Wednesday, May 27, 2009

ಕರುಣಾನಿಧಿ ಮತ್ತು 'ಪವರ್' ಪಾಲಿಟಿಕ್ಸ್

"...Prabhakaran is my good friend...". "India could not forgive the LTTE for assassinating Rajiv Gandhi"

Some say there was a person over 17 lakh years ago. His name was Rama. Do not touch the bridge (Ramar Sethu) constructed by him. Who is this Rama? From which engineering college did he graduate? Is there any proof for this? ” ಇಂತಹ ಮಾತುಗಳನ್ನಾಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ವಿವಾದದ ಕೇಂದ್ರ ಬಿಂದು ವಾಗಿದ್ದವರು ಮುತ್ತುವೇಲು ಅಲಿಯಾಸ್ ಕಲೈಗ್ನರ್ ಅಲಿಯಾಸ್ ಮುತಾಮಿಜ್ ಕವಿಗ್ನರ್ ಎಂ ಕರುಣಾನಿಧಿ. ತಮಿಳನ್ನೇ ಉಸಿರಾಡಿ ತಮಿಳರ ಹಿತರಕ್ಷಣೆಗಾಗಿ ಏನು ಬೇಕಾದರೂ ಮಾಡಲುತಯಾರಾಗಿ ಬಿಡುವ ಅಸಾಮಿ ಈ ಕರುಣಾನಿಧಿ. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿದೆ, ಈ ಪೈಕಿ ಕಾಂಗ್ರೆಸ್ ೨೦೬, ಡಿಎಂಕೆ ೧೮, ತೃಣಮೂಲ ಕಾಂಗ್ರೆಸ್ ೧೯,ಎನ್್ಸಿಪಿ ೮, ಐಯುಎಂಎಲ್ ೨ ಮತ್ತು ನ್ಯಾಷನಲ್ ಕಾಂಗ್ರೆಸ್ ೩ ಸ್ಥಾನಗಳೊಂದಿಗೆ ಒಕ್ಕೂಟದಲ್ಲಿ ಸೇರ್ಪಡೆಯಾಗಿವೆ.ಅಧಿಕಾರ ಹಿಡಿಯುವ ಸಂಧರ್ಭದಲ್ಲಿ ತಮಗೆ ಇಷ್ಟೇ ಸಂಖ್ಯೆಯ ಕ್ಯಾಬಿನೆಟ್ ಸಚಿವರು ಬೇಕು ಇಂತಹುದೇ ಖಾತೆಗಳು ಬೇಕು ಎಂದು ಖ್ಯಾತೆ ತೆಗೆದು ಹಟ ಹಿಡಿದಿದ್ದು ಇದೇ ಕರುಣಾನಿಧಿ. ಅಂತೂ ಇಂತೂ 3ಸಂಪುಟ ದರ್ಜೆ, ೪ ರಾಜ್ಯ ಸಚಿವ ಸ್ಥಾನಗಳನ್ನು ಡಿಎಂಕೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಾತೆಗಾಗಿ ಕ್ಯಾತೆ ತೆಗೆದ ಕರುಣಾನಿಧಿ ರಾಜೀವ್ ಗಾಂಧಿ ಹಂತಕ ಪ್ರಭಾಕರನ್ ನನ್ನು ವಹಿಸಿಕೊಂಡು ಮಾತನಾಡುತ್ತಾರೆ, ಆತನ ಮೇಲೆ ಶ್ರೀಲಂಕಾ ಸೇನೆ ದಾಳಿ ಮಾಡುವ ಸಂಧರ್ಬದಲ್ಲಿ ಅದನ್ನು ನಿಲ್ಲಿಸುವಂತೆ ಉಪವಾಸ ಕುಳಿತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಯತ್ನ ಮಾಡುತ್ತಾರೆ. ಪ್ರಭಾಕರನ್ ಹತ್ಯೆಯಾದ ದಿನ ಕರಾಳ ದಿನ ಆಚರಿಸುತ್ತಾರೆ, ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಮಂದಿ ಆದರಿಸಿ ಸರ್ಕಾರ ರಚನೆಯಲ್ಲಿ ಸೇರಿಸಿ ಕೊಳ್ಳುತ್ತಾರೆ, ರಾಹುಲ್ ಗಾಂದಿ ಪ್ರಧಾನಿಯಾದರು ಅಂದು ಕೊಳ್ಲುವಾಗಲೇ ಮನಮೋಹನ್ ಸಿಂಗ್ ಪುನರಾಯ್ಕೆಯಾಗುತ್ತಾರೆ ಅಂದರೆ ಇದರ ಹಿಂದಿನ ರಾಜಕೀಯವೇನು? ಒಂದು ಕಡೆ ಸಿಖ್ಖರನ್ನು ಎದುರು ಹಾಕಿಕೊಳ್ಳಲು ಇಚ್ಚಿಸದ ಕಾಂಗ್ರೆಸ್ ಮನಮೋಹನ್ ಸಿಂಗ್ ರನ್ನೇ ಪ್ರಧಾನಿಯಾಗಿ ಮುಂದುವರೆಸುವ ಸಂಕಲ್ಪ ಮಾಡುತ್ತದೆ, ಇತ್ತ ತಮಿಳರನ್ನು ಒಲಿಸಿ ಕೊಳ್ಳುವ ನಿಟ್ಟಿನಲ್ಲಿ ಡಿಎಂಕೆ ಯಂತಹ ಪ್ರಾದೇಶಿಕ ಪಕ್ಷವನ್ನು ಅಪ್ಪಿಕೊಂಡರೆ, ಮತ್ತೊಂದೆಡೆ ಕಮ್ಯುನಿಸ್ಟ ರನ್ನು ಬಗ್ಗು ಬಡಿಯಲು ತೃಣಮೂಲ ಕಾಂಗ್ರೆಸ್ ಅನ್ನು ಅಪ್ಪಿಕೊಳ್ಳುತ್ತದೆ. ರಾಜಕಾರಣದ ಒಳಗುಟ್ಟುಗಳೇನೇ ಇರಲಿ ಇನ್ನು ಒಂದು ವರ್ಷಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಬದಲಾವಣೆ ಮಾತ್ರ ನಿಶ್ಚಿತ! ಇರಲಿ ಕೇಂದ್ರ ಸರ್ಕಾರದಲ್ಲಿ ತನ್ನ ಸಂಸದರ ಅರ್ಧದಷ್ಟು ಸಂಖ್ಯೆಯ ಅತ್ಯಂತ ಪ್ರಭಾವಶಾಲಿ ಖಾತೆಗಳನ್ನು ಪಡೆದಿರುವ ಕರುಣಾನಿಧಿ ರಾಜ್ಯದ ಅಭಿವೃದ್ಧಿಯ ಮಟ್ಟಿಗೆ ತೊಡರುಗಾಲು. ನೀರಿನ ವಿಚಾರ ಬಂದಾಗ,ಉದ್ಯಮಗಳ ಹೂಡಿಕೆ, ಯೋಜನೆಗಳ ಅನುಷ್ಠಾನ ಹೀಗೆ ಎಲ್ಲದರಲ್ಲಿಯೂ ಈತ ಕರ್ನಾಟಕದ ಮಟ್ಟಿಗೆ ಕಂಟಕ, ಆತ ಬೆಳೆದು ಬಂದ ಹಿನ್ನೆಲೆಯು ಅಂತಹುದೇ ಆತ ಸಾಗಿ ಬಂದ ಕಥೆಯು ಒಂದು ರೋಚಕ ಅಧ್ಯಾಯವೇ ಸರಿ.
'ದೇಹ ಮಣ್ಣಿಗೆ, ಜೀವನ ತಮಿಳರಿಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆಗೆ ಧುಮುಕಿದ ಕರುಣಾನಿಧಿ ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕುವಲೈ ನಲ್ಲಿ 3ನೇ ಜೂನ್ ೧೯೨೪, ಈತನ ತಾಯಿ ದೇವಸ್ಥಾನದಲ್ಲಿ ನರ್ತಕಿ. ರಾಜಕೀಯಕ್ಕೆ ಬರುವ ಮುನ್ನ ಸಿನಿಮಾರಂಗದಲ್ಲಿ ಹೆಸರು ಮಾಡಿದವರು. ತನ್ನ 20ನೇ ವಯಸ್ಸಿನಲ್ಲಿಯೇ ಸಿನಿಮಾಗಳಿಗೆ ಚಿತ್ರಕಥೆ-ಸಂಭಾಷಣೆ ಬರೆಯಲು ಆರಂಭಿಸಿದ ಕರುಣಾನಿಧಿ, ಕವನ, ಹಾಡು, ಕಥೆ ಗಳನ್ನು ಬರೆದರು, ಇವರು ಕಥೆ ಚಿತ್ರಕಥೆ ಬರೆದ ಸಿನಿಮಾಗಳು ತಮಿಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದವು.70ಕ್ಕೂ ಹೆಚ್ಚು ಸಿನಿಮಾ ಕಥೆಗಳು 100ಕ್ಕೂ ಹೆಚ್ಚು ಇತರೆ ಸಾಹಿತ್ಯ ಕೃತಿ ರಚಿಸಿದ ಹೆಗ್ಗಳಿಕೆ ಇವರದು. 1942ರಲ್ಲಿ ಮುರಸೋಳಿ ಎಂಬ ಪತ್ರಿಕೆಯನ್ನು ಆರಂಭಿಸಿ ಬೇರೆ ಬೇರೆ ಪತ್ರಿಕೆಗಳಲ್ಲು ಸಂಪಾದಕರಾಗಿ, ಅಂಕಣಕಾರರಾಗಿ ವೃತ್ತಿ ಬದುಕು ನಡೆಸಿದವರು. ಮೊದಲ ಭಾರಿಗೆ ಈತ ಚುನಾವಣಾ ರಾಜಕೀಯ ಪ್ರವೇಶಿಸಿದ್ದು 1957ರಲ್ಲಿ ಸತತವಾಗಿ ಇದುವರೆಗೂ 10ಭಾರಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಪಡೆದಿರುವ ಕರುಣಾನಿಧಿ 60ವರ್ಷಗಳಿಂದಲೂ ರಾಜಕೀಯ ನಡೆಸಿದ್ದಾರೆ.1969ರಿಂದ ಸತತವಾಗಿ 5ಭಾರಿ ಮುಖ್ಯಮಂತ್ರಿ ಪದವಿಗೆ ಏರಿದ್ದಾರೆ. ಇದೀಗ ಅವರ 3ಜನ ಪತ್ನಿಯ ಪೈಕಿ ಎರಡನೇ ಪತ್ನಿಯ ಪುತ್ರ ಸ್ಟಾಲಿನ್ ಗೆ ಉಪಮುಖ್ಯಮಂತ್ರಿ ಪದವಿ ನೀಡುವ ಮೂಲಕ ತಮಿಳುನಾಡಿನ ರಾಜಕೀಯಾಂಗಣದಲ್ಲಿ
ತಮ್ಮ ಶಕೆಯನ್ನು ಮುಂದುವರಿಸಿದ್ದಾರೆ. ಜನಸಾಮಾನ್ಯರ ಸಮಸ್ಯಗಳು, ಭ್ರಷ್ಠಾಚಾರದ ಆರೋಪ, ಹಿಂದಿ ಭಾಷೆಯ ವಿರುದ್ಧದ ಚಳುವಳಿ ತಮಿಳು ಹುಲಿಗಳ ಪರವಾದ ಹೋರಾಟ ಹೀಗೆ 14ಬಾರಿ ಜೈಲು ಕಂಡಿದ್ದಾರೆ. ಅಪ್ಪಟ ತಮಿಳು ಪ್ರೇಮಿಯಾಗಿ ಮಲೇಷಿಯಾ ಮತ್ತು ಪ್ಯಾರೀಸ್ ನಲ್ಲಿ ಜಾಗತಿಕ ತಮಿಳು ಸಮಾವೇಶ ನಡೆಸಿದ ಕೀರ್ತಿ ಇವರಿಗಿದೆ.ಅಣ್ಣಾಮಲೈ ಮತ್ತು ಮಧುರೈ ಕಾಮರಾಜ್ ಯುನಿವರ್ಸಿಟಿ ಯಿಂದ ಎರಡು ಗೌರವ ಡಾಕ್ಟರೇಟ್ ಸೇರಿದಂತೆ ಇತರೆ ಪ್ರತಿಷ್ಟಿತ ಪುರಸ್ಕಾರ ಇವರ ಬೆನ್ನಿಗಿದೆ. ಮೂಲತ: ಮಾಂಸಹಾರಿ ಯಾದರು ರೋಡಿಸಿಕೊಂಡದ್ದು ಸಸ್ಯಾಹಾರವನ್ನು ಮಾತ್ರ. ಹಿಂದೂ ಸಂಪ್ರದಾಯ ಮತ್ತು ಆಚರಣೆಗಳ ವಿರುದ್ಧ ಅಸಹನೆ ಇಟ್ಟುಕೊಂಡಿರುವ ಕರುಣಾನಿಧಿ ಪ್ರಗತಿ ಪರ ಚಿಂತನೆ ರೂಡಿಸಿಕೊಂಡವರು. ಪ್ರತಿ ನಿತ್ಯ ಯೋಗ ಮಾಡುವುದು ಅವರ ೮೫ ನೇ ವಯಸ್ಸಿನ ಯಶಸ್ಸಿನ ಗುಟ್ಟು.ಪ್ರಾದೇಶಿಕ ಪಕ್ಷವೊಂದರ ಮುಖಂಡನಾಗಿ ಅಂದು ಕೊಂಡ ಸಿದ್ಧಾಂತಗಳಿಗೆ ಅಪಚಾರವಾಗದಂತೆ ಅಂದು ಕೊಂಡದ್ದನ್ನು ಸಾಧಿಸುವ ಇಂತಹ ಛಲಗಾರ ನಮ್ಮಲ್ಲೂ ಇದ್ದಾರ ! ?

Sunday, May 24, 2009

ಕ್ರಿಕೇಟ್ ಎಂಬ ಮಾಯೆಯು......

ಬಿಡೆನೆಂದರೂ ಬಿಡದೀ ಮಾಯೆ ಎಂಬಂತೆ.... ಕ್ರಿಕೇಟ್ ಎಂಬ ಆಟ ಜಗತ್ತಿನಾಧ್ಯಂತ ಸಮಸ್ತರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಈಗ ನಡೆಯುತ್ತಿರುವ ಐಪಿಎಲ್ ಕ್ರಿಕೇಟ್ ಸಹ ಕ್ರೀಡಾಸಕ್ತರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ. ನೋಡಿದಷ್ಟು ನೋಡಬೇಕು ಹಾಗೂ ಸಾಕು ಎನಿಸದಷ್ಟು ಆವರಿಸಿಕೊಳ್ಳುವ ಕ್ರಿಕೇಟ್ ಇಂದು ಜಗತ್ತಿನ ಅತ್ಯಂತ ಶ್ರೀಮಂತ ಆಟ. ಟೆನ್ನಿಸ್, ಚೆಸ್ ಹಾಗು ಪುಟ್ಬಾಲ್ ಪಂದ್ಯಗಳಿಗೆ ನಂತರದ ಸ್ಥಾನವಿದೆ. ಈ ಆಟದಲ್ಲಿ ಆಡುವವರಿಗೂ, ಪ್ರಾಯೋಜಿಸುವವರಿಗೂ ಹಣದ ಹೊಳೆಯೇ ಹರಿಯುತ್ತದೆ. ಇದನ್ನು ಪ್ರಸಾರ ಮಾಡುವ ದೃಶ್ಯ ಮಾದ್ಯಮಗಳಿಗೆ ಸೆಕೆಂಡುಗಳ ಲೆಕ್ಕದಲ್ಲಿ ಮಿಲಿಯನ್ ಲೆಕ್ಕದಲ್ಲಿ ಹಣದ ಹೊಳೆ ಹರಿದು ಬರುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿವೆ. ಮೊದಲಿಗೆ ಟೆಸ್ಟ್ ಪಂದ್ಯಗಳು ಆರಂಭವಾದರೆ ನಂತರದಲ್ಲಿ ಒಂದು ದಿನದ ಪಂದ್ಯಗಳು ಚಾಲನೆ ಪಡೆದುಕೊಂಡವು, ಈಗ ಬದಲಾದ ಪರಿಸ್ಥಿತಿಯಲ್ಲಿ 20ಓವರ್ ಗಳ ಪಂದ್ಯ ಜಾರಿಯಲ್ಲಿದೆ. ಬಂಡವಾಳ ಶಾಹಿಗಳು ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಂಡು ಪಂದ್ಯಗಳನ್ನು ಪ್ರಾಯೋಜಿಸುತ್ತಿದ್ದಾರೆ. ಪಂದ್ಯದ ಆಕರ್ಷಣೆಗಾಗಿ ತುಂಡು ಬಟ್ಟೆ ಧರಿಸಿದ ಲಲನೆಯರು, ಬಾಲಿವುಡ್ ನಟಿಯರನ್ನು ಕರೆದು ತಂದಿವೆ. ಒಂದೊಂದು ತಂಡಗಳ ಮೇಲೂ ೪೦೦-500ಕೋಟಿ ರೂಪಾಯಿಗಳ ಹೂಡಿಕೆಯಾಗಿದೆ. ಇವುಗಳ ಜಾಹೀರಾತು ಪ್ರಾಯೋಜನೆ 1000ಕೋಟಿ ವಹಿವಾಟು ನಡೆಸುತ್ತಿದೆ. ಅದಕ್ಕಿಂತ ಹೆಚ್ಚಾಗಿ ಅನಧಿಕೃತವಾಗಿ ನಡೆಯುವ ಬೆಟ್ಟಿಂಗ್ ದಂಧೆ ಕೋಟ್ಯಾಂತರ ರೂಪಾಯಿಗಳನ್ನು ಬದಲಿಸುತ್ತದೆ. ಇಂತಹದ್ದೊಂದು ಆಟ ಹೇಳಿಕೊಡಲೆಂದೆ ತರಭೇತಿ ಕೇಂದ್ರಗಳು ಹುಟ್ಟಿಕೊಂಡಿವೆ. ಬಹುತೇಕ ತಂದೆ ತಾಯಿಯೂ ತಮ್ಮ ಮಕ್ಕಳು ಕ್ರಿಕೇಟ್ ಕಲಿಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ದುಡ್ಡು ಸುರಿಯಲು ತಯಾರಾಗಿರುತ್ತಾರೆ. ಪಂದ್ಯದ ದಿನಗಳಲ್ಲಿ ರಸ್ತೆಗಳು ನಿರ್ಜನವಾಗುತ್ತವೆ, ನೀರವ ವಾತಾವರಣ ಇರುತ್ತದೆ. ಇಂತಹ ಕ್ರಿಕೆಟ್ ಹುಟ್ಟಿದ್ದು ಹೇಗೆ ಗೊತ್ತೇ? ನಿಮ್ಮ ಕುತೂಹಲಕ್ಕಾಗಿ ಒಂದಿಷ್ಟು ಮಾಹಿತಿ ನೀಡಿದ್ದೇನೆ ಓದಿಕೊಳ್ಳಿ
ಕ್ರಿಕೇಟ್ ಆಟ ಆರಂಭವಾಗಿದ್ದು 16ನೇ ಶತಮಾನದಲ್ಲಿ , ಮೊದಲ ಅಂತರ ರಾಷ್ಟ್ರೀಯ ಪಂದ್ಯ ಆಡಲ್ಪಟ್ಟಿದ್ದು ೧೮೪೪,ಅಧಿಕೃತವಾಗಿ ಟೆಸ್ಟ್ ಪಂದ್ಯ ಆಡಿದ್ದು 1877ರಲ್ಲಿ. ದಕ್ಷಿಣ-ಪೂರ್ವ ಇಂಗ್ಲೆಂಡ್ ನಲ್ಲಿ ಕೆಂಟ್ ಮತ್ತು ಸಸೆಕ್ಷ್ ನಗರಗಳಲ್ಲಿ ಮೊದಲಬಾರಿಗೆ ಕ್ರಿಕೇಟ್ ಆಡಲಾಯಿತು. 1598ರಲ್ಲಿಯೇ 'ಕ್ರಿಕೆಟ್ 'ಎಂಬ ಹೆಸರನ್ನು ಈ ಆಟಕ್ಕೆ ಇಡಲಾಯಿತು. ಇದು ಡಚ್ ಮೂಲದ ಪದವಾಗಿದೆ. ಬಹುತೇಕ ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ಇದನ್ನು ಆಡಲಾಗುತ್ತದೆ. ಮೊದಲಭಾರಿ ಲಂಡನ್ ನಿಂದ ಹೊರಗೆ 17ನೇ ಶತಮಾನದಲ್ಲಿ ಉತ್ತರ ಅಮೇರಿಕಾಕ್ಕೆ ಕ್ರಿಕೇಟ್ ಆಟವನ್ನು ಪರಿಚಯಿಸಲಾಯಿತು.18ನೇ ಶತಮಾನದಲ್ಲಿ ಜಗತ್ತಿನಾದ್ಯಂತ ಹಂತ ಹಂತವಾಗಿ ಕ್ರಿಕೆಟ್ ಆಟ ಪರಿಚಯವಾಯಿತು. ಭಾರತ ಮತ್ತು ವೆಸ್ಟ್ ಇಂಡೀಸ್ ಗೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಗಳು ಕ್ರಿಕೇಟ್ ಆಟವನ್ನು ಪರಿಚಯಿಸಿದವು, ಆಸ್ಟ್ರೇಲಿಯಾದಲ್ಲಿ 1988ರಲ್ಲಿ , ನ್ಯೂಜಿಲ್ಯಾಂಡ್, ದಕ್ಷಿಣ ಆಪ್ರಿಕಾದಲ್ಲಿ 19ನೇ ಶತಮಾನದಲ್ಲಿ ಕ್ರಿಕೇಟ್ ಆಡಲ್ಪಟ್ಟಿತು. 1744ರಲ್ಲಿ ಕ್ರಿಕೇಟ್ ಆಟಕ್ಕೆ ನಿರ್ದಿಷ್ಠ ಮಾರ್ಗಸೂಚಿಗಳನ್ನು ರಚಿಸಲಾಯಿತು. ನಂತರ ಕ್ಲಬ್ ರೂಪದಲ್ಲಿ ತಂಡಗಳು ರಚನೆಯಾಗಿ ಕ್ರಿಕೇಟ್ ಆಡಲಾಯಿತು. ಅಂತರಾಷ್ಟ್ರೀಯ ಮಟ್ಟದ ಕ್ಲಬ್ ಗಳು ರಚನೆಯಾದವು ಅದರ ನಂತರವೇ ವರ್ಲಡ್ ಕಪ್ ಪಂದ್ಯಾವಳಿ ಪ್ರಾಯೋಜಿಸಲಾಯಿತು. ಕ್ರಿಕೇಟ್ ಆಟ ಆಯಾ ದೇಶಗಳ ಪ್ರತಿಷ್ಟೆಯ ಪ್ರಶ್ನೆಯಾಗಿದ್ದು ಆಗಲೇ. ಈಗ ಅಂತರ ರಾಷ್ಟ್ರೀಯ ಕ್ರಿಕೇಟ್ನಲ್ಲಿ ೧೨ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಈ ಕ್ರಿಕೇಟ್ ಜ್ವರ ಎಷ್ಟರ ಮಟ್ಟಿಗೆ ಏರಿದೆಯೆಂದರೆ ಅಲ್ಲಿ ನಮ್ಮ ತಂಡ ಸೋತರೆ, ನಮ್ಮ ಆಟಗಾರ ಔಟಾದರೆ ಇಲ್ಲಿ ಹೃದಯ ಕ್ರಿಯೆ ನಿಲ್ಲುತ್ತದೆ. ಹುಚ್ಚೆದ್ದ ಅಬಿಮಾನಿಗಳು ಗೆದ್ದರೆ ಮೆರವಣಿಗೆ ಸೋತರೆ ಗಲಭೆ ಮಾಡಿಸುವಷ್ಟರ ಮಟ್ಟಿಗೆ ಕ್ರಿಕೇಟ್ ಬೆಳವಣಿಗೆಯಾಗಿದೆ. ಇದೇ ಕ್ರಿಕೇಟ್ ಮಾಯೆ.

Thursday, May 21, 2009

ಯುವ ನೇತಾರನಿಗೆ ಆದಿಕಾರದ ಚುಕ್ಕಾಣಿ ಸಿಕ್ಕೀತೆ

ಯುಪಿಎ ಇಂದು ಸರ್ಕಾರ ರಚನೆಮಾಡಲಿದೆ. ದೇಶಕ್ಕೆ ಆರ್ಥಿಕ ಉದಾರೀಕರಣ ನೀತಿಯನ್ನು ಪರಿಚಯಿಸಿದ ಖ್ಯಾತ ಅರ್ಥ ಶಾಸ್ತ್ರಜ್ಞ ಮನಮೋಹನ್ ಸಿಂಗ್ ಎರಡನೇ ಭಾರಿಗೆ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗುತ್ತಿದ್ದಾರೆ. ಸರ್ಕಾರ ರಚನೆಯಲ್ಲಿ ಪಾಲುದಾರರಾಗಿರುವ ಸಣ್ಣಪುಟ್ಟ ಪಕ್ಷಗಳು ತಮಗೆ ಇಂತಹುದೇ ಖಾತೆ ಬೇಕೆಂದು ಕ್ಯಾತೆ ತೆಗೆಯುತ್ತಿವೆಯಾದರೂ ಅಂತಿಮವಾಗಿ ಸಿಕ್ಕಿದ್ದೇ ಸೀರುಂಡೆ ಎಂದು ಸುಮ್ಮನಾಗಬಹುದೇನೋ. ಸಂಪುಟದಲ್ಲಿ ತಮಿಳುನಾಡು ಕರುಣಾನಿದಿ ಪುತ್ರ ಮತ್ತು ಪುತ್ರಿ, ದಯಾನಿಧಿ ಮಾರನ್ ನಂತಹ ವಿದ್ಯಾವಂತ ಯುವಪಡೆ ಸಂಪುಟದಲ್ಲಿ ಸೇರ್ಪಡೆಯಾಗುತ್ತಿದೆ.ಅತ್ಯಂತ ಗಮನ ಸೆಳೆಯುತ್ತಿರುವ ಸಂಗತಿಯೆಂದರೆ ಇದುವರೆಗೂ ಪ್ರಧಾನಿ ಪಟ್ಟಕ್ಕೆ ಹೆಸರು ಕೇಳಿ ಬರುತ್ತಿದ್ದ ರಾಹುಲ್ ಗಾಂದಿ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ದಿ ಇಲ್ಲವೇ ಮಾನವ ಸಂಪನ್ಮೂಲ ಸಚಿವರಾಗುತ್ತಾರೆನ್ನುವುದು. ಈ ಹಿಂದೆ ಅವರ ಹೆಸರು ಜವಾಬ್ಧಾರಿ ಹುದ್ದೆಗಳಿಗೆ ಕೇಳಿಬಂದಾಗ " ನಾನು ಅನನುಭವಿ " ಎಂದೇ ಹೇಳುತ್ತಿದ್ದರು. ರಾಹುಲ್ ಜನಿಸಿದ್ದು 19 ಜೂನ್ 1970, ಅವರ 20ನೇ ವಯಸ್ಸಿನ್ಲ್ಲಿ ಇಂದಿರಾಗಾಂದಿಯ ಹತ್ಯೆಯಾಯ್ತು. ಹೊಸದೆಹಲಿಯ ಸೆ. ಕೊಲಂಬಿಯಾ ಶಾಲೆಯಲ್ಲಿ ಕಲಿತ ರಾಹುಲ, ನಂತರ ಡೋನ್ ಶಾಲೆ ಸೇರಿದರು. ಮುಂದೆ ರಕ್ಷಣಾ ಕಾರಣಗಳಿಂದಾಗಿ ಮನೆಯಲ್ಲಿಯೇ ಕಲಿತು ಹೈಸ್ಕೂಲ್ ಶಿಕ್ಷಣ ಪುರೈಸಿದರು, ಮತ್ತೆ ಸೆ. ಸ್ಟೀಫನ್ ಕಾಲೇಜು ಸೇರಿ ಅರ್ಥಶಾಸ್ತ್ರದಲ್ಲಿ ಪದವಿಗೆ ಸೇರಿದರು. ಓದಿನಲ್ಲಿ ಅಷ್ಟೇನೂ ಜಾಣನಲ್ಲದ ರಾಹುಲ್ ಅತ್ಯುತ್ತಮ ಪಿಸ್ತೂಲ್ ಶೂಟರ್ ಆಗಿದ್ದು ವಿಶೇಷ. ಮುಂದೆ ಫ್ಲೋರಿಡಾದ ರೋಲ್ಲಿನ್ಸ್ ನಲ್ಲಿ ಸೇರಿ ಬಿಎ ಪದವಿ ಮುಗಿಸಿದರು. ಹಾಗೆಯೇ ಕೇಂಬ್ರೀಡ್ಜ್್ ನ ಟ್ರಿನಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಅಬಿವೃದ್ದಿಯಲ್ಲಿ ಎಂಫಿಲ್ ಸ್ನಾತಕ ಪದವಿ ಗಳಿಸಿದರು. ಭಾರತಕ್ಕೆ ವಾಪಾಸಾಗುವ ಮುಂಚೆ ಲಂಡನ್ ನ ಸ್ಟ್ರಾಟೆಜಿ ಕನ್ಸಲ್ಟೆನ್ಸಿ ಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು. ತನ್ನ ಗೆಳತಿ ವೆರೋನಿಕಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಮೊದಲಭಾರಿಗೆ ಇವರನ್ನು ಮಾದ್ಯಮದಲ್ಲಿ ಪ್ರಚಾರಕ್ಕೆ ಎಳೆಯಿತು. ಕಳೆದ 2004ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ಬಂದ ರಾಹುಲ್ ರಾಜಕೀಯ ಜೀವನಕ್ಕೆ ಅಧಿಕ್ಋತ ಸೇರ್ಪಡೆಯಾದರು. ಆ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 3,00,500 ಆಗಿತ್ತು. ಮೊದಲಿಗೆ ಪ್ರಿಯಾಂಕ ಗಾಂದಿಗೆ ಅಲ್ಲಿ ಸ್ಪರ್ಧಿಸುವ ಒತ್ತಡವಿತ್ತಾದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ರಾಹುಲ್ ಗಾಂದಿಗೆ ಅವಕಾಶ ಒದಗಿ ಬಂತು. ಚುನಾವಣೆಗಳಲ್ಲಿ ಸೋತು ಸುಣ್ನವಾಗಿ ಸಮ್ಮಿಶ್ರ ಸರ್ಕಾರಗಳ ಯುಗ ಆಗ ಆರಂಬವಾಗಿತ್ತು. ಕಾಂಗ್ರೆಸ್ ಪಕ್ಷದ ಉಳಿವು ಉಳಿವಿಗೂ ಗಾಂಧಿ ಮನೆತನದ ವರ್ಚಸ್ಸು ಬೇಕಿತ್ತು. ಹೀಗೆ ರಾಜಕೀಯ ಜೀವನ ಆರಂಭಿಸಿದ ರಾಹುಲ್, ನೇರವಾಗಿ ಯಾವುದೇ ಮಂತ್ರಿಗಿರಿ ಪಡೆಯದಿದ್ದರು ಗೃಹಖಾತೆಯ ಸಲಹಾ ಸಮಿತಿಯಲ್ಲಿ ಸದಸ್ಯರಾಗಿದ್ದರು, ಸೆ.24, 2007ರವೇಳೆಗೆ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿಯಾದರು ಮುಂದೆ ಯುವ ಕಾಂಗ್ರೆಸ್ನ ಅಧ್ಯಕ್ಷರು ಆದರು. ಈ ಹುದ್ದೆಗೆ ಬಂದ ನಂತರ ಕಾಂಗ್ರೆಸ್ ನಲ್ಲಿ ಯುವಪಡೆಯನ್ನು ಅತ್ಯಂತ ಯಶಸ್ವಿಯಾಗಿ ಕಟ್ಟಿ ಬೆಳೆಸಿದ ಕೀರ್ತಿ ರಾಹುಲ್ಗೆ ಸಲ್ಲುತ್ತದೆ. ದೇಶದ ಎಲ್ಲ ರಾಜ್ಯಗಳಲ್ಲು ಜಿಡ್ಡು ಗಟ್ಟಿದ್ದ ಯುವ ಕಾಂಗ್ರೆಸ್ ಗೆ ಚೈತನ್ಯ ತುಂಬಿದ ರಾಹುಲ್ ಹೊಸ ಸಂಚಲನಕ್ಕೆ ಕಾರಣರಾದರು. ದೇಶದ ಎಲ್ಲೆಡೆಯೂ ಒಂದು ಚಟುವಟಿಕೆಯ ತಂಡ ರೂಪುತಳೆಯಿತು, ಈ ಬಾರಿಯ ಕಾಂಗ್ರೆಸ್ ಗೆಲುವಿಗೂ ಅದು ಸಾಥ್ ನೀಡಿತು. ಆ ಮೂಲಕ ಕಾಂಗ್ರೆಸ್ನ ಹಳೆಯ ತಲೆಗಳ ಜೊತೆಗೆ ಹೊಸ ತಲೆಗಳ ಸೇರ್ಪಡೆಯೂ ಆಯಿತು. ರಾಹುಲ್ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂದಿ ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ದಿಗೆ ಮಹತ್ವ ನೀಡಿದವರು, ಅಂತೆಯೇ ರಾಹುಲ್ ಕೇಂದ್ರ ಮಂತ್ರಿಯಾದರೆ ಗ್ರಾಮೀಣಾಭಿವೃದ್ದಿಯ, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹೊಸತನ್ನು ನಿರೀಕ್ಷಿಸಬಹುದೇನೋ.ಕಾದು ನೋಡೋಣ.

Sunday, May 17, 2009

ಚುನಾವಣೆ ನಂತರದ ನಿರೀಕ್ಷೆಗಳೇನು?


ಶಾಂತಿಯುತ ಚುನಾವಣೆ ಮತ್ತು ಮತದಾನ ಖುಷಿ ಕೊಟ್ಟಂತೆಯೇ ಚುನಾವಣಾ ಪಲಿತಾಂಶವೂ ಸಹಾ ಖುಷಿ ನೀಡಿದೆ. ಹೆಮ್ಮೆಯಿಂದ ಬೀಗುತ್ತಿದ್ದ ಹಾಗೂ ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕಾಂಗ್ರೆಸ್,ಬಿಜೆಪಿ,ಕಮ್ಯುನಿಸ್ಟ್ ಪಕ್ಷಗಳು ಹೊರತು ಪಡಿಸಿದಂತೆ ಇತರೆ ಪಕ್ಷಗಳಿಗೆ ಸರಿಯಾದ ಪಾಠವಾಗಿದೆ. ಬಿಜೆಪಿ ನಾಯಕರು ರಾಷ್ಟ್ರೀಯ ವಿಚಾರಗಳಿಗೆ ಸಂಬಂದಿಸಿದಂತೆ ನಿರ್ದಿಷ್ಠ ನಿಲುವುಗಳನ್ನು ಇರಿಸಿ ಕೊಳ್ಳದೇ ಹೋಗಿದ್ದು ಇದಕ್ಕೆ ಕಾರಣವಿರ ಬಹುದೇನೊ. ಆ ಪೈಕಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆಂಬುದು ಬಿಜೆಪಿಯ ಸವಕಲು ಹೇಳಿಕೆ, ಇದಕ್ಕೆ ಸಂಬಂದಿಸಿದಂತೆ ಈ ಬಾರಿಯ ಚುನಾವಣೆ ಪ್ರಚಾರದ ಸಂಧರ್ಭದಲ್ಲೂ ಅಡ್ವಾಣಿಯವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಬಿಜೆಪಿಯೇತರರ ಸಲಹೆ ಪಡೆದು ಮುಂದುವರಿಯುವುದಾಗಿ ಹೇಳಿದರು. ಬಿಜೆಪಿ ಗೆ ಹೇಳಿಕೊಳ್ಳುವಂತಹ, ಶಕ್ತಿ ತುಂಬ ಬಲ್ಲಂತಹ ಇಶ್ಯೂಗಳು ಸಿಗದಿರುವುದು ಸಹಾ ಬಿಜೆಪಿ ಹಿನ್ನೆಡೆಗೆ ಕಾರಣ ಇರಬಹುದು. ಸದ್ಯದ ಪರಿಸ್ಥಿತಿಯಲ್ಲಿ ಕಿಚಡಿ ಪಕ್ಷಗಳ ಕೂಟದ ಸರ್ಕಾರ ರಚನೆಯಾದರೂ ಮುಂದಿನ ದಿನಗಳಲ್ಲಿ ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ನೀಡುವ ಬಗ್ಗೆ ಈ ಚುನಾವಣೆ ಮುನ್ಸೂಚನೆ ನೀಡಿದೆ. ಜಯಲಲಿತ, ಮಾಯಾವತಿ, ಪಾಸ್ವಾನ್, ಲಾಲೂ, ಕಮ್ಯೂನಿಸ್ಟರುಗಳಿಗೆ ಸರಿಯಾದ ಪಾಠವನ್ನು ಮತದಾರ ಕಲಿಸಿದ್ದಾನೆ, ಅಲ್ಪ ಸ್ವಲ್ಪ ಸ್ಥಾನ ಗಳಿಸಿ ಸರ್ಕಾರ ರಚಿಸುವ ಪಕ್ಷಗಳಿಗೆ ಬೆಂಬಲ ನೀಡಿ ತಮ್ಮ ತೀಟೆ ತೀರದಿದ್ದರೆ ಬೆಂಬಲ ವಾಪಾಸ್ ಪಡೆಯುವ ಹಾಗು ಅಲ್ಪ ಸ್ವಲ್ಪ ಬಲವಿಟ್ಟುಕೊಂಡೆ ಕಡಿಮೆ ಅವಧಿಗಾದರೂ ಅಧಿಕಾರ ಪಡೆಯುವ 'ತಿರುಕ' ಕನಸುಗಳಿಗೆ ತಿಲಾಂಜಲಿ ಬಿದ್ದಿದೆ, ಇದು ಸಮಾಧಾನಕರ ಅಂಶ. ಏಕೆಂದರೆ ಬಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಕನಿಷ್ಠ 5ವರ್ಷ ಅಧಿಕಾರ ನಡೆಸುವ ಯಾವುದೇ ಪಕ್ಷದ ಸರ್ಕಾರ ಅಂತರ ರಾಷ್ಟ್ರೀಯ ವಿಚಾರಗಳು ಬಂದಾಗ ವಿವೆಚನೆಯಿಂದ ನಿರ್ದಾರ ಕೈಗೊಳ್ಳಬೇಕಾಗುತ್ತದೆ, ದೇಶದ ಆಗುಹೋಗುಗಳ ಮೇಲೆ ನಿಖರವಾದ ನಿಲುವು ಹೊಂದಿರ ಬೇಕಾಗುತ್ತದೆ. ರಾಷ್ಟ್ರೀಯ ಪಕ್ಷಗಳ ನೇತಾರರಿಗೆ ಈ ಸಾಮರ್ತ್ಯವಿರುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳಿಗೆ ಆಧಿಕಾರದ ಸಡಗರ ಅನುಭವದ ಕೊರತೆ ಇರುತ್ತದೆ ಇದರಿಂದಾಗಿ ಹಿನ್ನೆಡೆ ಅನುಭವಿಸಬೇಕಾಗುತ್ತದೆ, ಕೆಲವೊಮ್ಮೆ ಆಂತರಿಕ ಭದ್ರತೆಯಂತಹ ವಿಚಾರಗಳಿಗೂ ತೊಂದರೆ ಯಾಗಬಹುದು.ಇರಲಿ ಈಗ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕಿಂತ ಗಾಂದಿ ಮನೆತನ ಅದಿಕಾರಕ್ಕೆ ಬರಬಹುದೆಂಬ ದೂರದ ನಿರೀಕ್ಷೆಯೂ ಯುಪಿಎ ಬೆಂಬಲಕ್ಕೆ ಕಾರಣವಿರಬಹುದೇನೊ? ದಕ್ಷಿಣದ ರಾಜ್ಯಗಳಲ್ಲಿ ಅಂತಹ ಗಾಂದಿ ಮನೆತನದ ಒಲವು ಕಾಣ ಬಾರದಿದ್ದರು ಉತ್ತರದ ರಾಜ್ಯಗಳಲ್ಲಿ ಇನ್ನೂ ಗಾಂಧಿ ಮನೆತನದ ಪ್ರಭಾವಳಿ ಇರುವಂತಿದೆ.ಇದು ಯುಪಿಎ ಯಶಸ್ಸಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿರುವ 10-12 ಸ್ಥಾನಗಳಿಗೆ ಪಕ್ಷೇತರರು ಹಾಗೂ ಜೆಡಿಎಸ್ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷಗಳ ಬೆಂಬಲ ದೊಂದಿಗೆ ಸರ್ಕಾರ ನಡೆಯುವುದು ಖಚಿತ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಜೆಡಿಎಸ್ ನ ಕುಮಾರಸ್ವಾಮಿ ಕೇಂದ್ರ ಸಚಿವ ಸ್ಥಾನ ಅಲಂಕರಿಸಬಹುದು. ಇನ್ನು ಕಾಂಗ್ರೆಸ್ ವಲಯದಲ್ಲಿ ಈಗಾಗಲೇ ಅಂದರೆ ಚುನಾವಣೆ ಪೂರ್ವದಲ್ಲಿಯೇ ರಾಹುಲ್ ಗಾಂದಿಯನ್ನು ಪ್ರದಾನಿ ಮಾಡುವ ಇಂಗಿತ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಧ್ಯ ಯುಪಿಎ 6ತಿಂಗಳು ಇಲ್ಲವೇ 1ವರ್ಷ ಅಧಿಕಾರ ನಡೆಸಿ ಮತ್ತೆ ಚುನಾವಣೆಗೆ ಹೋಗುವ ವಿಚಾರವನ್ನು ತಳ್ಳಿ ಹಾಕುವಂತಿಲ್ಲ. ಅಷ್ಟೇ ಅಲ್ಲ ಕರ್ನಾಟಕದ ರಾಜಕೀಯದಲ್ಲು ಬದಲಾವಣೆ ನಿರೀಕ್ಷಿಸಬಹುದು. ಮಾಜಿ ಪ್ರಧಾನಿ ಹಾಗೂ ಸಂಸತ್ ಸದಸ್ಯರಾಗಿರುವ ದೇವೇಗೌಡ ಕೇಂದ್ರದಲ್ಲಿ ಸೋನಿಯಾ ಗಾಂಧಿಗೆ ಹತ್ತಿರವಾದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿ ಅಧಿಕಾರ ಬದಲಾವಣೆಗೆ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ದೆಹಲಿ ರಾಜಕೀಯ ಬೆಳವಣಿಗೆಗಳು ಇಂತಹ ನಿರೀಕ್ಷೆಗೆ ಪುಷ್ಟಿ ನೀಡಬಹುದು. ಒಂದು ವೇಳೆ ಸರ್ಕಾರದ ಬದಲಾವಣೆಯಾಗದಿದ್ದರೂ ಅಧಿಕಾರದ ಚುಕ್ಕಾಣಿ ಬದಲಾವಣೆ ಖಚಿತವೇನೋ ಎನಿಸುತ್ತಿದೆ.

Wednesday, May 13, 2009

ದಿಕ್ಕು ತಪ್ಪಿದ ನಾವೆಗೆ ಹೊಣೆ ಯಾರು?

ನನ್ನ ಖಾಸಗಿ ಬದುಕು ಜನರಿಗೆಕೆ ? ನನ್ನ ಸಂಸಾರದಲ್ಲಿ ತೊದಕಿತ್ತು ಹೊರಗೆ ಬಂದೆ , ಎಷ್ಟು ದಿನ ಅಷ್ನೆಯ್ ಬದುಕು ಸಗಿಸ್ಲಿ? ಇವ್ರು ನಾಲ್ಕೈದು ಡಿಗ್ರಿ ತಗೊಂಡಿದ್ದಾರೆ , ಊರಲ್ಲಿ ಕೆರೆ ಕಟ್ಟಿಸಿದ್ದಾರೆ , ಒಂದು ದೊನಿಯಿಮ್ದ ಇನ್ನೊಂದು ದೋಣಿಗೆ ಕಾಲಿರಿಸಿದ್ದೇನೆ. ಅಲ್ಲಿ ಕಾಣದ್ದನ್ನು ಇವರಲ್ಲಿ ಕಾಣುತ್ತಿದ್ದೇನೆ ಇದು ಶ್ರುತಿ ಯಂತಹ ನಟಿಮಣಿ ಕಂ ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಕ್ಷೆಯ ಡೈಲಾಗು. ತಾನೆ ಪ್ರೀತಿಸಿ ಒರಿಸ್ಸಾಗೆ ಓದಿ ಹೋಗಿ ನಿರ್ದೇಶಕ ಮಹೇಂದರ್ ವರಿಸಿ ೮ವರ್ಷ ಸಂಸಾರ ನಡೆಸಿದ ಶ್ರುತಿ ಸಂಸಾರದಲ್ಲಿ ಅಪಶ್ರುತಿ ಎದ್ದಿದೆ.( ಮುಂದುವರೆದಿದೆ)

Wednesday, May 6, 2009

ಯಡ್ಡಿಯೂರಪ್ಪನ ಮೇಲೆ ಯಾವ ಕ್ರಮ...?


ರಾಜಕಾರಣಿಗಳ ಮೇಲೆ ಚಪ್ಪಲಿ ಎಸೆತ ಈಗ ಸಾಮಾನ್ಯ ಎನಿಸಿದೆ. ಜನಸಾಮಾನ್ಯರ ೀ ನಡವಳಿಕೆಯ ಹಿಂದೆ ರಾಜಕಾರಣಿಗಳ ಬಗೆಗಿನ ಅಸಹನೆ ಚಪ್ಪಲಿ ಮತ್ತು ಶೂ ಗಳ ಮೂಲಕ ವ್ಯಕ್ತವಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ದೇಶದ ಹಲವೆಡೆ ಪತ್ರಕತಱರು, ನಿವ್ಋತ್ತ ಶಿಕ್ಷಕರು, ಗ್ರಾ.ಪಂ. ಸದಸ್ಯ ಮತ್ತು ಸಾಮಾನ್ಯ ನಾಗರೀಕರು ಇಂತಹ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ ಆ ಮೂಲಕ ರಾಜಕಾರಣಿಗಳ ಬಗ್ಗೆ ಸಮುದಾಯದ ಅಸಹನೆಯನ್ನು ಚಪ್ಪಲಿ ಎಸೆಯುವ ಮೂಲಕ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಪ್ರಕರಣಗಳನ್ನು ಪ್ರತ್ಯೇಕವಾಗಿ ಗಮನಿಸಿದರೆ ಅಂತಹ ಕ್ರಿಯೆಯ ಹಿಂದಿನ ವಾಸ್ತವಿಕತೆ ತೆರೆದುಕೊಳ್ಳುತ್ತಿದೆ. ಇದುವರೆಗಿನ ಎಲ್ಲ ಪ್ರಕರಣಗಳಲ್ಲೂ ಇಂತಹದ್ದೊಂದು ಕ್ರಿಯೆಯ ಹಿಂದಿನ ವಾಸ್ತವಿಕತೆಯನ್ನು ಅರಿತ ರಾಜಕೀಯ ಮುಖಂಡರು ಸಂಯಮ ಮತ್ತು ಸಹನೆಯಿಂದ ವರ್ತಿಸಿದ್ದಾರೆ. ಆದರೆ ಸಿಎಂ ಯಡ್ಡಿ ವಿಚಾರದಲ್ಲಿ ಮಾತ್ರ ಹಾಗಾಗಿಲ್ಲ. ಸಾರ್ವಜನಿಕವಾಗಿ ಇಂತಹದ್ದೊಂದು ಅಗೌರವ ಮುಖ್ಯಮಂತ್ರಿಯವರಿಗೆ ಆಗಿದ್ದು ಒಳ್ಳೆಯ ಬೆಳವಣಿಗೆಯಂತು ಅಲ್ಲ. ಈ ಘಟನೆಯನ್ನು ಮಾಜಿ ಪ್ರದಾನಿ ಹೆಚ್ ಡಿ ದೇವೇಗೌಡರ ವಿರುದ್ದದ ದಾಳವಾಗಿ ಮತಬ್ಯಾಂಕ್ ಗಾಗಿ ಬಳಸಿಕೊಂಡದ್ದು ಎಷ್ಟು ಸರಿ? ರಾಷ್ಟ್ರದ ಒಬ್ಬ ಹಿರಿಯ, ಮುತ್ಸದ್ದಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮತ್ತು ಅವರ ಕಾರ್ಯ ವೈಖರಿಯ ಬಗ್ಗೆ ಹಾಸನದ ಜನರನ್ನು ಕೆರಳಿಸುವ ಪ್ರಚೋದನಾಕಾರಿ ಭಾಷಣವನ್ನು ಮುಖ್ಯಮಂತ್ರಿ ಮಾಡಿದ್ದು ತಪ್ಪಲ್ಲವೇ? ಇಂತಹ ಮಾತುಗಳೇ ಚಪ್ಪಲಿ ಎಸೆತಕ್ಕೆ ಕಾರಣವಲ್ಲವೇ? ಸಿಎಂ ಪದವಿ ಒಂದು ಜವಾಬ್ದಾರಿ ಹುದ್ದೆ ಅದನ್ನರಿತು ಹೊಣೆಗಾರಿಕೆಯಿಂದ ವರ್ತಿಸಬೇಕಾದ ಅಗತ್ಯವೂ ಇದೆ. ಆದರೆ ಯಡ್ಡಿಯೂರಪ್ಪ ಮಾಡಿದ್ದೇನು? ಚಪ್ಪಲಿ ಎಸೆತದ ಮರುಕ್ಷಣವೇ ಇದನ್ನು ದೇವೇಗೌಡ ಮತ್ತವರ ಮಕ್ಕಳು ಮಾಡಿಸಿದ್ದಾರೆ. ನಾನು ಮಂಡ್ಯದ ಗಂಡು ಪೋಲೀಸರೇ ನೀವು ಗಂಡಸರಾದರೆ ಆತನನ್ನು 6ತಿಂಗಳು ಜೈಲಿಗಟ್ಟಿ ಇದು ಅವರ ವಾಗ್ಜರಿಯ ತುಣುಕು.
ಇನ್ನು ಹಾಸನದ ಮಟ್ಟಿಗೆ ಹೇಳುವುದಾದರೆ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಮಾಡಿದ್ದೇನು? ಜಿಲ್ಲೆಯ 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಆಲೂಗಡ್ಡೆ ನಷ್ಟವಾದಾಗ ಜಿಲ್ಲೆಯ ರೈತರ ಕಣ್ಣೀರು ಒರೆಸಲು ಬರಲಿಲ್ಲ, ಗೊಬ್ಬರದ ಅಭಾವವಿದ್ದಾಗ ದಾಸ್ತಾನು ನೀಡಲಿಲ್ಲ, ಜಿಲ್ಲೆಯ ಅಭಿವೃದ್ದಿ ಕಾಮಗಾರಿ ಸ್ಥಗಿತವಾಗಿದೆ, ಹೆದ್ದಾರೆ ಪ್ರಾಧಿಕಾರ ಸೇರಿದಂತೆ ಇತರೆ ಮುಖ್ಯ ಕಛೇರಿಗಳ ಸ್ಥಳಾಂತರವಾಗಿದೆ. ಪದವಿ ಪೂರ್ವ ಕಾಲೇಜುಗಳ ರದ್ದತಿಯಾಗಿದೆ.ರಾಜ್ಯದ ಆಯ-ವ್ಯಯದಲ್ಲಿ ಜಿಲ್ಲೆಯ ಅಭಿವೃದ್ದಿಗೆ ಚಿಕ್ಕಾಸು ಇಲ್ಲ, ಹೊಸ ಯೋಜನೆಗಳೂ ಇಲ್ಲ. ಇರುವ ಯೋಜನೆಗಳ ಸಮರ್ಪಕ ಅನುಷ್ಠಾನವೂ ಆಗಿಲ್ಲ, ಜಿಲ್ಲೆಯ ುಸ್ತುವಾರಿ ಸಚಿವರ ತಲೆಯೇ ಇಲ್ಲ, ೊಬ್ಬ ಗನ್ ಮ್ಯಾನ್ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ವೆಚ್ಚದಲ್ಲಿ ಬಂದು ಹೋಗುವ ಸಿ.ಎಂ. ಯಡಿಯೂರಪ್ಪ ರೈತರ ಕಷ್ಟ ಕೇಳಲು ಬರಲಿಲ್ಲ. ಇವರ ರಾಜಕೀಯ ದ್ವೇಷದಿಂದ ಜಿಲ್ಲೆಯ ಜನಸಾಮಾನ್ಯರಿಗೆ ಭಾರಿ ಅನ್ಯಾಯವೇ ಆಗಿದೆ. ಇಂತಹವರು ಚುನಾವಣೆ ಸಂಧರ್ಭದಲ್ಲಿ ಬಂದು ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸುವ ಶಕ್ತಿ ಯಾರಿಗಿದೆ ಸ್ವಾಮಿ? ಅಷ್ಟಕ್ಕೂ ಪ್ರಚೋದನಾಕಾರಿ ಭಾಷಣ ಮಾಡಿ ಘಟನೆಗೆ ಕಾರಣವಾಗಿರುವ ಯಡಿಯೂರಪ್ಪನ ಮೇಲೆ ಚುನಾವಣ ಆಯೋಗ ಕ್ರಮ ಜರುಗಿಸ ಬೇಕಲ್ಲವೇ?? ಬೇಸತ್ತು ಚಪ್ಪಲಿ ಎಸೆದ ಅಮಾಯಕನನ್ನು ಜೈಲಿಗಟ್ಟುವುದಾದರೆ, ಪ್ರಚೋದನೆಗೆ ಕಾರಣರಾದ ಸಿಎಂ ಯಡ್ಡಯನ್ನು ಕ್ರಮ ಜರುಗಿಸಿ ಜೈಲಿಗಟ್ಟ ಬೇಕಲ್ಲವೇ???? ಇದು ಚುನಾವಣ ಆಯೋಗದ ತಾರತಮ್ಯ ನೀತಿಯಲ್ಲವೇ????

Sunday, May 3, 2009

ಒಂದು ಜೀವದ ರಕ್ಷಣೆಗೆ ನಾನು ಕಿಡಿಗೇಡಿಯಾಗಿದ್ದು!


ಹೇ.. ಅವ್ನು ಕಿಡಿಗೇಡಿ ನನ್ಮಗ.., ಆ ಮರ ಕಡಿಯೋಕೆ ಹೋದ್ರೆ ಅಡ್ಡಿ ಮಾಡಿ ಪೇಪರ್ನಲ್ಲಿ ಬರೀತಾನೆ.. ಇನ್ನೂ ಅಕ್ಕಪಕ್ಕ ೨-೩ ಮರ ಇದಾವಲ್ಲ, ಅವುನ್ನ ಕಡೀವಾಗ ಏನ್ ಮಾಡ್ತಾನೆ ನೋಡೋಣ. ಇಂತಹದ್ದೊಂದು ಮಾತು ನನ್ನ ಬೆನ್ನ ಹಿಂದೆ ಕಳೆದ 15ದಿನದಿಂದಲೂ ಕೇಳಿ ಬರ್ತಿದೆ. ಒಂದು ಮಾತಿದೆ ದುರ್ಜನರ ದುಷ್ಠತನಕ್ಕಿಂತ ಸಜ್ಜನರ ಮೌನವೇ ಹೆಚ್ಚು ಅಪಾಯಕಾರಿ ಅಂತ. ವಿಷಯ ಏನು ಅಂದ್ರಾ? ಹೇಳ್ತೀನಿ ಕೇಳಿ.. ಅರಕಲಗೂಡು, ಹಾಸನ ಜಿಲ್ಲೆಯಲ್ಲಿ ಬರುವ ಒಂದು ತಾಲ್ಲೂಕು ಕೇಂದ್ರ. ರಾಜ್ಯದಲ್ಲಿಯೇ ಅತೀ ಹೆಚ್ಚಿನ ಗುಣಮಟ್ಟದ ತಂಬಾಕು ಮತ್ತು ಅಡಿಕೆ ಬೆಳೆಯುವ ಅರೆಮಲೆನಾಡು. ಒಂದೆಡೆ ಕೊಡಗು ಜಿಲ್ಲೆ ಮತ್ತೊಂದೆಡೆ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಊರುಗಳನ್ನು ಗಡಿಭಾಗದಲ್ಲಿ ಹೊಂದಿದೆ.ಸಾಂಸ್ಕೃತಿಕವಾಗಿಯೂ ಸಂಪನ್ನವಾಗಿದೆ.ಇಂತಹದ್ದೊಂದು ಊರಿಗೆ ಆಧುನೀಕತೆಯ ಗರ ಬಂತು ನೋಡಿ ಈಗ್ಯೆ 2ವರ್ಸಗಳ ಹಿಂದೆ ಊರಿಗೆ ಹೆದ್ದಾರಿ ರಸ್ತೆ, ಕ್ರೀಡಾಂಗಣ, ಬಸ್ ನಿಲ್ದಾಣ, ವಿವಿಧ ಸರ್ಕಾರಿ ಕಛೇರಿಗಳು ಹೀಗೆ ಆಬಿವ್ರದ್ದಿ ಕಾಮಗಾರಿಗಳ ಮಹಾಪೂರವೇ ಹರಿದು ಬಂತು. ಅಭಿವ್ರದ್ದಿ ನೆಪದಲ್ಲಿ ರಸ್ತೆ ಬದಿಯ ಮತ್ತು ರಸ್ತೆಯಿಂದ ದೂರವಿದ್ದ ಸಾವಿರಾರು ಮರಗಳ ಹನನ ನಡೆಯಿತು. 800ವರ್ಸಗಳಷ್ಟು ಹಳೆಯದಾದ 13ಎಕರೆ ವಿಸ್ತಾರದ ತುಂಬಿದ ಕೆರೆಯನ್ನು ಬರಿದುಗೊಳಿಸಿ ಮಣ್ಣು ತುಂಬಲಾಯಿತು, ಅನಗತ್ಯವಾಗಿ ಸಾರ್ವಜನಿಕರ ಕಟ್ಟಡಗಳನ್ನು ಒಡೆಯಲಾಯಿತು. ಇಂತಹ ದೋರಣೆಯ ವಿರುದ್ದ ಎದ್ದ ಬೆರಳೇಣಿಕೆಯ ಪ್ರತಿಭಟನೆಗಳು, ಪತ್ರಿಕಾ ವರದಿಗಳು ಯಾವುದು ಫಲಕಾರಿಯಾಗಲಿಲ್ಲ. ಆಡಳಿತ ಷಾಹಿ ತನ್ನ ಅಟ್ಟಹಾಸವನ್ನು ಮೆರೆಸಿತು. ಇದೆಲ್ಲ ಆಗಿ ತಿಂಗಳುಗಳೇ ಸರಿದು ಹೋಗಿವೆ. ಮುಚ್ಚಿಹೋದ ಕೆರೆಯ ಮೇಲೆ ಆದುನಿಕ ರಸ್ತೆ ನಿರ್ಮಾಣವಾಗಿದೆ ಬದುಕಿದೆಯಾ ಬಡಜೀವವೇ ಎಂಬಂತೆ ಆ ರಸ್ತೆಯ ಬದಿಗೆ ಬ್ರಹತ್ ಆದ ೩-೪ ಮರಗಳು ಇನ್ನು ಉಳಿದು ಕೊಂಡಿವೆ. ಅಲ್ಲಿ ನೂರಾರು ಬಾವಲಿಗಳು ಹಕ್ಕಿ ಪಕ್ಷಿಗಳು ಇಂದಿಗೂ ವಾಸ ಮಾಡಿ ಕೊಂಡಿವೆ. ರಸ್ತೆಯ ಬದಿ ನಡೆದು ಹೋಗುವವರಿಗೆ ನೆಮ್ಮದಿಯ ನೆರಳನ್ನು ಗಾಳಿಯನ್ನು ಅವು ನೀಡುತ್ತಿವೆ. ಹೀಗಿರುವಾಗ ರಸ್ತೆಯ ಇನ್ನೊಂದು ಬದಿಗೆ ತೋಟದ ಜಾಗವನ್ನು ಖರೀದಿಸಿರುವ ಮಾರ್ವಾಡಿ ಯೋರ್ವ ಬ್ರಹತ್ ಮರವೊಂದರ ಸನಿಹದಲ್ಲೇ ಕಾಂಕ್ರಿಟ್ ಕಟ್ಟಡ ನಿರ್ಮಿಸುತ್ತಿದ್ದಾರೆ. ರಸ್ತೆ,ಮರ ಸದರಿಯವರ ಕಟ್ಟಡದಿಂದ 30ಮೀಟರ್ ದೂರವಿದೆ. ಆದರೂ ಕಟ್ಟಡಕ್ಕೆ ಮರೆಯಾಗುತ್ತದೆ ಎಂದು ಭಾವಿಸಿದ ಕಟ್ಟಡದ ಮಾರ್ವಾಡಿ ಒಂದು ದಿನ ಸ್ಥಳೀಯ ಅರಣ್ಯ ಇಲಾಖೆಯ ಭಕ್ಷಕ ನೌಕರರಿಗೆ ಎಂಜಲು ತಿನ್ನಿಸಿ ಮರ ಕಡಿಯಲು ಶುರುಮಾಡಿದ್ದಾನೆ, ಪತ್ರಕರ್ತ ಮಿತ್ರ ಅರಾಸು ಅದನ್ನು ತಡೆದಿದ್ದಾರೆ. ಅರೆಜೀವವಾದ ಮರದ ೊಂದು ಬದಿಯ ಬೇರುಗಳನ್ನು ವ್ಯವಸ್ಥಿತವಾಗಿ ತುಂಡರಿಸಿದ ಆತ ಮರ ಬೀಳುವ ಸ್ಥಿತಿಯಲ್ಲಿದೆ ಎಂಬ ಬೇನಾಮಿ ಪತ್ರವೊಂದನ್ನು ಸಿದ್ಧಪಡಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಮೇಧ್ಯ ತಿನ್ನಿಸಿ ಕಡಿಯುವ ಪ್ರಕ್ರಿಯೆಗೆ ಹರಾಜು ಹೊರಡಿಸಿದ. ಈ ವಿಚಾರ ತಿಳಿದ ಪತ್ರಕರ್ತ ಮಿತ್ರರಾದ ಅರಾಸು,ಚಂದ್ರು,ಶ್ರೀಕಾಂತ್,ಶಂಕ್ರ ನಾನು ಸದರಿ ಮರವನ್ನು ಯಾವ ಕಾರಣದಿಂದಲೂ ಕಡಿಯದಂತೆ ಅಡ್ಡಿ ಪಡಿಸಿದೆವು. ಮತ್ತು ಅರಣ್ಯಾಧಿಕಾರಿಗಳಿಗೆ ದೂರು ನೀಡಿದೆವು. ಮರುದಿನವೇ ಹರಾಜು ಸೂಚನೆಯಿತ್ತಲ್ಲ, ಊರಿನ ಗಣ್ಯರೆನಿಸಿಕೊಂಡ ಮುಖಂಡರು, ಕೌನ್ಸಿಲರ್ ಗಳು ಮಾರ್ವಾಡಿಯ ಬೆಂಬಲಕ್ಕೆ ನಿಂತು ನಮ್ಮನ್ನು ಹಿಂದೆ ಸರಿಯುವಂತೆ ಸೂಚಿಸಿದರು. ಬೆದರಿಕೆ ಹಾಕಿದರು, ಆದರೆ ನಾವು ಜಗ್ಗಲಿಲ್ಲ. ಯಾವುದೇ ರೀತಿಯಿಂದಲು ತೊಂದರೆಯಾಗದ ಮರವನ್ನು ಯಾಕೆ ಕಡಿಯಬೇಕು ಎಂಬುದಷ್ಟೇ ನಮ್ಮ ಪ್ರಶ್ನೆ ಯಾಗಿತ್ತು. ಉದ್ದುದ್ದ ಭಾಷಣ ಬಿಗಿಯುವವರು, ರಾಜಕಾರಣಿಗಳು ಯಾರು ಮರ ುಳಿಸುವ ನಮ್ಮ ಹೋರಾಟಕ್ಕೆ ಬರಲೇ ಇಲ್ಲ. ಆದರೆ ಬಿಗಿಯಾದ ನಮ್ಮ ಪಟ್ಟು, ಅಧಿಕಾರಿಗಳನ್ನು ನಾವು ಎದುರಿಸಿದ ಪರಿ ಕೊಡಲಿಯೇಟು ತಿಂದ ಮರದ ಪ್ರಾಣ ಉಳಿಯುವಂತೆ ಮಾಡಿತು. ಇಂತಹದ್ದೊಂದು ಕೆಲಸಕ್ಕೆ ನಮಗೆ ಸಿಕ್ಕ ಪಟ್ಟ ಕಿಡಿಗೇಡಿಗಳು.. ಈಗ ಮರಕ್ಕೆ ಮತ್ತೊಂದು ಅಪಾಯ ಎದುರಾಗಿದೆ ಮರದ ಬುಡಕ್ಕೆ ಮರ್ಕ್ಯೂರಿ ಹಾಕುತ್ತಾರಂತೆ.. ನಾವೀಗ ಕಿಡಿಗೇಡಿಗಳಾದರು ಪರ್ವಾಗಿಲ್ಲ ಮರಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇವೆ. ಈಗ ಹೇಳಿ ನೀವೇನಂತೀರಿ...????

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...