
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
ಮೊ ನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾ...
-
Interview: Arkalgud Jayakumar (ಬ್ಲಾಗ್ ನಲ್ಲಿ ಏಕತಾನತೆಯ ಬರಹಗಳಿಂದ ಸ್ವಲ್ಪಮಟ್ಟಿಗಿನ ರಿಲ್ಯಾಕ್ಸ್ ಗಾಗಿ ಇದನ್ನು ಇಲ್ಲಿ ನೀಡಲಾಗಿದೆ) Small screen is now f...